X

ಕಡಲ ತೀರದಿ ನಿಂತು ಮತ್ತು ಬೇಗ ಬಾ ನೀನು: ಎರಡು ಕವನಗಳು

ಕಡಲ ತೀರದಿ ನಿಂತು ..

ನಿದ್ದೆಗೆ ಜಾರು ನೀನು

ನನಗೂ ಹೇಳದಂತೆ

ಕನಸಲ್ಲಿ ಕರೆ ನೀನು

ನಾನೇ ಬರುವಂತೆ

 

ಪ್ರೀತಿಸು ಒಮ್ಮೆ ನನ್ನ

ನನ್ನ ನಾನೇ ಮರೆಯುವಂತೆ

ಮೋಹಿಸು ಒಮ್ಮೆ ನನ್ನ

ಹೊಸ ಹಾಡು ಬರೆಯುವಂತೆ

 

ಕಡಲ ತೀರದಿ ನಿಂತು

ಅಲೆಗಳ ಜೊತೆ ಮಾತಿಗಿಳಿಯೋಣ

ಒಂದೊಂದು ಅಲೆಗಳಿಗೂ

ನಮ್ಮ ಪ್ರೀತಿ ಹಂಚೋಣ

 

ಏನು ಹೇಳಲಿ

ಏನು ಕೇಳಲಿ

ಒಂದೊಂದು ತಿಳಿಯುತ್ತಿಲ್ಲ

ಈ ಪ್ರೀತಿಯಿಂದಲೇ ಎಲ್ಲ ಹೀಗೆ

ನನ್ನ ಲೇಖನಿಯೂ ಮೂಡುತ್ತಿಲ್ಲ..

ಬೇಗ ಬಾ ನೀನು

ಬೇಗ ಬಾ ನೀನು

ನನ್ನ ಸನಿಹ

ಅಳಿಸು ಬಾ ನೀನು

ನನ್ನ ವಿರಹ

ನೂತನ ಸ್ನೇಹವಿದು

ಮಾತಿಗೂ ಸಿಗದು

ಮೊಗ್ಗಾದ ಮೋಹವಿದು

ನೀ ಬರದೆ ಅರಳದು..

 

ಪಿಸುಮಾತಾಡುತ

ತುಸುದೂರ ಹೋಗೋಣ..

ತಿಳಿ ಸಂಜೆಯ

ತಂಗಾಳಿಗೆ ಜೊತೆಯಾಗೋಣ..

ಕಡಲಿನ ನೀರವ

ಧ್ಯಾನದಲ್ಲಿ ನಾವೂ ಬೇರೆಯೋಣ..

ತೀರ ತಲುಪುವ ಅಲೆಗಳನು

ಖುದ್ದಾಗಿ ಸ್ವಾಗತಿಸೋಣ..

 

ಎದೆಯ ಪುಸ್ತಕವ ತೆರೆದು

ಪುಟವಂದನು ನೀ ಓದಬೇಕಿದೆ..

ಕನಸುಗಳ ಕೂಡಿಡಲು

ನಿನ್ನೆದೆಯಲ್ಲಿ ಜಾಗ ಬೇಕಿದೆ

ಕಣ್ಣು ಮಿಟುಕಿಸದೆ ಪ್ರತಿಕ್ಷಣವೂ

ನಿನ್ನ ನಾ ನೋಡಬೇಕಿದೆ

ಗೆಳತಿ ನೀನಿಲ್ಲಿ ಬರಬೇಕಿದೆ

ನನ್ನೊಳಗೆ ನೀ ಸೇರಬೇಕಿದೆ

Facebook ಕಾಮೆಂಟ್ಸ್

Vinaykumar Sajjanar: Engineer by profession and Author of two poem collection books named " Enna Todalu Nudigalu " and " Bhaavasharadhi" .
Related Post