ಆ ದಿನ ನಾನು ಶಿವಾಜಿನಗರದ ಆರ್ ಟಿ ಓ ಕಚೇರಿಯಿಂದ ವಾಪಾಸ್ ಬರುತ್ತಾ ಇದ್ದೆ. ನಾರ್ಮಲ್ ಆಗಿ ಕೆಲಸ ಮುಗಿಸ್ಕೊಂಡು ,ಅಬ್ ನಾರ್ಮಲ್ ಥರ ಸುತ್ತ ಮುತ್ತ ನೋಡ್ಕೊಂಡು ,ಅಡ್ಡಾಡ್ಕೊಂಡು, ಅಲ್ಲಲ್ಲಿ ನಿಲ್ಸಕೊಂಡು ಕೆಲವೊಮ್ಮೆ ಕೆಲವು ಸಬ್ಜೆಕ್ಟ್ ಗಳನ್ನು ಹಂಗೆ ನೋಡ್ಕೊಂಡು ಆಫೀಸ್ ಹೋಗ್ತಾ ಇದ್ದೆ . ವಿಧಾನ ಸೌಧ ಹತ್ರ ಬರ್ತಾ ಇದ್ದ ಹಾಗೆ ನನಗೆ ಕಂಡದ್ದು ಮೊದಲು ಈ ಕಾಗೆ . ನಂತರ ವಿಧಾನ ಸೌಧ. ಹಂಗೆ ಬೈಕ್ ಸೈಡ್ ಹಾಕಿ ಫ್ರೇಮಿಂಗ್ ನೋಡ್ಕೊಂಡು ಏನಾದ್ರು ವಿಶೇಷ ಇದ್ಯಾ ಅಂತ ಕಾಯ್ತಾ ನಿಂತೆ . ಅಲ್ಲೇ ಬಸ್, ಟೂ ವೀಲರ್ ಅಲ್ಲಿ ಪಾಸ್ ಅಗೊರೆಲ್ಲ ನನ್ನೇ ನೋಡ್ಕೊಂಡು ಏನ್ ನಡೀತಾ ಇದೆ ಅಂತ ಆಚೆ ಈಚೆ ತಲೆ ತಿರುಗಿಸಿತ್ತಿರುವಾಗಲೇ , ಕಾಗೆ ತನ್ನ ತಲೆಯನ್ನೂ ಹೀಗೆ ಬಾಗಿಸಿದಾಗ ಒಂದು ಕ್ಲಿಕ್. ಈ ಚಿತ್ರದಲ್ಲಿ ಕಾಣುವ ಕಾಗೆ ಮತ್ತು ಅದರ ಪೊಸಿಶನ್ ಮತ್ತು ಹಿಂಬದಿಯಲ್ಲಿ ಇರುವ ವಿಧಾನ ಸೌಧ ! ನಮ್ಮ ರಾಜಕೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಈ ಚಿತ್ರವನ್ನು ವಿಜಯವಾಣಿ ಪೇಪರ್ ನಲ್ಲೂ ಬಳಸಿಕೊಂಡಿದ್ದಾರೆ ,
I was passing by this place and I found a crow first, then Vidhan Soudha behind it and was waiting for the right capture. I found people passing by me curious to see what’s going on that made me hold the camera in front of Vidhan Soudha. And at the same time I found this crow bowing its head, I captured it. This picture was also featured in Vijaya Vani(Kannada Daily) due to the sarcastic representation of crow in front of Vidhan Soudha, which mocks the present political situation.