X

ಕಟ್ಟಿಗೆ ಒಡೆಯುವವರು ನಿಮ್ಮ ಮನೆಗೆ ಬಂದಿದ್ದಾರಾ?

[dropcap]ಹ[/dropcap] ಹಳ್ಳಿಬದುಕಿನಲ್ಲಿ ಏನೋ ಒಂದು ವಿಶೇಷ ವಿದೆ . ಜನರ ಆಲೋಚನೆ ,ಕೆಲಸ ತಿಂಡಿ ತಿನಸು , ಕಾರ್ಯಕ್ರಮಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡಲು ಕೆಲವರು ಗ್ಯಾಸ್ ಬಳಕೆ ಮಾಡಿದರೆ ಹೆಚ್ಚಿನವರು ಕಟ್ಟಿಗೆಯನ್ನೇ ಬಳಸುತ್ತಾರೆ . ಮಳೆಗಾಲದ ತಯಾರಿಗಾಗಿ ಕಟ್ಟಿಗೆ ಸಂಗ್ರಹಿಸುವ ಕೆಲಸವಂತೂ ಭರ್ಜರಿಯಾಗಿ ನಡೆಯುತ್ತದೆ . ಗರಗಸ ಅಥವಾ ಇತರ ತಂತ್ರಗಳನ್ನು ಬಳಸಿ ಕಟ್ಟಿಗೆಯನ್ನು ಸಿದ್ದಗೊಳಿಸುತ್ತಾರೆ . ಆದರೆ ಕಟ್ಟಿಗೆಯನ್ನು ಭಾಗ ಮಾಡುವವರು ಅಥವಾ ಸೀಳುವವರು ಬೇಕಲ್ವೆ?

ಹಿಂದೆ ಕಟ್ಟಿಗೆ ಭಾಗ ಮಾಡುವ ಓರ್ವ ಶ್ರಮ ಜೀವಿಗೆ ಒಳ್ಳೆಯ ಬೇಡಿಕೆ ಇತ್ತು ,ಗ್ಯಾಸಿನ ಹಾವಳಿಯಿಂದ ಈಗೀಗ ಅಷ್ಟೇನೂ ಕೆಲಸಗಳು ಸಿಗುತ್ತಿಲ್ಲ . ಮರದ ದಿಮ್ಮಿಯನ್ನು ಸರಿಯಾಗಿ ಇಟ್ಟು ಭಾಗ ಮಾಡಬೇಕಾಗುತ್ತದೆ . ಅದಕ್ಕೆ ಪಳಗಿದ ,ನುರಿತ ಅನುಭವಿಗಳೇ ಬೇಕು !. ಕಟ್ಟಿಗೆಯನ್ನು ಬೇಕಾದ ರೀತಿಯಲ್ಲಿ ತುಂಡು ಮಾಡುವ ಕಾಯಕ ಸುಲಭವಲ್ಲ . ಅದಕ್ಕೆ ಗಟ್ಟಿಮುಟ್ಟಾದ ಶರಿರವೂ ಬೇಕು . ಸಾಮಾನ್ಯವಾಗಿ ಈಗ ಕಟ್ಟಿಗೆ ಸಿಳುವ ಅನುಭವಿಗೆ ಈಗ 500-600ರೂಪಾಯಿಗಿಂತಲೂ ಹೆಚ್ಚಿದೆ .ನಾನು ಸಣ್ಣ ಪ್ರಾಯದಲ್ಲಿ ಕಟ್ಟಿಗೆ ಕಡಿಯಲೆಂದು ಪಕ್ಕದ ಮನೆಯ ಅನುಭವಿ ಕೆಲಸದವರೊಂದಿಗೆ ಹೋಗಿದ್ದೆ . ನಾನು ಮಾತ್ರ ನಿಮಿಷಕೊಮ್ಮೆ ನೀರು ಕುಡಿಯುತ್ತಿದ್ದೆ ! ಕಟ್ಟಿಗೆಗೆ ಕೊಡಲಿಯ ಏಟು ಸರಿಯಾಗಿ ಸಿಗದೆ ಒಮ್ಮೆ ಅತ್ತ ಮತ್ತೊಮ್ಮೆ ಇತ್ತ ಹೋಗುತ್ತಿತ್ತು . ಕೊನೆಗೆ ಮೊದಲು ಕೊಡಲಿ ಹಿಡಿಯುವುದನ್ನು ಆ ಅನುಭವಿ ಹೇಳಿಕೊಟ್ಟರು . ಆಗಲೇ ಗೊತ್ತಾಗಿದ್ದು ನನಗೆ ಕೊಡಲಿ ಹಿಡಿಯುವುದೂ ಒಂದು ಕಲೆ ಎಂದು ! ಹೇಗೊ ಸಂಜೆಯಾಯಿತು ಕೈತುಂಬ ಉಹಿಸಲಾಗದಷ್ಟೂ ಸಂಬಳವೂ ಸಿಕ್ಕಿತು . ಮರುದಿನ ಮೈ ಕೈ ತುಂಬಾ ನೋವು ನಾನು ಮಾತ್ರ ಎದ್ದದ್ದು ಮಧ್ಯಾಹ್ನ !! . ಅದೇ ಕೊನೆ .ಈಗಲೂ ಎಲ್ಲದಾರು ಕಟ್ಟಿಗೆ ತುಂಡು ಮಾಡುವವರು ಸಿಕ್ಕಿದಾಗ ಆ ನೆನಪು ಹಾಗೇ ಒಮ್ಮೆ ಕಣ್ಣ ಮುಂದೆ ಬಂದು ಹೋಗುತ್ತದೆ. ತಂತ್ರ ಜ್ಞಾನ ಮುಂದುವರಿದರೂ ಕೂಡ ಮಾನವ ಶ್ರಮ ಇಂತಹ ಕೆಲಸಗಳಿಗೆ ತೀರ ಅಗತ್ಯವಾಗಿದೆ ಬೆಳಿಗ್ಗೆ ಕಾಫಿ ತಿಂಡಿ ,ಮಧ್ಯಾಹ್ನ ಊಟ ,ಸಾಯಂಕಾಲ ಮತ್ತೆ ಕಾಫಿ ಅಥವಾ ಚಹಾ ಜೊತೆಗೆ ಸಂಬಳ . ಇದು ಕಟ್ಟಿಗೆ ಸೀಳುವ ಕಾರ್ಮಿಕನಿಗೆ ನೀಡುವ ಒಂದು ದಿನದ ಭತ್ಯೆ . ಕಟ್ಟಿಗೆಯನ್ನು ಬರೇ ಕೊಡಲಿಯಿಂದ ಮಾತ್ರ ಭಾಗಮಾಡಲಾಗದು ಇದರ ಜೊತೆಗೆ ಕಬ್ಬಿಣದಿಂದ ತಯಾರಿಸಿದ ಗುನ್ನ ಮತ್ತು ಚೆಮ್ಮಟಿಯನ್ನು ಬಳಸುತ್ತಾರೆ .ಇತ್ತೀಚಿಗೆ ಕಟೀಲು ಕ್ಷೇತ್ರಕ್ಕೆ ಹೋಗಿದ್ದಾಗ ಕಟ್ಟಿಗೆ ಸೀಳುವ ಶ್ರಮಜೀವಿಯನ್ನು ನೋಡಿದೆ . ಕೆಲಸ ಯಾವುದಾದರೇನು? ನೆಮ್ಮದಿಯಿಂದ ,ನಿಷ್ಠೆ ಯಿಂದ ಬದುಕಿದರಾಯಿತು ಅಲ್ವ ?

 

Thimmappa V K

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post