ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂತಹ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು, ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು; ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ. ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ...
ಲೋಕವಿಹಾರಿ-ಸಸ್ಯಾಹಾರಿ
ಏನ್ಬೇಕು, ಅಂತ ಕೇಳೋಕೆ ಇಲ್ಲಿಲ್ಲ ಮಾಣಿ! ಇದು ವಿಯೆಟ್ನಾಮ್ ಪ್ರವಾಸಿ ತಾಣದ ಮಕುಟಮಣಿ!
ಹರಿಯುವ ಕೊಳದಲ್ಲಿ ಬಿಂದಿಗೆಯೋ ಲೋಟವೋ ಕೊನೆಗೆ ನಮ್ಮ ಕೈ ಬೊಗಸೆಯಲ್ಲಿ ತೆಗೆದುಕೊಂಡ ನೀರಷ್ಟೇ ನಮ್ಮದು. ಅದರಲ್ಲೂ ಕುಡಿದಿದ್ದೆಷ್ಟು ಉಳಿದಿದ್ದೆಷ್ಟು ಎನ್ನುವ ಲೆಕ್ಕಾಚಾರ ಬೇರೆ ಬಿಡಿ. ಪ್ರವಾಸಾನುಭವಗಳು ಕೂಡ ಇದಕ್ಕೆ ಹೊರತಲ್ಲ. ನಮ್ಮ ಅರಿವಿಗೆ ನಿಲುಕಿದ್ದು, ಕಂಡದ್ದು ಕೇಳಿದ್ದು… ಹೊರಟಾಗ ಹೋದ ‘ನಾವು’ಗಿಂತ ಬರುವಾಗಿನ ನಾವು ಎಷ್ಟೆಲ್ಲಾ ಹೊಸ...
ಜೂರಿಚ್‘ನಲ್ಲಿ ಎಲ್ಲಿ ಸಿಕ್ಕೀತು ಚಿತ್ರಾನ್ನ? ಬ್ರೆಡ್ಡು, ಚೀಸು, ಕಾಫಿಯೇ ಪರಮಾನ್ನ!
ಸ್ವಿಸ್ ಎಂದರೆ ಹಿಂಜಿ ಬಿಟ್ಟ ಹತ್ತಿಯಂತೆ. ಕಣ್ಣು ಕಾಣುವಷ್ಟು ದೂರಕ್ಕೂ ಹರಡಿರುವ ಹಿಮ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದು ಸಾಮಾನ್ಯ. ಜೊತೆಜೊತೆಗೆ ಸ್ವಿಸ್ ವಾಚುಗಳು, ಭಾರತೀಯರ ಹಣ ಸುರಕ್ಷಿತವಾಗಿ ಇಟ್ಟುಕೊಂಡು ಅವರ ಹೆಸರು ಹೇಳದೆ ಗೌಪ್ಯತೆ ಕಾಪಾಡುವ ಬ್ಯಾಂಕುಗಳು, ಬಾಲಿವುಡ್ ಶೂಟಿಂಗ್ .. ಮಸ್ತಕದಲ್ಲಿ ಹಾದು ಹೋಗುತ್ತದೆ ಅಲ್ಲವೇ? ನಿಜ, ಇವು ಸ್ವಿಟ್ಜರ್ಲ್ಯಾಂಡ್...