ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ...
ಸ್ಪ್ಯಾನಿಷ್ ಗಾದೆಗಳು
ಮನೆ ಗೆದ್ದು ಮಾರು ಗೆಲ್ಲು !
ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ? ಅಲ್ಲವೇ...
ಮಾತಿಗಿಂತ ಕೃತಿ ಮೇಲು!
ಸ್ಪಾನಿಷರಲ್ಲಿ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ ‘ ಎನ್ನುವ ಮಾತಿದ. ಅದನ್ನು ಸ್ಪಾನಿಷ್’ನಲ್ಲಿ El movimiento se demuestra andando. (ಎಲ್ ಮೊವಿಮಿಯೆಂತೊ ಸೆ ಡೆಮೊಸ್ತ್ರ ಅಂದಾಂದೋ ) ಎನ್ನುತ್ತಾರೆ. ಯಾವುದಾದರೂ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಬಹಳ ಹೊತ್ತು ಚರ್ಚೆ ಆಗುತ್ತಲೇ ಇದ್ದು; ಮತ್ತು...
ದೇವನೊಬ್ಬ ನಾಮ ಹಲವು !
ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವುದಕ್ಕೆ ದೇವನೊಬ್ಬ ನಾಮ ಹಲವು ಎನ್ನುವುದನ್ನ ಬಳಸುತ್ತೇವೆ . ಇಲ್ಲಿ ದೇವರನ್ನ ಹಲವು ಹೆಸರುಗಳಿಂದ ಕರೆದರೂ ದೇವನೊಬ್ಬನೇ ಇರುವುದು ಎನ್ನುವುದನ್ನ ಸಾರುವುದು ಉದ್ದೇಶ , ಜೊತೆಗೆ ಬೇರೆ ಧರ್ಮದವರು ಕೂಡ ತಮ್ಮ ದೇವರ ಹೆಸರನ್ನ ಏನೇ ಹೇಳಲಿ ಎಲ್ಲವೂ ಕೊನೆಗೆ ಆತನಿಗೆ ಸಮರ್ಪಿತ ಎನ್ನುವ ವಿಶಾಲ ಮನೋಭಾವನೆ ಬಿತ್ತುವುದರಲ್ಲಿ ಕೂಡ ಸಫಲವಾಗಿದೆ ...
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ?
ಬದುಕಿನಲ್ಲಿ ಬದಲಾವಣೆ ಸಹಜ. ಆದರೆ ಪ್ರತಿ ಬದಲಾವಣೆಯೂ ಅದರದೇ ಆದ ನೋವು ಕೊಡದೆ ಬಿಡುವುದಿಲ್ಲ. ’Every change brings in pain’ ಎನ್ನುವ ವಾಕ್ಯವನ್ನು ಇಂಗ್ಲಿಷ್ ಭಾಷಿಕರು ಬಹಳವಾಗಿ ಬಳಸುತ್ತಾರೆ. ನೋವು ಎಂದು ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅದು ಇನ್ನೊಂದು ದೊಡ್ಡ ನೋವಾಗುತ್ತದೆ. ಬದುಕು ತೆರೆದುಕೊಂಡ ಹಾಗೆ ನಡೆದುಕೊಂಡು ಹೋಗಬೇಕು ಎನ್ನುವುದು ನಾನು...
ಹುಟ್ಟಿನಿಂದ ಬ್ರಾಹ್ಮಣನಾದರೆ ಸಾಲದು ನಡತೆಯಲ್ಲೂ ಬ್ರಾಹ್ಮಣನಾಗಬೇಕು!
ನಮ್ಮ ಹುಟ್ಟು ನಮ್ಮ ಕೈಯಲಿಲ್ಲ. ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹ್ಹೋ ನಾನು ಇಂತಹ ಜಾತಿಗೆ, ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ...
ಕೆಲವೊಂದನ್ನ ಪಡೆಯಲು ಕೆಲವೊಂದನ್ನ ಬಿಡಬೇಕು !
ಬಾರ್ಸಿಲೋನಾ ನಗರಕ್ಕೆ ಬಂದು ಆರು ತಿಂಗಳು ಕಳೆದಿತ್ತು ಗೆಳೆಯ ಸಾಲ್ವದೂರ್ ಕೇಳಿದ ‘ ರಂಗ ನಿನ್ನ ಮನೆಯಲ್ಲಿ ಈಗ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತಾರ? ಎಲ್ಲರೂ ಖುಷಿಯಾಗಿದ್ದಾರ ?? ‘ ನನಗೆ ಆತನ ಮಾತು ಅತ್ಯಂತ ಆಶ್ಚರ್ಯ ತಂದಿತು. ನನ್ನ ಬದುಕಿನಲ್ಲಿ ಬವಣೆಯಿದೆ ಎಂದು ನಾನು ಎಂದೂ ಆತನ ಬಳಿ ಹೇಳಿಕೊಂಡಿಲ್ಲ ಹಾಗಿದ್ದೂ ಈ ರೀತಿಯ ಪ್ರಶ್ನೆಯೇಕೆ ಕೇಳಿದ ...
ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.!
ಜೀವನ ಎನ್ನುವುದು ಬಹು ದೊಡ್ಡದು . ಈ ಜಗತ್ತಿನಲ್ಲಿ ಹುಟ್ಟಿರುವ ಸಖಲ ಜೀವಿಗಳೂ ತಮಗೆ ತೋಚಿದ ರೀತಿಯಲ್ಲಿ ಜೀವಿಸುತ್ತಾ ಬಂದಿವೆ . ಮನುಷ್ಯ ಪ್ರಾಣಿ ಮಾತ್ರ ತನ್ನ ಬುದ್ದಿ ಶಕ್ತಿಯ ಪ್ರಯೋಗದಿಂದ ತನ್ನ ಬದುಕು ಹೀಗೀಗಿರಬೇಕು ಎನ್ನುವ ಮಜಲುಗಳನ್ನ ಸಿದ್ದಪಡಿಸಿದ್ದಾನೆ , ಮತ್ತು ಮುಕ್ಕಾಲು ಪಾಲು ಈ ರೇಖೆಯಲ್ಲೇ ನಡೆಯುತ್ತಲೂ ಇದ್ದಾನೆ . ಇಂತಿಪ್ಪ ಜೀವನದಲ್ಲಿ ಎಲ್ಲಾ ಸಮಯವೂ...
‘ಕುಣಿಯಲು ಬಾರದ ವ್ಯಕ್ತಿ ನೆಲ ಡೊಂಕು ಎಂದನಂತೆ’
ಕೆಲಸ ಯಾವುದೇ ಇರಲಿ ನಾವು ಅದನ್ನು ಪೂರ್ಣಗೊಳಿಸುವಲ್ಲಿ, ಯಶಸ್ಸು ಪಡೆಯುವಲ್ಲಿ ವಿಫಲವಾದರೆ ತಕ್ಷಣ ನಾವು ಅದಕ್ಕೆ ಕಾರಣ ಹುಡುಕಿ ಯಾರನ್ನಾದರೂ ಆ ಸೋಲಿಗೆ ಕಟ್ಟಿಬಿಡುತ್ತೇವೆ. ಸೋಲಿಗೆ ಕಾರಣ ಏನೇ ಇರಲಿ ಸೋತಿದ್ದು ನನ್ನಿಂದ ಎನ್ನುವದನ್ನು ಮಾತ್ರ ಮನುಷ್ಯ ಒಪ್ಪಲಾರ. ಇದೊಂದು ಜಾಗತಿಕ ಸಮಸ್ಯೆ. ಮನುಷ್ಯ ಮೂಲದಲ್ಲಿ ಒಂದೇ ಎನ್ನವುದಕ್ಕೆ ಇನ್ನೊಂದು ತಾಜಾ ಉದಾಹರಣೆ . ಕೈಬರಹ...
‘ ಯಾವ ಹುಚ್ಚುತನ ನನ್ನ ಇನ್ನೊಬ್ಬರ ತಪ್ಪುಗಳ ಹುಡುಕುವಂತೆ ಮಾಡುತ್ತದೆ, ನನ್ನಲ್ಲೇ ಇರುವ ಅಗಣಿತ ತಪ್ಪುಗಳ ಪಟ್ಟಿ ಮಾಡದೆ ? ‘
ಜಗತ್ತಿನ ತೊಂಬತ್ತು ಜನ ಬದುಕುವುದು ಹೀಗೆ ., ಅವರಿಗೆ ಅವರ ತಪ್ಪು ಎಂದೂ ಕಾಣುವುದಿಲ್ಲ ತಾವು ಮಾಡಿದ್ದು ಸರಿ ಬೇರೊಬ್ಬರು ಮಾಡಿದ್ದು ತಪ್ಪು ಎನ್ನುವುದ ಉಸಿರಾಡಿದಷ್ಟೇ ಸಹಜವೆನ್ನುವಂತೆ ಆಡುತ್ತಾರೆ . ಅದು ನಮಗೆ ಪರಿಚಯಸ್ಥರ ಬಗ್ಗೆ ಇರಬಹದು ಅಥವಾ ಗೊತ್ತೇ ಇಲ್ಲದ ಮೂರನೇ ವ್ಯಕ್ತಿಯ ಬಗ್ಗೆಯಿರಬಹದು ಒಟ್ಟಿನಲ್ಲಿ ಎಲುಬಿಲ್ಲದ ನಾಲಿಗೆಯನ್ನ ಇಚ್ಛೆ ಬಂದಂತೆ ಹರಿಯ ಬಿಟ್ಟರೆ...