“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ ..? , ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯ ಬಣ್ಣದ ಸೌತೇಕಾಯಿ ಸಾರು, ನೀರೋ.. ಮಜ್ಜಿಗೆಯೋ.. ಗೊತ್ತಾಗದ ಮಜ್ಜಿಗೆ ಅನ್ನ ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ...
Author - Guest Author
“ಭೌತಿಕ Vs ಡಿಜಿಟಲ್ ವಿಶ್ವ – ನಮ್ಮ ಮಕ್ಕಳು”
ತಂತ್ರಜ್ಞಾನವು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯಾಪಕ ಮತ್ತು ತ್ವರಿತ ಗತಿಯಲ್ಲಿ ಪರಿಣಾಮ ಬೀರುತ್ತಿರುವುದಂತೂ ಇತ್ತೀಚಿನ ದಿನಗಳಲ್ಲಿ ನಾವು ಕಂಡು ಕೊಂಡಿರುವಂತ ಸತ್ಯ. ವರ್ಷಗಳು ಉರುಳಿದಂತೆ ತಂತ್ರಜ್ಞಾನದ ವೇಗ ಮತ್ತು ಮಾಹಿತಿ ಪರಿಮಾಣ ಗಮನಾರ್ಹವಾಗಿ ವೃದ್ಧಿಸಿದೆ. ತಜ್ಞರ ಪ್ರಕಾರ, ಜಗತ್ತಿನ ಶೇ.90 ರಷ್ಟು ಜನಸಂಖ್ಯೆ ಇನ್ನು ಹತ್ತು ವರ್ಷಗಳಲ್ಲಿ...
ಒಂದು ಬೈಕಿನ ಕಥೆ:ಐಡಿಯಲ್ ಜಾವಾ
ಹಳೆಯ ಅಂದರೆ ೧೯೬೦-೮೦ರ ದಶಕದ ಕನ್ನಡ ಹಿಂದಿಚಲನಚಿತ್ರಗಳನ್ನು ಒಮ್ಮೆ ನೆನಪಿಸಿಕೊಳ್ಳಿ.ಸಿನೆಮಾ ಕ್ಲೈಮಾಕ್ಸ್ಅಂದರೆ ಅಂತಿಮ ಹಂತಕ್ಕೆ ಬಂದಿರುತ್ತದೆ.ಖಳನಾಯಕಹೀರೋನ ನಾಯಕಿಯನ್ನೋ ಅಥವಾ ತಂದೆ ತಾಯಿಯನ್ನೋಅಪಹರಿಸಿ ಎಲ್ಲೊ ಕೂಡಿ ಹಾಕಿರುತ್ತಾನೆ.ದುರುಳರಿಂದತನ್ನವರನ್ನು ರಕ್ಷಣೆ ಮಾಡುವುದಕ್ಕಾಗಿ ತನ್ನ ಮೋಟಾರುಸೈಕಲನ್ನು ಹಿಡಿದು ದುರ್ಗಮವಾದ ಕಾಡು ಅಥವಾ ಗುಡ್ಡದಹಾದಿಯನ್ನು...
ರಾಜ ಸನ್ಯಾಸಿ ಭಾಗ 3
ರಾಜ ಸನ್ಯಾಸಿ ಭಾಗ 2 1929 ರಲ್ಲಿ ಜಯದೇವಪುರಕ್ಕೆ ವಾಪಸ್ ಆಗಿ ಆತ ತನ್ನ ಅಕ್ಕ ಹಾಗೂ ಅಜ್ಜಿಯೊಡನೆ ಜೀವನವನ್ನು ಪ್ರಾರಂಭಿಸಿದ. ರಾಜನಾಗಿ ಅಧಿಕಾರ ವಹಿಸಿಕೊಂಡು ಆತ ಖಜಾನೆಗೆ ಸಲ್ಲಬೇಕಾಗಿದ್ದ ತೆರಿಗೆ ಕಂದಾಯಗಳನ್ನು ಪ್ರಜೆಗಳಿಂದ ಸಂಗ್ರಹಿಸಲು ಪ್ರಾರಂಭಿಸಿದ. ಆದರೆ ಸತ್ಯೇಂದ್ರನಾಥನು ಕೋರ್ಟ್ ಮೊರೆ ಹೊಕ್ಕು ಭವಲ್ ಸನ್ಯಾಸಿಯು ಜಯದೇವ ಪುರವನ್ನು ಪ್ರವೇಶಿಸದಂತೆ 144ನೇ...
ಹೀಗೊಂದು ಕಥೆ
ಛಲ ಬಿಡದ ರಾಜಾ ವಿಕ್ರಮನು ಮರದ ಮೇಲಿದ್ದ ಬೇತಾಳವನ್ನು ಇಳಿಸಿ ಹೆಗಲಿಗೆ ಹಾಕಿಕೊಂಡು ಮಾಂತ್ರಿಕನಿರುವೆಡೆ ಹೊರಟನು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಬೇತಾಳವು ಮಾತನಾಡಲಾರಂಭಿಸಿತು. “ಎಲೈ ರಾಜೋತ್ತಮನೇ, ನಿನ್ನ ಸಾಹಸ, ಪರಾಕ್ರಮಗಳಿಗೆ ಮೆಚ್ಚಿದೆನು. ಈ ರಾತ್ರಿಯಲ್ಲಿ ನನ್ನನ್ನು ಹೊತ್ತೊಯ್ದೇ ತೀರುವೆನೆಂಬ ನಿನ್ನ ಛಲವು ಪ್ರಶಂಸೆಗೆ ಮಿಗಿಲಾದದ್ದು. ಇರಲಿ. ಪ್ರಯಾಣದ...
ಆ ಮೊದಲ ಮಳೆ……
ಮೂರು ತಿಂಗಳ ಬಿರು ಬೇಸಿಗೆಯಲ್ಲಿ ಬೆಂದು ಬೇಸತ್ತ ಮನಕೆ ಹೊಸ ಆಸೆಗಳನು ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಲು ಮಳೆಗಾಲ ಪ್ರಾರಂಭವಾಗಲೇಬೇಕು. ಪೃಥ್ವಿ ಮೂರು ತಿಂಗಳು ಆ ಸೂರ್ಯನ ಉರಿ ಶಾಖಕ್ಕೆ ಬಳಲಿ ಮೇಘರಾಯನ ಆಗಮನಕ್ಕೆ ಕಾದು ಕುಳಿತಿದ್ದಾಳೆ. ಎಂದು ಬರುವನೋ ಈ ಮಳೆರಾಯ ಅಂತ ರೈತ ಮುಗಿಲೆಡೆಗೆ ಕಣ್ಣನಿಟ್ಟು ಕಾಯುತಿದ್ದಾನೆ. ಗಿಡ ಮರಗಳು ಹೊಸ ವಸಂತವನ್ನು ಸ್ವಾಗತಿಸಲು...
ರಾಜ ಸನ್ಯಾಸಿ ಭಾಗ 2
ರಾಜ ಸನ್ಯಾಸಿ ಭಾಗ ೧ ಹಲವು ವರ್ಷಗಳು ಕಳೆದವು. ಒಮ್ಮೆ ಸಾಧುಗಳ ತಂಡ ನೇಪಾಳದಲ್ಲಿದ್ದಾಗ ‘ರಾಜಕುಮಾರ ಸನ್ಯಾಸಿ’ಗೆ ಇದ್ದಕ್ಕಿದ್ದಂತೆ ತನ್ನ ಮನೆ ಪೂರ್ವ ಬಂಗಾಲದ ಢಾಕಾ ಸಮೀಪವೆಲ್ಲೋ ಇದೆ ಎಂಬ ಸಂಗತಿ ಹೊಳೆಯಿತು. ಇದನ್ನು ಕೇಳುತ್ತಿದ್ದಂತೆ ಬಾಬಾಜಿಯವರು ‘ನಿನ್ನ ಸಮಯ ಬಂದಿದೆ. ನೀನಿನ್ನು ಹೊರಡು. ಏನಾದರೂ ನಿನ್ನ ಸುತ್ತ ಆವರಿಸಿರುವ...
ರಾಜ ಸನ್ಯಾಸಿ ಭಾಗ ೧
ಸತ್ತವರು ಪುನರ್ಜನ್ಮ ತಾಳುತ್ತರೆನ್ನುವುದೊಂದು ನಂಬಿಕೆ. ನಮ್ಮ ಧರ್ಮಗ್ರಂಥಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಅಂಶಗಳಿವೆ. ಕೆಲವರು ಇದನ್ನು ನಂಬಿದರೆ ಇನ್ನೂ ಕೆಲವರು ಅಲ್ಲಗಳೆಯುತ್ತಾರೆ. ;ಇರುವುದೊಂದೇ ಜನ್ಮ. ನಿನಗನ್ನಿಸಿದಂತೆ ಬಾಳು’ ಎನ್ನುವುದು ಕೆಲವರ ನಿಲುವಾದರೆ ‘ಜನ್ಮಜನ್ಮಾಂತರಗಳ ಪಾಪಪುಣ್ಯದಮೇಲೆ ಮೋಕ್ಷ ಅವಲಂಬಿತವಾಗಿದೆ, ಹಾಗಾಗಿ ಧರ್ಮದಿಂದ...
ಗಂಗಾತೀರದಲ್ಲಿ…
‘ವಾರಣಾಸಿ’!! ಮೂರು ದಿನಗಳಿಂದ ರೈಲಿನಲ್ಲಿ ಕುಳಿತು ಕುಳಿತು ಬಸವಳಿದಿದ್ದ ನನಗೆ ‘ವಾರಣಾಸಿ’ ಎಂದು ದಪ್ಪಕ್ಷರದಲ್ಲಿ ಬರೆದಿದ್ದ ಆ ಹಳದಿ ಬೋರ್ಡು ಕಂಡಮೇಲೆ ಜೀವವೆ ಬಂದಂತಾಯಿತು.ಅಬ್ಬಾ! ಜೀವಮಾನದಲ್ಲಿ ಅಷ್ಟು ಕಾಲ ರೈಲು ಪ್ರಯಾಣ ಮಾಡಿದವನಲ್ಲ ನಾನು.ಆದರೂ ಮಾಡಲೇ ಬೇಕಾಯಿತು.ನಾನು ಯಲಹಂಕದ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಓದುತ್ತಿದ್ದಾಗ ನನ್ನ...
ವರ್ನೆರ್ ಹೈಸೆನ್ಬರ್ಗ್
ವರ್ನೆರ್ ಹೈಸೆನ್ಬರ್ಗ್ ಬಹುತೇಕ ಭೌತ ವಿಜ್ಞಾನ ವಿದ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು. ತನ್ನ ಮೂವತ್ತೊಂದರ ಹರೆಯದಲ್ಲಿಯೇ ನೊಬೆಲ್ ಪಾರಿತೋಷಕಕ್ಕೆ ಭಾಜನನಾದವ. ಹಾಗೆ ನೋಡಿದಲ್ಲಿ ನೊಬೆಲ್ ಪಡೆದವರಲ್ಲಿಯೇ ಮೂರನೇ ಕಿರಿಯವ. ಬರೀ ವಿಜ್ಞಾನವನ್ನೇ ಪರಿಗಣಿಸಿದರೆ ಎರಡನೇ ಅತೀ ಕಿರಿಯವ (ಅತೀ ಕಿರಿಯ ವಿಜ್ಞಾನಿ ಲಾರೆನ್ಸ್ ಬ್ರಾಗ್, ತಮ್ಮ ೨೫ ನೇ ವಯಸ್ಸಿನಲ್ಲಿ). ಇನ್ನೊಂದು...