“ಏಯ್ ಹೋಗೊ ನಾ ಗಿಲ್ಲಿ ಹೊಡದ್ದಿ. ಅದೂ ಮೂರ್ ಸರ್ತಿ. ನೀ ನೋಡಿದ್ದಿಲ್ಲೆ. ಅದಕೆ ಯಾ ಎಂತ ಮಾಡ್ಲಿ. ಯಂಗೊತ್ತಿಲ್ಲೆ. ಯಂಗೆ ಪಾಯಿಂಟ ಕೊಡದೇಯಾ. ಅಲ್ಲ್ದನ ರಾಮು. ನೀ ಯನ್ನ ಪಾಟಿ೯ ಹೌದ ಅಲ್ಲ್ದ. ಹೇಳು ಮತೆ. ಏ…. ಹೋಗೆ ಯಾ ಎಂತ ಹೇಳ್ತ್ನಿಲ್ಲೆ. ಆ ದಿನ ಯಂಗೆ ಒಂದು ಪೇರಲೆ ಹಣ್ಣು ಕೊಡು ಅಂದರೆ ಕೊಟ್ಯನೆ ನೀನು. ಯನ್ನ ಎದುರಿಗೆ ಚಪ್ಪರಿಸಿಕಂಡ...
Author - Guest Author
ಮಿಡಿದ ಹೃದಯಗಳು
ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ...
ಹಿಡಿಂಬೆ
ಸೋಕುತಿದೆ ತಂಗಾಳಿ ಹಿತವಾಗಿ ಮಧುರ ನೆನಪುಗಳ ಹರವಿಡುತಾ ಬಚ್ಚಿಟ್ಟ ಬಯಕೆಗಳ ಬಡಿದೆಬ್ಬಿಸುತಾ ಜೀವಲಹರಿ ಮೂಡಿಸುತಾ ವರುಷವರುಷಗಳೇ ಕಳೆದರೂ ಹರುಷದ ಪರ್ವವದೊಂದೇ ಅನುದಿನಾದನುಕ್ಷಣದನುಭವ ಹಸಿರು ಉಸಿರಲೆಂದೆಂದೂ ಹಿಡಿಂಬವನದ ರಕ್ಕಸಿ ಅಂದು ಘಟೋತ್ಕಚನ ತಾಯಿಯಾಗಿ ದಿನವೂ ಭೀಮಾನಾಗಮಾನಕೆ ಪ್ರಾರ್ಥಿಸುವ ಪತಿವ್ರತೆಯಿಂದು ನರಮಾಂಸದಾಸೆಗೆ ಹೋದೆನಲ್ಲಿ ಪವಡಿಸಿತ್ತು ಪೂರ್ತಿ...
ಅಜ್ಜನ ಸ್ವಗತ
ಇದು ಎರಡಲ್ಲ ಮೂರನೇ ಸಲ ಅಂತೆ. ಹಾಗಂತ ಈ ಮನೆಯಲ್ಲಿ ಮಾತಾಡ್ತಾ ಇದ್ರು. ಮೊದಲ ಸಲ ಮನೆ ಹಿಂದುಗಡೆ ಇರೋ ಬಾವೀಲಿ ಎರಡೂ ಕಾಲು ಒಳಗಿಟ್ಟುಕೊಂಡು ಕಟ್ಟೆ ಮೇಲೆ ಕೂತಿದ್ದೆನಂತೆ. ಇನ್ನೇನು ಹಾರಬೇಕು,ಅಷ್ಟರಲ್ಲಿ ಯಾರೋ ನೋಡಿ ಜೋರಾಗಿ ಕೂಗಿದ್ರಿಂದ ಮನೆಯವರೆಲ್ಲ ಓಡಿ ಬಂದು ನನ್ನ ಕಾಪಾಡಿದ್ರಂತೆ. ಇನ್ನೊಂದು ಸಲ ಸೇತುವೆ ಮೇಲಿಂದ ಹೊಳೆಗೆ ಹಾರಕ್ಕೆ ಹೋಗಿದ್ದೆನಂತೆ. ಆಗ...
ಯೋಧರಿಗಾಗಿ…
ಯಾವುದೇ ಒಂದು ರಾಷ್ಟ್ರ ಸುಸ್ಥಿರವಾಗಿ,ಸದೃಢವಾಗಿ ಅಭಿವೃದ್ಧಿ ಹೊಂದಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಬೇಕೆಂದರೆ ಆ ದೇಶದ ಆರ್ಥಿಕ ಸ್ಥಿರತೆಯ ಜೊತೆಗೆ ರಕ್ಷಣಾ ವಿಭಾಗವೂ ಕೂಡ ಉತ್ತಮ ಸ್ಥಿತಿಯಲ್ಲಿರಬೇಕು.ರಕ್ಷಣಾ ವಿಭಾಗ ಎಂದರೆ ಕೇವಲ ರಕ್ಷಣಾ ಮಂತ್ರಿ ಪ್ರಬುದ್ಧನಾಗಿರಬೇಕು ಎಂದರ್ಥವಲ್ಲ. ಮುಖ್ಯವಾಗಿ ಗಡಿ ಕಾಯುವ ಸೈನಿಕರು ಬಲಿಷ್ಠರಾಗಿರಬೇಕು,ಹೆಚ್ಚು...
”ಮೊದಲು ನೀನಾಗು”
ನನಗೆ ಚೆನ್ನಾಗಿ ನೆನಪಿದೆ. ಅಂದು ನರಕ ಚತುರ್ದಶಿ.ರೂಮಿನಲ್ಲಿ ಫ್ಯಾನು ಹಾಕುವ ಅವಶ್ಯಕತೆಯೆ ಇಲ್ಲದಂಥ ತಂಪಾದ ರಾತ್ರಿ.ಮನೆಯಲ್ಲಿ ಮಾಡಿದ್ದ ಕಜ್ಜಾಯಗಳನ್ನೆಲ್ಲ ತಿಂದು ಮುಗಿಸಿ ಪ್ರತಿದಿನವೂ ಹೀಗೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಳಗೊಳಗೇ ಮರುಗುತ್ತಿದ್ದೆ.ಊಟ ಮುಗಿಸಿ ಗಾಳಿಯಾಡಲೆಂದು ಹೊರಗೆ ಬಂದೆ.ಗಡಿಯಾರ ಹನ್ನೆರಡಾಯಿತೆಂದು ಗುಟುರು ಹಾಕಿದರೂ ಪಟಾಕಿಗಳು...
ನಿರೀಕ್ಷೆ
ನೀಲಾಕಾಶದಿ ತೇಲುವ ಮೋಡವೆ ಮೆಲ್ಲಗೆ ಚಲಿಸು ನೀನೀಗ ಮಲ್ಲಿಗೆ ನಗುವಿನ ನನ್ನಯ ಗೆಳತಿಗೆ ಓಲೆಯ ನೀ ಬೇಗ ಚುಕ್ಕಿಯ ಚಂದಿರ ಬೆಚ್ಚನೆ ಹಾಸುಗೆ ಮುದ ನೀಡದು ನನ್ನ ಮನಕೀಗ ಸಂಚನು ಬೀರುವ ಮಿಂಚಿನ ಕಣ್ಣಿನ ನೋಟದ ಚೆಲುವೆ ಬಾ ಬೇಗ ಮನವಿದು ಮರುಗಿದೆ ತನುವಿದು ಸೊರಗಿದೆ ಕಾಯುತ ನಿನ್ನಯ ಹಾದಿಯನು ನನ್ನೀ ಉಸಿರಿನ ಕಣಕಣವೆಲ್ಲಾ ಕಾದಿಹುದು ನಿನ್ನಯ ಬರವನ್ನು ನಿನ್ನುಸಿರಿನ ತಂಗಾಳಿಯ...
ಕಾರಣವಿಲ್ಲದ ತಳಮಳ…
ಇವತ್ತು ಬೆಳಗಿನಿಂದ ಯಾಕೋ ಮನಸ್ಸು ಸರಿಯಾಗಿಲ್ಲ. ಮಾಡಲು ಏನೂ ಕೆಲಸವಿಲ್ಲ ಅಂತಲ್ಲ. ಬೆಳಿಗ್ಗೆ ಕಾಲೇಜಿಗೆ ಬರುತ್ತಿದ್ದಂತೆ ಕಂಡ ದೃಶ್ಯ ನನ್ನನ್ನು ಚಡಪಡಿಸುವಂತೆ ಮಾಡಿದೆ. ವಿಷಯ ನನಗೆ ಸಂಬಂಧ ಪಟ್ಟಿಲ್ಲವಾದರೂ ನಾನೇಕೆ ಹೀಗೆ ಉದ್ವಿಘ್ನಳಾಗಿರುವೆನೆಂದು ನನಗೇ ತಿಳಿಯುತ್ತಿಲ್ಲ. ಇದು ಯಾರೊಡನೆ ಚರ್ಚಿಸುವಂಥದ್ದೂ ಅಲ್ಲ. ಇಂಥದರ ಬಗ್ಗೆ ಮಾತಾಡುವುದು ನನ್ನ ಜಾಯಮಾನವೂ ಅಲ್ಲ...
ಇಂಕು ಮುಗಿದಿದೆ
ಸಮಾಜ ತಿದ್ದಲು ಬಂದವರ ಲೇಖನಿಯ ಇಂಕು ಖಾಲಿಯಾಗುತಿದೆ, ಚಾಟಿಂಗು ಡೇಟಿಂಗುಗಳ ಸೆಲೆಯಲ್ಲಿ ಯುವಕರ ಗಡಿಯಾರದ ಮುಳ್ಳು ಸ್ತಬ್ದವಾಗಿದೆ, ಬಾರು ಬೀರಿನ ನಿಶೆಯ ನಶೆಯಲ್ಲಿ ದ್ವಜದ ತಿರಂಗ ತಿರುಗು ಮುರುಗಾಗಿದೆ, ನಿಂತು ಸೇದಿದ ಸಿಗರೇಟ್ ಕುಂತು ಸೇದಿದ ಹುಕ್ಕದ ಹೊಗೆಯು ನಾಲ್ಕು ಸಿಂಹಗಳ ಕಣ್ಣು ಮುಸುಕಿದೆ, ಪಿಜಾ ಬರ್ಗರ್ ತಿಂದ ಹೊಟ್ಟೆಗೆ ಭರತ...
ರಾಜಕೀಯ ಮತ್ತು ಮಾಧ್ಯಮ
“ವಿವಿಧತೆಯಲ್ಲಿ ಏಕತೆ – ಏಕತೆಯಲ್ಲಿ ವಿವಿಧತೆ” ಇದು ನಮ್ಮ ದೇಶ ಭಾರತ. ಹಲವಾರು ಜಾತಿ, ಮತ, ಭಾಷೆ, ಸಂಸ್ಕøತಿ,ಆಚರಣೆಗಳನ್ನು ಒಳಗೊಂಡು ಶಾಂತಿ, ಸೌಹಾರ್ಧ, ಅಹಿಂಸಾತತ್ವಗಳಿಗೆ ಪ್ರಪಂಚದಲ್ಲೇ ಹೆಸರುವಾಸಿ ನಮ್ಮ ದೇಶ ಭಾರತ. ನಾಗರೀಕತೆಯ ಬೇರುಗಳಿರುವ ಹರಪ್ಪ – ಮಹೇಂಜದಾರೊಗಳನ್ನೊಳಗೊಂಡು 21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡಿರುವ ದೇಶ ಭಾರತ...