ಬಯಕೆಗಳಿಗೆ ಬಡವರಿಲ್ಲ ಎನ್ನುವುದು ಎಷ್ಟು ಸರಳವಾದ ಮತ್ತು ಸಹಜವಾದ ಮಾತು. ಜಗತ್ತಿನ ಸಕಲ ಜೀವಿಗಳೂ ತಮ್ಮ ಮಿತಿಯಲ್ಲಿ ಏನನ್ನಾದರೂ ಬಯಸುವುದು ಸಹಜ. ಗಮನಿಸಿ ನೋಡಿ, ಇಲ್ಲಿ ಬಡವ-ಶ್ರೀಮಂತ ಎನ್ನುವ ಭೇದಭಾವವಷ್ಟೇ ಅಳಿಯುವುದಿಲ್ಲ. ಜೊತೆಗೆ ವಯಸ್ಸು ಮತ್ತು ಲಿಂಗದ ನಡುವೆ ಉಂಟಾಗುವ ತಾರತಮ್ಯ ಕೂಡ ದೂರವಾಗುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು ನಾಳೆ ಮಣ್ಣು ಸೇರುವವರೆಗೆ...
Author - Rangaswamy mookanahalli
‘ಮಾಡಿದುಣ್ಣೋ ಮಹರಾಯ’
ಕೆಲವೊಮ್ಮೆ ನಮ್ಮಿಂದ ಕೆಲವು ಕಾರ್ಯಗಳು ನಡೆದು ಹೋಗುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕೈಮೀರಿ ನಡೆದವಾದರೆ ಇನ್ನೂ ಕೆಲವು ನಮಗೆ ಗೊತ್ತಿದ್ದೆ ಆಗಿರುತ್ತವೆ. ಹೀಗೆ ನಡೆದ ಕಾರ್ಯಗಳು ಕೊಡುವ ಫಲ ಕೂಡ ಕೆಲವೊಮ್ಮೆ ಒಳ್ಳೆಯದು ಮತ್ತೆ ಕೆಲವೊಮ್ಮೆ ಕೆಟ್ಟದ್ದು ಆಗಿರುತ್ತದೆ. ಈ ಒಳಿತು ಕೆಡುಕು ಎನ್ನುವುದು ಕೇವಲ ನಮಗೆ ಸೀಮಿತವಾಗಿದ್ದರೆ ಹೇಗೋ ನಡೆದು ಹೋಗುತ್ತದೆ. ಆದರೆ ನಾವು...
ಸೋತವನಿಗೆ ಸಮಾಜದ ಜನರೆಲ್ಲ ಸಲಹೆಗಾರರೇ!
ಇವತ್ತಿನ ವಿಷಯ ಕೂಡ ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ದೇಶ ಭಾಷೆಗಳ ಗಡಿ ಮೀರಿ ಇದು ಎಲ್ಲೆಡೆ ಕೇಳಿಬರುವಂತದ್ದು. ಹಾಗೆಯೇ ಇದು ಒಂದು ಕಾಲಘಟಕ್ಕೆ ಸೀಮಿತವಾಗದೆ ಸದಾಕಾಲಕ್ಕೂ ಹಸಿರು. ಇವತ್ತಿನ ಪರಿಸ್ಥಿತಿಯ ನೋಡಿ ಇದನ್ನು ಯಾರಾದರೂ ಸೃಷ್ಟಿಸಿದರೇನೋ ಎನ್ನುವ ಸಂಶಯ ಬರುವಷ್ಟು ಪ್ರಸ್ತುತ . ತೆಂಡೂಲ್ಕರ್ ಆಟವಾಡುತಿದ್ದ ಸಮಯದಲ್ಲಿ ಆತ ಒಂದೆರಡು ಪಂದ್ಯದಲ್ಲಿ ಸರಿಯಾದ...
ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು !?
ನಮ್ಮಲ್ಲಿ ಜನ ನಾಯಕರಿಗೆ ಏನೂ ಕೊರತೆಯಿಲ್ಲ. ಅವರನ್ನ ಅಭಿಮಾನದಿಂದ ಕಾಣುವ ಅಭಿಮಾನಿಗಳಿಗೂ ಕೊರತೆಯಿಲ್ಲ . ಅಂತಹ ಮಹಾನ್ ನಾಯಕರ ನಂತರ ಆತನ ಸಂತಾನ ನಾಯಕನಾಗಿ ಮುಂದುವರಿಯಲಿ ಎನ್ನುವ ಆಸೆ ಕೂಡ ನಮ್ಮ ಸಮಾಜದಲ್ಲಿ ಒಂದು ಕೈ ಜಾಸ್ತಿಯೇ ಎನ್ನಬಹುದು . ತಂದೆಯ ನಂತರ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಆತನ ತಂದೆಯಂತೆಯೇ ದಕ್ಷನಾಗಿದ್ದರೆ ಕೇಳುವುದಿನ್ನೇನು? ತನ್ನ...
ಮಂತ್ರಕ್ಕಿಂತ ಉಗುಳು ಜಾಸ್ತಿ!
ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಗಾದೆ ನಮ್ಮಲ್ಲಿ ಹಾಸ್ಯದಿಂದ ಬಳಸುತ್ತೇವೆ. ಸ್ಪಷ್ಟವಾಗಿ ಮಂತ್ರ ಬಾಯಿಂದ ಹೊರಡುವುದರ ಬದಲು ಉಗಳು ಜಾಸ್ತಿ ಬರುತ್ತದೆ – ಅಂದರೆ ಮಂತ್ರ ಹೇಳುವನಿಗೆ ಅದರ ಮೇಲಿನ ಪಾಂಡಿತ್ಯ ಅಷ್ಟಕಷ್ಟೇ ಎನ್ನುವ ಅರ್ಥದಲ್ಲಿ ಇದನ್ನ ಬಳಸುತ್ತೇವೆ. ಹಾಗೆ ನೋಡಲು ಹೋದರೆ ಈ ಗಾದೆ ಪಾಂಡಿತ್ಯವಿರದ ಪುರೋಹಿತನ ಕುರಿತು ಶುರುವಾದರೂ, ನಂತರದ...
ನುಡಿದಂತೆ ನಡೆಯುವರು ಉಳಿದವರು ಯಾರಿಲ್ಲಿ?
ಆಚಾರ ಹೇಳುವುದಕ್ಕೆ – ಬದನೇಕಾಯಿ ತಿನ್ನುವುದಕ್ಕೆ ಅಂತ ನಮ್ಮಲ್ಲಿ ಒಂದು ಗಾದೆಯಿದೆ. ಇದರ ಅರ್ಥ ನುಡಿದಂತೆ ನುಡಿಯುವರು ಕಡಿಮೆ ಎನ್ನುವುದು. ನಮ್ಮಲ್ಲಿ ಅಂತಲ್ಲ ಜಗತ್ತಿನ ಬಹುಸಂಖ್ಯೆಯ ಜನ ಈ ಒಂದು ಕೆಟಗರಿಯಲ್ಲಿ ಬರುತ್ತಾರೆ. ಇಂದಿನ ದಿನದಲ್ಲಿ ೯೯ ಪ್ರತಿಶತ ಜನ ಹೀಗೆ ಅಂದರೂ ತಪ್ಪಾಗುತ್ತದೆ. ಏಕೆಂದರೆ ಉಳಿದ ಒಂದು ಪ್ರತಿಶತ ಜನರೂ ಕೂಡ ಸಮಯ ಬಂದರೆ ಹೇಗೆ...
ಆಳಾಗಿ ದುಡಿ ,ಹಸಿದು ತಿನ್ನು !
ಹಸಿದಾಗ ತಿನ್ನುವುದು ಸಂಸ್ಕೃತಿ, ಹಸಿವಿಲ್ಲದೆ ತಿನ್ನುವುದು ವಿಕೃತಿ ಎನ್ನುವುದು ಸನಾತನ ಹಿಂದೂ ಧರ್ಮದಲ್ಲಿ ಹೇಳಿರುವ ಮಾತು. ಹಸಿವಿಲ್ಲದೆ ತಿನ್ನುವುದರಿಂದ ಮುಖ್ಯವಾಗಿ ಮತ್ತೊಬ್ಬ ಹಸಿದವನ ಅನ್ನ ಕಸಿದ ಹಾಗೆ ಆಗುತ್ತದೆ. ಜೊತೆಗೆ ಹೆಚ್ಚು ತಿಂದವನ ಆರೋಗ್ಯ ಕೂಡ ಕೆಡುತ್ತದೆ. ಮಿತಾಹಾರ ಬದುಕಿಗೆ ಒಳ್ಳೆಯದು ಎನ್ನುವುದು ನಮ್ಮ ಎಲ್ಲಾ ಹಿರಿಯರು ಕಾಲದಿಂದ ಕಾಲಕ್ಕೆ...
ನೋವಿಲ್ಲದ ಗೆಲುವಿಲ್ಲ !
ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಸಹಜ ಆಕಾಂಕ್ಷೆ . ಒಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ . ಕೆಲವರು ಕಲಾವಿದರಾಗಿ ಯಶಸ್ಸು ಪಡೆದರೆ ಇನ್ನು ಕೆಲವರು ವೈದ್ಯರಾಗಿ , ಇಂಜಿನಿಯರ್ ಆಗಿ .. ಹೀಗೆ ಪಟ್ಟಿ ಬೆಳೆಯುತ್ತದೆ . ಕ್ಷೇತ್ರ ಯಾವುದೇ ಇರಲಿ ಯಶಸ್ಸು ಪಡೆಯಲು ಇರುವುದು ಒಂದೇ ದಾರಿ, ನಿಷ್ಠೆ ಮತ್ತು...
ಗೋಡೆಗೂ ಕಿವಿಯಿದೆ !
ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ...
ಮನೆ ಗೆದ್ದು ಮಾರು ಗೆಲ್ಲು !
ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ? ಅಲ್ಲವೇ...