Author - Mamatha Channappa

ಕಥೆ

ಬದು..

ರಾತ್ರಿಯಾಗಿದೆ. ಕಪ್ಪು ಕಂಬಳಿ ಹೊದ್ದ ಮಂಜಪ್ಪ ಗೋಕಾಕಿನ ಪ್ರಸಿದ್ಧ ಜಲಪಾತದ ಮೇಲಿನ ಜಾಗದಲ್ಲಿ ಕುಳಿತಿದ್ದಾನೆ.ಭೋರ್ಗರೆಯುವ ಘಟಪ್ರಭಾ ಸುಂದರವಾಗಿ ಕಾಣುತ್ತಿದ್ದಾಳೆ.. ಕೇವಲ ಒಂದಿಂಚು ಹೊಲದ ಬದು ಹೆಚ್ಚು ಕಡಿಮೆಯಾಯಿತೆಂದು ವರಸೆಯಲ್ಲಿ ದೂರದ ಸಂಬಂಧಿ, ತನ್ನ ಆತ್ಮೀಯ ಗೆಳೆಯನ್ನು ಮಚ್ಚಿನಿಂದ ಕತ್ತರಿಸಿ ಹದಿನಾಲ್ಕು ವರ್ಷ ಜೀವಾವಧಿ ಶಿಕ್ಷೆ ಅನುಭವಿಸಿ ಬಂದ ಮಂಜಪ್ಪ...

ಕವಿತೆ

ವಿಧವೆ…

ಬಾಕಿ ಉಳಿದಿದ್ದ ಪದಗಳೀಗ ಸಾಲುಗಳಾಗಿ ಬರಲು ತಡಕಾಡುತ್ತಿವೆ.. ಹೆಣ್ಣು ಜೀವದ ಮಜಲುಗಳೇಕೆ ಹೀಗೆ ಎಂದು ಬಾರಿ ಬಾರಿ ಪ್ರಶ್ನಿಸುತ್ತಿವೆ… ಗುಪ್ತಗಾಮಿನಿಯಾದರೂ ಹೆಣ್ಣು ಭಾವನೆಗಳು ಗುಪ್ತವಲ್ಲ ಅಲ್ಲವೇ..?‌! ಹುಟ್ಟಿನಿಂದ ಸ್ವತ್ತಾಗಿದ್ದ ಕೆಂಪು ಅತ್ತ -ಇತ್ತ -ಸುತ್ತ ಚೆಲ್ಲಿದ್ದರೂ ಎತ್ತಿಕೊಳ್ಳುವ ತ್ರಾಣವಿದ್ದರೂ ಏಕೋ ಈಗ ಇದು ಸರಿಯಲ್ಲ… ಹೂದೋಟದಿ ಮಲ್ಲಿಗೆ...

ಅಂಕಣ

ಒಡಪುಗಳು-ಉತ್ತರ ಕರ್ನಾಟಕದ ವಿಶೇಷತೆ..

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು.ಮದುವೆ,ಮುಂಜಿ ಇನ್ನಿತರ ಕಾರ್ಯಕ್ರಮಗಳಲ್ಲಿ ಸೇರಿರುವ ಹೆಂಗಸರು,ಗಂಡಸರು ಹೇಳುವ ಒಡಪುಗಳನ್ನು ಕೇಳುವುದೇ ಒಂದು ವಿಶಿಷ್ಟ ಕ್ಷಣ.ಒಡಪು ಹೇಳದಿದ್ದರೆ ವಧು ವರರನ್ನಂತೂ ಸೇರಿರುವ ಹೆಂಗಸರು ಗೋಳಾಡಿಸಿಬಿಡುತ್ತಾರೆ..ಒಡಪುಗಳ ಜೊತೆಗೆ ಗಂಡ ಹೆಂಡತಿಯ ಹೆಸರನ್ನೂ ,ಹೆಂಡತಿ ಗಂಡನ ಹೆಸರನ್ನೂ ಹೇಳಬೇಕು..ಮದುವೆ...

ಕವಿತೆ

ಹನಿಗವನಗಳು

೧.ನಲ್ಲನಿಲ್ಲದಿರೆ… ಮುಂಗುರುಳ ಕರೆಗೆ ಓಗೊಡುವ ನಲ್ಲನಿಲ್ಲದಿರೆ ಇನ್ನೆಲ್ಲಿಯ ನಿದಿರೆ…? ೨.ಬರಹ.. ಕಲಹ..ವಿರಹ.. ಇನ್ನೇನಿದೆ ಆಮೇಲೆ? ಬರೆದದ್ದು ಅವನ ನೆನಪಿನದೇ ಬರಹ ೩.ಮಿಂಚುಹುಳು.. ನಾನೋ ಯಾವಾಗಲೂ ನಿನಗಾಗೇ ಕಾಯ್ದವಳು ನೀನೋ ಆಗಾಗ ಮಿಂಚಿ ಮರೆಯಾಗುವ ಮಿಂಚು ಹುಳು ೪.ಸೋತವಳು.. ಅಕ್ಷರಗಳಲ್ಲಿ ನಿನ್ನ ಕಟ್ಟಿ ಹಾಕುವ ತಾಕತ್ತಿದೆ ನನಗೆ…...

ಕವಿತೆ

ಬಂಜೆ ಇವಳು..

ಕಾಡಿಗೆಯ ತಂದಿದ್ದೇನೆ ಕಂದ ನಿನ್ನ ಕಣ್ಣಿಗೆ ಲೇಪಿಸಲು ನಿನ್ನ ಪುಟ್ಟ ಕಾಲಿಗೊಂದು ದೃಷ್ಟಿ ಬೊಟ್ಟಿಡಲು ಕಾಯ್ದವಳು   ಕಾಲ್ಗೆಜ್ಜೆಯ ತಂದಿಟ್ಟು ವರ್ಷವೇ ಆಯಿತೇನೋ ಇನ್ನೂ ಅದರ ಸಪ್ಪಳವೇ ಕೇಳದ ನತದೃಷ್ಟಳಿವಳು   ಕುಲಾಯಿಯೊಂದ ಕೈಯಾರೆ ಹೆಣೆದಿರುವೆ ಅಂದಕ್ಕಿರಲೆಂದು ಮುತ್ತು ಪೋಣಿಸುತ್ತಿರುವವಳು   ತೊಟ್ಟಿಲ ಮಾಡಿರುವ ಬಡಗಿ ಬಗೆ ಬಗೆ ಚಿತ್ತಾರವ...

ಅಂಕಣ

ಗೂಡುಬಿಟ್ಟ ಗುಬ್ಬಚ್ಚಿಯ ಕಥೆ-ವ್ಯಥೆ..

ಅಮ್ಮ, ಅಪ್ಪ, ಪಕ್ಕದ ಮನೆಯ ಗಂಗಮ್ಮ, ಬಾಲ್ಯದ ಗೆಳೆಯ, ಗೆಳತಿ ನೆನಪಾಗುತ್ತಿದ್ದಾರೆ. ಎಲ್ಲರೂ ದೂರದ ಗೂಡಿನಲ್ಲಿದ್ದಾರೆ.. ನಮ್ಮದೋ ಹಾಳು ಅನಿವಾರ್ಯ.. ನೆನೆದಾಗ ಅಮ್ಮ ಎದುರಿಗಿರದ ಊರಲ್ಲಿ ಹೊಟ್ಟೆಪಾಡಿಗೊಂದು ಕಾರ್ಯ.. ಎರಡು ಮೂರು ತಿಂಗಳಿಗೊಮ್ಮೆ, ಖುಷಿಗೆ ಹಬ್ಬ ಹರಿದಿನಗಳಿಗೊಮ್ಮೆ  ದೂರದ ಗೂಡಿಗೆ ಹೋದಾಗ ಅಮ್ಮನ ಮಡಿಲಿನ ಸುಖ…! ಆಹಾ…..! ಅಮ್ಮನ ಮಡಿಲಿನ...

ಕವಿತೆ

ನನ್ನಲ್ಲಿ ಈಗ…

ಎಲ್ಲಾ ಕನಸುಗಳು ಸ್ತಬ್ಧ ಎಲ್ಲಾ ಆಸೆಗಳೂ ನಿಶ್ಯಬ್ದ ಮನಸೊಂತರ ಪ್ರಾರಬ್ಧ ನಿಮಿಷಕ್ಕೊಮ್ಮೆ ಚಂಚಲತೆಯ ಶಬ್ದ ನನ್ನಲ್ಲಿ ಈಗ… ಶೂನ್ಯತೆಯ ಅನಾವರಣ ನಿನ್ನ ನೆನಪುಗಳ ನಿರ್ವಾಣ ನೀನೋಂತರ ನಿಧಾನಗತಿಯ ಪಾಷಾಣ ಆವರಿಸಿದೆ ನನ್ನದೇ ಪರ್ಯಾವರಣ ನನ್ನಲ್ಲಿ  ಈಗ.. ಮುನಿಸಷ್ಟೇ ಅಲ್ಲ ಕಾರಣ ಯಾರಿಗೆ ಗೊತ್ತು? ಗೊಂದಲಗಳು ನಿನ್ನನುಪಸ್ಥಿತಿಯ ಹೊತ್ತು ಮತ್ತೊಂದಿರಬಹುದು ನಿನ್ನ ಮನದ...

ಕಥೆ

ವಿಧಿಯಾಟ….೮

ವಿಧಿಯಾಟ….7 ಭಾರವಾದ ಹೃದಯದಿಂದ ಮನೆಗೆ ಮರಳಿದ್ದ ಸುಶಾಂತ್.ಜನಾರ್ಧನ ಅವನಿಗೆ ಕರೆ ಮಾಡಿದರೆ ಫೋನ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಅವನು ರಿಸೀವ್ ಮಾಡದಿದ್ದಕ್ಕೆ ಗಾಬರಿಯಾಗಿ ಸುಸಾಂತ್ ನ ರೂಮಿಗೆ ಬಂದ…ಅವನಿಗೆ ಆಶ್ಚರ್ಯ..ಸುಶಾಂತ್ ಅಳುತ್ತಿದ್ದಾನೆ…ತಲೆ ಎಲ್ಲಾ ಕೆದರಿದೆ…ಬಟ್ಟೆ ಯಲ್ಲಿ ಮಣ್ಣಾಗಿದೆ. “ಏನಾಯಿತೋ ಸುಶಿ..ಯಾಕೋ...

ಕಥೆ

ವಿಧಿಯಾಟ…೭.

ವಿಧಿಯಾಟ…6.   ಸುಶಾಂತ್ ಕೋಮಾ ಸ್ಥಿತಿಯಲ್ಲಿದ್ದ ..ವೈದ್ಯರ ಪ್ರಯತ್ನದಿಂದ ಎರಡು ತಿಂಗಳ ನಂತರ ಸರಿಯಾಗಿ ಕಣ್ಣು ತೆರೆದಿದ್ದ. ಅವನಿಗೆ ನೆನಪಾಗಿದ್ದು ಅವನ ಜಾನೂ …ಅಪ್ಪ ಸತ್ತ ವಿಷಯವೂ ಅವನಿಗೆ ತಿಳಿದಿರಲಿಲ್ಲ. ಮನೆಗೆ ಕರೆದುಕೊಂಡು ಹೋಗಿ ನಿಧಾನವಾಗಿ ವಿಷಯ ತಿಳಿಸಿದರಾಯಿತೆಂದುಕೊಂಡ ಜನಾರ್ಧನ. ಆದರೆ ಬಿಲ್ ಕಟ್ಟಿ ಬರುತ್ತೇನೆಂದು ಹೇಳಿ ಹೋಗಿದ್ದ...

ಕಥೆ

ವಿಧಿಯಾಟ…೬

ವಿಧಿಯಾಟ…5     ಪರಿಚಯವಾದ ಸ್ವಲ್ಪ ದಿನಕ್ಕೆ  ಗಣೇಶನ ಹಬ್ಬದಂದುಅವರಿಬ್ಬರನ್ನು ಊಟಕ್ಕೆ  ಕರೆಯಲು ಹೋಗಿದ್ದಳುಜಾಹ್ನವಿ..ಆ ರೂಮಿನ ಗೋಡೆಯ ಮೇಲೆ ನೇತು ಹಾಕಿದ್ದಚಿತ್ರಪಟಗಳು ಅವಳ ಕಣ್ಮನ ಸೆಳೆದಿದ್ದವು. ಅವಳುಅವುಗಳನ್ನೇ ನೋಡುತ್ತ ನಿಂತಾಗ ಜನಾರ್ಧನ “ನಮ್ಮಸುಶಾಂತ್ ಸಾಹೇಬರು ಚಿತ್ರಕಲೆಯಲ್ಲಿ ನಿಪುಣರು… …ಇವು ಸುಶಾಂತ್ ಬರೆದಿರೋ ಚಿತ್ರಗಳು ...