ಆತ್ಮ ಸಂವೇದನಾ-23 ಆದಿಯೂ.. ಅಂತ್ಯವೂ.. ಸುಖವೂ.. ದುಃಖವೂ.. ಬದುಕೂ.. ಸಾವೂ.. ಆತ್ಮವೂ.. ವಿಶ್ವಾತ್ಮವೂ.. ಕೊನೆಗೆ?? ಕತ್ತಲು.. ಶಾಶ್ವತ ಕತ್ತಲು.. ಆದಿಯೂ.. ಅಂತ್ಯವೂ.. ನಿಧಾನ ಸ್ವರದಲ್ಲಿ, ಮಂದ್ರ ರಾಗದಲ್ಲಿ ಪುಟ್ಟ ಮಗುವಿನ ದನಿಯೊಂದು ಅಲೆ ಅಲೆಯಾಗಿ ಕೇಳಿ ಬರುತ್ತಿತ್ತು. ಬಿದಿರಿನ ವಯೊಲಿನ್ ನಾದ ಹೊರಡಿಸುತ್ತಲೇ ಇತ್ತು, ನಿಧಾನ ಧಾಟಿಗೆ ಸಮನಾದ ಶೃತಿ. ವಿಶ್ವಾತ್ಮ...
Author - Gautam Hegde
ಆತ್ಮ ಸಂವೇದನಾ-23
ಆತ್ಮ ಸಂವೇದನಾ-22 ಅದೇ ಸಮಯದಲ್ಲಿ ಆತ್ಮ, ಸಂವೇದನಾ ವರ್ಷಿಯ ಪ್ರಯೋಗಾಲಯದತ್ತ ಸಾಗುತ್ತಿದ್ದರು. ಎರಡನೇ ಸೂರ್ಯನನ್ನು ಇಲ್ಲದಂತೆ ಮಾಡಬೇಕೆಂಬುದು ಅವರಂತರಂಗ. ವರ್ಷಿಯನ್ನು ಒಲಿಸಬೇಕು, ಇಲ್ಲವೇ ಒತ್ತಡ ಹೇರಿಯಾದರೂ ಎರಡನೇ ಸೂರ್ಯನನ್ನು ನಾಶವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ್ದ ಆತ್ಮ.ಅವರಿಬ್ಬರೂ ಕುಳಿತಿದ್ದ ಕಾರಿನಂಥದೇ ವಾಹನ ಅದರಷ್ಟಕ್ಕೇ ಚಲಿಸುತ್ತಿತ್ತು. ಎಲ್ಲವೂ...
ಆತ್ಮ ಸಂವೇದನಾ. ಅಧ್ಯಾಯ 22
ಆತ್ಮ ಸಂವೇದನಾ. ಅಧ್ಯಾಯ 21 ಅದು ವರ್ಷಿಯ ಪ್ರಯೋಗಾಲಯ, ಒಂಟಿಯಾಗಿ ಕುಳಿತಿದ್ದ. ಒಂಟಿತನ ಆತನನ್ನು ಕಂಗೆಡಿಸಿರಬಹುದೇ? ಆತ ಯಾವಾಗಲೂ ಒಂಟಿಯಾಗಿಯೇ ಬದುಕಿದ್ದು ಎಂಬ ನಿಲುವೇ ಗೆಲ್ಲುವುದು. ನಿಜ ಸ್ಥಿತಿಯೇ ಬೇರೆ ಇದೆ. ಒಂಟಿತನ ಕಾಡದ, ಕಾಡಿಸದ ವಸ್ತು ಯಾವುದೂ ಇಲ್ಲ. ಭಾವಗಳು ಸಂಗಾತಿಯನ್ನು ಬಯಸುತ್ತವೆ. ಜೀವಿಗಳು ಸಾಂಗತ್ಯವನ್ನು ಬೇಡುತ್ತವೆ. ಪ್ರತಿ ಜೀವಿಗಳೂ ಸಹವಾಸ...
ಆತ್ಮ ಸಂವೇದನಾ. ಅಧ್ಯಾಯ 21
ಆತ್ಮ ಸಂವೇದನಾ ಅಧ್ಯಾಯ 20 ಅಪರೂಪದ ಸನ್ನಿವೇಶ; ಮನಸ್ಸೆಂಬ ಮಹಾಕಾಶ. ಮನಸ್ಸು ಯಾರಿಗಿಲ್ಲ? ಮನಸ್ಸಿಲ್ಲದವಗೂ ಒಂದು ಮನಸ್ಸಿದೆ. ಪ್ರತಿಯೊಂದು ಜೀವಿಯಲ್ಲೂ ಉಸಿರಿರದ ನಿರ್ಜಿವಿಗಳಲ್ಲೂ ಮನಸ್ಸಿದೆ. ಈ ಮನಸ್ಸು ಎಂದರೆ ಏನು? ದೇಹದಲ್ಲಿನ ಪ್ರತಿ ಕ್ರಿಯೆಗಳು ವ್ಯವಸ್ಥಿತ ಪ್ರತಿಕ್ರಿಯೆಯಾಗಲು ಆರೋಗ್ಯವಿರಬೇಕು, ಅದಕ್ಕೆ ಪೂರಕ ಆಹಾರವಿರಬೇಕು. ಆದರೆ ಈ ಮನಸ್ಸು ಎಂಬ Virtual...
ಆತ್ಮ ಸಂವೇದನಾ ಅಧ್ಯಾಯ 20
ಆತ್ಮ ಸಂವೇದನಾ ಅಧ್ಯಾಯ 19 ಆತ್ಮನಿಗೆ ಹಿಗ್ಗೋ ಹಿಗ್ಗು. ಸಂವೇದನಾ ಅವನ ಸನಿಹದಲ್ಲಿಯೇ ಓಡಾಡಿಕೊಂಡು, ಹಾಡಿಕೊಂಡಿರುತ್ತಿದ್ದಳು. ಅವನಿಗೇನೋ ಮುದ. ಮಾನಸಿಕವಾಗಿ ಸಂಗಾತಿ ದೊರೆತಿದ್ದಳು. ಅದೇ ಕಾರಣಕ್ಕೆ ಹೊರಗಿನ ಪ್ರಪಂಚದ ಅರಿವೇ ಇಲ್ಲದೇ ಅರಾಮವಾಗಿರುತ್ತಿದ್ದ. ಸಂವೇದನಾಳ ನಗು, ಅವಳ ಮುಗ್ಧ ಮುಖ, ಮುದ್ದು ಭಾಷೆ ಇವಿಷ್ಟೇ ಸಾಕಿತ್ತು. ವರ್ಷಿ, ಎರಡನೆಯ ಸೂರ್ಯ, ಭೂಮಿಯ...
ಆತ್ಮ ಸಂವೇದನಾ ಅಧ್ಯಾಯ 19
ಆತ್ಮ ಸಂವೇದನಾ ಅಧ್ಯಾಯ 18 ಎಲಿಯನ್ಸ್ ಗಳ ನಾಡಿನ ಚಿತ್ರಣವೇ ಬದಲಾಗಿತ್ತು. ಎರಡನೇ ಸೂರ್ಯನನ್ನು ಸಮಾಪ್ತಿಗೊಳಿಸಲು ಹೋದ ಜೀವಿಗಳು ಅದು ಸಾಧ್ಯವಾಗದೇ ಹಿಂದಿರುಗಿ ಬರುತ್ತಿದ್ದವು. ಅದೇ ಸಮಯದಲ್ಲಿ ಕತ್ತಲ ಲೋಕದಲ್ಲೊಂದು ಸಭೆ ನಡೆಯುತ್ತಿತ್ತು. ಎಲಿಯನ್ ಒಂದು ಈಗಷ್ಟೇ ಮಣ್ಣಿನಿಂದ ಹುಟ್ಟಿದ ಜೀವಿಗಳೆದುರು ಮಾತನಾಡುತ್ತಿತ್ತು. “ಯುದ್ಧ ಮಾಡಬೇಕು, ಭೂಮಿಯ ಜನರ...
ಆತ್ಮ ಸಂವೇದನಾ ಅಧ್ಯಾಯ 18
ಆತ್ಮ ಸಂವೇದನಾ ಅಧ್ಯಾಯ 17 ಕತ್ತಲು ಕೂಡ ಹಿತ ನೀಡುತ್ತದೆ, ಮನಸು ಅನಾವರಣಗೊಳ್ಳುವುದು ಕತ್ತಲಿನಲ್ಲೇ; ಅನೇಕ ಬಾರಿ ದೇಹವೂ. ನಕ್ಷತ್ರಗಳ ಚೇತೋಹಾರಿ ದೃಶ್ಯವನ್ನು ನಾನಿನ್ನು ನೋಡಲು ಸಾಧ್ಯವಿಲ್ಲ ಎಂದು ದಂಗಾದ ಆತ್ಮ. ಸಂವೇದನಾ ಅವನ ಆಲಯದಲ್ಲಿಯೇ ಓಡಾಡಿಕೊಂಡದ್ದು ಗೊತ್ತವನಿಗೆ. ತಾನಾಗಿ ಅವಳನ್ನು ಮಾತನಾಡಿಸಬಾರದೆಂದು ದ್ರುಧವೆಂಬಂತೆ ನಿರ್ಧರಿಸಿಕೊಂಡಿದ್ದ. ಅದೇಕೆ ಅಂತಹ...
ಆತ್ಮ ಸಂವೇದನಾ ಅಧ್ಯಾಯ 17
ಆತ್ಮ ಸಂವೇದನಾ ಅಧ್ಯಾಯ 16 ಭೂಮಿಯಿಂದ ನೂರು ಜ್ಯೋತಿರ್ವರ್ಷ ದೂರದಲ್ಲಿ ನಕ್ಷತ್ರವೊಂದು ಸತ್ತು ಕಪ್ಪು ವಲಯವನ್ನು ಸೇರಿದ ಜಾಗವದು. ಎಷ್ಟೋ ಸಹಸ್ರ ಕೋಟಿ ವರ್ಷಗಳಿಂದ ಬೆಳಕನ್ನೇ ಕಂಡಿಲ್ಲ. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಆಳುತ್ತಿದೆ. ಅಲ್ಲಿನ ಜೀವಿಗಳಿಗೆ ಬೆಳಕೆಂದರೇನು ಎಂಬುದೇ ತಿಳಿದಿಲ್ಲ. ಅಂಥ ಜಾಗದಲ್ಲಿ ಇಂದು ಆಕಸ್ಮಿಕವೆಂಬಂತೆ ಬೆಳಕು ಧಾಳಿಯಿಟ್ಟಿದೆ...
ಆತ್ಮ ಸಂವೇದನಾ ಅಧ್ಯಾಯ 16
ಆತ್ಮ ಸಂವೇದನಾ ಅಧ್ಯಾಯ 15 ವರ್ಷಿಯ ಆವಿಷ್ಕಾರ ಆಗಸವ ಸೇರಿ ಮೂರು ದಿನಗಳು ಮುಗಿಯುತ್ತ ಬಂದಿತ್ತು. ಹಗಲು ಬೆಳಕೇ; ರಾತ್ರಿ ಕತ್ತಲೆಯೇ. ಯಾವುದೇ ವ್ಯತ್ಯಾಸಗಳು ಕಂಡುಬರಲಿಲ್ಲ. ಎರಡು ದಿನ ಸಹನೆಯಿಂದ ಕಾಯ್ದ ವರ್ಷಿ. ಸಣ್ಣ ಅನುಮಾನದ ಛಾಯೆ ಮೂರನೆಯ ದಿನದ ಮುಸ್ಸಂಜೆಗೂ ಮುನ್ನ ಪ್ರಾರಂಭವಾಗಿತ್ತು. ಆತ್ಮ ಸ್ವಲ್ಪವೂ ನೆನಪಿರದೆ ಆ ಘಟನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದ...
ಆತ್ಮ ಸಂವೇದನಾ ಅಧ್ಯಾಯ 15
ಆತ್ಮ ಸಂವೇದನಾ ಅಧ್ಯಾಯ 14 ವರ್ಷಿಯು ಬಹಳ ವ್ಯಾಕುಲಗೊಂಡಿದ್ದ. ಬದುಕ ದಾರಿ ಬೇಸರವೆನಿಸುತ್ತಿತ್ತು ಒಮ್ಮೊಮ್ಮೆ. ಅವಿಶ್ರಾಂತ ಸಾವಿರ ವರ್ಷಗಳು. ಯಾರಿಗೆ ತಾನೇ ಹುಚ್ಚು? ಒಂದೇ ಕ್ಷಣಕ್ಕೆ ಎಲ್ಲವೂ ಬೇಸರವೆನ್ನಿಸುವಾಗ… ನಿರಂತರತೆಯ ಅಧ್ಯಾಯ. ಅಂತ್ಯವೇ ಇಲ್ಲದ ಕ್ಷಣಗಳ ಸಂಕಲನ. ಜೀವನದಲ್ಲಿ ಅವನ ನಿರೀಕ್ಷೆಗೂ ಮೀರಿ ಖುಷಿಯ ಕ್ಷಣಗಳನ್ನು ಹೊಂದಿದ್ದ. ಜಗತ್ತೇ ಅವನೆದುರು...