Author - Dr. Abhijith A P C

Featured ಪರಿಸರದ ನಾಡಿ ಬಾನಾಡಿ

ಬಾನಾಡಿಗಳಲ್ಲಿ “ಅಪ್ಪ”ನ ಪಾತ್ರ

ಜೂನ್ ಹತ್ತೊಂಬತ್ತರಂದು  ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿಯಾಗಿದೆ. ಅವರಿವರು ಅಪ್ಪನನ್ನು ಎಷ್ಟು ಪೀತಿಸುತ್ತಾರೋ, ಗೌರವಿಸುತ್ತಾರೋ ಗೊತ್ತಿಲ್ಲ, ಅಂತೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಪ್ಪನೊಂದಿಗಿನ ಫೋಟೋಗಳನ್ನು ಒಂದು ದಿನದ ಮಟ್ಟಿಗೆ ಹಂಚಿಕೊಂಡವರೇ. ಆ ಪ್ರೀತಿ, ಗೌರವ ದಿನವೊಂದಕ್ಕೆ ಸೀಮಿತವಾಗದಿದ್ದರೆ ಹಾಗೊಂದು ದಿನವನ್ನು ಆಚರಿಸುವ...

Featured ಪರಿಸರದ ನಾಡಿ ಬಾನಾಡಿ

ಬಾನಾಡಿಗಳೂ ಹೇಳುತ್ತಿವೆ – “ ಚಾಮುಂಡಿಬೆಟ್ಟ ಉಳಿಸಿ ’’

ಮೈಸೂರು  ಎಂದಾಕ್ಷಣ ಎಲ್ಲರ ಚಿತ್ತದಲ್ಲಿ ಬರುವ ಮೊದಲ ಕೆಲ ಚಿತ್ರಣಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಮಹಿಷಾಸುರನನ್ನು ಸಂಹರಿಸಿದ ನಂತರ ತಾಯಿ ಚಾಮುಂಡಿ ನೆಲೆನಿಂತ ತಾಣವೀ ಬೆಟ್ಟ. ಪುರಾತನವೂ, ಪುರಾಣಗಳಲ್ಲಿ ಉಲ್ಲೇಖಿಸಿರುವ ಮಹಾಬಲೇಶ್ವರನ ದೇವಸ್ಥಾನವೂ ಇಲ್ಲಿದೆ. ಮೈಸೂರು ಜಿಲ್ಲೆಗೇ ಪ್ರಮುಖ, ಮೈಸೂರು ಪೇಟೆಯ ನಡುವೆ ಇರುವ ಈ ಬೆಟ್ಟ, ಪೇಟೆಯ ವಾಯುಮಾಲಿನ್ಯವನ್ನು...

Featured ಪರಿಸರದ ನಾಡಿ ಬಾನಾಡಿ

ಕಪ್ಪೆ ಬಾಯಿ  ಇದೊಂದು ಗುಡ್ಡದ ಭೂತ !

ಅಡಿಕೆ ತೋಟ, ತೋಟದ ಮಧ್ಯೆ ಮನೆ, ತೋಟದ ಸುತ್ತ ಸಣ್ಣ ಗುಡ್ಡೆ. ಗುಡ್ಡೆ0ು ತುಂಬ ದಟ್ಟ ಕಾಡು. ಕಾಡಿನಲ್ಲಿ ಸಸ್ಯ ವೈವಿಧ್ಯ. ಆ ವೈವಿಧ್ಯತೆಗೆ ತಕ್ಕನಾದ ಕೀಟ, ಹುಳ, ಚಿಟ್ಟೆ, ಹಕ್ಕಿ ಮತ್ತು ಪ್ರಾಣಿಗಳು. ಇದು ಪುತ್ತೂರು ಸಮೀಪ ಇರುವ ನನ್ನ ಪ್ರೀತಿ0ು ತಂಗಿಯ ತೋಟದ ವರ್ಣನೆ. ನನ್ನ ತಂಗಿಯಷ್ಟೇ ತಣ್ಣನೆಯ ಪ್ರೀತಿಯಿಂದ ಆ ಪರಿಸರ ನನ್ನನ್ನು ಆಗಾಗ  ಅತ್ತ ಕರೆಯುತ್ತದೆ. ಹಾಗೆ...

Featured ಪರಿಸರದ ನಾಡಿ ಬಾನಾಡಿ

ಶಿಸ್ತಿಲ್ಲದ ಜೀವನ ನೀರಿಲ್ಲದ ವನಕಾನನ

ನಮ್ಮ ತೋಟದ ಮನೆಯ ಸುತ್ತಮುತ್ತ ಏನಿಲ್ಲವೆಂದರೂ 10-15 ಸಣ್ಣ ತೊಟ್ಟಿಗಳಿವೆ. ಅವುಗಳಲ್ಲಿ ನಾವು ವಿಧ ವಿಧನಾದ ತಾವರೆಗಳನ್ನು ಬೆಳೆಸಿದ್ದೇವೆ. ಅದಲ್ಲದೆ ಅಜೋಲ,ಬಜೆ, ಅಂತರ್ಗಂಗೆಯಂಥ ಹಲವು ಜಲಾಶ್ರಿತ ಬೆಳೆಗಳಿವೆ. 365ದಿನವೂ ಇದರಲ್ಲಿ ನೀರು ಭರ್ತಿ. ನನ್ನರಿವಿಗೆ ಬಂದಂತೆ ಈ ನೀರಿನ ಒಡನಾಟವನ್ನು ಪಿಕಳಾರ (Bulbul)) ಮತ್ತು ಮಡಿವಾಳ (oriental magpie robin) ಹಕ್ಕಿಗಳು...

Featured ಪರಿಸರದ ನಾಡಿ ಬಾನಾಡಿ

ನೀರು ಕೊಡಿ

ಏಪ್ರಿಲ್ ಬಂದಾಯಿತು, ಬೇಸಿಗೆಯ ಕಾವು ದಿನೇ ದಿನೇ ಏರುತ್ತಿದೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದ   sun stroke ನಮ್ಮೆಡೆಗೆ ಕೂಡಾ ಧಾವಿಸಿ ಬರುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ 5 ಜನ ಆಸ್ಪತ್ರೆ ಸೇರಿದ್ದಾರಂತೆ. ಶಿವಮೊಗ್ಗವಂತೂ 48 ಡಿಗ್ರೀ ತಾಪದಲ್ಲಿದೆ. ಸದಾ ತಂಪಾಗಿರುವ ಮೈಸೂರು 40ಡಿಗ್ರಿಯ ಆಸುಪಾಸಿನಲ್ಲಿದೆ. ಎಲ್ಲರ ಬಾಯಲ್ಲಿ ಒಂದೇ ಉದ್ಗಾರ, ಎಂಥಾ ಸೆಖೆ...

Featured ಪರಿಸರದ ನಾಡಿ ಬಾನಾಡಿ

ಬಾನಾಡಿ ಲೋಕದಲ್ಲೊಂದು ಬಾನಾಡಿ – swift  ಭಾಗ 2

  ಮೂರು ವಾರಗಳ ಹಿಂದೆ ಅವಿಶ್ರಾಂತ ಬದುಕು ನಡೆಸುವ ಬಾನಾಡಿ ಲೋಕದ “ಬಾನಾಡಿ” swift ಗಳ ಬಗೆಗೆ ಓದಿರುವಿರಿ. ಆದರೆ ನಾವು ಮನುಜರು ಭೂನಾಡಿಗಳು ಹಾಗಾಗಿ ನಮಗೆ ಹಲವೊಂದು ಕಾರಣಗಳಿಗಾಗಿ ವಿಶ್ರಾಂತಿ ಬೇಕಾಗಿಬಿಡುತ್ತದೆ. ಆದ್ದರಿಂದ ಮೂರು ವಾರಗಳ ವಿಶ್ರಾಂತಿಗಾಗಿ ನನ್ನನ್ನು ಹೀಗೆ ನಕ್ಕು ಕ್ಷಮಿಸಿ ಬಿಡಿ. ಓಹೋ ಈಗ ಬಾನ ನೋಡಿ ಅಲ್ಲಿ ಇನ್ನೂ ಹಾರುತಿದೆ ಬಾನಾಡಿ. Swift...

Featured ಪರಿಸರದ ನಾಡಿ ಬಾನಾಡಿ

ಬಾನಾಡಿ ಲೋಕದಲ್ಲೊಂದು ಬಾನಾಡಿ – SWIFT

ಕಳೆದವಾರವಷ್ಟೇ ಅವಿಶ್ರಾಂತ ಜೀವನವನ್ನು ನಡೆಸುವ ಕವಲುತೋಕೆಗಳ ಬಗ್ಗೆ ತುಸು ತಿಳಿದುಕೊಂಡಿರಿ. ಈ ವಾರ swift ಗಳ ಬಗೆಗೆ ನೋಟ ಹರಿಸೋಣ. ಅಯ್ಯೋ swift ಗೊತ್ತಿಲ್ಲದಿರುವುದೇನು? ಮಾರುತಿ ಕಂಪೆನಿಯ ಅತ್ಯುನ್ನತ ಕಾರ್’ಗಳಲ್ಲಿ ಒಂದು swift, ಎಲ್ಲಾ ಗೊತ್ತು ಬಿಡಿ! ಎಂದಿರಾ! ಊಹೂ. . . . ಅಲ್ಲ. swift ಎಂದರೆ ವೇಗ/ಚುರುಕು, ಅಂಥಾ ಚುರುಕಿನ ಹಕ್ಕಿಯೇ swift”...

Featured ಪರಿಸರದ ನಾಡಿ ಬಾನಾಡಿ

ಕವಲುತೋಕೆಯ ಅವಿಶ್ರಾಂತ ಬದುಕು – 2

ಕವಲುತೋಕೆಯಲ್ಲಿನ ವಿವಿಧ ಪ್ರಭೇದಗಳು ಭಾರತದಲ್ಲಿ 15 ಪ್ರಭೇದದ ಕವಲುತೋಕೆಗಳು ಲಭ್ಯ ಎಂದು ನೀವೀಗ ಬಲ್ಲಿರಿ (ಅಂಬರ ಗುಬ್ಬಿಯ ಅವಿಶ್ರಾಂತ ಬದುಕು).  ಅವುಗಳಲ್ಲಿ ಕರ್ನಾಟಕದ ಸ್ವಾಲೋ ಮತ್ತು ಮಾರ್ಟೀನ್‍ಗಳ ಬಗೆಗೆ ನಾನಿಲ್ಲಿ ವಿವರಿಸುವೆ. ನಮ್ಮ ರಾಜ್ಯದಲ್ಲಿ ಐದು ಪ್ರಭೇದದ ಸ್ವಾಲೋಗಳು ಲಭ್ಯ. Barn swallow(Hirundo rustica) ಕವಲುತೋಕೆ Red-rumped...

ಪರಿಸರದ ನಾಡಿ ಬಾನಾಡಿ

ಅಂಬರ ಗುಬ್ಬಿಯ ಅವಿಶ್ರಾಂತ ಬದುಕು

ಹೊಸ ವರ್ಷದ ಪ್ರಾರಂಭ, ಎಂದಿಗಿಂತ ಚಳಿ ತುಸು ಜೋರೇ. ಮಳೆಯಾಗಿ ತಿಂಗಳುಗಳು ಉರುಳಿವೆ. ರಸ್ತೆ ಬದಿಯ ಮುಳಿಹುಲ್ಲು, ಸಣ್ಣ ಸಣ್ಣ ಪೊದೆಗಳು, ಕುರುಚಲು ಕಾಡುಗಳು ಒಣಗಿ, ಹಸಿರನ್ನು ಕಳೆದುಕೊಂಡಿವೆ, ಮಳೆಗಾಗಿ ಕಾಯುತ್ತಿವೆ. ಈ ಸಮಯದಲ್ಲಿ ಬೆಂಕಿ ಅನಾಹುತ, ಕಾಡ್ಗಿಚ್ಚು ಸಾಮಾನ್ಯ. ಹಲವೆಡೆ ಕಾಡ್ಗಿಚ್ಚಿನಿಂದ ಅಪಾಯ ಸಂಭವಿಸದಂತೆ ನಿಯಂತ್ರಿತ ಬೆಂಕಿ ಹಾಕಿ ಒಣ ಹುಲ್ಲನ್ನು...

ಪರಿಸರದ ನಾಡಿ ಬಾನಾಡಿ

ಮುತ್ತುಗ ಮರದ ಹೂವು – ಬಾನಾಡಿಗಳಿಗೆ ಮೇವು!

Butea Monosperma, ಪಾಲಾಶ, ಮುತ್ತುಗ ಎಂಬ ಹೆಸರಿನ ಈ ಮಧ್ಯಮಗಾತ್ರದ ಅಂಕುಡೊಂಕಿನ ಮರ ಇದೀಗ ಎಲ್ಲೆಡೆ ಹೂ ಬಿಡುವ ಸಿದ್ಧತೆಯಲ್ಲಿದೆ. ಕರ್ನಾಟಕದ ಅತಿ ಬರಡು ಭೂಮಿಯಾದ ಚಾಮರಾಜ ನಗರದ ಕರಿಮಣ್ಣಿನಲ್ಲಿ, ಮೈಸೂರು ಬೆಂಗಳೂರಿನಂಥ ಬಯಲು ಸೀಮೆಯ ಕೆಮ್ಮಣ್ಣಿನಲ್ಲಿ, ಮಲೆನಾಡಿನ ಜೌಗು ಪ್ರದೇಶಗಳಲ್ಲಿ ಈ ವೃಕ್ಷ ತನ್ನ ದೊಡ್ಡ ತ್ರಿಪರ್ಣ ಎಲೆಗಳನ್ನು ಉದುರಿಸಿ ಕಪ್ಪು...