ದಶಕಗಳಾಚೆ ಕಾಲು ಚಾಚಿ ಕುಳಿತಿವೆ ನೆನಪುಗಳು………..
ಸೂತಕದ ಕುಡಿ ಕವಲೊಡೆದು ಕಾಡಿ
ಸ್ಮಶಾನದ ಬೆಂಕಿಯ ಕಿಡಿಗಳಿಗೆ ಕಣ್ಣೊಡ್ಡಿ
ಕುರುಡಾಗಬೆಕೆಂದುಕೊಂಡು
ಅಡ್ಡಿ ಪಡಿಸುವ ಕಣ್ಣೀರಿಗೆ ಶಾಪ ಹಾಕಿದರೂ
ತಡೆಯದೇ ಹರಿದಿದೆ ಹೊಳೆ!
ಅನುಭವವೆಂದರೆ ಬಿಟ್ಟಿ ಭಕ್ಷೀಸಲ್ಲ!
ಸುಖಪಡಲು ಪಡೆದ ಲಂಚವಲ್ಲ
ಕಷ್ಟಕ್ಕಾಗಿ ಮಾಡಿದ ಸಾಲವಲ್ಲ.
ಹಾಗೆಂದು ಸಾವನ್ನು ಅನುಭವಿಸಿ ನೋಡಹೋಗಲಿಲ್ಲ;
ಹಾಗೆಂದೇ ನೋವನ್ನು ಅನುಭವಿಸುವ ಶಿಕ್ಷೆ!
– ಶ್ರೀಕಲಾ ಹೆಗಡೆ ಕಂಬ್ಳಿಸರ
Facebook ಕಾಮೆಂಟ್ಸ್