ನಾವೆಲ್ಲಾ ಯಾವುದೇ ಒಂದು ಕೆಲಸವನ್ನ ಬಹಳ ಖುಷಿಯಿಂದ ಶುರು ಮಾಡುತ್ತೇವೆ . ಆದರೆ ನಮ್ಮಲ್ಲಿ ಬಹಳ ಜನ ಅದೆ ಖುಷಿ ಮತ್ತು ಹುಮ್ಮಸ್ಸನ್ನ ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ಅಸಫಲವಾಗುತ್ತೀವಿ . ನಾವು ಕೈಗೆತ್ತಿಕೊಂಡ ಕೆಲಸ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ನೀಡಬೇಕಾದ ಗಮನ ನೀಡುತ್ತಲೆ ಇರಬೇಕು . ಶ್ರಮವಹಿಸಿ ಕೆಲಸ ಮಾಡಿ ಅದನ್ನ ಪೂರ್ಣಗೊಳಿಸಿದ ಮೇಲೂ ಸಮಯಾಂತರದಲ್ಲಿ ಅದು ನಿಗದಿತ ರೀತಿಯಲ್ಲಿ ಕೆಲಸ ಮಾಡುತ್ತಿದೆಯೇ ? ಎಂದು ನೋಡುವುದು ಬಹಳ ಮುಖ್ಯ . ಹೀಗೆ ಮಾಡಿದ ಕೆಲಸವನ್ನ ನೋಡದೆ ಹೋದರೆ ಆ ಕೆಲಸವನ್ನ ಮಾಡಲು ಹಾಕಿದ ಶ್ರಮ ಕೂಡ ವ್ಯರ್ಥ ಎನ್ನುವ ಅರ್ಥವನ್ನ ಈ ಗಾದೆ ನೀಡುತ್ತದೆ . ಸರಳವಾಗಿ ಹೇಳಬೇಕೆಂದರೆ ವಸ್ತು ವಿಷಯ ಏನೇ ಇರಲಿ ಅದರ ಬಗ್ಗೆ ನಿರಂತರ ಗಮನವಿದ್ದರೆ ಮಾತ್ರ ಹಿಡಿದ ಕೆಲಸದಲ್ಲಿ ನಮಗೆ ಜಯ ಸಿಗುತ್ತದೆ .
ಸ್ಪಾನಿಷ್’ನ ಈ ಗಾದೆ ಎರಡು ಅರ್ಥ ಕೊಡುತ್ತದೆ, ಮೊದಲೆನೆಯದು ಮೇಲೆ ಹೇಳಿದ್ದು ಎರಡನೆಯದು ಸದಾ ಕೆಲಸ ಮಾಡುತ್ತಾ ಪ್ರಸುತ್ತರಾಗಿರಬೇಕು ಹೆಚ್ಚಿನ ವಿಶ್ರಾಂತಿ ತೆಗೆದುಕೊಂಡು ಆರಾಮಾಗಿರುವ ಜನರನ್ನ ಸಮಾಜ ಬೇಗ ಮರೆತು ಬಿಡುತ್ತದೆ ಎನ್ನುವ ಅರ್ಥ . ಸ್ಪಾನಿಷ್ ಜನರು ಎರಡೂ ಅರ್ಥವನ್ನೂ ಸನ್ನಿವೇಶಕ್ಕೆ ತಕ್ಕ ಹಾಗೆ ವಿಶ್ಲೇಷಿಸುತ್ತಾರೆ . ಆದರೆ ಇಂಗ್ಲಿಷ್ ಭಾಷಿಕರಲ್ಲಿ ಮೊದಲನೆಯ ಅರ್ಥಕ್ಕಿಂತ ಎರಡನೆಯ ಅರ್ಥವನ್ನು ಹೆಚ್ಚು ಬಳಸುತ್ತಾರೆ . ಇಂಗ್ಲಿಷ್ನಲ್ಲಿ ‘Long absent, soon forgotten.’ ಎನ್ನುವುದನ್ನ ಯಥಾವತ್ತಾಗಿ ಅರ್ಥೈಸಿಕೊಂಡಿದ್ದಾರೆ .
ಅರ್ಥ ಯಾವುದೆ ಇರಲಿ ನಮ್ಮ ಪೂರ್ವಜರು ಹೇಳಿದ ಮಾತು ಇಂದಿಗೂ ಸತ್ಯ . ನಾವು ಕೆಲಸ ಮಾಡಿ ಮುಗಿಸಿಯಾಯಿತು ಎಂದು ಕೈಕಟ್ಟಿ ಕೂರುವ ಹಾಗಿಲ್ಲ. ಪದೇ ಪದೆ ಅದನ್ನ ಸರಿಯಾಗಿದೆಯೇ ಎಂದು ನೋಡುತ್ತಿರಬೇಕು ಮತ್ತು ಇಂತಹ ಕೆಲಸವನ್ನ ಜೀವನವಿರುವರೆಗೂ ಮಾಡುತ್ತಲೇ ಇರಬೇಕು . ಇಂಗ್ಲಿಷರಲ್ಲಿ ಇದಕ್ಕೆ ಸಮಾನಾರ್ಥಕವಾಗಿ ‘ out of sight, out of mind’ ಎನ್ನುವ ಗಾದೆಯನ್ನು ಬಳಸುತ್ತಾರೆ .
ಭಾಷೆ ಅಥವಾ ವ್ಯಕ್ತಪಡಿಸುವ ರೀತಿ ಬದಲಾದರೇನು ಭಾವವೊಂದೇ ಅಲ್ಲವೆ ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
೧)El ಅಂದರೆ he ಅಥವಾ ಅವನು ಎನ್ನುವ ಅರ್ಥ ನೀಡುತ್ತೆ . ಎಲ್ ಎಂದು ಉಚ್ಚರಿಸಬೇಕು .
೨)que ಅಂದರೆ ಏನು ಎನ್ನುವುದು ಅರ್ಥ ಆದರೆ ಸಂದರ್ಭಕ್ಕೆ ತಂಕ್ಕಂತೆ ಇದರ ಭಾವ ಬದಲಾಗುತ್ತದೆ. ಹೀಗಾಗಿ ಇಲ್ಲಿ el que ಒಂದು ಪದದಂತೆ ಓದಬೇಕು. ಅರ್ಥ ಯಾರೊಬ್ಬ ಅಥವಾ one who ಎನ್ನುವ ಅರ್ಥ ನೀಡುತ್ತೆ . ಕೇ ಎನ್ನುವುದು ಉಚ್ಚಾರಣೆ .
೩) No mira : ನೋಡದೆ ಇರುವುದು , (ಮಿರಾ = ನೋಡು ) ಉಚ್ಚಾರಣೆ ಮಿರಾ
೪)suspira : ನಿಟ್ಟುಸಿರು . ಸೂಸ್ಪಿರ ಎನ್ನುವುದು ಉಚ್ಚಾರಣೆ .
Facebook ಕಾಮೆಂಟ್ಸ್