ಪ್ರತಿ ಬಾರಿ ಎಲ್ಲಾದರೂ, ಯಾವಾಗಲಾದರೂ ಆಗಸ್ಟ್ ಎಂಬ ಪದ ಕಿವಿಗೆ ಅಪ್ಪಳಿಸುತ್ತಲೆ, ಕಣ್ಣಿಗೆ ತೋರುತ್ತಲೆ ನೆನಪಾಗೋದು ಸ್ವಾತಂತ್ರ್ಯ ದಿನ. ಸ್ವಾತಂತ್ರ್ಯ ದಿನಾಚರಣೆ ಎಂದಾಗಲೆಲ್ಲ ರಪ್ಪನೆ ತಲೆಗೆ ಬರೋದು ಶಾಲಾದಿನಗಳು, ಒಂದು ವಾರದ ಮೊದಲಿನಿಂದಲೆ ಡ್ರಮ್ ಸೆಟ್, ಭಾಷಣ, ದೇಶಭಕ್ತಿಗೀತೆ, ಸಂಗೊಳ್ಳಿ ರಾಯಣ್ಣ, ಕಿತ್ತೋರು ರಾಣಿ ಚೆನ್ನಮ್ಮ ಇವರು ಗಳ ಏಕಪಾತ್ರಾಭಿನಯ, ನಾಟಕ, ತೃತ್ಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಏರಿಕೆ ಕ್ರಮದಲ್ಲಿ ಸಾಲಿನಲ್ಲಿ ನಿಲ್ಲುವ ತಾಲೀಮು ಇತ್ಯಾದಿ ಚಟುವಟಿಕೆ ಗಳು ಉತ್ಸಾಹದಿಂದ ಸಾಗುತ್ತಿದ್ದವು.
ಇನ್ನು 15ರ ಹಿಂದಿನ ದಿನ ಯಾವ ತರಗತಿಗಳು ನೆಡೆಯುತಿರಲಿಲ್ಲ , ಶಾಲಾ ಸುತ್ತಲೆಲ್ಲ ಕಸ ಹೆಕ್ಕುವುದು, ಗುಡಿಸುವುದು, ಬಣ್ಣದ ಪೇಪರ್ ಅಂಟಿಸುವುದು, ಧ್ವಜಕಟ್ಟೆ ತೊಳೆದು ರಂಗೋಲಿಯ ಹಾಕುವುದು, ನಾಳೆ ದ್ವಜ ಕಂಬ ಹತ್ತುವರ ಆಯ್ಕೆ, ಪೆರೇಡ್ ನಲ್ಲಿ ಯಾರು, ಯಾರು ಯಾವ ಯಾವ ಘೋಷಣೆ ಕೂಗಬೇಕು ಮೈಕ್ ಸೆಟ್ ಜೋಡಣೆ ಮತ್ತೆ ಎಲ್ಲಾ ಚಟುವಟಿಕೆಗಳ ಫೈನಲ್ ರಿಹರ್ಸೆಲ್.ನಾಳೆ ಎಲ್ಲರೂ ತಪ್ಪದೆ ಬರಬೇಕು, ಕಡ್ಡಾಯವಾಗಿ ಇಸ್ತ್ರಿ ಮಾಡಿದ ಯೂನಿಫಾರಂ ಬಟ್ಟೆ ,ಟೈ, ಬೆಲ್ಟು ಹಾಕಿಕೊಂಡು 7 ಗಂಟೆಗೇ ಬರಬೇಕು ಎನ್ನುವ ಮಾತು ಗಳು ಮೇಲಿಂದ ಮೇಲೆ ಕೇಳುತ್ತಲೇ ಇರುತಿದ್ದವು. ಒಂದೆರಡು ಬಾರಿ ಅಮ್ಮ ನ ಮುಂದೆ ಬಾಯಿ ಪಾಠ ಮಾಡಿದ ಬಾಷಣ ಒಪ್ಪಿಸುವುದು ಅಪ್ಪಾಜಿಗೋ , ಪಕ್ಕದ ಮನೆ ಅಕ್ಕನಿಗೋ, ಅಣ್ಣನಿಗೋ ಅವರ ಬಿಡುವಿನ ಮದ್ಯೆ ಕಿರಿಕಿರಿ ಮಾಡಿ ಬಟ್ಟೆ ಇಸ್ತ್ರಿ ಮಾಡಿಸಿ ಕೊಳ್ಳುವುದು ವಾಡಿಕೆ.
ಬೆಳಗ್ಗೆ ಬೇಗ ಹೋಗ್ಬೇಕು ಎಲ್ಲಾದರೂ ಏಳೋದು ಲೇಟ್ ಆದ್ರೆ ಬೆಳಗ್ಗೆ ಎಷ್ಟು ಗಂಟೆ ಗೆ ಏಳ್ಸಿ ಅಂತ ಮೂರ್ನಾಕು ಸಾರಿ ಅಮ್ಮನ ಕೇಳಿ ಬೈಸ್ ಕೊಂಡು ಅದೇ ಚಡಪಡಿಕೆ ಯಲ್ಲಿ ನಿದ್ರೆಗೆ ಜಾರುತಿದ್ದೆ. ಬೆಳಗ್ಗೆ ನಮಗಿಂತ ಹೆಚ್ಚು ಅವಸರ ಪಡುತ್ತಿದ್ದವಳು ಅಮ್ಮ, ಏನಾದರೂ ಹೆಚ್ಚು ಕಡಿಮೆ ಆದರೆ ಅವಳ ಮುಂದೆ ತಾನೇ ನಮ್ಮ ಅಳು ಸಿಟ್ಟು ಎಲ್ಲವೂ. ನಮ್ಮ ದಿಕ್ಕು ದೆಸೆ ಇಲ್ಲಾದ ಇಂಷರ್ಟ್ ಸರಿ ಮಾಡಿ ಕ್ರಾಪ್ ತೀಡಿ ಒಂದಿಷ್ಟು ಪೌಡರ್ ಮುಖಕ್ಕೆ ತಿಕ್ಕಿ ಕೈಗೆ ಒಂದು ಹೂವಿನ ಕವರ್ ನೀಡುವ ವರೆಗೆ ಅವಳಿಗೆ ಪೀಕಲಾಟ ತಪ್ಪಿದ್ದಲ್ಲ.. ಮಳೆಗಾಲವಾಗಿದ್ದರಿಂದ ದೊಡ್ಡ ದೊಡ್ಡ ಡೇರೆ ಹೂಗಳನ್ನು ಒಬ್ಬರಿಗಿಂತ ಒಬ್ಬರು ಒಯ್ಯುತಿದ್ದೆವು, ಕೆಸರಿನ ರಸ್ತೆಯಲ್ಲಿ ಬಿಳಿ ಯೂನಿಫಾರಂ ಗೆ ಒಂದು ಕೆಂಪು ಚುಕ್ಕೆ ಬೀಳದಂತೆ ಶಾಲೆ ಸೇರುವುದು ಸಾಹಸದ ಕೆಲಸಗಳಲ್ಲಿ ಒಂದು! ಮಳೆ ಬಾರದಿರಲಿ ಎಂದು ಮನಸ್ಸಿನಲ್ಲೇ ಮನವಿಗಳು ಸಲ್ಲುತ್ತಿದ್ದವು..
ಎಲ್ಲರೂ ಸೇರಿದ ನಂತರ 8 ಗಂಟೆ ಸುಮಾರಿಗೆ SDMC ಅಧ್ಯಕ್ಷರೋ ಅಥವಾ ಊರಿನ ಹಿರಿಯರು ಧ್ವಜಾರೋಹಣ ಮಾಡುತಿದ್ದರು. ಅದಾದ ನಂತರ ಶಾಲಾ ಪಕ್ಕದಲ್ಲೆ ಇದ್ದ ಗ್ರಾಮಪಂಚಾಯಿತಿ ಧ್ವಜಾರೋಹಣ ಆಮೇಲೆ 2, 3 ರೀತಿಯ ಚಾಕಲೇಟ್ ಗಳು ಸಿಗುತ್ತಿದ್ದವು. ಎರಡು ಸಾಲುಗನ್ನು ಮಾಡಿ ಕೈಯಲ್ಲಿ ಪುಟ್ಟ ಪುಟ್ಟ ಬಾವುಟ ಹಿಡಿದು ಘೋಷಣೆ ಕೋಗುತ್ತ ನಾವು ಎಳೆಯರು ನಾವು ಗೆಳೆಯರು ಹಾಡುತ್ತ ಊರಿನ ರಸ್ತೆ ಯಲಿ ಪೆರೇಡ್ ಸಾಗುತ್ತಿದ್ದಂತೆ ನಮ್ಮನ್ನು ಪರಮ ಸಿಪಾಯಿ ಗಳಂತೆ ಕಂಡು ರಸ್ತೆ ಬದಿ ನಿಂತು ಕಣ್ತುಬಿ ಕೊಳ್ಳುತ್ತಿದ್ದರು .ಇದಲ್ಲದೆ ಊರ ಮದ್ಯ ಇರುವ ಸಂಘ ಸಂಸ್ಥೆಗಳ ದ್ವಜಾರೋಹನ ನಮ್ಮ ಪೆರೇಡ್ ಅಲ್ಲಿಗೆ ಹೋದಮೇಲೆಯೇ ದಾರಿಯಲ್ಲಿಯೇ ಇನ್ನೆಷ್ಟು ಚಾಕಲೇಟುಗಳು ಸಿಗಬಹು ಎಂದು ಒಂದು ಅಂದಾಜಿನ ಲೆಕ್ಕವು ಮನಸಲ್ಲೇ ಸಾಗುತ್ತಿತ್ತು ನಿಂಬೆ ಹುಳಿ ಚಾಕಲೇಟು ಕೊಡದಿರಲಿ ಇಂದು ಪ್ರಾರ್ಥಿಸುತ್ತಿದ್ದೆವು.
ಪೆರೇಡ್ ಮುಗಿಸಿ ಮತ್ತೆ ಶಾಲೆ ಸೇರುವುದು ಹತ್ತುವರೆ ಹನ್ನೊಂದು ಗಂಟೆ ಶಾಲಾ ಮುಂಬಾಗದ ಆವರಣದಲ್ಲಿ ಬೆಂಚುಗಳನ್ನು ಕುರ್ಚಿಗನ್ನು ತಂದು ಹಾಕಿ ವೇದಿಕೆ ಸಜ್ಜಿಕೆ ಮಾಡುವುದು ಏಳನೇ ತರಗತಿವರ ಜವಾಬ್ದಾರಿ. ಮೊದಲಿಗೆ ಹೇಡ್ಮೆಟ್ರರ ಸ್ವಾಗತ ಬಾಷಣ ನಂತರ ಅತಿಥಿ ಗಳ 3 4 ನಿಮಿಷಗಳ ಭಾಷಣ, ಯಾರೋ ಅಷ್ಟೇನು ವಿದ್ಯಾವಂತರಲ್ಲದ ಕಾರಣ ಅತಿಥಿಗಳು ವಿಷಯಗಳು ಗೊತ್ತಿದ್ದರೂ ಮಾತಾನಾಡಲು ಹಿಂಜರಿಯುತ್ತಿದ್ದರು ಅದು ಮೇಷ್ಟ್ರ ಮುಂದೆ ಸ್ವಲ್ಪ ಭಯವೆ.. ನಂತರ ನಮ್ಮದೇ ವೇದಿಕೆ ಎಲ್ಲಾ ಬಾಯಿಪಾಠ ಮಾಡಿಕೊಂಡು ಹೋದ ಬಾಷಣವೂ ಕೈಕೊಡುತಿತ್ತು . ಕುಂತಲ್ಲೇ ಮಧ್ಯಾಹ್ನದ ರಜೆ ಯಲ್ಲಿ ಯಾವ ಆಟ ಆಡುವುದು ಯಾರ ಮನೆ ಹತ್ತಿರ ಆಡುವುದರ ಚರ್ಚೆಯು ಒಂದು ಹಂತದಲ್ಲಿ ಆಗಿರುತ್ತಿತ್ತು. ಮತ್ತೆ ಎಷ್ಟು ಚಾಕಲೇಟ್ ಗಳು ಸಿಗಬಹುದು ಇಗೆಷ್ಟು ಜೇಬಿನಲ್ಲಿ ಇವೆ ಎನ್ನುವ ಯೋಚನೆ..! ಒಂದು ಗಂಟೆ ಸುಮಾರಿಗೆ ಮನೆದಾರಿ ಹಿಡಿದರೆ ಮುಗಿಯಿತು ಸ್ವಾತಂತ್ರ್ಯ ದಿನಾಚರಣೆ.
ಹೀಗೆ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮದ ನೆನಪೇ ಸುಂದರ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..
ಆದರ್ಶ ಜಯಣ್ಣ. ಬಿಲುಗುಂಜಿ
jadarsh03@gmail.com
Facebook ಕಾಮೆಂಟ್ಸ್