X

ಅನುಗಾಲವೂ  ಅನುರಾಗಿ  ನಾ…

ಕಾಣದೆ ಹೋದರೆ ಅರೆಘಳಿಗೆ,

ಅರಸಿದೆ ನಯನವು ನಿನ್ನ

ನಿನ್ನನು ಕಂಡ ಮರುಘಳಿಗೆ;

ಭಾವದ ಧಾಟಿಯೇ ಭಿನ್ನ!

ಎಲ್ಲರಂತೆ ನಾನಲ್ಲ, ಬಲ್ಲೆಯೇನು ನೀ?

ಅನುಗಾಲವೂ ಅನುರಾಗಿ ನಾ, ನಂಬೆನ್ನನು!!!

ಸೋತಿದೆ ಪ್ರೀತಿಸು ಎಂದು

ಹೇಳುವ ಧೈರ್ಯವು,

ಸನಿಹವೇ ಕೂತಿರು

ಎಲ್ಲವ ಹೇಳಲಿ ಮೌನವು…!

ಸುಳಿವೆ ಇಲ್ಲದೇ ಬಳಿಗೆ ಬಂದಿದೆ ಒಂದು ಕವಿತೆ ಸಾಲು

ಮೆಲ್ಲ ಬಂದು ನಡೆಸೀಗ ಸಲ್ಲಾಪವ,

ಬರಿ ನೋಟಕೂ ಸರಿ ಎನ್ನುವೆ, ನಂಬೆನ್ನನು!!!

ಕನಸಿನ ಮೇಳದಿ,

ಕೇವಲ ನಿನ್ನದೇ ಮಳಿಗೆಯು

ಮುನಿಸಲೂ ಚಂದವೇ,

ನಿನ್ನ ಕಣ್ಣಿನ ಕುಸುರಿಯು!

ಕಳೆದು ಹೋಗುವ ಆಸೆಯಾಗಿದೆಜೊತೆಗೆ ಬರುವೆಯೇನು?

ಝಲ್ಲೆನ್ನಿಸು ನನ್ನೊಮ್ಮೆ ಮೆಲ್ಲುಸಿರಲೇ

ಅತಿ ಶೀಘ್ರವೇ ಸರಿಹೋಗುವೆ, ನಂಬೆನ್ನನು!!!

 

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post