X

ಬನ್ನಿ ಸರಿಯಾದ ರೀತಿಯಲ್ಲಿ ಹ್ಯಾಂಡ್‘ಶೇಕ್ ಮಾಡೋಣ

ವ್ಯಾಪಾರ, ವ್ಯವಹಾರಗಳಲ್ಲಿ ಹಸ್ತಲಾಘವದ ಹಿಡಿತ ಕಂಡುಕೊಳ್ಳುವುದು ನೈಪುಣ್ಯದ ಸಂಗತಿ, ಅತಿಯಾದ ಸ್ಥಿರತೆ ಅಥವ ದುರ್ಬಲ ಹಿಡಿತ ಪ್ರಮಾದಕ್ಕೆ ಕಾರಣವಾಗಬಹುದು. ನಿಮ್ಮ ವೃತ್ತಿ, ವ್ಯಾಪಾರ ಸಹವರ್ತಿಯನ್ನೋ, ಯಾವುದೋ ಕಾರ್ಯಕ್ರಮದ ಹೊಣೆ ಹೊತ್ತವನನ್ನೋ ಅಥವಾ ನಿಮ್ಮ ಮಾಜಿ ಸಹೋದ್ಯೋಗಿಯನ್ನೋ ವರ್ಷಾನುಗಟ್ಟಲೆಯ ನಂತರ ಭೇಟಿಮಾಡಿದಾಗ ನಿಮ್ಮ ಸಹಜ ಪ್ರತಿಕ್ರಿಯೆ ಹಸ್ತಲಾಘವ ಮಾಡಲಿಕ್ಕೆ ಕೈ ಚಾಚುವುದು ಅಲ್ವೆ? ಆದಾಗ್ಯೂ, ನಿಮ್ಮ ದೋಷಪೂರಿತ ಹ್ಯಾಂಡ್’ಶೇಕ್ ಇಡಿಯ ಉಭಯಕುಶಲೋಪರಿ ಉತ್ಸಾಹವನ್ನು ಕುಂದಿಸಬಹುದು! ಕರಾರುವಾಕ್ಕಾಗಿ ಒಪ್ಪಂದಕ್ಕೆ ಮೊಹರುಬೀಳಲು ಹ್ಯಾಂಡ್’ಶೇಕ್ ದೃಢವಾಗಿರಲಿ, ಇಲ್ಲಿದೆ ವ್ಯವಹಾರಗಳಲ್ಲಿ ಹಸ್ತಲಾಘವ ಹೇಗಿರಬೇಕೆಂಬ ಅಂಶಗಳು ಓದಿ ಆನಂದಿಸಿ:

  1. ನಿರ್ದಯಿಯಾಗಬೇಡಿ:

ಹ್ಯಾಂಡ್’ಶೇಕ್ ಮಾಡಿದಾಗ ಯಾರಿಂದಲ್ಲಾದರು ಸತ್ವವಿಲ್ಲದ ಅಥವ ನೆನೆದರೆ ಅಂಜಿನಡುಗುವಂತಹ ಅನುಭವವಾಗಿದೆಯೆ? ದುರ್ಬಲ ಹಿಡಿತ ಮತ್ತು ನಿತ್ರಾಣಯುತ ಹಸ್ತಲಾಘವ ಹಿತಕರವಲ್ಲದಾಗಿದ್ದರು ಬಿಡಿಸಿಕೊಳ್ಳಲು ಹೆಣಗಾಡಬಹುದಾದಂತಹ ಜಾಂಬವಂತನ ಬಾಹುಬಂಧನವಾಗದಿರಲಿ. ನಿಮ್ಮ ಉದ್ದೇಶ ಎಂದೂ ಸ್ಥಿರ ಹಿಡಿತದ ಕಡೆಗಿರಲಿ ಹೊರತು ಅಂಗೈಯಿಂದ ರಸಹಿಂಡುವ ಪ್ರಯತ್ನ ಬೇಡ. ಹ್ಯಾಂಡ್ ಶೇಕ್ ಬಲ ಮೊಣಕೈಯಿಂದ ಅಂಗೈಕಡೆಗಿರಲಿ ಭುಜಬಲ ಪ್ರದರ್ಶನಕ್ಕೆರಗಬೇಡಿ. ನಿಮ್ಮ ಲಕ್ಷ್ಯ ಅವರ ಮನಸ್ಸಿನಲ್ಲಿ ಮೊಹರು ಮೂಡಿಸುವಂತಿರಲಿ ಹೊರತು ಅವರ ಕೈಗಳ ಮೇಲೆ ನಿಮ್ಮ ಬೆರಳಿನ ಮೊಹರಲ್ಲ.

  1. ತೇವ ಮತ್ತು ಬೆವರುವಿಕೆ:

ಶಾಖ ಮತ್ತು ತೇವಾಂಶ ವಾತಾವರಣದಲ್ಲಿ ಬೆವರುವುದು ಸ್ವಾಭಾವಿಕ, ಇಂತಹ ಇರುಸುಮುರುಸಾದ ಸಂದರ್ಭದ ಹಸ್ತಲಾಘವದಿಂದ ಇನ್ನೊಬ್ಬರಿಗೆ ಕಸಿವಿಸಿಯಾಗದಂತೆ ನೋಡಿಕೊಳ್ಳಿ. ಕೈಚಾಚುವ  ಮುನ್ನ ನಿಮ್ಮ ಅಂಗೈ ಒಣಗಿರುವುದನ್ನು ಖಾತ್ರಿಪಡಿಸಿಕೊಳ್ಳಿ, ತೇವದ ಅಂಗೈಯಿದ್ದರೆ ನಿಮ್ಮನ್ನು ಅವರು ಜೀವನಪರ್ಯಂತ ಮರೆಯಲಾರರು. ಕರವಸ್ತ್ರ ನಿಮ್ಮೊಂದಿಗೆ ಯಾವಾಗಲು ಇರಲಿ ಈ ಮೇಲಿನ ಸಂದರ್ಭಗಳಲ್ಲಿ ಅಂಗೈ ಸ್ವಚ್ಛಗೊಳಿಸಿದ ನಂತರವೆ ಹ್ಯಾಂಡ್ ಶೇಕ್ ಮಾಡಲಿಕ್ಕೆ ಮುಂದಾಗಿ.

  1. ಧೀರ್ಘವಾದ ಹ್ಯಾಂಡ್ ಶೇಕ್:

ಕೆಲವೇ ಕ್ಷಣಗಳಲ್ಲಿ ಆತ್ಮೀಯ, ಸ್ನೇಹಪೂರ್ಣ ಸಂಬಂಧ ಮುಜುಗರದೆಡೆಗೆ ಬದಲಾಗಬಹುದು ಅದು ಹೇಗೆ ಅಂತೀರಾ? 4 ರಿಂದ 5 ಸೆಕೆಂಡುಗಳಿಗಿಂತ ಹೆಚ್ಚಾದ ಹ್ಯಾಂಡ್ ಶೇಕ್ ನಿಮ್ಮನ್ನು ಪೇಚಿನೆಡೆಗೆ ಕರೆದೊಯ್ಯುತ್ತದೆ ಮರೆಯಬೇಡಿ, ಆದ್ದರಿಂದ  ನಾಲ್ಕೈದು ಸೆಕೆಂಡಿಗೆ ಹಸ್ತಲಾಘವವನ್ನು ಮೊಟಕುಗೊಳಿಸಿ. ಇನ್ನೊಬ್ಬರು ಅವರ ಕೈಯನ್ನು ನಿಮ್ಮ ಕಪಿಮುಷ್ಟಿಯಿಂದ ಕಸಿದುಕೊಳ್ಳುವ ಸನ್ನಿವೇಶ ಒದಗದಿರಲಿ.

  1. ಬಟ್ಟಲು ಹ್ಯಾಂಡ್ ಶೇಕ್:

ಈ ಬಗೆಯ ಹ್ಯಾಂಡ್ ಶೇಕನ್ನು ಮಾಮುಲಿಯಾಗಿ ರಾಜಕಾರಣಿಗಳು ಬಳಸುವುದುಂಟು, ತಮ್ಮ ಎರಡೂ ಹಸ್ತಗಳನ್ನು ಬಟ್ಟಲಾಕಾರದಲ್ಲಿ ಹಿಡಿದು ಇನ್ನೊಬ್ಬರ ಒಂದು ಕೈಕುಲುವುದು ರಾಜಕಾರಣಿಗಳಲ್ಲಿ ಕಾಣಸಿಗುವ ಸರ್ವೇಸಾಮಾನ್ಯ ಅಭ್ಯಾಸ. ಮೊದಲಬಾರಿಗೆ ಯಾರನ್ನಾದರು ಬೇಟಿಮಾಡುವುದಾದರೆ ಬಟ್ಟಲು ರೀತಿ ಹ್ಯಾಂಡ್ ಶೇಕ್ ಮಾಡದಿರುವು ಒಳಿತು, ನಿಮ್ಮ ಮುಗ್ಧ ನಿರೀಕ್ಷೆ ಅಥವ ಉತ್ಸುಕತೆಯ ಸಂಕೇತ ಇದರಲ್ಲಿ ಕಾಣಸಿಗುತ್ತದೆ. ಕೈಕುಲುಕುವ ಈ ಪರಿಯನ್ನು ಬರಿ ನಿಮ್ಮ ನೆಚ್ಚಿನ ವ್ಯಾಪಾರ ಅಥವ ಉದ್ಯೋಗ ಸಹವರ್ತಿಗಳಿಗೆ ಮತ್ತು ಆತ್ಮಿಯರನ್ನು ಬಹಳ ಸಮಯದ ನಂತರ ಭೇಟಿಮಾಡುವ ಸಂಧರ್ಭಗಳಿಗೆ ಮೀಸಲಿಡಿ.

  1. ನಿಮ್ಮ ದೃಷ್ಟಿ ನಿಮ್ಮ ಭಂಗಿ:

ಹಸ್ತಲಾಘವದ ಮತ್ತೊಂದು ಮುಖ್ಯವಾದ ಸಂಗತಿ ಹಸ್ತಗಳಿಗೆ ಸಂಭಂದಿಸಿಲ್ಲವೆಂದರೆ ನೀವು ನಂಬಲೇಬೇಕು, ಅದೇನು ಗೊತ್ತಾ? ನಿಮ್ಮ ದೃಷ್ಟಿ, ಮುಖಭಾವ ಮತ್ತು ಭಂಗಿ! ಸ್ವಾಗತಮಾಡುವಾಗ ತಪ್ಪದೆ ಅವರ ಕಡೆಗೆ ನಿಮ್ಮ ಕಣ್ಣಿನ ದೃಷ್ಟಿಯಿರಲಿ, ಎಂದೆಂದಿಗೂ ಅವರ ಕೈಗಳೆಡೆಗೆ ದೃಷ್ಟಿಹಾಯಿಸಬೇಡಿ. ಗುರಾಯಿಸುವ ನಿಮ್ಮ ನೋಟ, ಬಿರುಸಾಗಿ ಕಣ್ಣು ಮಿಟುಕಿಸುವುದನ್ನೂ ದೂರವಿಡುವುದು ಸೂಕ್ತ. ಕಿರುನಗೆ ಚೆಲ್ಲಿ, ಅವರ ಮುಖದೆಡೆ ನೋಡಿ ಹಲೋ ಹೇಳಿದರೆ ನಿಮ್ಮಿಬ್ಬರ ನಡುವಿನ ಸಂಪರ್ಕ ವೃದ್ಧಿಸುವುದು. ದೇಹದ ಭಂಗಿಯು ಅಷ್ಟೆ ಪ್ರಮುಖ ಪಾತ್ರವಹಿಸುತ್ತದೆ, ಹತ್ತಿರದ ಗೋಡೆಗೆ ಒರಗಿಕೊಂಡು ಸೊಟ್ಟದಾಗಿ ನಿಂತು ಹ್ಯಾಂಡ್ ಶೇಕ್ ಮಾಡದೆ ದೇಹವನ್ನು ಸಡಿಲಿಸಿ ನೆಟ್ಟಗೆ ನಿಲ್ಲುವುದು ಉಚಿತ. ನಿಂತಲ್ಲೆ ಹ್ಯಾಂಡ್ ಶೇಕ್ ಗೆ ಕಾಯುವ ಬದಲು ನೀವೇ ಒಂದೈದು ಹೆಜ್ಜೆ ಮುಂದೆ ನಡೆದುಹೋಗಿ ಸ್ವಾಗತಿಸುವ ರೀತಿಯಲ್ಲಿ ಹ್ಯಾಂಡ್ ಶೇಕ್ ಮಾಡುವುದು ಶೋಭೆ ತರುವುದಲ್ಲದೆ ನಿಮ್ಮ ವರ್ಚಸ್ಸು ಹೆಚ್ಚಿಸುತ್ತದೆ.

ಸಂಕೋಚದ ಸ್ವಭಾವದವರು ನೀವಾಗಿದ್ದರೆ, ಯಾರಲ್ಲಾದರು ಸಂಭಾಷಣೆ ಶುರುಮಾಡಲು ಹಿಂಜರಿಕೆಯ ಪರಿಸ್ಥಿತಿಯನ್ನು ಗೆಲ್ಲಲು ಇರುವ ಏಕೈಕ ಮಾರ್ಗ ಆತ್ಮವಿಶ್ವಾಸಯುತ ಹ್ಯಾಂಡ್ ಶೇಕ್ ಎಂಬುದನ್ನು ಎಂದೂ ಮರೆಯದಿರಿ.

Suresha Balachandran

suri@ssaaglobal.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post