ವಾವ್ ಒಂದೆ ರಾತ್ರಿಯಲ್ಲಿ 100 ಲೈಕ್ಸ್ 20 ಕಮೆಂಟ್ಸ್, ನಾಳೆ 150 ಬರಲೇಬೇಕು ಎನ್ನುವುದು ಪ್ರಸ್ತುತ ದಿನಗಳ ಅಲಿಖಿತ ಸಿದ್ಧಾಂತ’. ಹೌದು ಇದು ಈಗಿನ ಯುವಕರ ಹೊಸ ಸಕ್ಸಸ್ ಸೂತ್ರ. ಸಕ್ಸಸ್ ಅಂದ ಮಾತ್ರಕ್ಕೆ ಜೀವನದಲ್ಲಿ ಎತ್ತರದ ಮಟ್ಟವನ್ನು ಮುಟ್ಟಿ ಹೆಸರು ಗಳಿಸುವ ಗುರಿಯಲ್ಲ. ತನ್ನ ವಯಕ್ತಿಕ ಗರಿಮೆಯನ್ನು ಹೆಚ್ಚುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊರೆಯುವ ಕಮೆಂಟ್ಸ್ ಮತ್ತು ಲೈಕ್ಸ್’ಗಳೆ ಒಂದು ಉತ್ತಮ ವೇದಿಕೆ ಎಂಬ ಹುಚ್ಚು ಆಸೆ. ಇದನ್ನು ಈಗಿನ ಯುವಕರು ಜೀವನದ ಅತಿ ದೊಡ್ಡ ಧ್ಯೇಯ ಎಂದು ಪರಿಗಣಿಸಿರುವದು ವಿಷಾದದ ಸಂಗತಿ.
ದೇಶದ ಕೋಟ್ಯಾನು ಕೋಟಿ ಯುವಕರಿಗೆ ದಾರಿ ದೀಪವಾಗಿರುವ ಸ್ವಾಮಿ ವೀವೆಕಾನಂದರ ನಾಣ್ಣುಡಿಯಾದ ‘ಗುರಿಮುಟ್ಟುವ ತನಕ ನಿಲ್ಲಬೇಡ’ ಎಂಬುದು ಪ್ರಸ್ತುತ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಅಂದುಕೊಂಡಷ್ಟು ಲೈಕ್ಸ್ ತಮ್ಮ ಸ್ಟೇಟಸ್ ಅಥವ ಭಾವಚಿತ್ರಕ್ಕೆ ಬರದೆ ಹೋದರೆ ಅದನ್ನು ಸಾಧಿಸುವವರೆಗೂ ತಮ್ಮ ಸಮಯ, ಶಕ್ತಿ, ಊಟವನ್ನು ತ್ಯಾಗ ಮಾಡುವ ಸ್ಥಿತಿಗೆ ಜಾಲತಾಣಗಳು ಯುವಕರ ಮೇಲೆ ಪ್ರಭಾವ ಬೀರಿವೆ. ಅಷ್ಟೇ ಏಕೆ ದಿನನಿತ್ಯ ದಿನಪತ್ರಿಕೆಗಳಲ್ಲಿ ಅದೆಷ್ಟೋ ಯುವಕರು ಕಡಿಮೆ ಲೈಕ್ಸ್ ಬಂದಿದ್ದನ್ನು ಗಂಭೀರವಾಗಿ ಪರಿಗಣಿಸಿ ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಮೊದಲೆಲ್ಲಾ ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ಮಂಡನೆಗೆ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಉತ್ತಮ ವೇದಿಕೆ ಎಂಬ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿದ್ದವು. ತಮ್ಮತಮ್ಮ ಬದುಕಿನ ಸಂಗತಿಗಳನ್ನು ಯತೇಚ್ಛವಾಗಿ ‘ಸ್ಟೇಟಸ್’ ಎಂಬ ಮಹಾಮಾರಿಯ ರೂಪದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುವ ಇಚ್ಛೆ ಯುವಕರನ್ನು ಯಾವ ಮಟ್ಟಕ್ಕೂ ಕರೆದ್ಯೊಯಬಹುದು. ಮೊನ್ನೆ ನಾನು ಹೀಗೆ ಫೇಸ್ಬುಕ್ ನೋಡುತ್ತಿರುವಾಗ ಒಂದು ವಿಷಯ ಕಣ್ಣಿಗೆ ಬಿದ್ದಿತು ‘ಇಂದು ನಾನು ನಿಜವಾಗಿಯು ವೈನ್ ಟೇಸ್ಟ್ ಮಾಡಿದೆ’ ಈ ಪೋಸ್ಟ ಯಾಕಪ್ಪಾ ನಾನ್ ಹೇಳ್ದೆ ಅಂದ್ರೆ ಹಾಕಿದ್ದು ಬೇರಾರು ಅಲ್ಲ ಒಬ್ಬ ಹುಡುಗಿ. ಇದು ತೋರಿಕೆಯ ಮಾತು ಅಂತ ಅನಿಸಿದರೂ, ಈ ರೀತಿ ಪೋಸ್ಟ್ ಮಾಡುವ ಧೈರ್ಯ ಆ ಹುಡುಗಿಗೆ ಬಂದಿದ್ದು ಸಾಮಾಜಿಕ ಜಾಲತಾಣವೆಂಬ ಕುರುಡು ಜಗತ್ತಿನಿಂದ.
ಸದ್ಯ ಎಲ್ಲ ಕಡೆಯೂ ಬಿಸಿಬಿಸಿ ಸುದ್ದಿಯಾಗಿ ಹರಿದಾಡುತ್ತಿರುವ ಕ್ಯಾ. ಮನ್ದೀಪ್ ಸಿಂಗ್’ರ ಮಗಳು ಗುರ್ಮೆಹರ್ ಎಂಬ ಯುವತಿಯ ಸಂಗತಿಯನ್ನು ಗಮನಿಸಿದರೆ ಸಾಕು. ಇದಕ್ಕೆ ಸುಮಾರು ಆಯಾಮಗಳನ್ನು ರಾಜಕೀಯ ವ್ಯಕ್ತಿಗಳು, ಕ್ರೀಡಾಪಡುಗಳು, ಸರ್ಕಾರಿ ಸಂಸ್ಥೆಗಳು ಕೊಟ್ಟರು ಕೂಡ, ಕೇಂದ್ರಬಿಂದುವಾಗಿ ಯುವತಿಯನ್ನು ಪ್ರಚೋದಿಸಿದ್ದು ಇಂತಹ ಸಾಮಾಜಿಕ ಜಾಲತಾಣಗಳು ಎಂಬುದು ಕಟುಸತ್ಯ. ಖಂಡಿಸುವ ಉತ್ಸುಕತೆ ಅಷ್ಟೊಂದಿದ್ದಿದರೆ ಸಾಮಾಜಿಕ ಜಾಲತಾಣಗಳನ್ಮು ಹೊರತುಪಡಿಸಿ ಹತ್ತು ಹಲವು ದಾರಿಗಳುಂಟು. ಆದರೆ ಇದರ ಹಿಂದಿರುವುದು ‘ಸ್ವಾರ್ಥಸಾಧನೆ’ ಎಂಬ ಕೆಟ್ಟಹುಳು ಎಂಬುದು ಬುದ್ದಿವಂತರಾದವರಿಗೆ, ಸೂಕ್ಷ್ಮ ದೃಷ್ಟಿಕೋನವುಳ್ಳ ಯಾರೊಬ್ಬನು ಕೂಡ ಗುರುತಿಸಬಲ್ಲ. ನಕಾರಾತ್ಮಕ ಗುರುತಿನಿಂದಾದರು ಕೂಡ ಒಂದೇ ದಿನದಲ್ಲಿ ದೇಶ ಮತ್ತು ಪ್ರಪಂಚದಾದ್ಯಂತ ತನ್ನ ಛಾಯೆ ಮೂಡಿಸಬೇಕು, ಇಂತಹ ಜೀವಿಯೊಂದು ನಮ್ಮ ನಡುವೆ ಇದೆ ಎಂಬ ಹಾಜರಿಯನ್ನು ಹಾಕಬೇಕು ಎಂಬ ಇತ್ಯಾದಿ ಮದನೀಡುವ ಮುದವಾಗಿ ಅವರಿಗೆ ಕಾಣುವ ಅನೇಕ ಅರ್ಥಹೀನ ಆಸೆಗಳು ಯುವಜನತೆಯನ್ನು ದಾರಿತಪ್ಪಸುತ್ತಿರುವುದು, ಅವರ ಜೀವನಪರಿಯನ್ನು ಕೆಟ್ಟರೀತಿಯಲ್ಲಿ ಪ್ರತಿಬಿಂಬಿಸುತ್ತಿವೆ.
ಇಲ್ಲಿ ಜಾಲತಾಣಗಳದ್ದೆ ತಪ್ಪು ಎಂಬ ಫಲಿತಾಂಶವನ್ನು ನಾನು ನೀಡುತ್ತಿಲ್ಲ. ಮೋಜು ಮಸ್ತಿ ಮಾಡುವುದಕ್ಕೆ ಸಾಮಾಜಿಕ ಜಾಲತಾಣಗಳು ಒಂದು ಮಾರ್ಗ ಹೊರತು ಪ್ರಸಿದ್ಧಿ ಪಡೆಯುವ ಅನಿವಾರ್ಯ ಮಾರ್ಗಗಳಲ್ಲ. ಟ್ಟಿಟ್ಟರ್, ಪೇಸ್ಬುಕ್’ಗಳಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವ ಅಥವಾ ಭಾವನೆಗಳನ್ನು ವ್ಯಕ್ತಪಡಿಸುವ ಮೊದಲು ಭವಿಷ್ಯದಲ್ಲಾಗುವ ಬದಲಾವಣೆಗಳ ಬಗ್ಗೆ ಯೋಚಿಸುವುದು ಒಳ್ಳೆಯದು.
ಬಸವ್ವ ವಿ,
ಎಸ್.ಡಿ.ಎಂ. ಸ್ನಾತಕ್ಕೋತ್ತರ ಕೇಂದ್ರ,
ಉಜಿರೆ.
Facebook ಕಾಮೆಂಟ್ಸ್