ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ
ಮತ್ತೆ ತಳ್ಳಿದೆಯೆಕೆ ಈ ಗುಡಿಯಾ ಬಾಗಿಲಲಿ
ಮೇಲಿರುವನೊಬ್ಬ ಕಾಯುವನು ಎಂದು
ನಿಮ್ಮ ತಪ್ಪಿಗೆ ಬಲಿಯಾದೆ ನಾನಿಂದು!
ನೀನೇನು ದೇವಕಿಯಲ್ಲ ಸೆರೆಮನೆಯಲ್ಲು ಇಲ್ಲ
ಯಾವ ಯಶೋದೆಯು ನಮ್ಮನ್ನು ಸಾಕುವುದಿಲ್ಲ
ಅಮ್ಮ ಎಂಬ ಎರಡಕ್ಷರಕೆ ಅರ್ಥವೇನು ಹೇಳು
ನನಗಂತು ಗೊತ್ತಿಲ್ಲ ನಿನಗೆ ತಿಳಿಯುದೇನು?!
ಬಿಸಿಲಲ್ಲಿ ಬಾಡುವುದಿಲ್ಲ ಮಳೆಯಲ್ಲಿ ನೆನೆಯುವುದಿಲ್ಲ
ಚಳಿಯಲ್ಲಿ ನಡುಗುವುದಿಲ್ಲ ಬೀದಿಗೆ ಬಿದ್ದ ಮೇಲೆ
ನೋವು ನಲಿವುಗಳಿಲ್ಲ ಹಸಿವು ನೀರಡಿಕೆಯಿಲ್ಲ
ಮೇಲಿರುವವನ ಆಟವಲ್ಲ ನಿಮ್ಮಗಳ ಲೀಲೆ!
ನೀ ಕುಂತಿಯಾಗಿ ಬಾಳು ಸಾಗಿಸಬಹುದು
ನಾ ಕರ್ಣನಾದರೂ ನಿನಗೆ ಕನಿಕರ ಬಾರದು
ಹಿಂತಿರುಗಿ ಬಂದೊಮ್ಮೆ ನೋಡು ನಮ್ಮ ಪರಿಸ್ಥಿತಿಯ
ಆಗಲಾದರೂ ನಿನಗೆ ತಪ್ಪಿನ ಅರಿವಾಗಬಹುದು
– ಶಶಿ. ಸ್. ಭಟ್
shashi1560@gmail.com
Facebook ಕಾಮೆಂಟ್ಸ್