X

ಕಮ್ಯೂನಿಷ್ಟ್ ಕ್ರೌರ್ಯವನ್ನು ಬರೆದವನು ಯಾವುದೇ ರಾಜಕೀಯ ಪಕ್ಷದವನಾಗಿರಬೇಕಿಲ್ಲಾ..

ಇತ್ತೀಚೆಗೆ ಕೇರಳದಲ್ಲಾಗುವ ಕಮ್ಯೂನಿಷ್ಟ ಕಗ್ಗೊಲೆಗಳನ್ನು ಮತ್ತು ಅವರ ವಾದವನ್ನು ಕರ್ನಾಟಕಕ್ಕೂ ತಿಳಿಯಲಿ ಮಾತ್ರವಲ್ಲ ಇದು ರಾಷ್ಟ್ರೀಯ ನಾಯಕರ ಗಮನಕ್ಕೂ ಬರಲಿ,ನೀರು,ಭಾಷೆ ಮಾತ್ರವಲ್ಲಾ ಜೀವ ಉಳಿಸಿ, ಎನ್ನುವ  ಯುವ ಮನಸ್ಸುಗಳ ಆಗ್ರಹವನ್ನು ಲೋಕ ತಿಳಿಯಲಿ ಎನ್ನುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಮಾಡುವ ಯುವಕರನ್ನು ಯಾವುದೋ ರಾಜಕೀಯ ಪಕ್ಷಗಳ ಕಾರ್ಯಕರ್ತರೆಂದು ಬಿಂಬಿಸುವುದರ ಬಗ್ಗೆ ಬೇಸರವಿದೆ.ಹಾಗೆಂದು ದೇಶವಿರೋಧಿ ಧೋರಣೆಯನ್ನು ಬೆಂಬಲಿಸುವ ರಾಷ್ಟ್ರೀಯ ಪಕ್ಷದವನೆಂದು ಹೇಳಿಕೊಳ್ಳುವುದಕ್ಕಿಂತ ನಾವು ಭಾರತದ ಚಿಂತನೆಯ ಪರ ಎಂದು ಬಿಂಬಿಸುವುದಿದ್ದರೆ ಇದನ್ನು ಒಪ್ಪಿಕೊಳ್ಳಬಹುದು.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂಸೆಯಲ್ಲಿ ಅಗ್ನಿ ಶ್ರೀಧರ್ ನಂತಹ ಬಾಡಿಗೆ ಗೂಂಡಗಳನ್ನಿಟ್ಟು ಪತ್ರಿಕೆ ನಡೆಸುವುದೂ ಕೂಡ ಇದೇ ಕಮ್ಯೂನಿಷ್ಟ್ ಚಿಂತನೆಯ ಇನ್ನೊಂದು ಮುಖವೆನ್ನುವುದರಲ್ಲಿ ಸಂಶಯವಿಲ್ಲ.ಸಾಹಿತ್ಯವನ್ನೇ ಓದಿ, ಬರೆದು ಇತಿಹಾಸವನ್ನು ಓದಿ,ಸಂಗ್ರಹಿಸಿ ತನ್ನದೇ ರೀತಿಯಲ್ಲಿ ವಿಮರ್ಶಣೆ ಮತ್ತು ಬರಹ ಕವನ ಬರೆಯುವವನು ಹೇಗೆ ಸಾಹಿತಿಯೆಂದು ಕರೆಯಲ್ಪಡುತ್ತಾನೋ ಅದರಂತೆ ಸಮಾಜದಲ್ಲಿ ನಡೆಯುವ ಹಿಂಸೆಯ ಕ್ರೂರ ಮುಖಗಳನ್ನು ಪರಿಚಯಿಸುವವನು ಕೂಡ ಸಮಾಜದ ಹಿತದೃಷ್ಟಿಯಿಂದ ಬರೆಯುತ್ತಾನೆಂಬುದನ್ನು ಪತ್ರಿಕಾರಂಗ ಅರ್ಥಮಾಡಿಕೊಳ್ಳಬೇಕು.

ಬುದ್ದಿಜೀವಿಯೆನ್ನಿಸಿಕೊಳ್ಳುವುದಕ್ಕೆ ಕೆಲವು ಸಿದ್ದಾಂತಗಳನ್ನು ಪಟ್ಟಿ ಮಾಡಿಕೊಂಡವರು ಹೀಗೆ ಹೇಳುತ್ತಾರೆ.ಒಬ್ಬ ಸಾಹಿತಿ ಅನ್ನಿಸಿಕೊಳ್ಳಬೇಕಾದರೆ ಧರ್ಮಪರ ಅಥವಾ ರಾಜಕೀಯ ಲಾಭಕ್ಕಾಗಿ ಬರೆಯಬಾರದು ಎನ್ನುವುದು ಇವರ ವಾದ. ಅಷ್ಟಕ್ಕೂ ಭಗವಾನ್’ನಂತಹ ಸ್ವಯಂಘೋಷಿತ ಸಾಹಿತಿಗಳಿಗೆ ಪ್ರಶಸ್ತಿಗಳು ಬಂದದ್ದು ಹೇಗೆ?ಭಗವಾನ್ ಭಗವದ್ಗೀತೆಯನ್ನು ಸುಡಲು ಹೇಳಿ ಹಿಂದೂಗಳ ಧರ್ಮಗ್ರಂಥಕ್ಕೇ ಅವಮಾನ ಮಾಡಿದರೂ ಆತ ಸಾಹಿತಿಯಾದ.ಹಾಗೆಯೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಬುರ್ಗಿ ಹತ್ಯೆ ಆಸ್ತಿಗೋಸ್ಕರ ನಡೆದಿರಲೂಬಹುದು ಎಂಬ ಸಂಶಯ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರನ್ನು ಸಹಿಸದೆ ಚಪ್ಪಲಿ ಎತ್ತಿ ಪ್ರತಿಭಟಿಸಿದ  ಅಸಹಿಷ್ಣುಗಳು ನಮ್ಮ ಕಣ್ಣಿಗೆ ಅದು ಹೇಗೆ ಸಾಹಿತಿಗಳಾಗಿ ಕಾಣಲು ಸಾಧ್ಯ?

ಕೇರಳದಲ್ಲಿ ನಡೆದ ಕೊಲೆಗಳನ್ನೆಲ್ಲಾ ಅವಲೋಕಿಸಿದಾಗ ಇವರುಗಳೆಲ್ಲಾ ಯಾವುದೋ ಸಿದ್ದಾಂತದ ಅನುಯಾಯಿಗಳಲ್ಲಾ,ನಾವು ಹೇಳಿದ್ದನ್ನು ಒಪ್ಪದಿದ್ದರೆ ಕೊಲೆ ಮಾಡುತ್ತೇವೆ ಎನ್ನುವ ಚಿಂತನೆ ಮಾತ್ರ ಇವರ ವಾದ.ಇವರು ಹೇಳಿದ ವ್ಯಕ್ತಿಗಳನ್ನು ಸಾಹಿತಿಗಳೆಂದೋ,ಮಾನವೀಯತೆಯ ಸಂದೇಶ ಹಂಚುವವರೆಂದೋ ನಾವು ಒಪ್ಪಬೇಕು ಒಪ್ಪದಿದ್ದರೆ ತನ್ನದೇ ರೀತಿಯಲ್ಲಿ ಮನವರಿಕೆ ಅದಕ್ಕೂ ಜಗ್ಗದಿದ್ದರೆ ತನ್ನ ಕೊನೆಯ ಅಸ್ತ್ರ ಹಿಂಸೆ,ಕೊಲೆ.

ಕೇರಳದಲ್ಲಿ ಹತ್ಯೆಗೀಡಾದವರೆಲ್ಲರೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲ,ರಾಷ್ಟ್ರೀಯ ಸ್ವಯಂ ಸೇವಕ ಸಂಘದವರೂ ಅಲ್ಲ ಬದಲಾಗಿ ಕಮ್ಯೂನಿಷ್ಟ್ ಚಿಂತನೆಯನ್ನೇ ಅಳವಡಿಸಿಕೊಂಡು ಬೆಳೆದು ಕೊನೆಗೊಮ್ಮೆ ತಾನು ಹೋಗುವ ದಾರಿ ನನ್ನ ಮನಸಾಕ್ಷಿಗೆ,ಸ್ವಾಭಿಮಾನಕ್ಕೆ ಒಪ್ಪುತ್ತದೆಯೇ ಎಂದು ವಿಮರ್ಶಿಸಿ ಎಲ್ಲೋ ದಾರಿ ತಪ್ಪಿದ್ದೇನೆಂದು ಅನಿಸಿದಾಗ ಹೊಸ ಜೀವನಕ್ಕೆ ಹೆಜ್ಜೆ ಹಾಕಲು ಪ್ರಯತ್ನ ಪಟ್ಟವರೇ.ಇದರಲ್ಲಿ ಧರ್ಮ,ಜಾತಿ ರಾಜಕೀಯ ಪಕ್ಷ ಎನ್ನುವುದರ ಬದಲು ತಾನು ಹಿಂಸೆಯನ್ನು, ಹೆದರಿಸಿ ಬಾಳಬೇಕಾದ ಹಾಗೂ ಹೆದರಿ ಬದುಕಬೇಕಾದ ಪರಿಸ್ಥಿತಿಯಿಂದ ಹೊರ ಬರಲು ಯತ್ನಿಸಿದ ಕಮ್ಯೂನಿಷ್ಟ್ ಕಾರ್ಯಕರ್ತರೇ ಕೇರಳದಲ್ಲಿ ಅತೀ ಹೆಚ್ಚು ಕೊಲೆಗೀಡಾಗಿರುವುದು.

ಬಡವರಿಗೆ ಭೂಮಿ ಬೇಕು,ಮನೆಬೇಕು,ಜಾತಿ ಚಿಂತನೆ ಅಳಿದು ನಾವೆಲ್ಲರೂ ಭಾರತೀಯರೆಂಬ ಚಿಂತನೆಯನ್ನು ಬೆಳೆಸಬೇಕು ಎಂದು ಹೊರಟವರನ್ನು ಒಂದು ಪಕ್ಷದ ಬ್ಯಾನರ್ ಗೆ ಅಂಟಿಸಿ ಇದು ತನ್ನ ಪಕ್ಷದ ಚಿಂತನೆಗೆ ಮಾರಕವಾಗಬಹುದು ಎಂಬ ಹೆದರಿಕೆಯಿಂದ ಪ್ರಾರಂಭವಾದ ಕೇರಳದ ಕೊಲೆ ರಾಜಕಾರಣಕ್ಕೆ ಬಲಿಯಾದವರಲ್ಲಿ ಎಲ್ಲಾ ಧರ್ಮದವರೂ ಇದ್ದಾರೆ. ಭಾರತೀಯ ಚಿಂತನೆ ತನ್ನ ರಕ್ತದಲ್ಲಿ ಹರಿಯಲಾರಂಭಿಸಿದ ತಕ್ಷಣ ಆತನಿಗೆ ಕೋಮುವಾದಿಯೆಂಬ ಪಟ್ಟಕಟ್ಟಲು ಹಾತೊರೆಯುವ ಎಡಪಂಥೀಯರು ಕೊನೆಗೆ ಆತನನ್ನು ಹೇಗಾದರೂ ಮುಗಿಸಬೇಕೆಂಬ ಶಪಥ ಮಾಡುತ್ತಾರೆ.ಇದಕ್ಕಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿ ಆತನನ್ನು ಸಮಾಜ ಬಹಿಷ್ಕರಿಸುವಂತೆ ಮಾಡಲು ತನ್ನ ಗುಂಪಿಗೆ ಗುಪ್ತ ಮಾಹಿತಿ ನೀಡಬೇಕಾಗುತ್ತದೆ.ಅದರಂತೆ ಆ ವ್ಯಕ್ತಿಯ ವೈಯುಕ್ತಿಕ ಜೀವನದ ಮಾಹಿತಿಯಿಂದ ಹಿಡಿದು ಸಮಾಜದಲ್ಲಿ ಆತನಿಗಿರುವ ವರ್ಚಸ್ಸನ್ನು ಕಡಿಮೆ ಮಾಡಿಸುತ್ತಾ ಮಾನಸಿಕವಾಗಿ ಚಂಚಲಗೊಳ್ಳುವಂತಹ ವಾತಾವರಣವನ್ನು ನಿರ್ಮಿಸಿ ಆತನನ್ನು ಸಮಾಜ ಬಹಿಷ್ಕರಿಸುವಂತೆ ಮಾಡಿ ಕೊನೆಗೊಂದು ದಿನ ಅವನ ಜೀವನವನ್ನೇ ಉಪಾಯವಾಗಿ ಮುಗಿಸುತ್ತಾರೆ ಕಮ್ಯೂನಿಷ್ಟ್ ವಾದಿಗಳು.

ಕೇರಳದಲ್ಲಿ ರಾಷ್ಟ್ರೀಯ ಸಂಘಟನೆಯ ಸೇವೆಯನ್ನು ತನ್ನದೇ ರೀತಿಯಲ್ಲಿ ನಡೆಸಿಕೊಂಡು ಹಲವು ಬಡವರಿಗೆ ಮನೆ,ಉಧ್ಯೋಗ,ವೈಧ್ಯಕೀಯ ನೆರವು ಇವುಗಳೆಲ್ಲವನ್ನೂ ನೀಡುವ ಅದೆಷ್ಟೋ ಸಾಧನೆಗೈದವರು ಕೇರಳದಲ್ಲಿದ್ದಾರೆ.ಆಶ್ರಮ,ಸೇವಾ ಸಂಘ,ದೇವಾಲಯದ ಟ್ರಸ್ಟ್ ಗಳು,ದೇವಾಲಯದ ಟ್ರಸ್ಟ್ ಗಳು ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳು ತನ್ನದೇ ರೀತಿಯಲ್ಲಿ ಕೇರಳದಲ್ಲಿ ಕಾರ್ಯಪ್ರವೃತ್ತರಾಗಿ ಸೇವೆ ಸಲ್ಲಿಸುವುದರಿಂದಲೇ ಇದು ದೇವರ ನಾಡೆಂದು ಗುರುತಿಸಲ್ಪಟ್ಟಿರುವುದು ಹೊರತು ಹಿಂಸೆ,ಕ್ರೌರ್ಯ,ಅತ್ಯಾಚಾರ ಕೊಲೆಗಳಿಂದಲೇ ಕಮ್ಯೂನಿಷ್ಟ್ ಚಿಂತನೆಗಳಿಂದಲೇ ಗುರುತಿಸಲ್ಪಟ್ಟಿದ್ದರೆ ದೇವರ ನಾಡೆಂದು ಖಂಡಿತವಾಗಿಯೂ ಕರೆಯಲ್ಪಡುತ್ತಿರಲಿಲ್ಲ.

ಮಾನವೀಯತೆಯ ಪಾಠ ಮಾಡುವವರು ಸಾಮಾನ್ಯವಾಗಿ ಮಾನವವಾದ ಪರವಾಗಿರಬೇಕು ಎಂಬುದು ಸಾಮಾನ್ಯವಾಗಿ ಎಲ್ಲರೂ ಚಿಂತಿಸುವುದು.ಆದರೆ ಈ ಕಮ್ಯೂನಿಷ್ಟ್ ಮಾನವೀಯತೆ ಹೇಗೆಂದರೆ ಭಾರತೀಯತೆಯನ್ನು ವಿರೋದಿಸಬೇಕು,ಬಿಳಿಗಡ್ಡ ಹೆಗಲಲೊಂದು ಚೀಲ ಸಾಹಿತಿಯ ವೇಷ,ದೀಪಾವಳಿ,ಗಣೇಶ ಹಬ್ಬ,ಸೇರಿದಂತೆ ಎಲ್ಲಾ ಆಚರಣೆಗಳನ್ನು ಮೂಢನಂಬಿಕೆಯೆಂದು ವಿರೋಧಿಸಬೇಕು.ಎಲ್ಲೋ ದೂರದ ರಾಜ್ಯಗಳಲ್ಲಿ ಯಾವುದೋ ಹಿಂಸೆಯಾದರೆ ಅದನ್ನು ಟೌನ ಹಾಲ್ ಎದುರು ಕೂತು ತಮಗೆ ಬಾಯಲ್ಲಿ ಬರುವಂತಹ ಅರ್ಥವನ್ನು ಕೊಟ್ಟು ವೈಭವೀಕರಿಸಬೇಕು ಇದನ್ನೆಲ್ಲ ಒಪ್ಪಿಕೊಂಡವನು ಮಾತ್ರ ಸಾಹಿತಿ ಇದೆಂತಹ ಸಾಹಿತ್ಯಪ್ರೇಮ ಇವರದ್ದು.?

ಕೊಲೆ ಹಿಂಸೆಯಲ್ಲವೆಂದಾದರೆ ಮಾತನಾಡುವುದು ಕೋಮುವಾದವಾಗುವುದು ಹೇಗೆ? ಗೋ ಹತ್ಯೆ ಹಿಂಸೆಯೆನ್ನಿಸದವರಿಗೆ ಕಂಬಳ ಹಿಂಸೆಯಾಗಿ ಕಾಣುತ್ತದೆ.ಬೀದಿಯಲ್ಲಿ ಹೆಣ್ಣು ಮಕ್ಕಳನ್ನು ತಬ್ಬಿ ಕಿಸ್ ಓಫ್ ಲವ್ ಇವರ ಲೆಕ್ಕದಲ್ಲಿ ಮಾನವೀಯತೆ .ಇವರ ಮಾನವೀಯತೆಗೆ ಬಲಿಯಾದ ಹೆಣ್ಣುಮಕ್ಕಳು ಈಗಲೂ ಕೊರಗಿ ಕೊರಗಿ ನೋವು ನುಂಗಿ ಬದುಕುತ್ತಿದ್ದಾರೆ.

ಇಷ್ಟೆಲ್ಲಾ ಬರೆಯುವ ಉದ್ದೇಶವೂ ಇದೇ ನೀವು ಕಮ್ಯೂನಿಷ್ಟರು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ ಹರಿಸಿದ್ದು ಸಾಕು. ಕನ್ನಡನಾಡಿನಲ್ಲಿ ಐಕ್ಯತೆಯ ಕತ್ತಿ ಮತ್ತು ಸುತ್ತಿಗೆಯನ್ನು ತಂದು ಅಮಾಯಕರ ಕೊಲ್ಲುವುದು ಬೇಡ.

#GoBackPinarayi

ದಯಾ ಆಕಾಶ್ ನಾರಂಪಾಡಿ

akashpatali2@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post