X
    Categories: ಕಥೆ

ಉರುಳು ಭಾಗ -೨

ಉರುಳು ಭಾಗ-೧

ಕೆಲಸ ಮಾಡಲು ಸುತರಾಂ ಮನಸ್ಸೇ ಇಲ್ಲ. ರಜದ ಮೇಲೆ ರಜಾಹಾಕಿದ. ಎಲ್ಲ ದಿನ ಬ್ಯಾಂಕಿಗೆ ಹೋಗಿ ಹಣ ಬಂತೆ ಎಂದುವಿಚಾರಿಸುವುದೇ ಅವನ ಈಗಿನ ಪ್ರಮುಖ ಕೆಲಸ. ಎಂಟನೇದಿನ ಒಂದು ಫೋನ್ ಕಾಲ್ ಬಂತು. ಒಬ್ಬಳು ಮಹಿಳೆಯ ದ್ವನಿ ,ತಾನು ರಿಸರ್ವ್  ಬ್ಯಾಂಕಿನ ಏಜೆಂಟ್ ಅಂತಪರಿಚಯಿಸಿಕೊಂಡಳು.

ಸರ್ ನಿಮಗೆ ಜೆಮೈಲ್  ಲಾಟರಿಯ ಎರಡು ಕೋಟಿ ರುಪಾಯಿಬಹುಮಾನ ಬಂದಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತ ನಿಮ್ಮಅಕೌಂಟಿಗೆ  ಹಾಕಲು ಕ್ಯಾಶ್ ಹ್ಯಾನ್ಡ್ಲಿಂಗ್  ಚಾರ್ಜಸ್ ಐದು ಲಕ್ಷರುಪಾಯಿಗಳಾಗುತ್ತವೆ . ನಮ್ಮ ಅಕೌಂಟ್ ನಂಬರ್ ನಿಮಗೆಕಳುಹಿಸಿದ್ದೇವೆ.”

ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತಾಗಿತ್ತು ಸುದಾಮನಪರಿಸ್ಥಿತಿ. ಪುನಃ ದೌಡಾಯಿಸಿದ ಆನಂದನ ಅಂಗಡಿಗೆ.

ಇದೊಳ್ಳೆ ಕಷ್ಟ ಆಯ್ತಲ್ಲ ನಿನ್ನ ಲಾಟರಿಯದ್ದು. ನನ್ನ ಹತ್ರ ಅಷ್ಟುಹಣ ಇದ್ದಿದ್ದರೆ ನಾನೇ ಕೊಡ್ತಿದ್ದೆ. ಛೆ..ಏನು ಮಾಡುದು ಈಗ? “

ಇಷ್ಟು ದೊಡ್ಡ ಅಮೌಂಟ್ ಒಟ್ಟು ಮಾಡುದು ಕಷ್ಟವೇ

ನಿನ್ನ ಸಂಬಂಧಿಕರ ಹತ್ರ ಎಲ್ಲಾ ಕೇಳಿ ನೋಡಿದ್ಯಾ ?”

ಅದೆಲ್ಲಾ ನಡೆಯುವ ವಿಷಯ ಅಲ್ಲ, ಅವರು ಕೊಟ್ರೂ ಲಾಟರಿಹಣ ಬಂದ ಮೇಲೆ ನನ್ನನು ಹರಿದು ಮುಕ್ಕುತ್ತಾರೆ ಅಷ್ಟೇ

ಹಾಗಾದ್ರೆ ನಮ್ಮ ಸೇಟ್ ಹತ್ರಾನೇ ಹೋಗ್ಬೇಕಷ್ಟೇ, ಹಣಸಿಗಬಹುದು ಆದ್ರೆ ಮಹಾ ಬ್ಲೇಡ್ ಅವನು. ಬಡ್ಡಿಗೆ ಚಕ್ರಬಡ್ಡಿ,ಮೀಟರ್ ಬಡ್ಡಿ ಅಂತ ಸಿಕ್ಕಾಪಟ್ಟೆ ಸುಲಿತಾನೆ

ಪರವಾಗಿಲ್ಲ ಒಂದು ವಾರದಲ್ಲಿ ವಾಪಾಸ್ ಕೊಡ್ತೀವಲ್ಲ

ಸರಿ ಹಾಗಾದರೆ ಬ್ಲಾಂಕ್ ಚೆಕ್ ತಗೊಂಡು ಬಾ, ಹಣ ನಾನುಕೊಡಿಸ್ತೇನೆ

ಆನಂದನ ಒತ್ತಾಯಕ್ಕೆ ಕಟ್ಟು ಬಿದ್ದು ಸೇಟ್ ಐದು ಲಕ್ಷ ಕೊಟ್ಟಿದ್ದ.ಅದನ್ನು ಹಾಗೆಯೇ ಅವರ ಅಕೌಂಟಿಗೆ ಹಾಕಿಯೂ ಆಯಿತು.ಅದರ ನಂತರದ ಒಂದೊಂದು ದಿನವೂ ಸುದಾಮನಉದ್ವೇಗವನ್ನು ಹೆಚ್ಚಿಸುತ್ತಿತ್ತು.  ಕೆಲಸಕ್ಕೆ ಸಿಕ್ ಲೀವ್ ಹಾಕಿಎರಡು ವಾರಗಳು ಕಳೆದಿತ್ತು. ದಿನಾ ಬ್ಯಾಂಕಿಗೆ ಹೋಗಿನಿರಾಸೆಯಿಂದ ವಾಪಾಸ್ ಮನೆಗೆ ಬರುತ್ತಿದ್ದ.  ಇನ್ನಷ್ಟು ದಿನಗಳನಂತರ ಬೇಸತ್ತು ಆನಂದನ ಬಳಿ ಹೋಗಿ ತನ್ನ ಅಳಲನ್ನುತೋಡಿಕೊಂಡ. ಅವನಿಗೂ ಸಂಶಯದ ವಾಸನೆಬಡಿಯತೊಡಗಿತ್ತು. ಲಾಟರಿಯವರು ಕೊಟ್ಟಿದ್ದ ಎಲ್ಲ ಫೋನ್ನಂಬರುಗಳಿಗೆ ಫೋನ್ ಮಾಡಲು ಪ್ರಯತ್ನಿಸಿದ. ಎಲ್ಲನಂಬರುಗಳು ಈಗ ಸ್ವಿಚ್ ಆಫ್ ಮಾಡಲ್ಪಟ್ಟಿದ್ದವು. ತಾನುಮೋಸ ಹೋದದ್ದು ಖಾತ್ರಿಯಾಯಿತು ಸುದಾಮನಿಗೆ. ತಾನುಕಷ್ಟಪಟ್ಟು ಕೂಡಿಟ್ಟಿದ್ದ ಹಣ, ಹೆಂಡತಿಯ ಒಡವೆಕಳೆದುಕೊಂಡದ್ದೂ ಅಲ್ಲದೆ ಬರೋಬ್ಬರಿ ಐದು ಲಕ್ಷಗಳ ಸಾಲಅದೂ ಮೀಟರ್ ಬಡ್ಡಿಗೆ. ಮನೆ ಮಠ ಕಳೆದು ಕೊಂಡು ಬೀದಿಗೆಬರುವುದಂತೂ ಗ್ಯಾರಂಟೀ. ಇನ್ನು ಉಳಿದದ್ದು ತನ್ನ ಕೆಲಸ.ಕಳೆದ ಎರಡು ವಾರಗಳಿಂದ ಹಾಕಿದ್ದ ಬೇಕಾಬಿಟ್ಟಿ ರಜೆಯಿಂದಮ್ಯಾನೇಜರ್ ಈಗಾಗ್ಲೇ ತನ್ನನು ಕೆಲಸದಿಂದಲೇ ತೆಗೆದು ಹಾಕುವಪ್ಲಾನ್ ಮಾಡಿರುತ್ತಾನೆಂದು ಸುದಾಮನಿಗೆ ಚೆನ್ನಾಗಿ ಗೊತ್ತಿತ್ತು.

ಪೋಲಿಸ್ ಕಂಪ್ಲೇಂಟ್ ಕೊಡೋಣ ಬಾಅಂತ ಆನಂದಅವನನ್ನು ತನ್ನ ಜೊತೆ ಸ್ಟೇಷನ್ ಗೆ  ಕರೆದುಕೊಂಡು ಹೋಗಿಕಂಪ್ಲೇಂಟ್ ಕೊಡಿಸಿದ.

ಇದೊಂದು ವಿದೇಶಗಳಿಂದ ನಡೆಸಲ್ಪಡುವ ದೊಡ್ಡ ವ್ಯವಸ್ಥಿತಮೋಸದ ಜಾಲ. ಯಾವುದಾದರು ದೊಡ್ಡ ಕಂಪೆನಿ ಹೆಸರನ್ನುದುರುಪಯೋಗಪಡಿಸಿ ಮೋಸದ ಬಲೆ ಬೀಸುತ್ತಾರೆ. ದೊಡ್ಡಮೊತ್ತದ ಬಹುಮಾನದ ಅಸೆ ತೋರಿಸಿ ಈಗಾಗಲೇ ತುಂಬಾಜನರನ್ನು ದೋಚಿದ್ದಾರೆ. ಒಮ್ಮೆ ಅವರಿಗೆ ಹಣ ಹಾಕಿದ ಮೇಲೆತಮ್ಮೆಲ್ಲ ಅಡ್ರೆಸ್, ಫೋನ್ ನಂಬರ್ ಅಳಿಸಿ ಹಾಕುತ್ತಾರೆ.ಬ್ಯಾಂಕ್ ಅಕೌಂಟ್ ಕೂಡ ನಕಲಿ ಹೆಸರುಗಳಿಂದ ತೆರೆದಿರುತ್ತಾರೆ.  ಅವರು ವಿದೇಶಕ್ಕೆ ಹೋದರಂತೂ ಆಮೇಲೆ ಹಿಡಿಯುವುದುಕಷ್ಟದ ಮಾತು. ನಮ್ಮ ಪ್ರಯತ್ನವಂತೂ ನಾವು ಮಾಡುತ್ತೇವೆ.ಆದರೆ ಹಣ ವಾಪಾಸ್ ಸಿಗುತ್ತೆ ಅಂತ ಭರವಸೆ ಕೊಡಲುಸಾದ್ಯವಿಲ್ಲ. ” ಅಂತ ಇನ್ಸ್ಪೆಕ್ಟರ್ ತಿಳಿಸಿದ.

ಇದನ್ನು ಕೇಳಿ ಸುದಾಮನಿಗೆ ದುಃಖ ತಡೆಯದಾಯಿತು.ಕಣ್ಣುಗಳು ತುಂಬಿ ಬಂತು. ಕಂಠ ಗದ್ಗದಿತವಾಗಿತ್ತು.

ಸರಿ ಸರ್, ಹೇಗಾದರೂ ಮಾಡಿ ಅವರನ್ನು ಹಿಡಿಯಿರಿ.ಇಲ್ಲಾಂದ್ರೆ ನಾನು ಮತ್ತೆ ಬದುಕಿದ್ದೂ ಪ್ರಯೋಜನ ಇಲ್ಲ. ಇನ್ನುಎಲ್ಲ ನಿಮ್ಮ ಕೈಲಿದೆ

ಸುದಾಮ ನೇರವಾಗಿ ಮನೆಗೆ ಬಂದ. ತಾನು ಮೋಸ ಹೋದವಿಷಯ ಸವಿತಾಳಲ್ಲಿ ಹೇಳಲಿಲ್ಲ. ಕೂಡಲೇ ತನ್ನ ಮಕ್ಕಳಿಬ್ಬರಜತೆ ಅವಳನ್ನು ತವರು ಮನೆಗೆ ಸಾಗ ಹಾಕಿ ತನ್ನ ಬೆಡ್ ರೂಮಿಗೆಬಂದು ಬಾಗಿಲೆಳೆದುಕೊಂಡ. ದುಡುಕಿ ಎಷ್ಟು ದೊಡ್ಡ ತಪ್ಪುಮಾಡಿದೆ ಅಂತ ಅರಿವಾಗಿತ್ತು. ಆದರೆ ಇದರಿಂದ ಹೊರ ಬರಲುದಾರಿ ಯಾವುದೂ ಕಾಣದೆ ಸಂಪೂರ್ಣ ಕತ್ತಲು ಆವರಿಸಿತ್ತು.ದುರಾಸೆಯು ತನಗೆ ಏಳಲಾರದ ಪೆಟ್ಟು ಕೊಟ್ಟಿತ್ತು. ಎಷ್ಟೋಹೊತ್ತು ಹಾಗೇಯೇ ಕುಳಿತಿದ್ದ. ತಲೆಯಲ್ಲಿ ತೀರಿಸಬೇಕಾದಸಾಲದ ಭಾರ ಏರಿತ್ತು. ಇನ್ನು ಕೆಲವೇ ದಿನಗಳಲ್ಲಿ ಸೇಟ್ಕಡೆಯವರು  ವಸೂಲಿಗೆ  ಮನೆಗೇ ಬರುತ್ತಾರೆ. ಹಣ ಇಲ್ಲಾಅಂದ್ರೆ ಗಲಾಟೆ ಎಬ್ಬಿಸಿ ಆಸುಪಾಸಿನವರಿಗೆ ತಿಳಿದು ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಎಂಬುದು ಇರುದಿಲ್ಲ. ಒಂದಷ್ಟು ದಿನಹಾಗೂ ಹೀಗೂ ದೂಡಿದರೂ ಕೊನೆಗೆ ತನ್ನ ಬ್ಲಾಂಕ್ ಚೆಕ್ ಬ್ಯಾಂಕಿಗೆ ಹಾಕಿ ಹಣವಿಲ್ಲವೆಂದು ಕೇಸ್ ಹಾಕಿದರೆ ತನ್ನ ಮಾನಮೂರು ಕಾಸಿಗೆ ಹರಾಜಾಗುತ್ತದೆ. ನಂತರ ಬದುಕಿದ್ದು ಏನುಪ್ರಯೋಜನ?.

ಕ್ಷಣವೇ ಪ್ರಳಯವಾಗಿ ಲೋಕವೇ ಇಲ್ಲವಾಗಿ ಹೋಗಿದ್ದಾರೆಚೆನ್ನಾಗಿತ್ತು ಅಂತನ್ನಿಸಿತ್ತು ಅವನಿಗೆ. ಒಂದೋ ಲೋಕವೇನಶಿಸಬೇಕು ಇಲ್ಲ ತಾನು ಸಾಯಬೇಕು. ಹೌದು ತಾನು ಸತ್ತರೆಮತ್ತೆ ತನಗೆ ಸಮಸ್ಯೆಗಳೇ ಇಲ್ಲವಲ್ಲ. ಹೌದು ಅತ್ಮಹತ್ಯೆಯೇಇದಕ್ಕಿರುವ ಒಂದೇ ಪರಿಹಾರ ಅಂತ ಮನಸ್ಸು ಪಲಾಯನವಾದಆರಂಭಿಸಿತ್ತು.

ಆದರೆ ಅಲ್ಲೇ ಟೇಬಲ್ ಮೇಲಿದ್ದ ಫ್ಯಾಮಿಲಿ ಫೋಟೋಆತ್ಮಹತ್ಯೆಯ ನಂತರ ಅವರ ಗತಿ ಏನು ಎಂಬುದನ್ನುನೆನಪಿಸಿತ್ತು. ತಾನು ಅಳಿದರೂ ಮಾಡಿದ ತಪ್ಪು ಅವರನ್ನುಹಿಂಬಾಲಿಸದೆ ಇರದು. ಮನಸ್ಸು ದ್ವಂದ್ವಕ್ಕಿಡಾಯಿತು.

ಆನಂದನ ಒತ್ತಾಯಕ್ಕೆ ಕಟ್ಟುಬಿದ್ದು ಅಂದೆಂದೋ ತೆಗೆದ ಒಂದುಇನ್ಸೂರೆನ್ಸ್ ಪಾಲಿಸಿ ಒಂದಿತ್ತು. ಅದನ್ನು ಹುಡುಕಿ ತೆಗೆದ. ಅವನಮರಣ ನಂತರ ಐದು ಲಕ್ಷ ಅವನ ಕುಟುಂಬಕ್ಕೆ ದೊರೆಯಲಿತ್ತು.ಈಗ ಮನಸ್ಸು ನಿರಾಳವಾಯಿತು. ಹಾಗೆ ಒಂದು ಖಾಲಿ ಹಾಳೆತೆಗೆದು ಡೆತ್ ನೋಟ್ ಬರೆಯಲು ಶುರು ಮಾಡಿದ. ಭಾರವಾದಮನಸ್ಸಿನಿಂದ ಅದನ್ನೊಮ್ಮೆ ಓದಿ ನಿಟ್ಟುಸಿರು ಬಿಟ್ಟ.ಕಪಾಟಿನಿಂದ ಒಂದು ಸೀರೆ ತೆಗೆದು ಗಟ್ಟಿಯಾಗಿದೆಯೇ ಎಂದುಪರೀಕ್ಷಿಸಿದ. ಮಂಚದ ಮೇಲೆ ಸ್ಟೂಲೊಂದನ್ನಿಟ್ಟು ಅದರಮೇಲೇರಿ ಸೀರೆಯ ಒಂದು ತುದಿಯನ್ನು ಫ್ಯಾನಿಗೆ ಗಟ್ಟಿಯಾಗಿಬಿಗಿದ. ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆಬಿಗಿಯತೊಡಗಿದ. ಮನಸ್ಸಲ್ಲೊಮ್ಮೆ ಕೊನೆಯದಾಗಿ ಹೆಂಡತಿಮಕ್ಕಳ ಚಿತ್ರಗಳು ಹಾದು ಹೋದವು. ದೇವರೇ ಅವರನ್ನುಚೆನ್ನಾಗಿಟ್ಟಿರಪ್ಪಾ ಅಂತ ಪ್ರಾರ್ಥಿಸಿ ಸ್ಟೂಲನ್ನು ಕಾಲಿನಿಂದ ಒದೆದ.

ದೋಪ್

*

ಕಿರ್ಕಿರ್ಕಿರ್

ಎಡ ಹಣೆ ಹಾಗೂ ತಲೆಯಲ್ಲೆಲ್ಲಾ  ಒಂದೇ ಸಮನೆ ನೋವು.ಈಗ ಔಷಧಿಯ ಪ್ರಭಾವ ಕಮ್ಮಿಯಾಗಿತ್ತು. ನಿಧಾನವಾಗಿಕಣ್ತೆರೆದು ನೋಡಿದಾಗ ಫ್ಯಾನ್ ಸದ್ದಿನೊಂದಿಗೆ ತಿರುಗುತ್ತಾ ಇತ್ತು. ಆದರೆ ಇದು ತನ್ನ ಮನೆಯ ಫ್ಯಾನ್ ಅಲ್ಲ. ಇದು ಅದಕ್ಕಿಂತಹೊಸದು. ಒಮ್ಮೆ ತಾನೆಲ್ಲಿದ್ದಾನೆ ಎಂಬುದೇ ತಿಳಿಯದಾಯಿತು.ಮೆಲ್ಲನೆ ಸುತ್ತಲೂ ಕಣ್ಣು ಹಾಯಿಸಿದ. ಬೆಡ್ಡಿನ ಒಂದು ಬದಿಯಲ್ಲಿಸವಿತಾ ಹಾಗು ಮಕ್ಕಳು. ಎಲ್ಲರ ಕಣ್ಣಲ್ಲೂ ನೀರುಧಾರಾಕಾರವಾಗಿ ಸುರಿಯುತ್ತಿತ್ತು. ಇನ್ನೊಂದು ಬದಿಯಲ್ಲಿಆನಂದ, ಅವನ ಜೊತೆ ಇನ್ನೊಬ್ಬ. ಫಕ್ಕನೆ ಯಾರೆಂದುಹೊಳೆಯಲಿಲ್ಲ. ಸೂಕ್ಷ್ಮವಾಗಿ ಅವನನ್ನೇ ದಿಟ್ಟಿಸಿ ನೋಡಿದ.

ಹಾಂಹೌದು, ಗೋಪಾಲನೇ .. ತನ್ನ ಬಾಲ್ಯದ ನೆಚ್ಚಿನ ಗೆಳೆಯ.ಇವನು ಹೇಗೆ ಇಲ್ಲಿ ಬಂದ ಅಂತ ಅಚ್ಚರಿ ಪಟ್ಟ.

ಇನ್ನೂ ಬದುಕಿಯೇ ಇದ್ದಿ. ನಾವೆಲ್ಲಾ ಇರುವಾಗ ಹೀಗೆಸುಲಭದಲ್ಲಿ ಸಾಯ್ಲಿಕೆ ಬಿಡುದಿಲ್ಲ ನಿನ್ನನ್ನು.” ಅಂತ  ಹೇಳುತ್ತಾ ಗೋಪಾಲ ಸುದಾಮನ ಬಳಿ ಬಂದು ಬೆಡ್ ಮೇಲೆ ಕುಳಿತುಅವನ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡ. ಸುದಾಮನಿಗೆಮಾತೇ ಹೊರಡಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿ ಬಂತು.

ಗೋಪಾಲ ನಿನ್ನೆಯಷ್ಟೇ ದುಬೈಯಿಂದ ಬಂದ. ಇವತ್ತು ನನ್ನಅಂಗಡಿಗೆ ಬಂದು ನಿನ್ನ ಅಡ್ರೆಸ್ ಕೇಳಿದ.  ಅವನನ್ನು ಕರ್ಕೊಂಡುನಿನ್ನ ಮನೆಗೆ ತಲುಪಬೇಕಾದರೆ ಒಳಗಿನಿಂದ ಏನೋ ಸದ್ದುಕೇಳಿತು. ಆಮೇಲೆ ಗೊತ್ತಾಯ್ತು ನಿನ್ನ ಕಿತಾಪತಿ. ಫ್ಯಾನ್ತಲೆಮೇಲೆ ಬಿದ್ದು ಮೂರ್ಛೆ ಹೋಗಿತ್ತು. ಕೂಡಲೇ ಇಲ್ಲಿಗೆಕರ್ಕೊಂಡು ಬಂದ್ವಿ. ” ಅಂತ ಆನಂದ ನಡೆದ ವಿಷಯ ಹೇಳಿದ.

ಸತ್ತಿದ್ರೇ ಚೆನ್ನಾಗಿತ್ತು , ಇನ್ಸೂರೆನ್ಸ್ ಹಣದಿಂದ ಸಾಲಾನಾದ್ರು ಮುಗಿಸಬಹುದಿತ್ತು. “

ಲೋಮುಟ್ಟಾಳಆಫ್ಟರಾಲ್ ಐದು ಲಕ್ಷ ಸಾಲಕ್ಕೆಆತ್ಮಹತ್ಯೆ ಮಾಡ್ತಾರೆನೋ . ಇವನೊಬ್ಬ… ,  ನೋಡು ನಿನ್ನಸಾಲದ ವಿಷಯಎಲ್ಲ ನಂಗೆ ಬಿಟ್ಟು ಬಿಡು. ಹೇಗೂ ನಾನು ಇನ್ನುದುಬೈಗೆ ಹೋಗುದಿಲ್ಲ. ಇಲ್ಲೇ ಒಂದು ಸೂಪರ್ ಮಾರ್ಕೆಟ್ಓಪನ್ ಮಾಡ್ತಾ ಇದ್ದೆನೆ. ಅದಕ್ಕೆ ನಿನ್ನನ್ನೇ ಮ್ಯಾನೇಜರ್ಮಾಡೋಣ ಏನಂತೀಯ? ”  ಅಂತ ಗೋಪಾಲ ಭರವಸೆಕೊಟ್ಟ.

ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಿ ಸರ್ಅಂತ ಸವಿತಾಗೋಪಾಲನಿಗೆ ಕೈ ಮುಗಿದಳು.

ಗೆಳೆಯನಿಗೊಸ್ಕರ ಅಷ್ಟಾದರೂ ಮಾಡದಿದ್ರೆ ಹೇಗೆ. ಇನ್ನುಮುಂದೆ ತರ ಲಾಟರಿ ಗೀಟರಿ ಅಂತೆಲ್ಲ ಮೋಸಹೋಗಬೇಡಿ,ಇವ ಹುಷಾರಾದ್ಮೇಲೆ ಬಾಕಿ ವಿಷಯ ಮಾತಾಡುವ. ನಾವುಹೊರಡುತ್ತೀವಿ ಅಂತ ಗೋಪಾಲ ಹಾಗು ಆನಂದ ಹೊರಟರು.

ಅವರು ಹೋದ ನಂತರ ಸುದಾಮ ಸವಿತಾಳಲ್ಲಿ,

”   ಮುಖ ಲಕ್ಷಣ ಹೇಳುವವನ ಮಾತು ಸರಿ ಆಯಿತುನೋಡು

ಹೇಗೆ?”

ಗೋಪಾಲನ ರೂಪದಲ್ಲಿ ನಿಜವಾದ ಲಾಟರಿ ಹೊಡೆಯಿತು

ಹಾಗಾದ್ರೆ ನಾನು ಹೇಳಿದ್ದೂ ನಿಜವಾಗಿದೆ

ಯಾವುದು ?”

ತಲೆಮೇಲೆ ಫ್ಯಾನ್ ಬಿದ್ರೆನೇ  ನಿಮಗೆ ಬುದ್ದಿ ಬರುವುದುಅಂತ

ಎಲ್ಲರ ಮುಖದಲ್ಲಿಯೂ ನಗುವೊಂದು ಮೂಡಿಮರೆಯಾಯಿತು.

ಮುಗಿಯಿತು…

Facebook ಕಾಮೆಂಟ್ಸ್

Harikiran H: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಗ್ರಾಮದಲ್ಲಿ ವಾಸವಾಗಿರುವ ಹರಿಕಿರಣ್. ಮಂಗಳೂರಿನಲ್ಲಿ ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕಾಸರಗೋಡಿನಲ್ಲಿ ಅಲೋಪಥಿಕ್ ಔಷಧಿಗಳ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಕನ್ನಡ ಕಥೆ, ಸಿನಿಮಾ, ಸಂಗೀತ ಮತ್ತು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಅಭಿರುಚಿಯನ್ನು ಹೊಂದಿರುತ್ತಾರೆ. ಕೆಲವೊಂದು ಸಣ್ಣ ಕಥೆಗಳನ್ನು ಕೂಡ ಬರೆದಿದ್ದಾರೆ
Related Post