X

ಅದ್ವೈತ ಭಾವದ ಉತ್ಕೃಷ್ಟ ರಚನೆ…

ಕಾಣದ ಕಡಲಿಗೆ ಹಂಬಲಿಸಿದೆ ಮನ ||

ಕಾಣಬಲ್ಲೆನೆ ಒಂದು ದಿನ ?

ಕಡಲನು ಕೂಡಬಲ್ಲೆನೆ ಒಂದು ದಿನ ?

ಕಾಣದ ಕಡಲಿಗೆ ಹಂಬಲಿಸಿದೇ ಮನ…

ಯಾರು ತಾನೇ ಈ ಕವಿತೆ ಕೇಳಿರುವುದಿಲ್ಲ. ಅದರಲ್ಲೂ ಸಿ.ಅಶ್ವತ್ ರವರ ಅಭಿಮಾನಿಗಳ ಮೊಬೈಲ್ ನಲ್ಲಿ ಎಂದೂ ಡಿಲೀಟ್ ಆಗದೇ ಇರುವ ಹಾಡು ಇದು. ಇದನ್ನು ಬರೆದವರು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು.

ನದಿಯೊಂದು ಕಾಣದ ಸಮುದ್ರವನ್ನು ಸೇರಲು ಬಯಸುವ ಚಿತ್ರಣ ಇದರಲ್ಲಿದೆ. ಸಮುದ್ರದ ಬಗೆಗಿನ ನದಿಯ ಕಲ್ಪನೆ, ಅದನ್ನು ನೋಡುವ ನದಿಯ ತವಕವನ್ನು ಶಿವರುದ್ರಪ್ಪನವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಸ್ವತಃ ತಾವೇ ತಮ್ಮನ್ನು ನದಿಯಾಗಿ ಕಲ್ಪಿಸಿಕೊಂಡು, ನದಿಗೆ ಮನಸ್ಸನ್ನು ನೀಡಿ ಅದರ ಭಾವನೆ ಹೇಗಿರುತ್ತದೆ ಎಂದು ಉತ್ಕೃಷ್ಟವಾಗಿ ಕಲ್ಪಿಸಿದ್ದಾರೆ.

ಆದರೆ ಸಾಮಾನ್ಯವಾಗಿ ಎಲ್ಲರೂ ಇದನ್ನು ನದಿಯ ಭಾವನೆ ಎಂದು ನೋಡದೆ ತಮ್ಮ ಮನದ ಭಾವನೆಯನ್ನಾಗಿಯೇ ನೋಡುತ್ತಾರೆ. ತಮ್ಮ ಮನವನ್ನೇ ನದಿಯಾಗಿ ಕಲ್ಪಿಸಿಕೊಂಡು ತಮ್ಮ ಮನದ ಮಾತನ್ನೇ ಕವಿತೆ ಹೇಳುತ್ತದೆ ಎಂದು ಭಾವಿಸುತ್ತಾರೆ. ಆದ್ದರಿಂದಲೇ ಇದು ಎಲ್ಲರ ಮನದಲ್ಲಿ ಅಷ್ಟೊಂದು ಅಚ್ಚಾಗಿ ಉಳಿದಿದೆ.

ಡಾ.ಜಿ.ಎಸ್.ಶಿವರುದ್ರಪ್ಪನವರು ನದಿಯ ಮನದ ಕುರಿತು ಬರೆದರೋ ಅಥವಾ ಮನವನ್ನೇ ನದಿಯನ್ನಾಗಿಸಿ ಬರೆದರೋ ಒಟ್ಟಿನಲ್ಲಿ ನದಿಯ ಹಂಬಲಕ್ಕೂ ಮನದ ಹಂಬಲಕ್ಕೂ ಸಾಮ್ಯತೆ ಇರುವುದರಿಂದಲೇ ಏಕೀಭಾವ ಮೂಡುವುದು. ಬರವಣಿಗೆಯಲ್ಲೂ ಅದ್ವೈತ ಭಾವದ ಸೃಷ್ಟಿ ನಿಜಕ್ಕೂ ಅದ್ಭುತ. ಅದ್ವೈತ ಭಾವದ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ಇದು ಮುಂಚೀಣಿಯಲ್ಲಿ ನಿಲ್ಲುತ್ತದೆ. ಅದ್ವೈತ ಭಾವದ ಉತ್ಕೃಷ್ಟ ರಚನೆ ಎಂದರೆ ಇದೇ ಅಲ್ಲವೇ?

ಇಂತಹ ಹೃದಯಸ್ಪರ್ಶಿ ಗೀತೆ ರಚಿಸಿದ ಶಿವರುದ್ರಪ್ಪನವರು ನದಿಯಾಗಿ ಕಡಲು ಸೇರಿ ಇಂದಿಗೆ ಮೂರು ವರ್ಷಗಳು ಕಳೆಯುತ್ತದೆ. ಆದರೆ ಕನ್ನಡ ಸಾರಸ್ವತ ಲೋಕದಲ್ಲಿ ಅವರ ಸಾಹಿತ್ಯ ಮಾತ್ರ ಎಂದೂ ಬತ್ತಿ ಹೋಗದ ನದಿಯಾಗಿ ಸದಾ ಹರಿಯುತ್ತಿರುತ್ತದೆ.

ಎಂದಿಗಾದರು ಕಾಣದ ಕಡಲನು

ಸೇರಬಹುದೆ ನಾನು ?

ಕಡಲ ನೀಲಿಯೊಳು

ಕರಗಬಹುದೆ ನಾನು ?

Vikram Jois

Shivamogga

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post