X

ಪ್ರಜಾವಾಣಿಯ ಸಂಪಾದಕರಿಗೊಂದು ಪತ್ರ

ಶ್ರೀಯುತ ಪದ್ಮರಾಜ ದಂಡಾವತಿ ಯವರಿಗೆ  ನಮಸ್ಕಾರಗಳು

ಮಾನ್ಯರೇ , ಎಂದಿನಂತೆ ಇವತ್ತಿನ ಪ್ರಜಾವಾಣಿ ಪತ್ರಿಕೆ ಯನ್ನು ನೋಡಿದೆ. ಶ್ರೀ ರಾಮಚಂದ್ರಾಪುರ ಮಠದ ‘ಶಪಥ ಪರ್ವ” ಕಾರ್ಯಕ್ರಮದ ಕುರಿತಾಗಿ ಬಂದ ವರದಿಗಳನ್ನು ಓದಿದ ಮೇಲೆ ಇದನ್ನು ತಮಗೆ ಹೇಳಲೇ ಬೇಕು ಎಂದು ಪತ್ರವನ್ನು ಬರೆಯುತ್ತಿದ್ದೇನೆ . ನನ್ನ ಈ ಅಭಿಪ್ರಾಯ ತಮ್ಮ ಪತ್ರಿಕೆಯ ಬಹುತೇಕ ಓದುಗರ ಅಭಿಪ್ರಾಯವೂ ಆಗಿರಬಹುದೆಂದು ನನ್ನ ಭಾವನೆ ಇರುವುದರಿಂದ ಸಮಾಜ ಮಾಧ್ಯಮಗಳ ಮೂಲಕ ಇದನ್ನು ಸಾರ್ವಜನಿಕರ ಪ್ರತಿಕ್ರಿಯೆಗೆ ಇಡುತ್ತಿದ್ದೇನೆ.

ಮಾನ್ಯರೇ , ತಾವೇ ಬರೆದ ಜಿಲ್ಲಾ ಮಟ್ಟದ ವರದಿಯಲ್ಲಿ ಆ ಸಮಾರಂಭದ ಕುರಿತಾಗಿ ಹಲವು ಮಾಹಿತಿಗಳು  ಕೊಡಲ್ಪಟ್ಟಿದೆ. ಅದರ ಜೊತೆಗೆ ಆ ಕಾರ್ಯಕ್ರಮದ ಫೋಟೋ ಕೂಡಾ ಪ್ರಕಟ ಆಗಿದೆ. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಹತ್ತಾರು ಸಾವಿರ ಜನರು ಭಾಗವಹಿಸಿರುವುದು ನಮ್ಮ ಸಾಮಾನ್ಯ ಜ್ಞಾನಕ್ಕೆ ಎದ್ದು ತೋರುತ್ತದೆ

ಆದರೆ , ರಾಜ್ಯ ಮಟ್ಟದಲ್ಲಿ ಮತ್ತೊಂದು ವರದಿ ಪ್ರಕಟಿಸಲ್ಪಟ್ಟಿದೆ . ಆ ವರದಿಯಲ್ಲಿ ಅದರಲ್ಲಿ “ನೂರಾರು ಜನ” ಎಂದು ಉಲ್ಲೇಖ ಆಗಿದ್ದಲ್ಲದೇ ಆ ಕಾರ್ಯಕ್ರಮದ ಹಲವು ಮಹತ್ವದ ಅಂಶಗಳು ಕೈಬಿಟ್ಟು ಹೋಗಿವೆ  . ಅದರ ಜೊತೆಗೆ ಈ ಸಮಾರಂಭದ ವಿರುದ್ಧ ದನಿಯುಳ್ಳ , ಯಾವುದೇ ಸಂಘಟನೆ ಗಳ ಬೆಂಬಲ ಇಲ್ಲದ , ಕೆಲವೇ ಬೆರೆಳೆಣಿಕೆ ಜನರ ಒಂದು ಪತ್ರಿಕಾ ಗೋಷ್ಠಿ ಯ ವಿಷಯದ ಕವರೇಜ್ , ಸುಮಾರು ಮೂವತ್ತು ಸಾವಿರ ಜನ ಸೇರಿದ್ದ ಸಮಾರಂಭಕ್ಕಿಂತ ಹೆಚ್ಚಿದೆ. ಯಾವುದನ್ನು ಎಷ್ಟು ಕವರೇಜ್ ಮಾಡಬೇಕು ಎನ್ನುವುದು ಖಂಡಿತವಾಗಿಯೂ ಸಂಪಾದಕರ ವಿವೇಚನೆ. ಆದರೆ ಅಂತಹ ವಿವೇಚನೆ ಗಳನ್ನು ಪೂರ್ವಾಗ್ರಹಗಳು ಹಾಗೂ ಹಿಡೆನ್ ಅಜೆಂಡಾ ಗಳು ಅಳಿದಾಗ ಅವು ಪತ್ರಿಕಾ ಧರ್ಮಕ್ಕೇ ಮಾಡುವ ಅನ್ಯಾಯ ಹಾಗೂ ದ್ರೋಹಆಗುತ್ತವೆ ಎಂಬುದು ನನ್ನ ಭಾವನೆ.

ವಿಶ್ವಾಸಾರ್ಹ ಪತ್ರಿಕೆ ಎಂದು ಕರೆದು ಕೊಳ್ಳುವ ನಮ್ಮೆಲ್ಲರ ಹೆಮ್ಮೆಯಾಗಿದ್ದ ಪ್ರಜಾವಾಣಿ  ಅದರಲ್ಲಿರುವ ತನ್ನ ವಿಶ್ವಾಸಾರ್ಹವನ್ನು ಕಳೆದು ಕೊಂಡು ಯಾವುದೇ ಒಂದು “ಸೈಡ್” ತೆಗೆದು ಕೊಳ್ಳದಿರಲಿ, ಇನ್ನು ಮುಂದಾದರೂ ಸಹಿತ “ಕಣ್ತಪ್ಪಿನಿಂದ” ಆಗುವ ಇಂತಹ ವಿಷಯಗಳು ಮತ್ತೆ ಮರುಕಳಿಸದಿರಲಿ ಎಂಬುದು ಎಲ್ಲಾ ಸತ್ಯಪರ ಪ್ರಜಾವಾಣಿಯ ವಾಚಕರ ಒತ್ತಾಯ

ನಮಸ್ಕಾರಗಳೊಂದಿಗೆ

ಪ್ರಸನ್ನ ಎಂ ಮಾವಿನಕುಳಿ

ಪ್ರಜಾವಾಣಿಯ ಓದುಗ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post