X

ಹೊಸ ಅಪಾಯದ ಹಾದಿಯಲ್ಲಿ …!

(ಇವತ್ತು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸತ್ತು ಬಿದ್ದಿರುವ ವಾನಿಯಂತಹ ದರವೇಶಿಸಿಗಾಗಿ ಅಲ್ಲ ಆತ ಬೇರೂರಿಸಲು ಯತ್ನಿಸಿದ ಪರಿಕಲ್ಪನೆಗೆ. ಹಿಜ್ಬುಲ್‍ನ ಜಗುಲಿಯಿಂದ ಸೈಲೆಂಟಾಗಿ ಸರಿದು ಹೋಗಿ ಲಷ್ಕರ್-ಇ-ಇಸ್ಲಾಂ ಬ್ರಿಗೇಡ್ ಕಟ್ಟಿರುವ ಮತ್ತು ಇದರಲ್ಲಿರುವ ತೀರ ಹದಿನಾರರಿಂದ ಇಪ್ಪತೆರಡರವರೆಗಿನ ಯುವಕರ ಪರಿಕಲ್ಪನೆಗೆ. ಅವರಿಗೀಗ ಕಾಶ್ಮೀರ ಸ್ವತಂತ್ರ ಬೇಕಿಲ್ಲ ಆದರೆ ಇಸ್ಲಾಮಿಕ್ ಸ್ಟೇಟ್ ಮಾಡಬೇಕಿರುವ ತುರ್ತಿದೆ. ಪಾಕಿ ಬದಲಾಗಿ ಸ್ಟೇಟ್ ಧ್ವಜ ಪಟಪಟಿಸಿದೆ. ಇದು ವಿಶ್ವದ ತುರ್ತು ಗಮನ ಸೆಳೆದಿದ್ದು ವಾನಿ ಈ ನೆಟ್‍ವರ್ಕ್‍ನ್ನು ಹಬ್ಬಿಸತೊಡಗಿದ್ದ. ಇದೇ ಕಾರಣಕ್ಕೆ ಕಾಶ್ಮೀರದಲ್ಲಿ ಸ ತ್ತನಂತರ ಅವನು ಪ್ರಭಾವಶಾಲಿಯಾಗಿದ್ದು. ತೀರ ತಲೆ ಮಾಸಿದ ಎಬುಜೀಗಳು ಇದಾವುದರ ಅರಿವಿಲ್ಲದೆ `ಮೋದಿ, ಅದಾನಿಗೆ ನೀರು ಹರಿಸುತ್ತಿದ್ದಾರೆ ತಡಿರಪ್ಪೋ’ ಎಂದರಚಿಕೊಳ್ಳುತ್ತಿದ್ದಾರೆ ಅಪ್ಪಟ ಹಸಿನಾಯಿಗಳಂತೆ. ಹೊಲಸು ತಿನ್ನುವ ಹಸಿವೆಗೂ ಮಿತಿ ಇರುತ್ತದೆ. ಆದರೆ ಇವರಿಗೆ..? )

ಅನಗತ್ಯವಾಗಿ ಒಬ್ಬ ಕಾಂಜಿಪಿಂಜಿ ಹುಡುಗನನ್ನು ಹೇಗೆ ಹೀರೋ ಮಾಡಬಹುದು ಮತ್ತದರಿಂದ ದೇಶದ್ರೋಹಿಗಳು, ಎಬುಜೀಗಳು ಹೇಗೆ ತಮ್ಮ ತಲಬು ತೀರಿಸಿಕೊಳ್ಳಬಹುದೆನ್ನುವುದಕ್ಕೆ ತೀರ ಹಸಿ ಉದಾಹರಣೆ. ಬುರ್ಹಾನ ವಾನಿ ಎಂಬ, ಫೇಸ್ ಬುಕ್/ವ್ಯಾಟ್ಸಾಪುಗಳಲ್ಲಿ ತಣ್ಣಗೆ ಕ್ಯಾತೆ ಮಾಡಿಕೊಂಡು ಓಡಾಡುತ್ತಿದ್ದ, ಪೋಲಿಸರಿಗೆ ಮುಖ ತೋರಿಸಲು ನರವಿಲ್ಲದ ಸ್ವಘೋಷಿತ ಕಮಾಂಡರ್. ಹಿಜ್ಬುಲ ಮುಜಾಹಿದ್ದೀನ್ ಸಂಘಟನೆಗೆ ಸೇರಿ ತನ್ನೆತ್ತರದ ಬಂದೂಕನ್ನು ಹೆಗೆಲಿಗೇರಿಸಿಕೊಂಡು ಪೋಸುಗಳ ಬಿಲ್ಡಪ್ಪು ಕೊಡುತ್ತಾ ಓಡಾಡುತ್ತಿದ್ದುದನ್ನು ಬಿಟ್ಟರೆ, ಅವನು ಅವನದ್ದೇ ಊರಿನ ಕಾಶ್ಮೀರಿಗಳಿಗೆ ಮಾಡಿರುವ ಉಪಕಾರ ಸೊನ್ನೆ. ವಿಪರೀತ ಧರ್ಮ,ಜಾತಿವಾದ ನಶೆಯಲ್ಲಿದ್ದ ಹುಡುಗ ಹದಿನೈದನೇ ವರ್ಷಕ್ಕೆ ಕೌಟುಂಬಿಕ ಬದುಕು ಬರಕತ್ತಾಗದೇ, ಬಂದೂಕು ಕೊಡಿ ಎಂದು ಕೈ ಚಾಚಿ ನಿಲ್ಲುತ್ತಾನೆಂದರೆ ಅದಿನ್ನೆಂಗೆ ಅವನು ಮಾನವತೆಯನ್ನು ಬೋಧಿಸುವ ಧರ್ಮದ ಪ್ರಕಾರ ಸನ್ಮಾರ್ಗದಲ್ಲಿ ಬದುಕಲು ಸಾಧ್ಯ…?

ಅನಂತನಾಗ್ ಜಿಲ್ಲೆಯ 19ನೇ ರಾಷ್ಟ್ರೀಯ ರೈಫಲ್ಸ್ ಪಡೆಯ ಎದುರಿಗೆ ಬರುತ್ತಿದ್ದಂತೆ ಸರಂಡರ್ ಆಗಿದ್ದರೆ ಜೀವವಾದರೂ ಉಳಿಯುತ್ತಿತ್ತೇನೋ, ಅಲ್ಲೂ ಗನ್ ಎತ್ತಿಕೊಂಡು ಪಡೆಗಳ ವಿರುದ್ಧ ಕದನಕ್ಕಿಳಿಯುವ ಸನ್ನಾಹದಲ್ಲಿದ್ದನೇನೋ, ಸೆಕೆಂಡೊಂದರಲ್ಲಿ ಅವನನ್ನು ಜೊತೆಗಾರರನ್ನೂ ಪಡೆಗಳು ನೆಲಕ್ಕೆ ಕೆಡುವಿ ಹಾಕಿವೆ. ಮಿಲಿಟರಿ ಮಾಹಿತಿಯಂತೆ ಮೊದಲ ಬಾರಿಗೆ ಗುಂಡು ಬೀಳುವ ಮೊದಲೇ ವಾನಿ ಹವಾಟೈಟ್ ಆಗಿ ತೀರ ಅಳಲು ಆರಂಭಿಸಿದ್ದನಂತೆ. ಇವನನ್ನು ನಂಬಿಕೊಂಡು ಹುಚ್ಚು ಕಾಶ್ಮೀರದ ಮತಾಂಧರು ಧರ್ಮಯುದ್ಧ ಮಾಡುತ್ತೇನೆಂದು ಹೊರಟು ನಿಂತಿದ್ದಾರೆ ದೇವರೂ ಅವರನ್ನು ಕಾಯಲಿಕ್ಕಿಲ್ಲ. ಬದುಕಿದ್ದಾಗ ಮಾಡಿದ ಸದ್ದಿಗಿಂತಲೂ ಅವನ ಸಾವು ಕಣಿವೆಯಲ್ಲಿ ಹೆಚ್ಚು ಪ್ರತಿಧ್ವನಿಸಿತು. ಆದರೆ ಅದರ ಹಿಂದಿನ ಸತ್ಯ ಮಾತ್ರ ಮತಾಂಧರಿಗೆ ಅರ್ಥವೇ ಆಗುತ್ತಿಲ್ಲ. ಅಪ್ಪಟ ಪ್ರತ್ಯೇಕತಾವಾದಿಗಳ ನಾಯಕರಾದ ಗಿಲಾನಿ ಪಿಲಾನಿಗಳೆಲ್ಲಾ ಬಂಧನದಲ್ಲಿದ್ದೂ ಕೂತು ಮಾಡುತ್ತಿರುವ ಕೆಲಸವೆಂದರೆ ಯಾವ್ಯಾವ ಏರಿಯಾದಲ್ಲಿ, ಯಾವಾಗ, ಹೇಗೆ ಗಲಾಟೆಗಳಾಗಬೇಕೆಂಬ ಟೈಮ್‍ಟೆಬಲ್ಲು ತಯಾರಿಸುವುದು. ಅದನ್ನು ಇಂಥ ಸಾಮಾಜಿಕ ವೈಪರಿತ್ಯ ಸೃಷ್ಟಿಸುವುದಕ್ಕೆಂದೇ ಸಾಕಿಕೊಂಡಿರುವ ಹುಡುಗರ ಮೂಲಕ ಇಂಪ್ಲೀಮೆಂಟ್ ಮಾಡುವುದು. ಇದರಲ್ಲೂ ಆಗಿದ್ದು ಅದೇ.

ಅನಂತನಾಗ್ ಜಿಲ್ಲೆಯ ತ್ರಾಲ್ ಎನ್ನುವ ಮೂಲೆಯ ಊರಿನ ಹುಡುಗ ಬರ್ಹಾನ್ ವಾನಿ ಮೂಲತ: ಮೇಷ್ಟ್ರೊಬ್ಬರ ಮಗ. ಯಾವ ರೀತಿಯಲ್ಲೂ ಶಾಲೆಗೆ ಬರಕಾತ್ತಾಗಲಿಲ್ಲ. ಸುತ್ತಮುತ್ತಲೂ ಹೈದರ್ ಕಾಲೋನಿ, ಅರಿಗ್ಯಾಂ, ಶರಿಫಾಬಾದ್, ಎಡಕ್ಕೆ ತಾಲೀಮ್ ಮದ್ರಸಾ, ಕೆಳಗೆ ಖಾಡಿ ಮೊಹಲ್ಲಾ, ಅಲ್ಲಿಂದ ಕೇಸ್ರ್ಬಾಲ್, ಮಾರೂಮ್ ಮೊಹಲ್ಲ, ಮೇಲಕ್ಕೆ ಬಿಲಾಲ್ ಅಬಾಡಿ ಹೀಗೆ ಯಾವ ದಿಕ್ಕಿನಿಂದ ನೋಡಿದರೂ ಕಟ್ಟರ್ ಧಾರ್ಮಿಕ ವಠಾರದಲ್ಲೇ ಬೆಳೆದವ ಬುದ್ಧಿವಂತಿಕೆಯ ಕಸುಬಿನಿಂದ ದೂರ ಉಳಿದು ಬಿಟ್ಟರೆ ಅಬ್ಬೆಪಾರಿಯಲ್ಲದೇ ಬೇರೇನೂ ಆಗಿರಲು ಸಾಧ್ಯವೇ ಇಲ್ಲ.

ಇವನಿಗಿಂತಲೂ ಮೊದಲು ಇವನ ಸಹೋದರ ಶೋಯಾಬ್ ಫೈಸಲ್ (ದೆಹಲಿ ಹೈಕೋರ್ಟ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್) ಪೋಲಿಸರ ಗುಂಡಿಗೆ ಬಲಿಯಾಗಿ ಹೋಗಿದ್ದ. ಅವನ ಸಾವು ಈ ವಾನಿಯನ್ನು ಭಯೋತ್ಪಾದಕನನ್ನಾಗಿಸಿದ್ದು ಎಂದು ಕತೆ ಕಟ್ಟುವ ಎಡಪಂಥೀಯ ಮಾಹಾದ್ರೋಹಿಗಳೇ ಹಾಗಾದರೆ ದೇಶದ ತುಂಬೆಲ್ಲಾ ಯಾಕೆ ಇನ್ನೊಬ್ಬ ಸಂಗೊಳ್ಳಿ ರಾಯಣ್ಣ, ಭಗತ್‍ಸಿಂಗ್ ಹುಟ್ಟಲಿಲ್ಲ..?

ವ್ಯಾಟ್ಸಾಪಿನಲ್ಲಿ ತರತರಹದ ಬಂದೂಕು, ಡ್ರೆಸ್ಸು ತೊಟ್ಟು ಪ್ರಚೋದನಕಾರಿ ಭಾಷಣಗಳ ಮೂಲಕ ತನ್ನ ಸ್ನೇಹಿತರ ವರ್ಗವನ್ನು ಮೊದಲು ಸೆಳೆದ ವಾನಿ, ನಂತರ ಅಂಥ ಆಸಕ್ತಿ ಮತ್ತು ಮನಸ್ಥಿತಿಯವರನ್ನೇ ಗುರಿಯಾಗಿಟ್ಟುಕೊಂಡು ತಂತ್ರ ರೂಪಿಸತೊಡಗಿದ. ತೀವ್ರ ವಾಗ್ದಾಳಿಯೊಂದೇ ಇವನಿಗಿದ್ದ ಡಿಗ್ರಿ. ಅದಕ್ಕೆ ಸರಿಯಾಗಿ ಉಳಿದ ಉಗ್ರರಂತೆ ಈತ ಮುಖ ಮುಚ್ಚಿಕೊಳ್ಳದೇ ಫೋಟೊಗಳನ್ನು ಅಪ್‍ಲೋಡ್ ಮಾಡತೊಡಗಿ ಮುಲಾಜಿಲ್ಲದ ಆಯಾಮಕ್ಕೆ ಉಗ್ರ ಲೋಕದ ಮುಖ ತೆರೆದಿಟ್ಟಿದ್ದು ಇವನನ್ನು ಇನ್ನಷ್ಟು ಮೇಲಕ್ಕೇರಿಸಿತು. ಭಯತ್ಪಾದಕ ಲೋಕದಲ್ಲಿ ಅಧ್ಬುತ ಥ್ರಿಲ್ಲ್ ಇದೆ ಎನ್ನುವ ಫ್ಯಾಂಟಸ್ಸಿ ಕ್ರಿಯೇಟ್ ಮಾಡತೊಡಗಿದ್ದ. ಅಲ್ಲಿನ ಹಿರೋ(?)ಯಿಸಮ್ಮು ಎಲ್ಲಕ್ಕಿಂತಲೂ ಮಿಗಿಲಾದುದು, ಮಾನ್ಯ ಕೂಡಾ ಎನ್ನುವುದಕ್ಕೆ ಪೂರಕವಾಗಿ ತರಹೇವಾರಿ ಬಂದೂಕುಗಳ, ಡ್ರೆಸ್ಸುಗಳ ಫೋಟೊ ಅಪ್‍ಲೋಡು ಮಾಡುತ್ತಿದ್ದ. ಜತೆಗೆ ಅಲ್ಲಿ ಹಡಬೆ ದುಡ್ಡು ಹರಿಯುತ್ತದೆ ಖರ್ಚಿಗೆ ಕೈಕಟ್ಟುವುದಿಲ್ಲ ಎನ್ನುವುದನ್ನೂ ಸರಿಯಾಗಿ ಪ್ರೊಜೆಕ್ಟ್ ಮಾಡುತ್ತಿದ್ದ. ಹಿಜ್ಬುಲ್‍ನ ದುಡ್ಡಿನಿಂದ ಆರ್ಥಿಕವಾಗಿ ದುಂಡಗಾಗುತ್ತ ಸುಲಭಕ್ಕೆ ಬದುಕನ್ನು ಬಂದೂಕಿನ ಬಾಯಿಗೆ ಕೊಟ್ಟುಕೊಂಡ. ಕಣಿವೆಯಲ್ಲಿ ಹರಿಯುತ್ತಿರುವ ವಿದೇಶಿ ಫಂಡಿಂಗ್ ಎಂಬ ಹರಾಮಿ ದುಡ್ಡಿದೆಯಲ್ಲ ಅದು ಇವತ್ತು ಎಲ್ಲಕ್ಕಿಂತಲೂ ಹೆಚ್ಚಿನ ಅನಾಹುತ ಮಾಡುತ್ತಿದೆ. ನಾಲ್ಕು ಗಂಟೆಗಳ ಗಲಾಟೆಗೆ ತಿಂಗಳ ಕೂಲಿ ಮತ್ತು ಎಣ್ಣೆಗೆ ಪುಗ್ಸಟ್ಟೆ ದುಡ್ಡು ದೊರೆಯತೊಡಗಿದರೆ ಯಾಕೆ ನಿಂತು ಕಲ್ಲೆಯಸಬಾರದು ಎನ್ನುವ ಬೇಷರಮ್ ದಂಧೆಗೆ ಬೀಳದೆ ಏನು ಮಾಡುತ್ತಾರೆ..?

ಇವತ್ತು ಹೆಚ್ಚಿನ ಕಾಶ್ಮೀರದ ರಸ್ತೆಗಳ ಕಾಲುವೆಗಳಲ್ಲಿ ನೀರಿರುವುದಿಲ್ಲ. ನೆನಪಿರಲಿ ಕಲ್ಲುಗಳನ್ನು ಆಯ್ದು ತುಂಬಿಸುವುದೇ ಹೆಚ್ಚಿನವರ ಕಾಯಕ. ಯೋಚಿಸಿ ಇದ್ದಕ್ಕಿದ್ದಂತೆ ಫೋಲಿಸರ ಮೇಲೆ ತೂರಲು ಅದೆಲ್ಲಿಂದ ಸಾವಿರಾರು ಕಲ್ಲಿನ ಸ್ಟಾಕ್ ಸಿಕ್ಕಿ ಬಿಡುತ್ತದೆ. ಒಂದು ಸ್ಥಳದಲ್ಲಿ ನೋಡುತ್ತಿದ್ದಂತೆ ನೂರಾರು ಕಲ್ಲುಗಳ ಬೀಳತೊಡಗಿದೆ ಎಂದರೆ ಅಲ್ಲೆಲ್ಲಾ ವ್ಯವಸ್ಥಿತವಾಗಿ ಯಾವಾಗ ಬೇಕಾದರೂ ಬೇಕಾಗಬಹುದೆಂದು ದಾಸ್ತಾನು ನಡೆಯುತ್ತಲೆ ಇರುತ್ತದೆ. ಪ್ರತಿ ಊರಿನ ಇಕ್ಕೆಲೆಯಲ್ಲೂ ತುಂಬಿ ಹರಿವ ನೀರಿನ ಪಾತ್ರದಲ್ಲಿ ಲಕ್ಷಾಂತರ ಕಲ್ಲುಗಳು ಪ್ರತಿ ಮಳೆಗಾಲದಲ್ಲೂ ಹರಿಯುವಾಗ ದಂಡೆಗೆ ಹೊತ್ತು ಹಾಕುವ ಕಲ್ಲಿನ ರಾಶಿಯನ್ನು ಚೀಲಗಟ್ಟಲೇ ಹೊರುವುದೇ ಇವರ ಕಾಯಕ. ಇವರಾರೂ ಇವತ್ತು ಶಾಲೆ ಕಲಿತಿಲ್ಲ.

ಅದ್ರೆ ಮತಾಂಧ ಮತ್ತು ಅಪ್ಪಟ ಪೆಕರು ಕಾಶ್ಮೀರಿ ಮುಸ್ಲಿಂರಿಗೆ ಇದು ಅರ್ಥವೇ ಆಗುತ್ತಿಲ್ಲ. ಕೇವಲ ಐದಾರು ಪರ್ಸೆಂಟಿನಷ್ಟು ಇಂಥವನ ಬೆಂಬಲಿಗರು ಶೇ. 90 ಕ್ಕೂ ಹೆಚ್ಚು ಜನರ ಜೀವನವನ್ನೇ ನರಕ ಮಾಡುತ್ತಿದ್ದಾರೆ ಅದರೂ ಸ್ಥಳೀಯರು ಬುದ್ಧಿ ಕಲಿಯುತ್ತಿಲ್ಲ ಎಂದಲ್ಲ. ಎಬುಜೀಗಳ ಪಡೆ ಇವರನ್ನು ಬೆಳೆಯಲು ಬಿಡುತ್ತಿಲ್ಲ ಅಷ್ಟೆ. ಯಾರೋ ಕೊಡುತ್ತಿದ್ದ ಪುಕ್ಕಟ್ಟೆ ದುಡ್ಡಿನಲ್ಲಿ ಬದುಕು, ಶೋಕಿ ಎರಡೂ ಮಾಡುತ್ತಾ, ಬಣ್ಣಬಣ್ಣದ ದಿರಿಸೂ, ಬಂದೂಕು ಧರಿಸಿ ಓಡಾಡುತ್ತಿದ್ದ ಎಳಸು ಯುವಕನೊಬ್ಬ ಕಾಶ್ಮೀರದ ಬೀದಿಯಲ್ಲಿ ನಾಯಿಯಂತೆ ಸೈನಿಕರ ಗುಂಡಿಗೆ ಬಲಿಯಾದರೆ, ಅತ್ತ ನವಾಝ್ ಶರೀಫು ತನ್ನದೇ ಅಕ್ರಮ ಸಂತಾನವೊಂದು ಕಳಚಿ ಬಿದ್ದಂತೆ ಆಡುತ್ತಿದ್ದಾನೆ. ಅದರೆ ನಮ್ಮಲ್ಲಿನ ದೂರದೃಷ್ಟಿ ಇಲ್ಲದ ಅಪ್ಪಟ ಬಡಪಾಯಿ ಭಾರತೀಯ ಮುಸ್ಲಿಂರಂತೆ ಆಡುತ್ತಿರುವ ಪಾಕಿ ಪಡೆಗೂ ಒಂದರ್ಥವಾಗಬೇಕಿದೆ. ಶರೀಫನಾಗಲಿ, ಮುಶರಫ್‍ನಾಗಲಿ, ರಾಹಿಲ್‍ನಾಗಲಿ ಇವತ್ತು ಪಾಕಿಗಳನ್ನು ಉದ್ಧರಿಸಲು ಬಂದ ಮಾಂತ್ರಿಕರೂ ಅಲ್ಲ, ಯಾವದೇ ದೇಶೋದ್ಧಾರದ ತೆವಲು ಇರುವ ನಾಯಕರೂ ಅಲ್ಲ. ಏನಿದ್ದರೂ ತೂಬು ಕಿತ್ತು ಹೋಗುವವರೆಗೆ ನೀರು ಹರಿಸಿಕೊಂಡು ಬಿಡುವ ಹುನ್ನಾರದಲ್ಲಿರುವ, ಅಂದರೆ ಶುದ್ಧ ಮುಸ್ಲಿಂರ ಪಾಲಿಗೆ ಕಂಟಕವಾಗಿರುವ ಅವಿವೇಕಿ ಪಡೆ ಇದು. ಶೇ.90 ರ ಷ್ಟು ಚೆಂದವಾಗಿ ಬದುಕುತ್ತಿರುವ ಮುಸ್ಲಿಂ ಕುಟುಂಬಗಳ ಭವಿಷ್ಯವನ್ನು ಧರ್ಮದ ಹೆಸರಿನಲ್ಲಿ ಭಾರತದಲ್ಲೂ, ಪಾಕಿಸ್ತಾನದಲ್ಲೂ ಹಾಳು ಮಾಡುತ್ತಿರುವ ಅಪ್ಪಟ ದುರ್ಮಾರ್ಗಿಗಳಿವರು.

ಮುಖ್ಯವಾಗಿ ಮೊನ್ನೆ ವಾನಿಯ ಹತ್ಯೆಗೆ ಕರಾಳ ದಿನವನ್ನು ಆಚರಿಸಲು ಕರೆಕೊಟ್ಟು ನವಾಝ್ ಶರೀಫ್, ಅವನ ಫೋಸ್ಟರನ್ನು  ತಮ್ಮೂರ ರೈಲಿಗೆ ಅಂಟಿಸಿಕೊಂಡು, ಕೊನೆಯಲ್ಲಿ ಆ ಡಬ್ಬಿಗಳಿಗೆ ಪೆಂಟಿಂಗ್ ಕಾಂಟ್ರಾಕ್ಟು ಮತ್ತು ಸೌದಿ ದೇಶಗಳಿಗೆ ಫೋಸ್ಟರ್ ತೋರಿಸಿ ಎತ್ತುವ ಫಂಡೂ ಎರಡೂ ಕಡೆ ಹಣ ಗಳಿಸುವ ಅವನ ಹಕೀಕತ್ತು ಯಾವ ಪೆದ್ದ ಪಾಕಿಗಳಿಗೂ, ಕಾಶ್ಮೀರಿಗಳ  ಅರಿವಿಗೂ ಬರುತ್ತಲೇ ಇಲ್ಲ.

ಕಾರಣ ನಿಜವಾಗಿಯೂ ಹಿಂದೂಸ್ಥಾನದ ಸೈನ್ಯ ಪಾಕಿಗಳ ಮೇಲೆ ರಪಕ್ಕನೆ ಬಿದ್ದಿದ್ದೇ ಆದ್ರೆ ಇದ್ದ ಬದ್ದವರನ್ನೆಲ್ಲಾ ಸಾಯಲು ಬಿಟ್ಟು ಈ ಮನುಷ್ಯ ಮೊದಲು ವಿದೇಶ ಸೇರಿಕೊಳ್ಳುತ್ತಾನೆ. ಕಾರಣ ಅವನಿಗೆ ವೈಯಕ್ತಿಕವಾಗಿಯೂ, ದೇಶವ್ಯಾಪಿಯಾಗಿಯೂ ಕಳೆದುಕೊಳ್ಳುವಂತಹದ್ದೇನೂ ಇಲ್ಲ. ಒಮ್ಮೆ ಸುಮ್ಮನೆ ಲೆಕ್ಕಾ ಹಾಕಿ. ವಾರ್ಷಿಕವಾಗಿ ಬಟ್ಟು ಮಡಚಿ ಎಣಿಸಲು ಕಷ್ಟವಾಗುವಷ್ಟು ಆಮದನಿ ಹೋದಿರುವ ನವಾಜ್ ಶರೀಫ್ ಪಾಕಿನ ಅತಿದೊಡ್ಡ ಉಕ್ಕು ಉದ್ಯಮಿ. ನಿಮಗೆ ಗೊತ್ತಿರಲಿ ಅವನೊಬ್ಬನ ಸಂಪತ್ತಿನೆದುರಿಗೆ ಪಾಕಿಸ್ಥಾನದ ಬಜೆಟ್ಟು ಎಕ್ಕುಟ್ಟಬಲ್ಲದು. ವಿದೇಶದಲ್ಲಿರುವ ಆಸ್ತಿಯ ವಿವರ ಲೆಕ್ಕಿಸದೆ ಸ್ವತ: ಪಾಕಿ ಅಧಿಕಾರಿಗಳು ಸೋತಿದ್ದಾರೆ. ಸಕ್ಕರೆ ಕಾರ್ಖಾನೆಗಳು, ಟೆಕ್ಸ್’ಟೈಲ್ಸ್ ಫ್ಯಾಕ್ಟರಿಗಳು, ಸ್ಟೀಲ್ ಉದ್ಯಮ, ಫೌಂಡರೀಸ್ ಸೇರಿದರೆ ಒಂದು ಲಕ್ಷಕ್ಕಿಂತಲೂ ಹೆಚ್ಚಿಗೆ ಉದ್ಯೋಗಿಗಳನ್ನು ಹೊಂದಿರುವ ಪಾಕಿಸ್ತಾನದ ಪ್ರಥಮ ಶ್ರೀಮಂತ ಪ್ರಜೆ.  ಹೀಗಿದ್ದಾಗ ಅವನಿಗೆ ಪಾಕಿಸ್ತಾನದ ನೆಲದ ಮೇಲೆ ಯಾವ ದೇಶ ಅಣುಬಾಂಬ್ ಬಳಸಿದರೂ, ಕಂಡೊರೆಲ್ಲಾ ಬಂದು ಕಾಲೆತ್ತಿ ವಿಸರ್ಜನೆ ಮಾಡಿದರೂ ಯಾವ ಫರಕ್ಕೂ ಬೀಳಲಾರದು. ಕೊನೆಯಲ್ಲಿ ಬದುಕಬೇಕಾದವರು ಈ ಬರಗೆಟ್ಟ ಪಾಕಿಗಳೇ.

ಆದರೆ ಸರಿಯಾಗಿ ಕಾಲೂರಿ ನಡೆದರೆ ಬಿರುಕು ಬಿಡುವಂತಹ ನೆಲದ ಸರಹದ್ದಿನಲ್ಲಿರುವ ಪಾಕಿಗಳಿಗೂ, ನಮ್ಮ ಲೋಕಲ್ಲುಗಳಿಗೂ ಅರ್ಥವಾಗುತ್ತಿಲ್ಲ ಎಂದಲ್ಲ. ಆದರೆ ಅವರಲ್ಲಿನ ಮತಾಂಧಂತೆಯ ಅಫೀಮಿಗೆ ನಿರಂತರವಾಗಿ ಬಲಿ ಹಾಕುವುದರ ಮೂಲಕ ಎಡವಟ್ಟುಗಳು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ದಿನಗಳೆದಂತೆ ಪಾಕಿಸ್ತಾನ ತನ್ನ ಗೋರಿ ತೋಡಿಕೊಳ್ಳುತ್ತಲೇ ಇದೆ. ಇತ್ತ ಪೆದ್ದ ಅನುಯಾಯಿಗಳು ಮಾತ್ರ ಧರ್ಮದ ಹೆಸರಿನಲ್ಲಿ ನಶೆಗೆ ಜೈ ಎನ್ನುತ್ತಾ ಬಲಿಯಾಗುತ್ತಿದ್ದಾರೆ.

ಇವತ್ತು ವಾನಿಯನ್ನು ಹೀರೋ ಮಾಡಿದ್ದೇ ಮೀಡಿಯಾಗಳು. ಮುಖಪುಟ ಮಾಡಿಕೊಳ್ಳುವ ಹರಕತ್ತು ಯಾರಿಗೆ ಯಾಕಿತ್ತು..? ಇದರಿಂದ ಸುಲಭವಾಗಿ ಲಭ್ಯವಾಗೋ ಪ್ರಚಾರ ಎಂಥಾ ಹುಡುಗನನ್ನು ವಾನಿಯಾಗಲು ಪ್ರೇರೇಪಿಸುತ್ತದೆಯೇ ವಿನ: ಏನಿದ್ದರೂ ಮರಾಮೋಸದ ದಾಳಿ, ವ್ಯಾಟ್ಸಾಪ್ ಬಿಲ್ಡಪ್ಪು ವಾನಿಯ ಕಾರ್ಯ ವೈಖರಿಯಾಗಿತ್ತು. ಅವನನ್ನು ನಂಬಿ ಕುರಿಗಳಂತೆ ಕಾಶ್ಮೀರಿಗಳು ಜೈ ಎನ್ನತೊಡಗಿದ್ದಾರಲ್ಲ ಯಾವ ಸಿಂಧೂ ನದಿ ಜಗತ್ತಿಗೆ ಮಾದರಿಯಾಗಿ ಬದುಕು ಕಟ್ಟಿ ನಿಲ್ಲಿಸಿತ್ತೋ, ಅದೇ ನದಿ ನೀರು ಕುಡಿದವರಾ ಇವರೆಲ್ಲಾ ಎನ್ನಿಸುತ್ತಿದೆ. ಇದಕ್ಕೆ ಸರಿಯಾಗಿ ನಮ್ಮಲ್ಲೂ ಇಂತಹ ಎಡವಟ್ಟು ಹೆಣ್ಣುಕ್ರಿಮಿಗಳು ಜಾಲತಾಣದಲ್ಲಿ  ವ್ಯವಸ್ಥಿತವಾಗಿ ಅಂತರಾಷ್ಟ್ರೀಯವಾಗಿ ರಾಜ್ಯವನ್ನೂ ದೇಶವನ್ನೂ ಹರಾಜು ಹಾಕುತ್ತಿವೆ. ಇವರನ್ನು ಹಿಂಬಾಲಿಸುವ ಅತಿ ದೊಡ್ಡ ಜೋಕರ ಪಡೆಗೆ ಇವತ್ತಿಗೂ ಅರ್ಥವಾಗದ್ದು ಎಂದರೆ ಸ್ವಂತದ ಸಂಸಾರ ಕಟ್ಟಿಕೊಳ್ಳದ, ಮನೆಗೆ ಕೋಟೆ ಕಟ್ಟಲಾಗದ ಹೆಂಗಸರು ದಿಡ್ಡಿ ಬಾಗಿಲು ಕಟ್ಟುತ್ತಾರಾ ಎನ್ನುವುದು. ಬದುಕು ಬೇಕು ಎನ್ನುವವರು ಇನ್ನಾದರೂ ಸ್ವಂತ ಬುದ್ಧಿಯಿಂದ ಯೋಚಿಸಿ.

ಆಪರೇಶನ್ ಕೊಕೆರಾಂಗ್…

ಆ ದಿನ 8 ಜುಲೈ. `ಬೂಮ್ದೂರಾ’ ಎನ್ನುವ ಹಳ್ಳಿಗೆ ಬಂದೂಕು,ಮದ್ದು ಗುಂಡುಗಳ ಪೂರೈಕೆಯ ಮಾತುಕತೆಗಾಗಿ ವಾನಿ ಬರುವವನಿದ್ದ ಎನ್ನುವುದನ್ನು ತುಂಬ ನಿಖರವಾಗಿ ಫೋಲಿಸರಿಗೆ ಟಿಪ್ಸು ಸಿಕ್ಕಿತ್ತು. ಅಸಲಿಗೆ ಈ ಸಂಘಟನೆಗಳಲ್ಲೇ ಸಾಕಷ್ಟು ಹಾಕ್ಯಾಟಗಳಿವೆ. ಮೇಲ್ನೊಟಕ್ಕೆ ಎಲ್ಲರೂ ತಬ್ಬಿಕೊಂಡು ಫೋಸು ಕೊಡುವವರೇ ಆದರೂ ಬರ್ಹಾನ ವಾನಿ ತಲೆಗೆ ಹತ್ತು ಲಕ್ಷ ಘೋಷಣೆ ಆಗಿದ್ದೆ ಅವನ ತಲೆ ತಿರುಗಿಸಿತ್ತು. ಸ್ವತ: ಒಬ್ಬ ಕಮಾಂಡರ್ ಎಂದು ಘೋಷಿಸಿಕೊಂಡು ಆವತ್ತೇ ತನ್ನ ಗೋರಿ ತೋಡಿಕೊಂಡಿದ್ದ. ತಲೆದಂಡದ ಇನಾಮು ವಾನಿಯ ಲೆವೆಲ್ಲು ಏರಿಸಿದಂತೆ ಆಗಿತ್ತು. ಆದರೆ ಇದೂ ಒಂದೂ ಸೈನಿಕ ಪಡೆಗಳ ಸ್ಟ್ರಾಟಜಿ, ಹೀಗೆ ಒಬ್ಬನನ್ನು ಅವರದ್ದೇ ತಂಡದಿಂದ ಐಸೋಲೇಟ್ ಮಾಡಿ ಬಿಡುವ ತಂತ್ರಗಾರಿಕೆ ಪಡೆಗಳಿಗಲ್ಲದೇ ಇನ್ನಾರಿಗೆ ಬರುತ್ತೆ. ಪತ್ತೇನೆ ಆಗದಂತೆ ಟಿಪ್ಸು ಕೊಟ್ಟು ದುಡ್ಡು ಹೊಡೆಯುವವರು ಮಗ್ಗುಲಲ್ಲೇ ಇರುತ್ತಾರೆನ್ನುವುದು ಅರಿವಾಗದೇ ಹೋದುದೇ ಅವನ ಪೆದ್ದುತನಕ್ಕೆ ಸಾಕ್ಷಿ. ಇಲ್ಲದಿದ್ದರೆ ತನ್ನದಲ್ಲದ ಸಿಮ್ ಕಾರ್ಡು, ಇನ್ಯಾರದ್ದೋ ಫೋನು, ಯಾರದೋ ಮನೆಯ ಲ್ಯಾಂಡ್‍ಲೈನು, ಇನ್ಯಾರದ್ದೋ ಕ್ಯಾಮೆರಾ ಹೀಗೆ ತಂತ್ರಗಾರಿಕೆ ಬಳಸಿ ಕದ್ದು ಬದುಕುತ್ತಿದ್ದ ವಾನಿಯ ನೆಲೆಗೆ ಕೈಯಿಕ್ಕುವುದಾದರೂ ಹೇಗೆ ಸಾಧ್ಯವಿತ್ತು..? ಕೂಡಲೇ ಕಾರ್ಯಾಚರಣೆಗೆ ಇಳಿದ ರಾಷ್ಟ್ರೀಯ ರೈಫಲ್ಸ್ ಕೊಕೆರಾಂಗ್‍ನಿಂದ ಬೂಮ್ದರಾ ಸುತ್ತಲೂ ಕೂಂಬಿಗ್ ಮಾಡಿದೆ. ಕೇಳಿದವರಿಗೆ ಮು.ಮ. ಬರುತ್ತಾರೆ ಎಂದು ತನ್ನ ದಾರಿ ಸುಗಮಗಳಿಸಿಕೊಂಡು ಮನೆಯನ್ನು ಸುತ್ತುವರೆದು ಪೆÇಸಿಶನ್ ತೆಗೆದುಕೊಂಡಿದೆ.

ಯಾವಾಗ ಮನೆ ಹೈಜಾಕ್ ಆಯಿತೋ ಹೊರಗಡೆ ಒಂದಿಪ್ಪೈತೈದು ಜನ ತಲೆ ಮಾಸಿದ ಹುಡುಗರು ಫೋಲಿಸರ ಮೇಲೆ ನಿರಂತರವಾಗಿ ಕಲ್ಲೆಸೆಯುತ್ತಾ ಕಾರ್ಯಾಚರಣೆಗೆ ಅಡ್ಡಿಪಡಿಸಿವೆ. ಆದರೆ ಅವರನ್ನು ಕೇವಲ ಮೂರೇ ಮೂರು ಜನ ಫೋಲಿಸರು ಲಾಠಿ ಬೀಸಿ ನಿಭಾಯಿಸಿದ ಪರಿಯಿದೆಯಲ್ಲ ಅದು ನೆನೆಸಿಕೊಂಡರೇನೆ ಮೈ ಜುಂ ಎನ್ನುತ್ತದೆ. ಇತ್ತ ಮನೆಯನ್ನು ಕವರ್ ಮಾಡಿ ಒಂದು ಕಡೆಯಿಂದ ಫೈರಿಂಗ್ ಆರಂಭಿಸಿದ ಪಡೆಯ ಹೊಡೆತಕ್ಕೆ ಚೆಕ್ಕು ಚೆದುರಿ ಹೋದ ಮೂವರೂ ಬಿಲದಿಂದ ಈಚೆ ಬಂದಿದ್ದಾರೆ. ಮರು ಉತ್ತರಿಸುವ ಮೀಟರೂ ಉಳಿದಿರಲಿಲ್ಲ. ಅಗಾಧ ಗದ್ದೆಯ ಸುತ್ತ ಮರೆಗಳಲ್ಲಿ ಯಮದೂತನಂತೆ ಸೈನಿಕರು ಕಾಯುತ್ತ ನಿಂತಿದ್ದು ವಾನಿಯ ಬುಡ ಒದ್ದೆಯಾಗಿಸಿದೆ. ಹೇಡಿಯಂತೆ ಸಹಚರರನ್ನು ಮುಂದಕ್ಕೆ ಬಿಟ್ಟು ಕಾಲ್ಕಿಳಲು ಯತ್ನಿಸಿದ್ದಾನೆ. ಇಂತಹದ್ದನ್ನು ನಮ್ಮ ಸೈನಿಕರು ಅದೇಷ್ಟು ನೋಡಿದ್ದಾರೋ..? ಇಬ್ಬರನ್ನು ಬದುವಿನ ಮೇಲೆ ಮಕಾಡೆ ಮಲಗಿಸಿ ಕಣ್ಣು ಅದುರಿಸದೇ ನಿಂತು ಮೂರನೆಯ ಮಿಕ ಈಚೆ ಬರುತ್ತಿದ್ದಂತೆ ಹೊಸಕಿ ಹಾಕಿದ್ದಾರೆ. ಮೂರೇ ರೌಂಡಿನ ಗುಂಡಿನ ಮೊರೆತದಲ್ಲಿ ಆಪರೇಶನ್ ಫಿನಿಷ್.

ನೀವು ನಮ್ಮ ಸೈನಿಕರ ದಮ್ಮಿಗೆ ಸೆಲ್ಯೂಟ್ ಹೊಡೆಯಲೇಬೇಕು. ಕೇವಲ ಮೂರೇ ಮೂರು ಜನ ಲಾಠಿ ಹಿಡಿದು ಸೇರಿದ್ದವರನ್ನು ಇಪ್ಪತ್ತೈದು ಮೀಟರ್ ದೂರ ತಳ್ಳಿಕೊಂಡು ಹೋದ ಫೋಲಿಸರು ಒಂದೇ ಒಂದು ಜೀಪಿನ ಸಹಕಾರದಲ್ಲಿ ನಿರಂತರ ಕಲ್ಲೇಟನ್ನು ತಿನ್ನುತ್ತಾ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಮನಸ್ಸು ಮಾಡಿದ್ದರೆ ಅದರಲ್ಲೂ ಹತ್ತಿಪ್ಪತ್ತು ಹುಡುಗರನ್ನು ಹೊಡೆದು ಕೆಡುವುದು ಫೋಲಿಸರಿಗೆ ದೊಡ್ಡ ವಿಷಯವೇ ಆಗಿರಲಿಲ್ಲ. ಇದರ ವಿಡಿಯೋ ನನ್ನ ಬಳಿ ಇದೆ. ಸಾರ್ವಜನಿಕವಾಗಿಯೂ ಲಭ್ಯವಿದೆ. ಭಾರತಾಂಬೆಯ ನೆಲ ತಾಯಗಂಡನೊಬ್ಬನ ನೆತ್ತರನಿಂದ ಅಪವಿತ್ರವಾಗಿದೆ. ಅದನ್ನು ತೊಳೆದು ಹಾಕಬಹುದು. ಆದರೆ ಇಲ್ಲೆ ಇದ್ದು ಅಪವಿತ್ರ ಮೈತ್ರಿ ಮಾಡಿಕೊಳ್ಳುತ್ತಾ ಸಮಾಜ, ನೆಲ ಎರಡನ್ನೂ ಅನೈತಿಕ ಮಾಡುತ್ತಿರುವ ಎಬುಜೀ ಹೆಂಗಸರ ಮಂಡೆ ತೊಳೆಯುವುದು ಹೇಗೆ..?

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post