X

ನಿನ್ನ ಹಾಡು-ನಿನ್ನ ದಾರಿ

ಕನವರಿಸಿದೆ ನೀ ಬರೆದಿಟ್ಟ

ಹಳೆಯ ಹಾಡೊಂದನು,

ಅನುಕರಿಸುವೆ ನೀ ಬಿಟ್ಟು

ನಡೆವ ಎಲ್ಲಾ ದಾರಿಗಳನು…

 

ಹಾಡಿಂದು ಹೊಸ ರಾಗ ಸೇರಿ

ಸ್ವರ ತೂಗಿ,

ಲೋಕವೇ ಗುನುಗುನಿಸಲು

ಕಳೆದ ಭಾವದಾ ಛಾಯೆಯಿಲ್ಲ..

 

ಕಾಮಗಾರಿಯಾಗಿ ನವೀಕರಿಸಿದ

ಹಾದಿಗಳಿವು, ನವ ರೂಪ ಪಡೆದು

ನೀ ಸಾಗಿದ ದಿಕ್ಕುಗಳ ಗುಟ್ಟು ಬಿಡುತಿಲ್ಲ..

 

ಏನಾದರೂ ಹಳೇ ಹಾಡಿನ ಸಾಹಿತ್ಯ ಮರೆತಿಲ್ಲ

ನಿನ್ನ ಹೆಜ್ಜೆಗಳ ಸಪ್ಪಳವು

ಈ ಮನಕೆ ಧ್ವನಿಸದೆ ಇರಲಿಲ್ಲ…!!

 

ಚಿತ್ರ ಕೃಪೆ : ಅಂತರ್ಜಾಲ

#ಪರಿವರ್ತನ

 

ರಾಣಿ ಪಿ.ವಿ

rani.pv92@gmail.com

Facebook ಕಾಮೆಂಟ್ಸ್

Team readoo kannada:
Related Post