X

ಕೇರಳಕ್ಕಿಂದು ತುರ್ತಾಗಿ ಬೇಕಿರುವುದು ಕಮ್ಯೂನಿಷ್ಟರಿಂದ ಮುಕ್ತಿ..

ಘಟನೆ ಒಂದು:

          ಅಂದು ಶ್ರೀಕೃಷ್ಣ ಜನ್ಮಾಷ್ಟಮಿ. ಅಲ್ಲಿ ರಾಧಾಕೃಷ್ಣ, ಯಶೋದೆಯರ ವೇಷ ಧರಿಸಿದ ಮಕ್ಕಳ ಮೆರವಣಿಗೆ ಸಾಗುತ್ತಿತ್ತು. ಜೊತೆಗೆ ಮಾತೆಯರ ಸಂಖ್ಯೆಯೂ ಸಾಕಷ್ಟಿತ್ತು. ಹಿನ್ನಲೆಯಲ್ಲಿ ಭಕ್ತಿಗೀತೆಗಳು ಮೆಲುದನಿಯಲ್ಲಿ ಕೇಳಿ ಬರುತ್ತಿತ್ತು. ಎಲ್ಲದಕ್ಕೂ ಪೋಲಿಸರ ಅನುಮತಿಯಂತು ಉತ್ಸವ ಸಮತಿ ತೆಗೆದುಕೊಂಡಿತ್ತು. ಮಕ್ಕಳೂ, ಹೆಂಗಸರೇ ಜಾಸ್ತಿ ಇದ್ದ ಮೆರವಣಿಗೆಯಲ್ಲಿ ಬೇರೆ ಮತಧರ್ಮಗಳ ವಿರುದ್ಧವಾದ ಘೋಷಣೆಗಳು ದೂರದ ಮಾತು. ಆದರೂ ಅಲ್ಲೇ ಇದ್ದ ಮಾರ್ಕಿಸ್ಟರ ಗುಂಪು ತಮ್ಮ ಕೆಂಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿತ್ತು. ಭಕ್ತಿಗೀತೆ ಹಾಕಿಕೊಂಡು ಹೋಗುತ್ತಾ ಇದ್ದ ವಾಹನಕ್ಕೆ ದಾರಿಯನ್ನೂ ಬಿಡಲಿಲ್ಲ. ಕೊನೆಗೆ ಪೋಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಿಳಿಯಾಯಿತು.

ಘಟನೆ ಎರಡು:

          ಗಣೇಶ ಚತುರ್ಥಿಯ ಮೆರವಣಿಗೆ ಶಾಂತುಯುತವಾಗಿ ನಡೆಯುತ್ತಿತ್ತು. ವಿರುದ್ಢ ದಿಕ್ಕಿನಿಂದ ಕಮ್ಯೂನಿಷ್ಟ್ ಬೆಂಬಲಿಗರ ಪ್ರತಿಭಟನಾ ಮೆರವಣಿಗೆ ಕೂಡ ಬರುತ್ತಿತ್ತು. ಸಹಜವಾಗಿ ಮೆರವಣಿಗೆಯ ಮೆರವಣಿಗೆಯ ನೇತೃತ್ವ ಹಿಂದೂಪರ ಸಂಘಟನೆಗಳದ್ದೇ ಆಗಿತ್ತು. ಮಾರ್ಕಿಸ್ಟರ ಘೋಷಣೆಗಳು, ಹಿಂದೂಪರ ಸಂಘಟನೆಗಳ ಹಾಗೂ ಪ್ರಧಾನಿ ಮೋದಿಜಿಯವರ ಕುರಿತಾಗಿ ಕೀಳುಮಟ್ಟದಲ್ಲಿ ಬೈಯುವವರೆಗೆ ತಲುಪಿತು. ಇದನ್ನ ಆಕ್ಷೇಪಿಸಿದ ಕೆಲ ಯುವಕರ ಮೇಲೆ ಕಮ್ಯೂನಿಷ್ಟರ ಗುಂಪು ಆಕ್ರಮಣ ನಡೆಸಿತು. ಸದ್ಯ ಹಲ್ಲೆಗೊಳಗಾದ ಯುವಕರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿ ಎಲ್ಲರ ಮನದಲ್ಲಿ ಮೂಡುವ ಪ್ರಶ್ಣೆ ಏನೆಂದರೆ ಗಣೇಶ ಚತುರ್ಥಿಯ ಮೆರವಣಿಗೆಗೆ ಸುಮಾರು ಒಂದು ತಿಂಗಳ ಮೊದಲೇ ಅನುಮತಿ ದೊರಕಿತ್ತು. ಗಲಾಟೆ ಆಗಬಹುದೆಂದು ತಿಳಿದಿದ್ದರೂ,ಅದೇ ಸಮಯಕ್ಕೆ ಪ್ರತಿಭಟನೆ ನಡೆಸಲು ಕಮ್ಯೂನಿಷ್ಟ್ ಬೆಂಬಲಿಗರಿಗೆ ಪ್ರತಿಭಟನೆ ನಡೆಸಲು ಪೋಲೀಸ್ ಇಲಾಖೆ ಅನುಮತಿ ನೀಡಿದ್ದಾದರೂ ಯಾಕೆ..?

         ಇದು ಕೇರಳದಲ್ಲಿ ಸದ್ಯ ಹಿಂದುಗಳ ಮೇಲೆ ತಾವು ಜಾತ್ಯಾತೀತವಾದಿಗಳು, ಎಲ್ಲಾ ಮತ-ಧರ್ಮಗಳು ಸಮಾನ, ಎಲ್ಲಾ ದೇವರುಗಳು ಒಂದೇ ಎಂದು ವೇದಿಕೆಯಲ್ಲಿ ಗಂಟಲು ಹರ್ಕೊಳ್ಳೋ, ಮಾತೆತ್ತಿದರೆ ಸಮಾನತೆ ಬಗ್ಗೆ ಭಾಷಣ ಕೊಚ್ಚಿಕೊಳ್ಳುವ ಕಮ್ಯೂನಿಷ್ಟ್’ವಾದಿಗಳು ಹಿಂದುಗಳ ಜೊತೆ ನಡೆದುಕೊಳ್ಳುತ್ತಿರುವ ರೀತಿ. ಇದರಲ್ಲಿ ವಿಷಾದ ಸಂಗತಿ ಏನೆಂದರೆ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು, ತಮ್ಮ ಮಕ್ಕಳನ್ನ ವಿಧ್ಯಾಭ್ಯಾಸಕ್ಕೆ ಕಳುಹಿಸೋವಾಗ ಇದೇ ಜಾತಿ ಕಾಲಮ್ ನಲ್ಲಿ “ಹಿಂದು” ನಮೂದಿಸಲು ಯಾವ ತಕರಾರು ಕೂಡ ಇಲ್ಲ, ನಾಚಿಕೆಯೂ ಆಗೋದಿಲ್ಲ.ಕೆಲ ದಿನಗಳ ಹಿಂದೆ, ಚೌತಿಗೆ ಇನ್ನೆರಡು ದಿನ ಮಾತ್ರ ಉಳಿದಿತ್ತು. ಕಣ್ಣೂರಿನ ತಿಲ್ಲಂಕೇರಿ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನ ಕಗ್ಗೊಲೆಯಾಯಿತು. ಅದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಕಣ್ಣೂರು ಜಿಲ್ಲೆಯೊಂದರಲ್ಲೇ 1969 ರಿಂದ ಮಾರ್ಕಿಸ್ಟರ ರಕ್ತದಾಹಕ್ಕೆ ಬಲಿಯಾದ ಜನಗಳ ಸಂಖ್ಯೆ 150ಕ್ಕೂ ಹೆಚ್ಚು. ಕೈಕಾಲು ಕಳಕೊಂಡು ಅಂಗಹೀನರಾದವರ ಸಂಖ್ಯೆ ಇನ್ನೂ ಹೆಚ್ಚು.

         ಇನ್ನು ಕೇರಳದ ದುರದೃಷ್ಟವೆಂದರೆ ಈಗ ಕೇರಳವನ್ನು ಆಳುತ್ತಿರುವ ಕಮ್ಯೂನಿಷ್ಟ್ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಂದು ಕಣ್ಣೂರಿನಲ್ಲಿ ನಡೆದ ಮೊದಲ ರಾಜಕೀಯ ಕೊಲೆಯ(ವಾಡಿಕಲ್ ರಾಮಚಂದ್ರನ್ ಕೊಲೆಯ) ಆರೋಪಿ..! ಐದು ವರ್ಷಗಳಿಗೊಮ್ಮೆ ಎಡರಂಗ(LDF)ದಿಂದ ಬಲರಂಗ(UDF)ಕ್ಕೆ, ಬಲರಂಗ(UDF)ದಿಂದ ಎಡರಂಗ(LDF)ಕ್ಕೆ ರಾಜ್ಯದ ಜನಾದೇಶ ಸಿಗುವುದು ಈವರೆಗೆ ನಡೆದುಕೊಂಡು ಬಂದ ಕೇರಳದ ಅಲಿಖಿತ/ ಅಘೋಷಿತ ನಿಯಮ. ಅದೇ ರೀತಿ ಈ ಬಾರಿ ಎಡರಂಗ ಅಧಿಕಾರಕ್ಕೇರಿದೆ. ಬಲರಂಗ ವಿರೋಧಪಕ್ಷ ಸ್ಥಾನದಲ್ಲಿದೆ. ಭಾ.ಜ.ಪ(BJP) ಕ್ಕೆ ಒಂದು ಸ್ಥಾನ ಗಳಿಸುವ ಮೂಲಕ ಕೇರಳದಲ್ಲಿ ತನ್ನ ಖಾತೆ ತೆರೆದಿದೆ. ಕಮ್ಯೂನಿಷ್ಟರ ಈ ಸರಕಾರ ಹಿಂದುಗಳ ದಮನವೇ ತಮ್ಮ ಮುಖ್ಯ ಗುರಿಯೇನೋ ಎಂಬಂತೆ ವರ್ತಿಸುತ್ತಿದೆ. ಚುನಾವಣೆಯಲ್ಲಿ ಗೆದ್ದಿರುವ ಮದದಿಂದ ವರ್ತಿಸಿದ ಈ ಕಮ್ಯೂನಿಷ್ಟರು ಚುನಾವಣಾ ಫಲಿತಾಂಶ ಬಂದ ಎರಡೇ ದಿನಕ್ಕೆ ಮುಖ್ಯಮಂತ್ರಿಗಳ ಊರು ಪಿಣರಾಯಿಯಲ್ಲಿ ಕಮ್ಯೂನಿಷ್ಟ್ ಪಕ್ಷ ತೊರೆದು ಭಾ.ಜ.ಪ ಸೇರಿದ್ದ ಹಲವಾರು ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿತ್ತು. ಅದರಲ್ಲಿ ಮುಖ್ಯಮಂತ್ರಿಯ ಸೋದರ ಸಂಬಂಧಿಯ ಮನೆಯೂ ಸೇರಿತ್ತು. ಅದಾವ ಪರಿಯಲ್ಲಿ ದಾಳಿಯಾಗಿತ್ತೆಂದರೆ ಮನೆಗೆ ನುಗ್ಗಿ ಹೆಂಗಸರೂ ಮಕ್ಕಳೂ ಎಂಬ ಬೇಧಭಾವವಿಲ್ಲದೆ ಉಪಟಳ ನೀಡಲಾಗಿತ್ತು. ಮನೆಗೆ ನುಗ್ಗಿ ಪೀಠೋಪಕರಣಗಳನ್ನೂ ಧ್ವಂಸಗೊಳಿಸಿ, ವಾಹನಗಳಿಗೆ ಹಾನಿಗೈಯ್ಯಲಾಗಿತ್ತು. ಆ ಘಟನೆ ಮಾಸುವ ಮುನ್ನ ತೃಶ್ಶೂರ್ ಜಿಲ್ಲೆಯಲ್ಲಿ ಚುನಾವಣೆಗೆಂದು ಬಂದಿದ್ದ, ದುಬೈಯಲ್ಲಿ ಉದ್ಯೋಗಿಯಾಗಿದ್ದ ಭಾ.ಜ.ಪ ಕಾರ್ಯಕರ್ತ ಪ್ರಮೋದ್ ಎಂಬಾತ ಮಾರ್ಕಿಸ್ಟರ ಆಕ್ರಮಣಕ್ಕೆ ಬಲಿಯಾಗಿದ್ದ.

         ಇದೀಗ ಕೇರಳ ಸರಕಾರ ಹೊಸದೊಂದು ಘೋಷಣೆಯನ್ನ ಹೊರಡಿಸಿದೆ. ಓಣಂ ಹಬ್ಬವನ್ನು ಸರಕಾರಿ ಕಛೇರಿಗಳಲ್ಲಿ, ಸರಕಾರಿ ಶಾಲಾ ಕಾಲೇಜುಗಳಲ್ಲಿ ಆಚರಿಸುವಂತಿಲ್ಲವಂತೆ. ಹಾಗೇನಾದರೂ ಆಚರಿಸುವುದಿದ್ದರೂ ಕಛೇರಿಯ ಆರಂಭಕ್ಕಿಂತ ಮೊದಲು ಯಾ ನಂತರ ಅಥವಾ ಮಧ್ಯಾನ್ಹದ ಊಟದ ವಿರಾಮದ ವೇಳೆಯಲ್ಲಿ ಆಚರಿಸಬೇಕಂತೆ. ಇದು ಯಾಕಾಗಿ ಎಂದರೆ ಕಛೇರಿಯ ಸಮಯವನ್ನು ವ್ಯರ್ಥ ಮಾಡಬಾರದೆಂಬ ಉದ್ದೇಶಕ್ಕಂತೆ. ಅದೂ ಅಲ್ಲದೆ ದೀಪ ಪ್ರಜ್ವಲನೆ ಮಾಡಬಾರದಂತೆ. ಯಾಕೆಂದರೆ ದೀಪ ಪ್ರಜ್ವಲನೆ ಮಾಡಿದರೆ ಉಳಿದ ಧರ್ಮಗಳ ಭಾವನೆ ಧಕ್ಕೆ ಬರುವುದೆಂದು ಇವರ ಅಂಬೋಣ. ಈ ಸುತ್ತೋಲೆಯನ್ನು ಹೊರಡಿಸಿದ ನಂತರ ಇದೇ ರಾಜ್ಯ ಸರಕಾರ ಸೆ.೨ನೇ ತಾರಿಕಿನಂದು ನಡೆದ ಭಾರತ್ ಬಂದ್’ಗೆ ಸಂಪೂರ್ಣ ಬೆಂಬಲವನ್ನು ನೀಡಿತ್ತು. ಆ ಸಂದರ್ಭದಲ್ಲಿ ಇವರಿಗೆ ಕಛೇರಿಯ ಸಮಯ/ಸರಕಾರೀ ಸಮಯ ವ್ಯರ್ಥವಾಗುತ್ತಿದೆ ಅಂತ ಅನ್ನಿಸಲೇ ಇಲ್ಲ. ಇನ್ನೂ ಮಜವಾದ ಸಂಗತಿಯೆಂದರೆ ಮಾನ್ಯ ಮುಖ್ಯಮಂತ್ರಿಗಳು ದಿಲ್ಲಿಯಲ್ಲಿ ತಮ್ಮ ಮಂತ್ರಿಮಂಡಲದವರ ಜೊತೆ ರಾಷ್ಟಪತಿಯವರ ಸಮ್ಮುಖದಲ್ಲಿ ಓಣಂ ಆಚರಿಸ ಹೊರಟಿದ್ದಾರೆ(ಸೆ.12ರಂದು). ಈ ಸಂದರ್ಭದಲ್ಲಿ ಸರಕಾರಿ ಸಮಯ ವ್ಯರ್ಥವಾಗೋದಿಲ್ವ? ನಿಮಗೊಂದು ಜನಸಾಮಾನ್ಯರಿಗೊಂದು ನಿಯಮವಾ ಮಹಾಸ್ವಾಮಿಗಳೇ.? ಮುಸ್ಲಿಂ ಸಮುದಾಯದವರು ಸುಮಾರು ಒಂದು ತಿಂಗಳುಗಳ ಕಾಲ ಆಚರಿಸುವ ರಂಜಾನ್ ಮಾಸದಲ್ಲಿ ಉಪವಾಸದ ಸಂದರ್ಭದಲ್ಲಿ ಅದೆಷ್ಟೋ ಜನ ಸರಕಾರಿ ಉದ್ಯೋಗಿಗಳು ನಮಾಜಿನ ನೆಪದಲ್ಲಿ, ಉಪವಾಸದ ನೆಪದಲ್ಲಿ ಮನೆಗೆ ಬೇಗ ಹೋಗುವುದು, ಕಛೇರಿಯ ಸಮಯದಲ್ಲಿ ನಮಾಜಿಗೆ ಹೋಗುವುದನ್ನ ಕಣ್ಣಾರೆ ಕಂಡಿದ್ದೇನೆ. ಆದರೆ ಇದನ್ನ ಪ್ರಶ್ನಿಸಲು ಎಡ-ಬಲರಂಗಗಳಾಗಲೀ ಕಾರ್ಯಕರ್ತರಾಗಲೀ, ಸರಕಾರಗಳಾಗಲೀ ಹೋಗುವುದೇ ಇಲ್ಲ. ಇಲ್ಲಿ ಸಮಯ ವ್ಯರ್ಥವಾಗೋದು ಇವರುಗಳಿಗೆ ಕಾಣುವುದೇ ಇಲ್ಲ. ತಮ್ಮ ಅಲ್ಪಸಂಖ್ಯಾತ ವೋಟ್ ಬ್ಯಾಂಕ್’ನ್ನು ಕಳಕೊಳ್ಳುವ ಭಯವಲ್ಲದೆ ಮತ್ತಿನ್ನೇನು.?

         ಇದಲ್ಲದೆ ಹೊಸದೊಂದು ನಿಯಮವನ್ನು ರೂಪಿಸಲು ಕೇರಳದ ’ಘನ’ ಸರಕಾರ ಹೊರಟಿದೆ. ದೇವಸ್ವಂ ಬೋರ್ಡ್ ಹಾಗೂ ಸರಕಾರದ ಅಧೀನದಲ್ಲಿ ಬರುವ ಯಾವುದೇ ದೇವಸ್ಥಾನಗಳ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳನ್ನು ನಡೆಸುವಂತಿಲ್ಲ ಹಾಗೂ ದೇವಾಲಯಗಳಲ್ಲಿ ಆಯುಧಗಳಿಗೋಸ್ಕರ ಪರಿಶೀಲನೆಯನ್ನು ಕೂಡ ನಡೆಸಬೇಕು ಎನ್ನುವಂತಹ ಒಂದು ನಿಯಮವನ್ನು ರೂಪಿಸಲು ಮುಂದಾಗಿದೆ. ಇಂದು ಕೇರಳಕ್ಕಾಗಲಿ, ಭಾರತಕ್ಕಾಗಲಿ ದೊಡ್ಡ ತಲೆನೋವಾಗಿ ಪರಿಣಮಿಸಿರೋದು ಅಲ್ಲ. ಕೇರಳ ಅಂದ ತಕ್ಷಣ ಒಂದು ಮುಖವನ್ನ ಒಂಥರಾ ಮಾಡ್ಕೊಂಡು ನೋಡುವ ಜನ ಹಾಗೂ ಸಂಶಯ ದೃಷ್ಟಿಯನ್ನು ಬೀರುವ ಜನ ಹೊರರಾಜ್ಯಗಳಲ್ಲಿ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ನೀವು ಪರೋಕ್ಷವಾಗಿ ಕಾಳು ಹಾಕಿ ಸಾಕಿದ ಜಿಹಾದಿಗಳೇ ಹೊರತು ಆರ್.ಎಸ್.ಎಸ್ ಅಲ್ಲ. ಇಂದು ಕೇರಳ ರಾಜ್ಯ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಐಸಿಸ್ ಉಗ್ರ ಚಟುವಟಿಕೆ, ಲವ್ ಜಿಹಾದ್ ಮುಂತಾದ ಸಮಾಜದ್ರೋಹಿ ಚಟುವಟಿಕೆಗಳಿಂದ. ಸಾಧ್ಯವಾದರೆ ಭಾರತದ ಅನ್ನ ತಿಂದು ಭಾರತದ ವಿರುದ್ಧವೇ ಧರ್ಮಯುದ್ಧ ಸಾರುತ್ತಾರಲ್ಲ ಅಂತಹ ಮೂಲಭೂತವಾದಿಗಳನ್ನ ಮಟ್ಟ ಹಾಕಿ. ತಾಕತ್ತಿದ್ದರೆ ಮದ್ರಸಗಳಲ್ಲಿ ಏನನ್ನ ಹೇಳಿ ಕೊಡುತ್ತಿದ್ದಾರೆ ಅನ್ನೋದನ್ನ ಪರಿಶೀಲಿಸಿ. ಲ್ಯಾಂಡ್ ಜಿಹಾದ್, ಲವ್ ಜಿಹಾದ್, ಸೆಕ್ಸ್ ಜಿಹಾದ್ ಮೂಲಕ ಉಗ್ರರಿಗೆ ಸಹಾಯ ಮಾಡುತ್ತಿರುವ ಸಮಾಜ ವಿರೋಧಿಗಳನ್ನು ಮಟ್ಟ ಹಾಕಿ.

ಕಮ್ಯೂನಿಸಂ ಮತ್ತು ಕಮ್ಯೂನಿಷ್ಟ್ ಬೇರೆ ಬೇರೆ ಎಂದು ವಾದಿಸುವ ಕೆಲವು ಅರೆಬೆಂದ ಬುದ್ದಿಜೀವಿಗಳೂ ಹಿಂದೂಗಳ ಮೇಲಾಗುವ ದಬ್ಬಾಳಿಕೆಯನ್ನು ಒಳಗೊಳಗೇ ಕಂಡು ಖುಷಿ ಪಡುತ್ತಿದ್ದಾರೆಯೇ..?ಮಾನವತಾವಾದವನ್ನು ಮಾತೆತ್ತಿದರೆ ಬೋದಿಸುವ ಮಾರ್ಕ್ಸಿಸ್ಟರಿಗೆ ಕಾಶ್ಮೀರದ ಮುಗ್ದಜೀವಗಳು ಮಾನವರಂತೆ ಕಂಡಿಲ್ಲವೇಕೆ? ಕಣ್ಣೂರಿನ ಯುವಕರು ಹಾಗೂ ಮಾರಾಡ್’ನಲ್ಲಿ ಹತ್ಯೆಗೀಡಾದವರು ಯಾಕೆ ಮಾನವರಾಗಿ ಕಾಣಲಿಲ್ಲಾ?

         ರಶ್ಯಾದಲ್ಲಿ ಜನ್ಮ ತಳೆದ ಕಮ್ಯೂನಿಸಂ ರಶ್ಯಾದವರಿಗೇ ಬೇಡ,ಪಶ್ಚಿಮ ಬಂಗಾಳದಲ್ಲಿ ನಡೆಸಿದ ಹಿಂಸೆಗಳನ್ನು ನೋಡಿ ಅಲ್ಲಿಯೂ ಜನ ದಿಕ್ಕರಿಸಿದರೆ,ಕೇರಳದಲ್ಲೇಕೆ ಸ್ಥಿತಿ ಬದಲಾಗಲಿಲ್ಲಾ.ಇಬ್ಬರ ಜಗಳ ಮೂರನೆಯವನಿಗೆ ಲಾಭವೆಂಬಂತೆ ಪರಿಸ್ಥಿತಿಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಸ್ವಾಭಿಮಾನ ಬಿಟ್ಟು ಹಿಂಸೆಯನ್ನು ಪ್ರಚೋದಿಸುವವರೊಂದಿಗೆ ಅಹಿಂಸೆಯ ನಾಯಕನನ್ನು ನಂಬಿದ ಪಕ್ಷಗಳು ಕೈಜೋಡಿಕೊಂಡಿವೆಯೇ.?

          ಇಂದು ಕೇರಳಕ್ಕೆ ತುರ್ತಾಗಿ ಬೇಕಿರುವುದು ಹಳಸಿ ಹೋದ ಮಾರ್ಕಿಸ್ಟ್ ವಾದದ ಮೂಲಕ ಜನರನ್ನ ಬೆದರಿಸಿ, ಜನರ ಮನಸ್ಸಲ್ಲಿ ಭಯ ಹುಟ್ಟಿಸಿ ಆಡಳಿತ ನಡೆಸುತ್ತಿರುವ ಕಮ್ಯೂನಿಷ್ಟರಿಂದ ಮುಕ್ತಿ. ಕೆಂಪು ಬಾವುಟದ ಅಧಿಕಾರಶಾಹಿಗಳ, ಶಕ್ತಿಯನ್ನು ಅವರಲ್ಲಿರುವ ವಿಷಮಯ ಚಿಂತನೆಗಳನ್ನು ನಿರ್ಮೂಲನೆ ಮಾಡಿದರೆ ಮುಸ್ಲಿಂ ಮೂಲಭೂತವಾದವೂ ಕಮ್ಮಿಯಾಗುತ್ತದೆ ಹಾಗೂ ಇವರಿಬ್ಬರ ನಡುವೆ ತಮ್ಮ ಬೆಣ್ಣೆಯ ಮಾತಿನಿಂದ, ನಮ್ಮವರ ಮುಗ್ಧತೆಯನ್ನ ಉಪಯೋಗಿಸಿ ತಮ್ಮ “ವಿಶ್ವಾಸಿಗಳ” ಸಂಖ್ಯೆಯನ್ನು ಹೆಚ್ಚು ಮಾಡಲು ಕಾಯ್ತಾ ಇರುವ ಕ್ರಿಶ್ಚಿಯನ್ ಮತಾಂತರಿಗಳ ಹಾವಳಿ ಕಮ್ಮಿಯಾಗೋದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಕೇರಳದ ಹಿಂದೂಗಳ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯ ಆಸುಪಾಸು 50% ಗೆ ಇಳಿದಿದೆ. ಕಮ್ಯೂನಿಷ್ಟರಿಂದ ಮುಕ್ತಿ ಸಿಗದಿದ್ದರೆ ದೇವಾಲಯಗಳಿಂದಾಗಿ, ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿ “ದೇವರ ಸ್ವಂತನಾಡು” ಎಂದು ಪ್ರಸಿದ್ಧಿ ಹೊಂದಿರುವ ಕೇರಳ ಮತ್ತೊಂದು ಕಾಶ್ಮೀರವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ

-ಶ್ಯಾಮ್ ಕಶ್ಯಪ್ ವಳಕ್ಕುಂಜ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post