ಗರಿ ಗರಿ ಇಸ್ತ್ರಿ ಹಾಕಿದ ಅಂಗಿ
ನೋಡಿ ಅವನ ಗಂಭೀರ ಭಂಗಿ
ಅವನಿನ್ನೂ ಮೀಸೆ ಮೂಡದ ಹುಡುಗ
ಕೈಯಲ್ಲಿ ಮಿಂಚುವ ಚಿನ್ನದ ಖಡಗ
ಕತ್ತಿನಲ್ಲಿ ಬಲು ದಪ್ಪದ ಬಂಗಾರದ ಸರಪಳಿ
ನೋಡಿದವರು ಒಮ್ಮೆಗೆ ಆಗುವರು ಪಿಳಿ ಪಿಳಿ
ಶುದ್ದ ಬಿಳಿಯ ಕಾರು, ಕಪ್ಪು ಕನ್ನಡಕ
ಸುತ್ತ ಜನರಿದ್ರೆ ಅವನಿಗೇನೋ ಪುಳಕ
ಬೆಂಗಳೂರಿನ ಇವತ್ತಿನ ರೈತ ಭಾರಿ ಆಧುನಿಕ
ರಿಯಲ್ ಎಸ್ಟೇಟ್ ಬೆಳೆ ಅವನ ದಿನ ನಿತ್ಯದ ಕಾಯಕ
ವರ್ಷಕ್ಕೆ ಎರಡು ಭಾರಿ ಮಾರಿ ಅದೇ ಜಾಗ
ಹಾಕಿಸುತ್ತಾನೆ ಕೊಂಡವರಿಗೆ ಸಕತ್ತಾಗಿ ಲಾಗ
— ಜಿ. ಪ್ರತಾಪ್ ಕೊಡಂಚ
Facebook ಕಾಮೆಂಟ್ಸ್