X

ಹನಿಗವನಗಳು

೧.ನಲ್ಲನಿಲ್ಲದಿರೆ…
ಮುಂಗುರುಳ
ಕರೆಗೆ
ಓಗೊಡುವ
ನಲ್ಲನಿಲ್ಲದಿರೆ
ಇನ್ನೆಲ್ಲಿಯ
ನಿದಿರೆ…?

೨.ಬರಹ..
ಕಲಹ..ವಿರಹ..
ಇನ್ನೇನಿದೆ ಆಮೇಲೆ?
ಬರೆದದ್ದು ಅವನ
ನೆನಪಿನದೇ ಬರಹ

೩.ಮಿಂಚುಹುಳು..
ನಾನೋ ಯಾವಾಗಲೂ
ನಿನಗಾಗೇ ಕಾಯ್ದವಳು
ನೀನೋ ಆಗಾಗ ಮಿಂಚಿ
ಮರೆಯಾಗುವ ಮಿಂಚು ಹುಳು

೪.ಸೋತವಳು..
ಅಕ್ಷರಗಳಲ್ಲಿ ನಿನ್ನ
ಕಟ್ಟಿ ಹಾಕುವ
ತಾಕತ್ತಿದೆ ನನಗೆ…
ಹೃದಯದಲ್ಲಿ
ಕಟ್ಟಿ ಹಾಕಲು
ಸೋತವಳಿಗೆ..

೫.ಇನಿಯಾ..
ಕನಸಲಿ ಬಂದು
ಮುತ್ತಿಡುವ ಇನಿಯಾ
ಎದುರಲಿ ನಿಂದು
ಮುತ್ತಿಡಲು ಭಯವಾ?

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post