ಕೈಲೊಂದು ಫೋನು, ಜೇಬಿನ ತುಂಬಾ ದುಡ್ಡು ವಾರಕ್ಕೆರಡು ರಜಾ ಇವಿಷ್ಟೇ ನಮ್ಮ ಬದುಕು. ವಾರದ ತುದಿಯಲ್ಲಿ ಅವನ್ಯಾರೋ ಸರ್ಕಾರಿ ಜಮೀನನ್ನೇ ನುಂಗಿ ನೀರ್ಕುಡಿದವ ಕಟ್ಟಿದ ದೊಡ್ಡ ಮಾಲ್’ನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾ ನೋಡಿ ಮನೆಗೆ ವಾಪಸ್ಸಾದರೆ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ ನಮಗೆಲ್ಲ. ನಗಲು ಒಂದು ವೀಕೆಂಡ್ ಬೇಕು,ಊರಲ್ಲಿ ಗದ್ದೆ ಕೆಲಸದಲ್ಲಿ ಸಿಕ್ಕಾಪಟ್ಟೆ ತೊಡಗಿಸಿಕೊಂಡಿರುವ ಅಪ್ಪನ ಮಾತಾಡಿಸಲು ಸಮಯವೇ ಇಲ್ಲ. ಒಂದು ಜೀವನ ಚೌಕಟ್ಟನ್ನು ರೂಪಿಸಿಕೊಂಡು ಅದರಾಚೆ ಹೋಗಲು ಸಣ್ಣ ಪ್ರಯತ್ನವನ್ನೂ ಮಾಡದೇ ಬದುಕುತ್ತಿರುವ ನಮ್ಮದೂ ಒಂದು ಬದುಕೇ? ಹೌದು, ನಮಗೆಲ್ಲ ಪ್ರೇರಣೆಯಾಗುವಂತಹ ಕೆಲಸ ಮಾಡಿದವನೊಬ್ಬನಿದ್ದಾನೆ.ಅವನ ಕಥೆಯನ್ನೇ ನಾನೀಗ ಹೇಳಲು ಹೊರಟಿರುವುದು.
ಒಬ್ಬನೇ ಕಾಡು ಸೃಷ್ಟಿಸಲು ಸಾಧ್ಯವೇ? ಹೀಗೊಂದು ಪ್ರಶ್ನೆಯನ್ನು ಯಾರಿಗಾದರೂ ಕೇಳಿದರೆ ಅವರ ನೇರ ಉತ್ತರ “ಇಲ್ಲ” ಎಂಬುದೇ ಆಗಿರುತ್ತದೆ. ಅದರಲ್ಲೂ ಈಗಿನ ಸೋ ಕಾಲ್ಡ್ ಜನರೇಶನ್ನಿನ ಹೊಸ ತಲೆಗಳನ್ನು ಕೇಳಿದರಂತೂ ಪ್ರಶ್ನೆ ಕೇಳಿದವನಿಗೆ ತಲೆ ಕೆಟ್ಟು ಕೊನೆಗೆ ನಾ ಕೇಳಿದ ಪ್ರಶ್ನೆಯೇ ತಪ್ಪಿರಬೇಕು ಎಂದು ಓಡಿ ಹೋಗುವಂತೆ ಮಾಡಿ ಬಿಡುತ್ತಾರೆ.ಒಬ್ಬನೇ ಒಂದು ಅದ್ಭುತ ಕಾಡು ಸೃಷ್ಟಿಸಿದ್ದಾನೆ ಎಂಬ ಸಾಲು ಓದುತ್ತಲೇ ಮೈ ರೋಮಾಂಚನಗೊಳ್ಳುತ್ತದೆ ಅವನ್ಯಾರು ಎಂದು ಅವನ ಮೇಲೆ ವಿಪರೀತ ಗೌರವ ಬೆಳೆದು ಬಿಡುತ್ತದೆ.ಮರಗಳನ್ನೆಲ್ಲ ಕಡಿದು ಮಾರಾಟ ಮಾಡಿ ಮನೆಯ ಮೇಲೆ ಮನೆಯ ಕಟ್ಟುವವರ ನಡುವೆ ಸಣ್ಣ ಮನೆಯಲ್ಲಿ ಜೀವಿಸುತ್ತಾ ದೊಡ್ಡ ಕಾಡೊಂದನ್ನು ನಿರ್ಮಿಸಿದವನ ಜೀವನವೇ ನಮಗೆಲ್ಲ ಪ್ರೇರಣೆ. ಆ ಪ್ರೇರಣೆಯೇ ‘ಜಾದವ್ ಮೊಲಾಯ್ ಪೇಯಾಂಗ್”.ಅಸ್ಸಾಂನ ಮಜೂಲಿ ಜಿಲ್ಲೆಯ ಅರುಣಾ ಚಾಪ್ರಿ ಎಂಬ ಹಳ್ಳಿಯ ನಿವಾಸಿ ಈ ಮೊಲಾಯ್.ಕಳೆದ ಮೂವತ್ತು ವರ್ಷದಿಂದ ಕಾಡು ಬೆಳೆಸುವ ಕಾರ್ಯದಲ್ಲಿ ಸದಾ ನಿರತನಾಗಿರುವ ಮೊಲಾಯ್,ಕಾಡು ತನಗೆ ಸರ್ವಸ್ವ ಎನ್ನುತ್ತಾನೆ. ಸುಮಾರು 1360 ಎಕರೆಯಷ್ಟು ದೊಡ್ಡ ಅರಣ್ಯ ನಿರ್ಮಿಸಿ ಕಾಯುತ್ತಿರುವ ಮೊಲಾಯ್ ಪ್ರಕೃತಿ ದೇವಿಯ ಹೆಮ್ಮೆಯ ಪುತ್ರ. ಇವತ್ತು ಆ ಕಾಡನ್ನು”ಮೊಲಾಯ್ ಸ್ಯಾಂಕ್ಚುರಿ” ಎಂದು ನಾಮಕರಣ ಮಾಡಲಾಗಿದೆ.ಇವತ್ತು ಆ ಕಾಡಿನಲ್ಲಿ ಐದು ಬೆಂಗಾಲಿ ಹುಲಿಗಳಿವೆ, ಅದೆಷ್ಟೋ ಭಾರತೀಯ ರೈನೋಸಾರ್ಸಗಳು ಬೀಡು ಬಿಟ್ಟಿವೆ,ವಿವಿಧ ಜಾತಿಯ ಸಾವಿರಾರು ಮರಗಳಲ್ಲಿ ವಿರಳ ಜಾತಿಯ ಪಕ್ಷಿಗಳು ವಾಸಿಸುತ್ತಿವೆ,ಒಟ್ಟಿನಲ್ಲಿ ಪ್ರಾಣಿಗಳ ನೆಚ್ಚಿನ ಪ್ರದೇಶವಾಗಿದೆ. ಸುಮಾರು ಮುನ್ನೂರು ಎಕರೆಯಷ್ಟು ಪ್ರದೇಶದಲ್ಲಿ ಬಿದಿರು ಸದಾ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರತೀ ವರ್ಷ ಸುಮಾರು ನೂರು ಆನೆಗಳು ಈ ಅರಣ್ಯಕ್ಕೆ ವಲಸೆ ಬರುತ್ತವೆ ಮತ್ತು ಕಳೆದ ವರ್ಷ ಸುಮಾರು ಹತ್ತು ಮರಿಗಳಿಗೆ ಇದೇ ಅರಣ್ಯದಲ್ಲಿ ಜನ್ಮ ನೀಡಿವೆ ಅಂದರೆ ಅದೆಷ್ಟು ಸಮೃದ್ಧ ಅರಣ್ಯವಾಗಿರಬಹುದು ಊಹಿಸಿ.ಹಾಗಾದರೆ ಈ ಅರಣ್ಯ ಏಕಾ ಏಕಿ ರೂಪಿತವಾಗಲಂತೂ ಸಾಧ್ಯವಿಲ್ಲ!!! ಮೊಲಾಯ್ ಏಕೆ ಮತ್ತು ಹೇಗೆ ಅರಣ್ಯ ಬೆಳೆಸಿದ ಎನ್ನುವುದು ಇನ್ನೂ ರೋಚಕ.
1979 ರಲ್ಲಿ ಅಸ್ಸಾಂ ಅನ್ನು ಭಿಕರವಾಗಿ ಪ್ರವಾಹವೊಂದು ಅಪ್ಪಳಿಸಿತ್ತು. ಪ್ರವಾಹ ತಗ್ಗಿದ ನಂತರ ಜನ ಜೀವನ ಅಸ್ತವ್ಯಸ್ತವಾಗಿತ್ತು. ಹಾಗೆಯೇ ಆಗ ತಾನೇ 16 ವರ್ಷದಲ್ಲಿದ್ದ ಮೊಲಾಯ್ ತನ್ನ ಮನೆಯ ಬಳಿಯ ಅರಣ್ಯವನ್ನು ಗಮನಿಸುತ್ತಿದ್ದ. ತನ್ನ ಮನೆಯ ಬಳಿ ಬೇಸಿಗೆಯಲ್ಲಿ ಸತ್ತು ಬೀಳುತ್ತಿದ್ದ ಹಾವುಗಳನ್ನು ನೋಡಿ ಊರಿನ ಹಿರಿಯರ ಬಳಿ ಕೇಳಿದ “ಮುಂದೊಂದು ದಿನ ನಾವೂ ಕೂಡ ಈ ಹಾವುಗಳಂತೆ ಸತ್ತರೆ?” ಆಗ ಅವರೆಲ್ಲ ಈತನ ಮಾತು ಕೇಳಿ ನಕ್ಕರು,ಬೈದರು ಆದರೆ ಮೊಲಾಯ್ ಗೆ ಅರಣ್ಯನಾಶದ ಬೀಕರತೆ ಅದಾಗಲೇ ಅರಿವಾಗಿತ್ತು.ಅರಣ್ಯ ಇಲಾಖೆಯವರ ಬಳಿ ಗಿಡ ನೆಡಲು ಮೊಲಾಯ್ ಹೇಳಿದಾಗ ಅವರು ಬೇಕಾದರೆ ನೀನು ನೆಡು ಎಂದು ಉಡಾಫೆಯ ಉತ್ತರ ನೀಡಿ ಜಾರಿಕೊಂಡರು. ಮೊಲಾಯ್ ಸಸಿ ನೆಡಲು ಶುರು ಮಾಡಿದ, ಬ್ರಹ್ಮಪುತ್ರ ನದಿಯ ದಡದ ಅರಣ್ಯದಲ್ಲಿ ಪ್ರಾರಂಭಿಕ ಹಂತವಾಗಿ ಒಂದಿಷ್ಟು ಬಿದಿರು ಬೀಜವ ಬಿತ್ತಿದ.ಆದರೆ ನೆಟ್ಟ ಸಸಿಗಳಿಗೆ ನೀರುಣಿಸುವುದೇ ದೊಡ್ಡ ಕಷ್ಟದ ಕೆಲಸವಾಗಿತ್ತು ,ಆಗ ಮೊಲಾಯ್ ಬಿದಿರಿನ ಬಿರಡೆಗಳನ್ನು ಮಾಡಿ ಪ್ರತೀ ಸಸಿಯ ಬಳಿ ಊರಿದ ಜೊತೆಗೆ ಆ ಬಿರಡೆಯ ಬುಡಕ್ಕೆ ಚಿಕ್ಕ ಚಿಕ್ಕ ತೂತು ಮಾಡಿದ.ಸಣ್ಣ ಕೊಳಗಳಿಂದ ಆ ಬಿದಿರಿನ ಬಿರಡೆಗೆ ನೀರು ತಲುಪುವಂತೆ ಮಾಡಲು ಮತ್ತೆ ಬಿದಿರನ್ನೇ ಪೈಪ್’ನಂತೆ ಉಪಯೋಗಿಸಿ ಆ ಸಸಿಗಳನ್ನು ಮರವನ್ನಾಗಿ ಮಾಡಿದ ಮೊಲಾಯ್.
ಮುಂದೆ 1980 ರಲ್ಲಿ ಗೋಲಾಘಾಟ್ ಜಿಲ್ಲೆಯ ಸೋಷಿಯಲ್ ಫಾರೆಸ್ಟ್ರೀ ವಿಭಾಗದಲ್ಲಿ ಮೊಲಾಯ್ ಕೆಲಸ ಮಾಡಿದ. ಅಲ್ಲಿ ಅವರು 500 ಎಕರೆಯಷ್ಟು ಪ್ರದೇಶಕ್ಕೆ ಸಸಿ ನೆಡುವ ಐದು ವರ್ಷದ ಅಭಿಯಾನವನ್ನು ಸಮಯದಲ್ಲಿ ಆರಂಭಿಸಿದ್ದರು.ಅಲ್ಲಿ ಕೆಲಸದಾಳಾಗಿ ದುಡಿದ ಮೊಲಾಯ್ ಐದು ವರ್ಷ ಆ ಅಭಿಯಾನದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡ. ಐದು ವರ್ಷದ ನಂತರವೂ ಮೊಲಾಯ್ ಸಸಿ ನೆಡುವ ಕೆಲಸವನ್ನು ಮುಂದುವರೆಸಿದ.ತಾನು ನೆಟ್ಟ ಸಸಿಗಳನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡ.
ಅಸ್ಸಾಂನ ಪರಿಶಿಷ್ಟ ಪಂಗಡವಾದ ಮಿಷಿಂಗ್ ಜಾತಿಗೆ ಸೇರಿದ್ದ ಮೊಲಾಯ್ ತನ್ನ ಹೊಟ್ಟೆಪಾಡಿಗೆ ಮತ್ತು ಕುಟುಂಬ ನಿರ್ವಹಣೆಗಾಗಿ ಒಂದಿಷ್ಟು ಹಸುಗಳನ್ನು ಸಾಕಿಕೊಂಡಿದ್ದಾನೆ. ತನ್ನ ಮೂರು ಮಕ್ಕಳು ಮತ್ತು ಹೆಂಡತಿಯ ಜೊತೆಗೆ ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಮೊಲಾಯ್ ಯಾವತ್ತೂ ಅತೀ ಆಸೆ ಪಟ್ಟವನಲ್ಲ.ಮೊಲಾಯ್ ಹೇಳುತ್ತಾನೆ ” ನನ್ನ ಜೊತೆ ಓದಿದ ಅದೆಷ್ಟೋ ಜನ ನಗರದಲ್ಲಿ ಇಂಜಿನಿಯರ್, ಡಾಕ್ಟರ್ ಆಗಿದ್ದಾರೆ,ನಾನು ನನ್ನ ಸರ್ವಸ್ವವನ್ನು ಈ ಕಾಡಿಗಾಗಿ ದಾರೆ ಎರೆದಿದ್ದೇನೆ,ಇದೇ ನನ್ನ ಸರ್ವಸ್ವ.ಪ್ರಶಸ್ತಿ ಮತ್ತು ಸಾವಿರಾರು ಜನರ ಪ್ರೀತಿಯೇ ನನ್ನ ಆಸ್ತಿ, ನಾನು ಈ ಜಗತ್ತಿನ ಅತ್ಯಂತ ಸಂತೋಷಿಗ ” ಎಂದು.
22 ಏಪ್ರಿಲ್ 2012 ರಂದು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮೊಲಾಯ್ ಭಾಗವಹಿಸಿದ್ದರು ಮತ್ತು ಆ ಕಾರ್ಯಕ್ರಮದಲ್ಲಿ ಅವರನ್ನು ಅತ್ಯುನ್ನತ ಸಾಧನೆಗಾಗಿ ಸನ್ಮಾನಿಸಲಾಯಿತು.ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸುಧೀರಕುಮಾರ ಸೊಪೋಯ್ ಅವರು ಮೊಲೊಯ್ ಅವರಿಗೆ “ಫಾರೆಸ್ಟ್ ಮ್ಯಾನ್ ಆಪ್ ಇಂಡಿಯಾ” ಎಂಬ ಬಿರುದು ನೀಡಿ ಗೌರವಿಸಿದರು.
ಒಂದು ಸಂದರ್ಶನದಲ್ಲಿ ಮೊಲೊಯ್ ಹೇಳಿದ್ದರು ಪ್ರತೀ ಶಾಲೆಯಲ್ಲಿ ಎರಡು ಸಸಿ ನೆಡಲು ಪ್ರತೀ ವಿದ್ಯಾರ್ಥಿಗೂ ಹೇಳಬೇಕು ಮತ್ತು ಅದನ್ನು ಸಂಪೂರ್ಣವಾಗಿ ಬೆಳೆಸುವ ಜವಾಬ್ದಾರಿಯನ್ನು ಆತನಿಗೇ ನೀಡಬೇಕು ಎಂದು.ಇದು ನಿಜಕ್ಕೂ ಸುಂದರ ಕಲ್ಪನೆ. ಚಿಕ್ಕಂದಿನಿಂದಲೇ ಪ್ರಕೃತಿಯ ಪ್ರೀತಿಸುವ ಮನಸ್ಥಿತಿ ನಿರ್ಮಾಣವಾಗಿಬಿಟ್ಟರೆ ಭವಿಷ್ಯ ಅದೆಷ್ಟು ಸಮೃದ್ಧವಾಗಿರಲು ಸಾಧ್ಯ ಅಲ್ಲವೇ?
ನೋಡಿ ಈ ಮನುಷ್ಯನ ಸಾಮರ್ಥ್ಯವನ್ನು!!! ಒಂದುವರೆ ಸಾವಿರ ಎಕರೆಯಷ್ಟು ಅರಣ್ಯ ಬೆಳೆಸಿ ಸಾಮಾನ್ಯನಾಗಿ ಬದುಕುತ್ತಿರುವ ಈತ ನಮ್ಮ ನಡುವಿನ “ನಾಯಕ”.ಹಸಿರು ಹೆಸರಿನಲ್ಲಿ ಅದೆಷ್ಟೋ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ಸ್ವಯಂ ಬರುದು ಘೋಷಿಸಿಕೊಂಡು ಹಾರಾಡುತ್ತಿರುವ ಡೋಂಗೀ ಪರಿಸರವಾದಿಗಳ ನಡುವೆ ‘ಜಾದವ್ ಮೊಲಾಯ್ ಪೇಯಾಂಗ್’ನಗಣ್ಯರಾಗಿಬಿಟ್ಟಿದ್ದಾರೆ ಎಂಬುದೇ ದುರ್ದೈವ.
ಈ ಸಾಧಕನಿಗೊಂದು ಸಲಾಂ!!!

Facebook ಕಾಮೆಂಟ್ಸ್