ನೀಲಾಕಾಶದಿ ತೇಲುವ ಮೋಡವೆ
ಮೆಲ್ಲಗೆ ಚಲಿಸು ನೀನೀಗ
ಮಲ್ಲಿಗೆ ನಗುವಿನ ನನ್ನಯ ಗೆಳತಿಗೆ
ಓಲೆಯ ನೀ ಬೇಗ
ಚುಕ್ಕಿಯ ಚಂದಿರ ಬೆಚ್ಚನೆ ಹಾಸುಗೆ
ಮುದ ನೀಡದು ನನ್ನ ಮನಕೀಗ
ಸಂಚನು ಬೀರುವ ಮಿಂಚಿನ ಕಣ್ಣಿನ
ನೋಟದ ಚೆಲುವೆ ಬಾ ಬೇಗ
ಮನವಿದು ಮರುಗಿದೆ ತನುವಿದು ಸೊರಗಿದೆ
ಕಾಯುತ ನಿನ್ನಯ ಹಾದಿಯನು
ನನ್ನೀ ಉಸಿರಿನ ಕಣಕಣವೆಲ್ಲಾ
ಕಾದಿಹುದು ನಿನ್ನಯ ಬರವನ್ನು
ನಿನ್ನುಸಿರಿನ ತಂಗಾಳಿಯ ಲಾಲಿಯ
ಆಲಿಸೆ ಕಾತರನಾಗಿಹೆನು
ನಿನ್ನೆದೆ ವೀಣೆಯ ತಂತಿಯ ಮಿಡಿಸಿ
ಶ್ರುತಿ ಸೇರಿಸೆ ಆತುರನಾಗಿಹೆನು
ಕೇಳಿಸದೇನೇ… ಜೀವದ ಗೆಳತಿಗೆ
ನನ್ನೀ ಮನದ ಆವೇಗ..
ನಿನ್ನಾಗಮನದಿ ಸವಿನುಡಿಯಿಂದಲಿ
ಜೀವಕೆ ತಂಪನು ತಾ ಬೇಗ
– Ramya N C
Facebook ಕಾಮೆಂಟ್ಸ್