X

ಕಾಶ್ಮೀರದ ಪಂಡಿತರ ನೋವುಗಳೆಕೇ ಇವರಿಗೆ ಅರ್ಥವಾಗುವುದಿಲ್ಲ..??

A masked Kashmiri protester throws stones at a police vehicle during a protest in Srinagar, Indian controlled Kashmir, Saturday, July 9, 2016. Indian authorities imposed an indefinite curfew in most parts of Kashmir on Saturday, a day after government forces killed the top rebel commander in the disputed Himalayan region, officials said, describing it as a major success against rebels fighting Indian rule. (AP Photo/Mukhtar Khan)

ಭಾರತಮಾತೆಯ ಸಿಂಧೂರದಂತೆ ಇರುವ ಕಾಶ್ಮೀರದಲ್ಲಿನ ಉಗ್ರರ ಹತ್ಯೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಬುದ್ದಿಜೀವಿಗಳೆನಿಸಿಕೊಂಡಿರುವ ಕೆಲವು ಮತಿಗೇಡಿ ಲದ್ದಿ ಜೀವಿಗಳು ಮಾನವ ಹಕ್ಕುಗಳ ನೆಪ ಇಟ್ಟುಕೊಂಡು ಹೋರಾಟದ ಹಾದಿಯನ್ನ ತುಳಿಯಲು ಹೊರಟಿರುವಾಗ , ಇದನ್ನು ಏನೆಂದು ಕರೆಯಬೇಕು ಎಂಬುದು ಮಾತ್ರ ಮನಸ್ಸಿಗೆ ತಿಳಿಯದ ವಿಷಯವಾಗಿ ಉಳಿದಿದೆ. ತಮ್ಮ ಪ್ರಚಾರದ ತೆವಲಿಗಾಗಿ ‘ಬುರ್ಹಾನ್ ವನಿಯನ್ನು’ ನಮ್ಮ ಸೈನಿಕರು ಹತ್ಯೆಗೈದಿದ್ದನ್ನು ಕಂಡಿಸಿ ಕಾಶ್ಮೀರದ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಬೇಕಾದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಬಿಡುವುದೆ ಸೂಕ್ತ ಎಂದು ತಮ್ಮ ಗಂಜಿ ಕೇಂದ್ರದ ಮುಂದೆ ಬೊಬ್ಬೆ ಹೊಡೆಯುತ್ತಿರುವ ಈ ಮಹಾನ್ ಚೇತನಗಳು ತಮ್ಮ ಶಂಡತನದ ಪರಮಾವದಿಯನ್ನು ಜಗತ್ತಿಗೆ ತೊರಿಸುತ್ತಿದ್ದಾರೆ. ಇಂತಹ ಈ ಪ್ರತಿಭಟನೆಗಳು ನೆಡೆಯುತ್ತಿರುವುದು ದೂರದ ಪಾಕಿಸ್ತಾನದಲ್ಲೊ ಅಥವ ಯಾವುದೋ ಇಸ್ಲಾಂ ರಾಷ್ಟ್ರದಲ್ಲಿ ಅಲ್ಲ ಬದಲಾಗಿ  ನಮ್ಮದೇ ಅದ ಸಿಲಿಕಾನ್ ವ್ಯಾಲಿ, ಬುದ್ದಿವಂತರ ನಗರಿ ಬೆಂಗಳೂರಿನಲ್ಲಿ ಎಂಬುದು ನಿಜವಾಗಿಯು ವಿಷಾದದಾಯಕ.

‘ತಾಕತ್ತಿದ್ದರೆ ನನ್ನನ್ನು ಹುಡುಕಿ ಸಾಯಿಸಿ’ ಎಂದು ಸೈನಿಕರಿಗೆ ಸವಾಲೆಸೆದ ಬುರ್ಹಾನ್ನನ್ನು ತಮ್ಮ ಜೀವವನ್ನು ಪಣಕ್ಕಿಟ್ಟು ಸಾಯಿಸಿದ ಸೈನಿಕರ ಸಾಹವನ್ನು ಮೆಚ್ಚಿ ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತ ರಸ್ತೆಗಿಳಿಯ ಬೇಕಾಗಿದ್ದ ಮಂದಿ ಉಗ್ರನಿಗಾಗಿ ಕಣ್ಣಿರು ಸುರಿಸುತ್ತ.. ಮಾನ , ಮರ್ಯಾದೆ ,ನಾಚಿಕೆ ಎಂಬ ಮೂರು ಪದಗಳ ಅರ್ಥವನ್ನು ತಿಳಿಯದಂತೆ ವರ್ತಿಸುತ್ತಿರುವ ಈ ಮತಿಗೇಡಿಗಳಿಗೆ ತನ್ನಪ್ಪನನ್ನು ಕೊಂದ ನರಹಂತಕರ ಸಂಹಾರವಾದಾಗ ಅಪ್ಪನ ಸೈನಿಕ ಸಮವಸ್ತ್ರವನ್ನು ತೊಟ್ಟು ಸೈನಿಕರಿಗೆ ಸೆಲ್ಯುಟ್ ನೀಡಿದ ಆ ದೇಶಭಕ್ತಿಯ ಮನಸ್ಸಿನಲ್ಲಿರುವ ಕಿಂಚಿತ್ತಾದರು ರಾಷ್ಟ್ರಪ್ರೇಮ ಈ ಬುದ್ದಿಜೀವಿಗಳೆನಿಸಿರುವ ಪ್ರಗತಿ ಪರರಿಗೆ ಇಲ್ಲದಿರುವುದು ನಿಜವಾಗಿಯು ವಿಷಾದಕರ ಸಂಗತಿ.

ಕಾಶ್ಮೀರದಲ್ಲಿ ಸತ್ತವರ ಪರವಾಗಿ ಮಾನವ ಹಕ್ಕುಗಳ ಹೆಸರಿನಲ್ಲಿ ರಕ್ಷಣೆಗೆನಿಂತ ಈ ನಾಚಿಕೆ ಬಿಟ್ಟ ಮಂದಿಗೆ ತಮ್ಮದೇ ರಾಜ್ಯದಲ್ಲಿ ನೆಡೆಯುತ್ತಿರುವ ದುರಂತಗಳ ಬಗ್ಗೆ ಸದ್ದು ಮಾಡದೇ ಇರುವುದು ವಿಪತರ್ಯಾಸವೇ ಸರಿ. ಎಷ್ಟೇ ಅದರೂ ಕಾಂಗ್ರೆಸ್ ಪೋಶಿತ ನಾಟಕ ಮಂಡಳಿಯ ಸದಸ್ಯರಲ್ಲವೇ ಇವರು. ಕರ್ನಾಟಕದ ಮಹಾಪುರುಷ ಜಾರ್ಜ್ ರಾಜೀನಾಮೆ ಕೇಳುವಾಗ ತುಟಿ ಬಿಚ್ಚದೇ ನಿಂತಿದ್ದವರು ಕಾಂಗ್ರೆಸಿಗರೇ ಅದ ಜನಾರ್ದನ್ ಪೂಜಾರಿಯವರಿಗಿಂತಲು ಅತೀ ನಿಷ್ಠೆ ತೋರಿದ ಕಾಂಗಿವಾದಿಗಳಾಗಿ ನಿಂತುಬಿಟ್ಟರು. ಸಾವಿನ ಮನೆಯಲ್ಲಿ ಸದಾಕಾಲ ಸರಸವಾಡುವ ಈ ಹೀನ ಮನಸ್ಸುಗಳು ಎಷ್ಟೇ ಅದರೂ ಕನ್ನಯ್ಯನನ್ನು ಭಗತ್ ಸಿಂಗ್‍ಗೆ ಹೋಲಿಸಿ , ವೇಮುಲ ಸಾವಿಗೆ ಇಲ್ಲದ ಬಣ್ಣ ಬಳಿದು ಸ್ಮ್ರತಿ ಇರಾನಿಯವರ ರಾಜೀನಾಮೆಗೆ ಬೇಡಿಕೆ ಇಟ್ಟ ಬುದ್ದಿವಂತರಲ್ಲವೇ . ಗುಜರಾತ್ ಗಲಭೆಯ ಮುಸಲ್ಮಾನ್ ಸಂತ್ರಸ್ತರ ಚಿತ್ರ ಹಿಡಿದು , ಚರ್ಚ್ ಗಲಾಟೆಯನ್ನು ಇನ್ನಿಲ್ಲದಂತೆ ಚಿತ್ರಿಸಿ ಮರುಗಿದ ಈ ಜೀವಿಗಳಿಗೆ ಕರ್ನಾಟಕದ ಸಾಲು ಸಾಲು ದುರಂತಗಳು ಕಣ್ಣಿಗೆ ಬಿಳುವುದೇ ಇಲ್ಲ. ಯಾವುದಾದರು ನಟ ತನ್ನ ಪತ್ನಿಗೆ ಕಿರುಕುಳ ನೀಡಿದರೆ ಅವರ ಬೆನ್ನಿಗೆ ನಿಂತು ಹೋರಾಡುವ ಮಹಿಳಾ ಆಯೋಗದ ಈ ಮಹಿಳಾಮಣಿಗಳಿಗೆ ಪಾಪ ಗಣಪತಿಯವರ ಪತ್ನಿ ಪಾವನಾರ ಕಣ್ಣೀರು ಕಾಣುವುದಿಲ್ಲ , ಡಿ.ಕೆ.ರವಿಯವರ ತಾಯಿಯ  ಕೂಗಾಟ ಕೇಳಿಸುವುದೆ ಇಲ್ಲ.

ಸೆಕ್ಯೂಲಾರ್ ಎಂಬ ಪದವನ್ನು ಬಳಸುತ್ತ ದೇಶ ಯಾವುದಾದರು ಮೂಲೆಯಲ್ಲಿ ಮುಸಲ್ಮಾನರಿಗೆ ಚೂರು ತೊಂದರೆಯಾದರು ನಾಲಿಗೆ ಹರಿಬಿಟ್ಟು ಕಂಡ ಕಂಡಲ್ಲಿ ಬೀದಿಗಿಳಿಯುವ ಈ ಮಾನಗೇಡಿಗಳಿಗೆ ಪ್ರಶಾಂತ್ ಪೂಜಾರಿ , ಕುಟಪ್ಪ , ರಾಜು ಅವರ ಹತ್ಯೆಗಳು ಎಂದಿಗೂ ಕಣ್ಣಿಗೆ ಕಾಣಿಸುವುದೇ ಇಲ್ಲ. ರೌಡಿಗಳನ್ನು ಬಂಧಿಸಿದ ತಪ್ಪಿಗಾಗಿ ಕಿರುಕುಳ ಅನುಭವಿಸುವ ಪ್ರಮೋದ್ ಕುಮಾರ್ , ಆಡಳಿತ ವ್ಯವಸ್ಥೆಯ ವಿರುದ್ದ ಸಿಡಿದು ನಿಂತ ಅನುಪಮಾ ಶಣೈ , ಮೈಸೂರಿನ ಜಿಲ್ಲಾಧಿಕಾರಿ ಶಿಖಾ ಮೇಲೆ ಇವರಿಗೆ ಕರುಣೆ ಎಂಬುದೆ ಬರುವುದಿಲ್ಲ. ಕಂಡ ಕಂಡವರನ್ನು ತಮ್ಮ ಮಗನಿದ್ದಂತೆ ಎಂದು ಕರೆಯುವ ಈ ಪಾಪಿ ಜನರುಗಳನ್ನು ದೇಶದ್ರೋಹಿಗಳೆಂದರೆ ಯಾವುದೇ ಕಾರಣಕ್ಕು  ತಪ್ಪಾಗದು.

ದೇವರ ಸ್ವಂತ ನಾಡು , ನೆರೆಯ ರಾಜ್ಯ ಕೇರಳದಲ್ಲಿ ದಾರಿತಪ್ಪಿ ನೆಡೆದ 20 ಮಂದಿ ಯುವಕರು ಇವರಿಗೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಂಡರು ತಪ್ಪಿಲ್ಲ. ಹಿಂದೂ ಯುವತಿಯರನ್ನು ಪ್ರೀತಿಸಿ ಲವ್ ಜಿಹಾದ್ ಎಂಬ ಪಾಪದ ಬಲೆಯಲ್ಲಿ  ಬಿಳಿಸಿ ಆಟವಾಡುವ ಯುವಕ ಯುವತಿಯರ ಪ್ರೀತಿಯನ್ನು ಬೆಂಬಲಿಸಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಉಗ್ರರ ಬಾಯಿಗೆ ತಳ್ಳಿ ಭೋಗದ ವಸ್ತುಗಳನ್ನಾಗಿ ಬಳಸುವಂತೆ ಮಾಡುವ ಈ ಜೀವಿಗಳು ಧರ್ಮಕ್ಕೆ ಹಾಗೂ ದೇಶಕ್ಕೆ ಅಂಟಿರುವ ಕಳಂಕವೇ ಸರಿ.

ದೇಶದ ವಿರುದ್ದ ದನಿಯೆತ್ತಿ ನಿಲ್ಲುವವರ ಧ್ವನಿಯಾಗಿ ನಿಲ್ಲುವ ಈ ಮಾನಗೇಡಿಗಳಿಗೆ ಇವರೇ ಹೇಳುತ್ತಿರುವ ಕಾಶ್ಮೀರದ ಭಾಗದಲ್ಲಿರುವ ಪಂಡಿತರ ನೋವುಗಳೆಕೇ ಅರ್ಥವಾಗುವುದಿಲ್ಲ..?? ಅಮಾಯಕ ಯುವಕರನ್ನ ಹರಕೆಯ ಕುರಿಗಳಂತೆ ಬಳಸಿ ತಮ್ಮ ಬೇಳೆಯನ್ನು ಬೆಯಿಸಿ ಬಿಸಾಡುವ ಹುರಿಯತ್ ಕಾನ್ಪೆರೆನ್ಸ್‍ನ ಮೃಗಗಳ ಕುರಿತು ಏಕೇ ಅರ್ಥವಾಗುವುದಿಲ್ಲ..?? ಕಾಶ್ಮೀರಿ ಯುವಕರ ಹತ್ಯೆಗೆ ಭದ್ರತಾ ಪಡೆಗಳನ್ನ ದೂಷಿಸುತ್ತಿರುವ ಈ ಮಹಾನುಭಾವರಿಗೆ ಚಂದ್ರನನ್ನು ನೋಡದೆ ಕೇವಲ ಪಾಕಿಸ್ತಾನದ ದಿಕ್ಕನ್ನು ನೋಡುತ್ತ ಈದ್ ಹಬ್ಬವನ್ನು ಆಚರಿಸುವ ಮನಸ್ಸುಗಳ ನಿಜ ಮುಖವಾಡವೇಕೆ ತಿಳಿಯುತ್ತಿಲ್ಲ..??

ಅಫ್ಜಲ್ ನೇಣಿಗೇರಿದಾಗ , ಯಾಕೂಬ್ ಗಲ್ಲಿಗೇರಿದಾಗ ಕಣ್ಣಿರಿಟ್ಟ ಈ ವ್ಯಕ್ತಿತ್ವಗಳಿಗೆ ಎಲ್ಲವೂ ಗೊತ್ತಿದೆ. ಅದರೆ ಭಾರತ ಮಾತೆಯ ವಿರುದ್ದ ಘೋಷಣೆ ಕೂಗಿದಾಗ , ದೇಶದ್ರೋಹಿಗಳ ವಿರುದ್ದ ರಸ್ತೆಗಿಳಿದಾಗ , ದೇಶದ ಮಾನ ಮರ್ಯಾದೆಯನ್ನು ಹರಾಜು ಹಾಕಿದಾಗ ಮಾತ್ರ ಈ ಗಂಜಿ ಕೇಂದ್ರದ ನಿರಾಶ್ರಿತೆರಿಗೆ ಗಂಜಿ ಸಿಗುವುದು. ಪ್ರಚಾರದ ಭರಾಟೆಗಾಗಿ ತಾಯಿಯನ್ನು ಬೇಕಾದರೂ ಮಾರುವ ಹೀನ ಮನಸ್ಸಿನವರಲ್ಲವೇ ಇವರು..!! ಈ ಎಲ್ಲದರ ನಡುವೇ ಇತ್ತಿಚಿನ ದಿನಗಳಲ್ಲಿ ನಮ್ಮ ಯುವ ಶಕ್ತಿ ಇಂತಹ ಮಾನಗೇಡಿ ಮಂದಿಗಳ ಪ್ರಭಾವಕ್ಕೆ ಒಳಗಾಗದಿರುವುದೇ ಅತ್ಯಂತ ಸಮಾಧಾನ ನೀಡುವ ವಿಷಯ. ದೇಶದ ಏಳಿಗೆಗಾಗಿ ದುಡಿಯುವ ,ಭಾರತ ಮಾತೆಯ ಸೇವೆಮಾಡುವ ಬುದ್ದಿಯನ್ನು ಇನ್ನಾದರೂ ಈ ಬುದ್ದಿ ಜೀವಿಗಳಿಗೆ ಭಗವಂತ ಕರುಣಿಸಲಿ ಎಂಬುದೆ ನಮ್ಮೆಲ್ಲರ ಆಶಯ….

-ರಾಕೇಶ್ ನಾಯಕ

ಬೆಂಗಳೂರು

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post