X

ತಿಥಿ ಚಿತ್ರದ ಪೋಷಕನಟಿ ಪೂಜಾ ಎಸ್. ಎಮ್. ಸಂದರ್ಶನ

ಹೊಸಬರ ತಂಡ ನಿರ್ಮಿಸಿದ ತಿಥಿ ಚಿತ್ರ ರಾಷ್ಟ್ರಾದ್ಯಂತ ಜನಮನ್ನಣೆ ಗಳಿಸಿರುವುದು ಗೊತ್ತೇ ಇದೆ. ಅದರಲ್ಲೊಂದು ಪಾತ್ರ ಮಾಡಿ ಅತ್ಯುತ್ತಮ ಪೋಷಕನಟಿ ಪ್ರಶಸ್ತಿ ಪಡೆದಿರುವಂತಹ ಪೂಜಾ ಎಸ್. ಎಮ್. /ಕಾವೇರಿ ಅವರ ಸಂದರ್ಶನ ಇಲ್ಲಿದೆ.

ಲೇಖಕ: ಹಲೋ ಪೂಜಾ.. ನಮಸ್ತೆ, ನಾನು ನಾಗರಾಜ್ ನಿನ್ ಕ್ಲಾಸ್ ಮೇಟ್.

ಪೂಜಾ: ಹ್ಮ್, ನಮಸ್ತೆ ನಾಗರಾಜ್ ಗೊತ್ತಾಯ್ತು ಹೇಳಿ,

ಲೇಖಕ: ಮೊಟ್ಟ ಮೊದಲನೆಯದಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸಿ ಪಡೆದದ್ದಕ್ಕೆ ಅಭಿನಂದನೆಗಳು.

ಪೂಜಾ: ಥ್ಯಾಂಕ್ಯೂ, ಥ್ಯಾಂಕ್ಯೂ ಸೋ ಮಚ್….

ಲೇಖಕ: ಹಾಗೇನೇ ತಿಥಿ ಚಿತ್ರದ ಅಭೂತಪೂರ್ವ ಯಶಸ್ಸಿಗೂ ಕೂಡಾ ಅಭಿನಂದನೆಗಳು.

ಪೂಜಾ: ಧನ್ಯವಾದಗಳು.

ಲೇಖಕ:ನಿಮಗೆ ಈ ಚಿತ್ರದ ಆಫ಼ರ್ ಬಂದಿದ್ದು ಹೇಗೆ?

ಪೂಜಾ: ನಾನು ಫ಼ಸ್ಟ್ ಸೆಮಿಸ್ಟರ್ ಓದ್ತಾ ಇರುವಾಗ ೨೦೧೪ರಲ್ಲಿ ಒಂದು ಧಾರವಾಹಿ ಆಡಿಶನ್’ಗೆ ಹೋಗಿದ್ದೆ. ಸೆಲೆಕ್ಟ್ ಕೂಡಾ ಆಗಿದ್ದೆ. ಎರಡು ದಿನ ಚಿತ್ರೀಕರಣನೂ ನಡೀತು ಆಮೇಲೆ ಕಾರಣಾಂತರದಿಂದ ಅದು ನಿಂತು ಹೋಯಿತು. ಆ ಸಂದರ್ಭದಲ್ಲಿ ಶ್ರೀನಿವಾಸ್ ಅಂತ ಒಬ್ರು ನಿರ್ದೇಶಕರು ತಿಥಿ ಚಿತ್ರದ ಆಡಿಶನ್ ಇದೆ ಬೆಂಗಳೂರಿನಲ್ಲಿ ಅಂತ ಹೇಳಿದ್ರು. ಸೋ ಹೋದ್ಮೇಲೆ ಆಡಿಶನ್’ಲಿ ನಾನು ಸೆಲೆಕ್ಟ್ ಆದೆ ಕಾವೇರಿ ಪಾತ್ರಕ್ಕೆ.

ಲೇಖಕ:ತಿಥಿ ಚಿತ್ರ ತಂಡದಲ್ಲಿ ಎಲ್ಲರೂ ಹೊಸಬರೇ ಇದ್ದಾರೆ. ಆದರೂ ನೀವು ಒಪ್ಪಿಕೊಂದಿದ್ದಕ್ಕೆ ಕಾರಣ?

ಪೂಜಾ: ನಾನು ಕೂಡ ಹೊಸಬಳೇ ಅಲ್ವಾ? (ನಗು)

ಲೇಖಕ: ಹ್ಮ್.. ಅಮೀರ್ ಖಾನ್ ನಂತಹ ದೊಡ್ಡ ದೊಡ್ಡ ನಟರು ನಿಮ್ಮ ಚಿತ್ರದ ಬಗ್ಗೆ ಪ್ರಶಂಸೆ ಮಾಡಿದ್ದಾರೆ. ಹೇಗನ್ಸತ್ತೆ?

ಪೂಜಾ: ನಿಜವಾಗ್ಲೂ ತುಂಬಾ ಖುಷಿಯಾಗತ್ತೆ. ಎಲ್ಲ ಶ್ರೇಯಸ್ಸು ನಮ್ಮ ನಿರ್ದೇಶಕರಿಗೆ ಸಲ್ಲಬೇಕು.

ಲೇಖಕ: ಮೊದಲ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಅದರ ಬಗ್ಗೆ ಏನ್ ಹೇಳ್ತಿರಾ?

ಪೂಜಾ: ತುಂಬಾ ಖುಷಿಯಾಗ್ತಿದೆ. ಚಿತ್ರ ಬಿಡುಗಡೆ ದಿನ ಎಲ್ಲರೂ ಒಟ್ಟಿಗೆ ಮಂಡ್ಯದಲ್ಲಿ ಸ್ವಪ್ನ ಚಿತ್ರಮಂದಿರಕ್ಕೆ ಹೋಗಿದ್ವಿ. ಎಲ್ಲರ ಜೊತೆಲಿ ಕೂತಿದ್ವಿ. ನೋಡೋಕ್ ಬಂದ ಜನ ಎಲ್ಲ ಚಿತ್ರ ಶುರುವಾಗಿ ೨೦ ನಿಮಿಷಕ್ಕೆ ಆಟೋಮ್ಯಾಟಿಕ್ ಆಗಿ ನಗ್ತಾ ಇದಾರೆ. ಅಂದರೆ ಚಿತ್ರದಲ್ಲಿರೋ ನೈಜತೆ ಅವ್ರಿಗೆ ನಗು ತರ್ಸ್ತಿತ್ತು. ಅವ್ರು ನಗ್ತಾ ಇರೋದು ಅವ್ರಿಗೇ ಗೊತ್ತಾಗ್ತಿರ್ಲಿಲ್ಲ.

ಲೇಖಕ: ಬಣ್ಣದ ಲೋಕಕ್ಕೆ ನಂಟು ಹೇಗೆ ಬೇಳೆಯಿತು ಅಂದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ನಾಟಕ ಸಿನೆಮಾ ಕಲಾವಿದರು ಇದ್ದರೆಯೇ?

ಪೂಜಾ: ಇಲ್ಲ ನನ್ ಫ಼್ಯಾಮಿಲಿಲಿ ಯಾರೂ ಕೂಡಾ ಈ ಒಂದು ಸಾಲಿಗೆ ಬಂದವರಲ್ಲ. ನಾನೇ ಮೊದಲು. ಆದ್ರೂನು ನಂಗೆ ತುಂಬಾನೇ ಸಪೋರ್ಟ್ ಮಾಡಿದ್ರು ಎಲ್ಲಾ ವಿಷ್ಯದಲ್ಲೂ. ನನಗೆ ಪ್ರಶಸ್ತಿ ಬಂದಿದೆ ಅಂದ್ರೆ ಅದ್ಕೆ ನನ್ ಕುಟುಂಬನೇ ಕಾರಣ. ಅಷ್ಟು ಸಪೋರ್ಟ್ ಮಾಡಿದ್ದಾರೆ.

ಲೇಖಕ: ನಿಮ್ಮ ನೆಚ್ಚಿನ ಕಲಾವಿದೆ ಅಥವಾ ರೋಲ್ ಮಾಡೆಲ್ ಯಾರು?

ಪೂಜಾ: ನೆಚ್ಚಿನ ಕಲಾವಿದೆ ಅಥವಾ ರೋಲ್ ಮಾಡೆಲ್ ಅಂತ ಯಾರೂ ಇಲ್ಲ. ನಂಗೆ ನನ್ನ ತಾಯಿನೇ ರೋಲ್ ಮಾಡೆಲ್. ನನ್ ಪಾತ್ರದಲ್ಲಿ ಪರ್ಫ಼ೆಕ್ಟ್ ನೆಸ್ ಬೇಕು ಅಂತ ಆಸೆ ಪಡ್ತಿದ್ದಿದ್ದು ನನ್ ತಾಯಿ. ಸೋ ಅವ್ರೇ ನಂಗೆ ಎಲ್ಲಾ..

ಲೇಖಕ: ತಿಥಿ ಚಿತ್ರದಿಂದ ನಿಮ್ಮ ವಿದ್ಯಾಭ್ಯಾಸಕ್ಕೇನು ತೊಂದರೆ ಆಗ್ಲಿಲ್ವಾ?

ಪೂಜಾ: ಇಲ್ಲ ಖಂಡಿತ ಇಲ್ಲ. ಈ ವಿಷ್ಯದಲ್ಲಿ ನಾನು ನಿರ್ದೇಶಕರಿಗೆ ಧನ್ಯವಾದ ಹೇಳ್ಬೆಕು. ಒಂದ್ಸಲ ನಂಗೆ ಅಪಘಾತ ಆಗಿ ಕೈ ಪೆಟ್ಟಾಗಿತ್ತು. ಮುಖದಲ್ಲೂ ಗಾಯ ಆಗಿತ್ತು. ನಿಂಗು ಗೊತ್ತಿದ್ಯಲ್ವಾ. ಆದ್ರೆ ನಿರ್ದೇಶಕರು ಗಾಯ ಎಲ್ಲ ಸಂಪೂರ್ಣ ವಾಸಿ ಆದ್ಮೇಲೆ ಶೂಟಿಂಗ್ ಶುರು ಮಾಡೋಣ, ಒಟ್ನಲ್ ಈ ಚಿತ್ರಕ್ಕೆ ಈ ಹುಡ್ಗಿನೇ ಬೇಕು ಅಂತ ಅಂದ್ರು. ಅವ್ರಿಗೆ ನನ್ ಡೆಡಿಕೇಶನ್ ಇಷ್ಟ ಆಗಿತ್ತು. ಈ ಚಿತ್ರಕ್ಕೋಸ್ಕರ ನಾನು ಸುಮಾರು ೧೮-೨೦ ಕೆಜಿ ತೂಕ ಕಡಿಮೆ ಮಾಡ್ಕೊಂಡಿದ್ದೆ.

ಲೇಖಕ: ಮುಂದೆ ಎಂತಹ ಪಾತ್ರ ಮಾಡ್ಬೇಕು ಅಂತ ಆಸೆ ಇದೆ?

ಪೂಜಾ: ಇಂತದ್ದೇ ಪಾತ್ರ ಬೇಕು ಅಂತಿಲ್ಲ. ಒಳ್ಳೆ ಪಾತ್ರ ಆಗಿರ್ಬೇಕು. ಚಾಲೆಂಜಿಂಗ್ ಆಗಿರ್ಬೇಕು.

ಲೇಖಕ: ಸಿನಿಮಾ ರಂಗದಲ್ಲೇ ಮುಂದುವರಿಯುತ್ತೀರೋ ಅಥವಾ…

ಪೂಜಾ: ಹ್ಮ್.. ಇದೇ ದಾರಿಯಲ್ಲಿ ಮುಂದೆ ಹೋಗ್ಬೇಕು ಅಂತ ಆಸೆ ಇದೆ.

ಲೇಖಕ: ವೈಯಕ್ತಿಕ ಬದುಕು ಅಥವಾ ನಿಮ್ಮ ವಿದ್ಯಾಭ್ಯಾಸದ ಬಗ್ಗೆ..

ಪೂಜಾ: ಬಿ.ಸಿ.ಎ ಕಂಪ್ಲೀಟ್ ಆಯ್ತು. ಸಿ.ಈ.ಟಿ ಬರೆಯುತ್ತೇನೆ. ಬೆಂಗಳೂರಲ್ಲಿ ಎಂ.ಸಿ.ಎ ಮಾಡ್ಬೇಕು ಅಂತ ಆಸೆ ಇದೆ.

ಲೇಖಕ: ನಿಮ್ಮ ನಿರ್ದೇಶಕರ ಬಗ್ಗೆ, ನಿಮ್ಮ ಇಡೀ ಚಿತ್ರ ತಂಡದ ಬಗ್ಗೆ ಏನ್ ಹೇಳ್ತಿರಾ?

ಪೂಜಾ: ನಿರ್ದೇಶಕರು ರಾಮ್ ರೆಡ್ಡಿ ಅಂತ. ತುಂಬಾ ಒಳ್ಳೆಯವ್ರು. ಒಳ್ಳೆ ಮನಸ್ಸು ಅವರದ್ದು. ಕನ್ನಡ ಅಷ್ಟಾಗಿ ಬರ್ತಿರ್ಲಿಲ್ಲ ಆದ್ರೂನು ಯಾವ್ ತರ ನಟಿಸ್ಬೇಕು ಅಂತ ತುಂಬಾ ಚೆನ್ನಾಗಿ ಹೇಳಿಕೊಡ್ತಿದ್ರು. ಯಾವ್ದಕ್ಕೂ ಕೋಪ ಮಾಡ್ಕೊತಿರ್ಲಿಲ್ಲ. ನಾನೂ ಅಷ್ಟೆ ಜಾಸ್ತಿ ಟೇಕ್ ಗಳನ್ನ ತಗೋತಿರ್ಲಿಲ್ಲ. ಉಳಿದ ಎಲ್ಲಾ ಕಲಾವಿದರು ಎಲ್ಲರೂ ಒಂದ್ ಕುಟುಂಬದ ರೀತಿ ಇದ್ವಿ ನಾವು. ತುಂಬಾ ಚೆನ್ನಾಗಿತ್ತು ನಮ್ಮ ತಂಡ.

ಲೇಖಕ: ಸದ್ಯ ಯಾವ್ದಾದ್ರೂ ಚಿತ್ರೀಕರಣ ನಡಿತಿದ್ಯಾ?

ಪೂಜಾ: ಇಲ್ಲ ಸದ್ಯ ಯಾವ್ದೂ ಇಲ್ಲ. ಒಂದೆರೆಡು ಚಿತ್ರದ್ದು ಮಾತುಕತೆ ನಡಿತಾ ಇದೆ.ಬೇರೆ ಭಾಷೆಯಿಂದನೂ ಆಫ಼ರ್ ಬಂದಿದೆ. ಎಲ್ಲದೂ ಮಾತುಕತೆ ನಡಿತಾ ಇದೆ. ಕನ್ ಫ಼ರ್ಮ್ ಆದ್ಮೇಲೆ ಹೇಳ್ತೀನಿ.

ಲೇಖಕ: ಓಕೆ ಪೂಜಾ. ನಮ್ಜೊತೆ ಇಷ್ಟೊತ್ತು ಮಾತಡಿದ್ದಕ್ಕೆ ತುಂಬಾ ಧನ್ಯವಾದಗಳು. ಇದೇ ರೀತಿ ಉತ್ತಮ ಪಾತ್ರಗಳು ಸಿಕ್ಕಿ ಒಳ್ಳೆ ಹೆಸರು ಮಾಡುವಂತಾಗ್ಲಿ. ಆಲ್ ದ ಬೆಸ್ಟ್.

ಪೂಜಾ: ಥ್ಯಾಂಕ್ಯೂ.. ಥ್ಯಾಂಕ್ಯೂ ಸೋ ಮಚ್. ನಿಮ್ಮ ಹಾರೈಕೆ ಇದ್ರೆ ಒಳ್ಳೆದಾಗತ್ತೆ (ನಗು)

-ನಾಗರಾಜ ಭಟ್ ಟಿ ಆರ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post