ಎಲ್ಲ ಮುಗಿದಿರುವಾಗ,
ಹೊಸದು ಕಾದಿರುವಾಗ,
ಹಳತೇ ಹೊನ್ನೆಂಬುದಿನ್ನೆಂಥ ಬ್ರಾಂತಿ!!!
ಹಳೆಕೊಳೆಯ ನೋಡುತ್ತ,
ಗತ ನೆನಪ ಜೀಕುತ್ತ,
ಕುಳಿತಿದ್ದರೆಂತು ಸಾಧ್ಯ? ಹೊಸ ಬೆಸುಗೆ – ಪ್ರೀತಿ…
ನನ್ನ ನಿಲುಕಿಗೆ ಸಿಗದ,
ದ್ವಂದ್ವ ನಿಲುವಿನ ಮನದ,
ನಿರ್ಧಾರಕಾರು ಹೊಣೆ, ಏನು ಗತಿ??
ಗಾಯ ಮಾದಿರುವಾಗ,
ಮನಸು ಮಾಗಿರುವಾಗ,
ಇನ್ನೇಕೆ ಆ ನೆನಪು, ಹಳೆ ಪ್ರೀತಿ – ಗೀತಿ…
ಕೊನೆಗೂ ಹೋದೆನು ಶರಣು,
ನಿನ್ನ ಪ್ರೇಮಕೆ ನಾನು,
ಸೆಳೆದು ಕೆಡವಿತು ನಿನ್ನ ಕಣ್ಣ ಕಾಂತಿ…
ಮುಳುಗಿ ತೇಲಿಹೆ,
ನವ ಪ್ರೇಮದಾ ಅಲೆಯಲ್ಲಿ,
ಮೂಡಿಹುದು ಹೊಸಕನಸು ಬೇರೆ ರೀತಿ…
ಬಿಟ್ಟೆನೆಂದರು ಬಿಡದ,
ಒಲವ ಮಾಯೆಯೇ ಜಗದ,
ಅಳಿಸಿ ನಗಿಸುವ ಅನುರಾಗ ಜ್ಯೋತಿ…
Tejas kumar hegade
Facebook ಕಾಮೆಂಟ್ಸ್