ಚಿಂದಿ ಆಯುವವಗೆ
ಕನಸುಗಳ ಮಾರಿ,
ಚಿಲ್ಲರೆಯ ತಂದಿಹೆನು,
ಬಾಲವಿಲ್ಲದ ಪಲ್ಲಿ
ಪಲ್ಲಂಗ ಹಾಸಿ;
ನೆತ್ತರದಿ ಚಿತ್ತರವ
ನುಡಿಸಿಹುದು,
ನೆನಪು ದೋಚಿದ ಪದ್ಯ
ಉಪ್ಪರಿಗೆಯೇರಿ
ಮತ್ತೆ ಪ್ರೇಯಸಿ ಟಂಕಿಸಿದೆ,
ಕನ್ನಿಕೆಯೆ ಅವಳು?
ಮನದನ್ನೆಯಂತೆ,
ನೆತ್ತಿ ಬಿಸಿಯೇರಿ
ನುಂಗುವವಳು.
-2-
ಶೀರ್ಶಿಕೆಯಿರದ ಪದಗಳಡಿ
ಮೆರೆವ ನಾಚಿಕೆಗೆ
ಕನಸ ಆಯುವ ತವಕ
ಕಿಂಚಿತ್ತು ಕಮ್ಮಿ,
ಕೆಂಪು ಕೆನ್ನೆಯ ಹುಡುಗಿ
ಒಲವ ಚುಂಬಿಸಿದಾಗ
ಪ್ರೇಮ ಕಾರಿದ ಭೂತಿ
ನಿತ್ಯ ಸಾವಿನ ಪುಳಕ
ಮಾಯಗಾರ್ತಿಯ ಮೌನ
ಮತ್ತೆ ಕೇಳುವ ಮುನ್ನ
ಹೇಳಿಬಿಡು ಒಮ್ಮೆ
ಯಾರು ನೀನೆಂದು
– ಗುರುಗಣೇಶ ಡಬ್ಗುಳಿ.
Facebook ಕಾಮೆಂಟ್ಸ್