೧.ಅವನಿಲ್ಲ…….
ಅವನೇ ಎಲ್ಲ ಅಂದವಳ
ಹೃದಯದಲ್ಲೀಗ
ಅವನೇ ಇಲ್ಲ
ಅವಳ ಪ್ರೀತಿ ಸತ್ತಿಲ್ಲ
ಅವನಿಗದರ ಅರ್ಥ ತಿಳಿದಿಲ್ಲ
೨.ನೀನು….
ನೀನು
ನನ್ನೊಳಗಿನ
ಸುಂದರ ಕವಿತೆ
ಎಷ್ಟು ಬರೆದರೂ
ಮುಗಿಯುತ್ತಿಲ್ಲ
ಅದೂ ನಿನ್ನಂತೆ
೩.ಲವ್-ದೋಖಾ
ಖಾಲಿಯಾಗಿರುವ
ಮನಸುಗಳು
ಅಚ್ಚೊತ್ತಿರುವ
ಲವ್-ದೋಖಾ
ಪದಗಳು
೪.ಶೀತಲ ಸಮರ
ಮನಸುಗಳ ನಡುವೆ
ಶೀತಲ ಸಮರ
ಆದಷ್ಟು ಬೇಗ
ಅಂತ್ಯ ಕಂಡರೆ
ಸಂಸಾರ ಸ-ಸಾರ
ಇಲ್ಲದಿದ್ದರೆ ನಿಸ್ಸಾರ
೫.ನೀನಿರದೆ…..
ನೀನಿರದ ನಾನು
ಚುಕ್ಕಿಯಿರದ ಬಾನು
ಚಂದ್ರನಿಗೆ ಜೊತೆಯಿಲ್ಲ
ನನ್ನಲ್ಲಿ ನಗುವಿಲ್ಲ
೬.ಸೂಚನೆ…..
ಅವಳ ಮುಂಗುರುಳ
ಸರಿಸಿದ ಅವನ ಕಣ್ಣಲ್ಲಿ
ತುಂಟತನವಿತ್ತು
ಅವಳ ಅಧರಗಳಿಗೆ
ಮುಂದಿನ ಸೂಚನೆಯಿತ್ತು
-Mamata Channappa
Facebook ಕಾಮೆಂಟ್ಸ್