ಹೆಣ್ಣಿಗನಿಸಿತು ತಾನಾಗಬಾರದೆಂದು ಮನುಕುಲದ ಹುಣ್ಣು
ತಾನಾಗಬಯಸಿದಳು ದಾರಿತೋರುವ ಕಣ್ಣು
ನಾಲ್ಕುಗೋಡೆಯಿಂದಾಚೆ ಬಂದಳು
ಛಲದ ಟೊಂಕಕಟ್ಟಿ!
ಕೆಲಸ ಕಲಿಯುವ ಆತುರದಲಿ
ಗುರುತು-ಪರಿಚಯವಿಲ್ಲದವರ ಸಮ್ಮುಖದಿ
ನಂಬಿಕೆಯನು ಬಲವಾಗಿ ನಂಬಿ
ಮೋಸದ ಮುಖವಾಡ ತೊಟ್ಟವರ ಬಳಿಯಲಿ!
ಹೆತ್ತ ಮನೆಗೆ ಆಸರೆಯಾಗಿ
ಕೊಟ್ಟ ಮನೆಗೆ ದೀವಿಗೆಯಾಗಿ
ಉರಿದು ಬೆಂದು ಬೆಳಕಾದಳು
ಸಹನಾಮೂರ್ತಿಯ ರೂಪವಾಗಿ!
ಪ್ರಶಸ್ತಿ ಪದವಿಯ ಬಯಸದೇ
ಸಾಧನೆಯ ಮೆಟ್ಟಿಲನೇರಿ
ತನ್ನ ಕನಸನ್ನು ನನಸಾಗಿಸುತ್ತಾ ಸಾಗಿಹಳು
ಯಶಸ್ಸಿನ ಪಥದಲ್ಲಿ!
-ವಾಣಿ ಶಾಸ್ತ್ರಿ
vani.shastri12@gmail.com
Facebook ಕಾಮೆಂಟ್ಸ್