X

ಹೆಣ್ಣು

ಸುಂದರ..ಸುಮಧುರ ಮನಸಿನ ಹೆಣ್ಣಿಗೆ..

ತಗಲಿದೆ  ಯಾರದೋ ಕಣ್ಣು

 

ಮಮತೆಯ ಆಗರ..ದಯಾಮಯಿ

ಎಲ್ಲವನೂ ಮೀರಿ ನಿಲ್ಲುವಳು..

ಮನಸಿಲ್ಲದೆ ಮನ ಬಿಚ್ಚದೇ ಏನನೂ ಮುಟ್ಟಳಿವಳು..

ಇಂದು ಎಳೆ ಹಸುಳೆ ಎನದೇ ಕಾಮದ ತೃಷೆಗೆ ಬಲಿಯಾಗಿಹಳು!

 

ಹೆತ್ತವರ ಒಡಲ ಕುಡಿ ಮುದುರುವುದು ಕಾಮುಕನ ಕಾಲ್ತುಳಿತದಲಿ..

ಮನ ಚಿದ್ರಗೊಂಡು ಮಾಸದೇ ಉಳಿಯುವುದು ಅಂತರಾಳದಲಿ!

 

ಎರಡು ನಿಮಿಷದ ಸುಖ ಗಂಡು ಎಂಬ ಮೊಹರಿದ್ದ ಪ್ರಾಣಿಗೆ

ಎಲ್ಲಿದೆ ಬೆಲೆ ಆ ಹೆಣ್ಣಿನ ಒಳಗಿನ ಯಾತನೆಗೆ..?

 

ವಯಸ್ಸಿನ ಮಿತಿಇಲ್ಲ.. ಸಂಬಂಧಕ್ಕೆ ಸಂಬಂದವಿಲ್ಲ..

ಕಾಮ ದೋಚುತ್ತಿದೆ ಎಲ್ಲವನೂ,ಪ್ರೀತಿಯ ಸುಳಿವಿಲ್ಲ..

 

ಸಾವಿನ ಭೀಕರತೆಯ ನೆನೆಯುವಳು ತಾನೊಲ್ಲದ

ಸಂಗಾತಿ ಮೈಮುಟ್ಟಿದಾಗ,

ಅಸಹಾಯಕತೆಯಲಿ ಕಾಮ ಮೇಲೆರಗಿದಾಗ

ಹುಟ್ಟಿನ ಮೇಲೆ ತಾತ್ಸಾರ ಮೂಡುವುದೇ ಹೀಗಾದಾಗ..!

 

ಗಂಡು ಜಾತಿಗೆ ಅವಮಾನ ವೆಸಗಿ ಮಾಡುವ ಕ್ರೃತ್ಯ

ಇವರುಗಳು ಗಂಡಲ್ಲದೇ ಮೃಗರೆನ್ನುವುದೇ ಸೂಕ್ತ,

 

ನೊಂದ ಹೆಣ್ಣಿನ ಕರಾಳ ದಿನವೋ..ರಾತ್ರಿಯೋ..?

ನಾಳೆ ಸೂರ್ಯೊದಯ..ಹೊಸಕಿರಣ ತರುವುದೋ..?

-ನಾಗರಾಜ್ ಮುಕಾರಿ

ಕೈಗಾ,ಕಾರವಾರ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post