ಹೆಣ್ಣು ಹುಟ್ಟುವ ಮೊದಲೇ ಚಟ್ಟ ಕಟ್ಟುವರ
ಹುಟ್ಟಿದರೂ ಹೆಣ್ಣು ಮಗು ಬೇಡಾಗಿತ್ತು ಅನ್ನುವರ
ಜನ್ಮ ಪಡೆದ ಹೆಣ್ಣು ಮಗುವ ಕಸದ ತೊಟ್ಟಿಗೆಸೆಯುವರ ನಡುವೆ
ಯಾರಿಗಾಗಿ ಹುಟ್ಟಲಿ ???
ಹೆಣ್ಣು ಮಕ್ಕಳನ್ನು ಶೋಷಿಸುತ್ತಿರುವ ಸಮಾಜದ ನಡುವೆ
ಏನನ್ನು ಅರಿಯದ ಅಪ್ರಾಪ್ತ ಬಾಲಕಿಯರ ಮೇಲೆ
ನಿರ್ದಾಕ್ಷಿಣ್ಯವಾಗಿ ಅತ್ಯಾಚಾರ ಮಾಡುವರ ನಡುವೆ
ಹೇಗೆ ಬದುಕಲಿ ???
ಅಶ್ಲೀಲ ಮಾತುಗಳಿಗೆ ಎದುರಾಗಿ
ಕುಚೆಷ್ಟೆ , ಕಿರುಕೊಳಗಳಿಗೆ ಬಲಿಯಾಗಿ
ರಣಹದ್ದಿನಂತೆ ಹವಣಿಸುತ್ತಿರುವ ಕಣ್ಣುತಪ್ಪಿಸಿ
ಹೇಗೆ ನಡೆಯಲಿ ಈ ರಸ್ತೆಗಳಲ್ಲಿ ????
ಕೆಲಸದ ಆಮಿಷವನ್ನು ತೋರಿಸಿ
ಕುಕೃತ್ಯ ಎಸಗಿ
ಹೆಣ್ಣನ್ನು ವಿದೇಶಗಳಿಗೆ ಮಾರಾಟ ಮಾಡುವರ ನಡುವೆ
ಹೇಗೆ ಉಸಿರಲಿ ನಾನು???
ಅದೆಷ್ಟೋ ಕನಸುನ್ನು ಕಟ್ಟಿ, ಗಂಡನ ಮನೆಯೇ ಸರ್ವಸ್ವ ಎಂದು
ಜೀವನವನ್ನು ಮುಡಿಪಾಗಿಡುವ ಹೆಣ್ಣುನ್ನು
ವರದಕ್ಷಿಣೆಗಾಗಿ ಸುಡುವ, ಕೊಲೆಮಾಡುವ
ನರಕಯಾತನೆ ಹೇಗೆ ಸಹಿಸಲಿ???
ಹುಟ್ಟುವ ಭಾಗ್ಯ ಪಡೆದರು ಹೆಣ್ಣು ಭಾರ
ಕೌಟುಂಬಿಕ ಹಿಂಸೆ,ಲೈಂಗಿಕ ಕಿರುಕುಳ,
ಅತ್ಯಾಚಾರ, ಅಪಹರಣ, ಬಹುಪತಿ ವಿವಾಹ
ಬಾಲ್ಯ ವಿವಾಹ ,ದೌರ್ಜನ್ಯ , ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಮಹಾಪೂರ !!!
ಹೆಣ್ಣು !!ಹೆಂಡತಿಯಾಗಿ ಬೇಕು,
ಪ್ರೇಯಸಿಯಾಗಿ ಬೇಕು, ಸೇವಕಿಯಾಗಿ ಬೇಕು ಅನ್ನುವವರು
ಹೆಣ್ಣು ಮಗು ಬೇಡ !!!!,
ಮಗಳಾಗಿ ಮಾತ್ರ ಬೇಡವೇ ಬೇಡ ಅನ್ನುವರಲ್ಲ.???
ಹೆಣ್ಣು ! ಹುಟ್ಟಿನಿಂದ ಸಾಯುವವರೆಗೂ
ನೋವು, ಹತಾಶೆ, ನಿರಾಶೆಯಿಂದಲೇ ಜೀವಿಸಬೇಕೆ?
ಹೆಣ್ಣುನ್ನು ಎಲ್ಲದಕ್ಕೂ ಬಲಿಪಶು ಮಾಡುವರಲ್ಲ
ಈ ಪರಿಯಾದ ವೇದನೆ ಹೆಣ್ಣಿಗೇಕೆ?????
ಮರೆಯದಿರಿ !!!!! ಎಚ್ಚರ !!!
ಕಡಿಮೆಯಾಗುತ್ತಿದೆ ಹೆಣ್ಣು ಮಕ್ಕಳ ಸಂಖ್ಯೆ
ಏರುಪೇರಾಗಿದೆ ಪ್ರಕೃತಿಯ ಸಹಜ ಸಮತೋಲನ
ನಿರೀಕ್ಷಿತ !!ಸಾಮಾಜಿಕ ಮತ್ತು ನೈತಿಕ ವೈಪರೀತ್ಯ !!!!!!!!!
-ಪ್ರಕಾಶ ತದಡಿಕರ
Facebook ಕಾಮೆಂಟ್ಸ್