ಒಂದಾನೊಂದು ಕಾಲದಲ್ಲಿ “ಬೆಂದಕಾಳೂರು” ಎಂದು ಕರೆಸಿಕೊಂಡು ನಾಡಪ್ರಭು ಕೆಂಪೇಗೌಡರ ಕೃಪಾಕಟಾಕ್ಷದಿಂದ ಸೃಷ್ಟಿಯಾದ ಅದ್ಭುತ ಪ್ರಪಂಚ, ತದಾನಂತರ “ಬ್ಯಾಂಗಲೂರ್” (Bangalore) ಆಗಿ ಈಗ ತನ್ನದೇ ಆದ ಮೂಲ ಹೆಸರಿನ ರೂಪ ಪಡೆದು “ಬೆಂಗಳೂರು” (Bengaluru) ಎಂದು ಕರೆಯಲ್ಪಡುವ ಸರ್ವರಾಷ್ಟ್ರ ಪ್ರೇಮಿ ನಗರ.
ದೇಶದ ಹಾಗೂ ಪ್ರಪಂಚದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿ ಹೆಸರು ಮಾಡುತ್ತಿರುವ ಸುಂದರ ಮಾಯಾನಗರಿ ಮತ್ತು ಕರುನಾಡಿನ ರಾಜಧಾನಿ ಬೆಂಗಳೂರು ನನ್ನದು.
“ಸಿಲಿಕಾನ್ ಕಣಿವೆ”(Silicon Valley) ಎಂದು ಹೆಸರು ಪಡೆದ ಊರು,ಹಚ್ಚ ಹಸಿರಿನ – ಸ್ವಚ್ಛಮನಸಿನ ಜೀವರಾಶಿಗಳ ತೊಟ್ಟಿಲು ನನ್ನ ಬೆಂಗಳೂರು. ಕಲೆ,ಸಾಹಿತ್ಯ,ಕ್ರೀಡೆ,ವಿಜ್ಞಾನ,ಶೈಕ್ಷಣಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಕೀರ್ತಿ ನನ್ನ ಬೆಂಗಳೂರಿಗಿದೆ.
ಡಿ.ಆರ್.ಡಿ.ಓ (DRDO township), ಎಚ್.ಏ.ಎಲ್ (HAL), ಬಿ.ಇ.ಎಲ್(BEL), ಬಿ.ಇ.ಎಮ್.ಎಲ್ (BEML), ಬಿ.ಎಚ್.ಇ.ಎಲ್ (BHEL), ಐ.ಐ.ಎಸ್.ಸಿ (IISC), ಇಸ್ರೋ(ISRO), ಎನ್.ಎ.ಎಲ್(NAL), ಎಚ್.ಎಮ್.ಟಿ(HMT) ಹೀಗೇ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಮತ್ತು ಮುಖ್ಯ ಹಾಗೂ ಪ್ರಧಾನ ಕಛೇರಿಗಳು ಇರುವ ನಗರವೇ ನನ್ನ ಬೆಂಗಳೂರು.
“10 ಅಧ್ಬತ ಹಾಗೂ ಸುಂದರ ಸತ್ಯಗಳು”
1. 3,000 ಅಡಿ ಸಮುದ್ರ ಮಟ್ಟಕ್ಕಿಂತ ಎತ್ತರವಿರುವ ಬೆಂಗಳೂರು ಡೆಹ್ರಡೂನ್ ಗಿಂತಲೂ’ಎತ್ತರವಿದೆ. ಅಂದರೆ ಬೆಂಗಳೂರಿನಲ್ಲಿ ವರ್ಷ ಪೂರ್ತಿ ಅನುಭವಿಸಬಹುದಾದ ಅದ್ಭುತ ಮತ್ತು ಸುಂದರ ವಾತಾವರಣ ಬೆಂಗಳೂರು ಬಿಟ್ತರೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ..
2. ಜಲಶಕ್ತಿಯ ಮೂಲಕ ಮೊದಲ ಬಾರಿ ವಿದ್ಯುತ್ ಪಡೆದ ದೇಶದ ಕೆಲವೇ ಕೆಲವು ನಗರಗಳಲ್ಲಿ ಬೆಂಗಳೂರು ಸಹ ಒಂದು.
3. 212 ಸಾಪ್ಟ್_ವೇರ್ ಕಂಪನಿಗಳನ್ನು ಹೊಂದಿದ ಶ್ರೇಯ ನನ್ನ ಬೆಂಗಳೂರಿಗಿದೆ.
4. ಪ್ರಪಂಚದಲ್ಲಿಯೇ ಅತೀ ಹೆಚ್ಚು ಶೇಕಡಾ ಇಂಜಿನಿಯರ್’ಗಳು, ಹಾಗು ಒಂದು ಮಿಲಿಯನ್’ಗಿಂತಲೂ ಹೆಚ್ಚು IT ಉದ್ಯೋಗಸ್ಥರಿರುವ ನಗರ ನನ್ನ ಬೆಂಗಳೂರು.
5. ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜ್’ಗಳು ಇರುವುದು ನಮ್ಮ ಬೆಂಗಳೂರಿನಲ್ಲಿ ( 21) ಜೊತೆಗೆ ಬೆಂಗಳೂರು ಯುನಿವರ್ಸಿಟಿ 57 ಇಂಜಿನಿಯರಿಂಗ್ ಕಾಲೇಜ್’ಗಳು ಮಾನ್ಯತೆ ಪಡೆದಿದೆ.
6. ಗಲ್ಫ್ ರಾಷ್ಟ್ರಗಳಿಗೆ ಹೊರತು ಪಡೆಸಿ ಅತೀ ಹೆಚ್ಚು ವೃತ್ತಿಪರರನ್ನ ವಿದೇಶಗಳಿಗೆ ಕಳಿಸುವ ಏಕೈಕ ನಗರ ಬೆಂಗಳೂರು.
7. ದೆಶದ ಶೇಕಡ 47% ರಷ್ಟು (265 ರಲ್ಲಿ) ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲಿ.
8.ಹಿಂದೂ, ಮುಸ್ಲಿಂ,ಸಿಖ್,ಕ್ರಿಶ್ಚಿಯನ್ ಅನ್ನುವ ಯಾವ ಭೇದ-ಬಾವವಿಲ್ಲದೆ ಎಲ್ಲಾ ರೀತಿಯ ಗುಡಿಗಳನ್ನು ಅತಿ ಹೆಚ್ಚಾಗಿ ಹೊಂದಿದ ನಗರಗಳಲ್ಲಿ ಮೊದಲ ಸ್ಥಾನ ಬೆಂಗಳೂರಿಗಿದೆ.
9. ಅತೀ ಹೆಚ್ಚು ಕ್ರೀಡಾಪಟುಗಳು ಇರುವಂತಹ ಸ್ಥಳ ನನ್ನ ಬೆಂಗಳೂರು.
10. ದಕ್ಷಿಣ ಭಾರತದಲ್ಲಿ ಮೆಟ್ರೋ ಟ್ರೈನ್ ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಕೆಯನ್ನು ನಮ್ಮ ಬೆಂಗಳೂರು ಹೊಂದಿದೆ.
ಇದಷ್ಟೇ ಅಲ್ಲದೇ, ಪ್ರಾಮಾಣಿಕ ಮತ್ತು ಪ್ರೀತಿಯಿಂದ ಗೌರವಿಸುವ ಜನರಿರುವ ಊರು ನನ್ನ ಬೆಂಗಳೂರು. ವಲಸಿಗರು ದೇಶದ ಯಾವುದೇ ಮೂಲೆಯಿಂದದರೂ ಇಲ್ಲಿಗೆ ಬಂದಾಗ ಅವರನ್ನು ನೀವು ಯಾಕೆ? ಯಾವ ಕೆಲಸ? ಯಾವ ಜಾತಿ? ಯಾವ ಮತ? ಇಂತಹ ಯಾವುದೇ ಪ್ರಶ್ನೆಗಳನ್ನು ಕೇಳದೇ “ಅತಿಥಿ ದೇವೋಭವ” ಎಂಬ ಮನೋಭಾವದಿಂದ ಎಲ್ಲರನ್ನೂ ಸ್ವಾಗತಿಸುವ, ಎಲ್ಲ ರೀತಿಯ ಮನುಷ್ಯರಿಗೆ ಆಸರೆ ನೀಡುವ ಸೂರು ನನ್ನ ಬೆಂಗಳೂರು.ಯಾರೇ ಆಗಲಿ ಯಾವ ಸಂದರ್ಭದಲ್ಲಿ ಸಹಾಯ ಕೇಳಿದಾಗ ನಿಮ್ಮ ಭಾಷೆ ಗೊತ್ತಿಲ್ಲದಿದ್ದರೂ ಕಷ್ಟ ಪಟ್ಟಾದರು ಕಲಿತು ನಿಮಗೆ ಸಹಾಯ ಮಾಡುವ ವಿಶಾಲ ಹೃದಯದವರು ನನ್ನ ಬೆಂಗಳೂರು.
-ಸಾಗರ್ ಸಿದ್ದು.
Facebook ಕಾಮೆಂಟ್ಸ್