X

ಬೆಸ್ಟ್ ಗೆಳೆಯನ ಕೊಟ್ಟ ಬೆಂಗಳೂರು ….

ಅದೇನೋ ನನ್ನ ಜೀವಮಾನದಲ್ಲಿ ಬೆಂಗಳೂರಿಗೆ ಬರುತ್ತೇನೋ ಇಲ್ಲವೋ ಅಂದುಕೊಂಡಿದ್ದೆ. ನನಗೆ ಕೆಲಸ ಕೊಟ್ಟ  ಕಂಪನಿ ಬೆಳಗಾವಿಗೆ ಪೋಸ್ಟಿಂಗ್ ಹಾಕುವ ಬದಲು ಬೆಂಗಳೂರಿಗೆ  ಹಾಕಿರಾಜಧಾನಿಯ ದರ್ಶನ  ಕಲ್ಪಿಸಿತ್ತು.

ಎರಡು ವರ್ಷಗಳ ಹಿಂದೆ ಬೆಳ್ಳಂ ಬೆಳಿಗ್ಗೆ ಬೆಂಗಳೂರೆಂಬ ಸಮುದ್ರದಲ್ಲಿ   ಹೊತ್ತು ಹಾಕಿ  ಎಕ್ಸ್ಪ್ರೆಸ್ ಟ್ರೈನ್ ಹೊರಟುಹೋಯಿತು . ಅದು ಬೆಳಿಗ್ಗೆ 4 ಗಂಟೆ, ನನ್ನ ಜೊತೆಗೆ ಕಳೆದ ಹತ್ತು ವರ್ಷಗಳಿಂದಬೆಂಗಳೂರಲ್ಲಿದ್ದ ನನ್ನ ಅಣ್ಣನಿದ್ದ ..ಅದಕ್ಕಾಗಿಯೇ ಯಾವದೇ ಟೆನ್ಷನ್ ಇಲ್ಲದೆ ಎಲ್ಲವನ್ನು ನೋಡುತ್ತಾ ಅವನ ಹಿಂದೆ ಹೋಗುವುದೇ ನನ್ನ ಕಾಯಕವಾಗಿತ್ತು. ಅಷ್ಟು ಬೆಳಿಗ್ಗೆ ಮೆಜೆಸ್ಟಿಕ್ ಎಷ್ಟುಬ್ಯುಸಿಯಾಗಿತ್ತು ಅಬ್ಬಾ ನಮ್ಮ ಹುಬ್ಬಳ್ಳಿಯಲ್ಲಿ ಮಧ್ಯಾಯ್ನ   12  ಆದರು ಇಷ್ಟು ಜನ ಸಿಗೋದಿಲ್ಲ.

ಅಂತು ಇಂತೂ ಕನಸುಗಳ ಬೆನ್ನೇರಿ ಬಂದವನ ಹೊತ್ತು BMTC ಬಸ್ಸು ಸಾಗಿತ್ತು.  ಅದು ನನ್ನ ಬೆಂಗಳೂರಿನ ಮೊದಲ ಪಯಣ,, ನಿದ್ದೆಕಣ್ಣಲಿದ್ದ ನನ್ನನ್ನು  ಒಂದು ಉದ್ದನೆಯ ಬಸ್ಸು ನಿಧಾನವಾಗಿಹೊತ್ತೊಯೋತ್ತಿತ್ತು. ಸಡನ್ನ್ ಆಗಿ ಅದೇನೋ ಬುಸ್ಸ್ಸ್ಸ್ ಅಂತ ಗಾಳಿ ಶಬ್ದ ಬಂತು ” ಅಯ್ಯೋ ಬಸ್ ಪಂಕ್ಚರ್ ಆಯ್ತಾ ಶಿವನೆ ” ಅಂದೆ.. ಆದರೆ ಬಸ್ಸು ಹಾಗೆ ಹೊರಟೆ ಇತ್ತು. ನಂಗೆ ಆಶ್ಚರ್ಯ ಎಲ್ಲರಿಗೂಶಬ್ದ ಕೇಳಿದೆ ಆದರು ಏನು ಆಗಿಲ್ಲ ಅನ್ನೋ ರೀತಿ ಜನಗಳು, ಹಂಗೆ ಗೇರ್ ಮೇಲೆ  ಗೇರ್ ಬದಲಿಸಿ ಮಾಡಿ ಓಡಿಸುತ್ತೀರೋ ಡ್ರೈವರ್ ..ಏನು ಗೊತ್ತಿಲ್ಲದ ಬೇರೆ ಗ್ರಹದ ಜೀವಿಯ ಹಾಗೆ ಎಲ್ಲವನ್ನುಕಣ್ಣರಳಿಸಿ ನೋಡುತ್ತಲಿದ್ದೆ. ಮತ್ತೆ  ಅದೇ ಗಾಳಿ ಶಬ್ದ ಕುತೂಹಲ ತಡೆಯಲಾರದೆ ಎದ್ದು ನೋಡೇ ಬಿಟ್ಟೆ ಅವಾಗ ತಿಳಿಯುತು ಅದು ಬಾಗಿಲು ತೆರೆಯಲು ಹಾಕಲು ಮಾಡಿದ  Hydraulic  ವ್ಯವಸ್ತೆಅಂತಾ.. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದೆ ನಂಗೆ ಅದರ ಬಗ್ಗೆ ಆಗ್ಲೇ ತುಂಬಾ ತಿಳಿದಿತ್ತು. ಆದರೆ ಹೊರಗಡೆ ಅದರ ಅಪ್ಲಿಕೇಶನ್ ನೋಡಿದ್ದು ಮೊದಲ ಸಲ. ಹೀಗೆ ಮೊದಲ ಪ್ರಯಾಣದಲ್ಲೇಬೆಂಗಳೂರು ಜೀವನದ ನಿಜವಾದ ಪಾಠ ಹೇಳೋಕೆ ಶುರುಮಾಡಿತ್ತು..

ನೋಡಿದಲ್ಲೆಲ್ಲ ಜನ ಬಸ್ನಲ್ಲೂ ಜನ, ಬಸ್ ಸ್ಟಾಪ್’ನಲ್ಲೂ ಜನ, ಅಬ್ಬ ಇಡಿ ದೇಶದಲ್ಲಿರೋ ಜನಗಳೆಲ್ಲಾ ಇಲ್ಲೇ ತುಮ್ಬಿಕೊಂಡಿದರಾ ಅನ್ನುಸ್ತು ಹಂಗೋ ಹಿಂಗೋ ಬೆಳ್ಳಿಗ್ಗೆ ಒಲ್ಲದ ಮನಸ್ಸಿನಿಂದ ರೈಸ್ಬಾತ್ ತಿನ್ನ್ಕೊಂಡು ಅದೇ ತುಂಬಿ ತುಳುಕುವ ಬಸ್ ಹತ್ತಿ ಕಂಪನಿಗೆ Join ಆದ್ವಿ, ಅಬ್ಬ ಅದೇನು ಟೆಕ್ ಪಾರ್ಕ್’ಗಳು,  ಬಸ್ ಇಳಿದಾಗ ಇದಾವುದಪ್ಪ ಕೊಂಪೆ ಅಂದ್ಕೊಂಡೆ, ಆದರೆ ಟೆಕ್ ಪಾರ್ಕ್ಒಳಗಡೆ ಬಂದಾಗ ಟಿವಿಯಲ್ಲಿ ನೋಡಿದ ಅಮೇರಿಕ ನೆನಪಿಗೆ ಬಂತು. ಈ ಟೆಕ್ ಪಾರ್ಕ್’ನವರು ಅದೆಷ್ಟು ಪ್ರಾಫಿಟ್ ತಗೊಳ್ತಾರೆ, ಅವ್ರು ಒಳಗೆ ಮಾಡೋ 10 % ಕೆಲಸಾನ ಹೊರಗಡೆ ಇರೋ ಸರ್ವಿಸ್ರೋಡ್’ಗೆ ಮಾಡಿದ್ದರೆ ಬೆಂಗಳೂರು ಎಷ್ಟು ಚೆನ್ನಾಗಿರ್ತಿತ್ತು .

ಒಳಗಡೆ ದೊಡ್ಡ ದೊಡ್ಡ glassy – glassy ಕಟ್ಟಡಗಳು , ಎಲ್ಲಲ್ಲೂ ಇಂಗ್ಲಿಷ್ ಕಲರವ. ಹುಬ್ಬಳ್ಳಿಯ ಅಪ್ಪಟ ಜವಾರಿ ಕನ್ನಡ 22 ವರ್ಷ ಮಾತಾಡಿ ಬಂದೊನಿಗೆ ಯಾವುದೊ ಬೇರೆ ಜಗತ್ತಿಗೆ ಬಂದಂಗ ಆಯಿತು ..ಅಲ್ಲಿ ಪರಿಚಯವಾದವ್ನೆ  ಸಚಿನ್, ನಾನ ಅವತ್ತು ಅನ್ಕೊಂಡಿರಲಿಲ್ಲ ಇದೆ ಸಚಿನ್ ಜೊತೆ ನಾನು ನನ್ನ ಮುಂದಿನ ಎರಡುವರೆ ವರ್ಷ ಕಳಿತೀನಿ  ಅಂತಾ. ಟ್ರೇನಿಂಗನಲ್ಲಿ   ನಂದು ಅವನದುಇಬ್ಬರದೂ ಲಾಸ್ಟ್ ಬೆಂಚ್. ನಮಗೆ ಗೊತ್ತಿಲ್ಲದೆ ನನಗೊಬ್ಬ ಒಳ್ಳೆ ಸ್ನೇಹಿತನನ್ನ ಕೊಟ್ಟಿತ್ತು ಅದೇ ಲಾಸ್ಟ್ ಬೆಂಚ್.

ಹಂಗೆ ಪರಿಚಯವಾದ ಸ್ನೇಹ ಮುಂದೆ ಗಟ್ಟಿಯಾಗುತ್ತಾ ಹೋಯಿತು, ಯಾವದು ಯಾವುದೊ PG ಗಳಲ್ಲಿದ್ದ ನಾವು 6 ತಿಂಗಳ ತರುವಾತ, 5  ಜನ  ಸ್ನೇಹಿತರ ಜೊತೆ ಸೇರಿ ಮನೆ ಮಾಡಿದ್ವಿ. ಅಲ್ಲಿಂದಇಲ್ಲಿಯವರೆಗೂ 2 ಮನೆ ಬದಲಾವಣೆ ಮಾಡಿದ್ರು ನನ್ನ ರೂಮ್’ಮೇಟ್ ಆಗಿ ಸಚಿನ ಮಾತ್ರ ಹಾಗೆ  ಇದ್ದ.

ನಾನು ಅವನ ಬಗ್ಗೆ ಒಂದಿಷ್ಟು ಹೇಳಲಿಲ್ಲಾ ಅಂದ್ರೆ ಈ ಲೇಖನ ಬರೆದಿದ್ದು ಸಾರ್ಥಕ ಆಗೋಲ್ಲ, ಸಚಿನ್ ಹೆಸರೇ ಹೇಳೋ ಹಾಗೆ ಅವನು ಸ-ಚಿನ್ನ, ಒಳ್ಳೆ ಮನಸ್ಸು, ಒಳ್ಳೆ ಮಾತು,  ಒಂದಿಷ್ಟು ಚೇಷ್ಟೆ,ನನಗೆ ಬೆಂಗಳೂರು ಹೊಸದು ಆದರೆ ಅವನಿಗೆ ತುಂಬಾ ಗೊತ್ತು , ಇನ್ನು Smartphone ಮುಖ ನೋಡದ ನಮಗೆ   ಎಲ್ಲೇ ಹೋಗಬೇಕಾದರು ಅವನೇ Navigator .ನಾವು ಮನೆ ಹುಡಕಲು ಅವನದೇಸಾರಥ್ಯ, ನನ್ನ ಹೊಸ ಬೈಕ್ ತೆಗೆದುಕೊಳ್ಳುವಾಗ ಅವನದೇ ಸಲಹೆ, ಅವನಿಗೆ ಎಲ್ಲಾ ಗೊತ್ತಿತ್ತು ಅನ್ನಿಸಿಬಿಡ್ತಿತ್ತು. Most the time ನಾನು ಏನೆ ಮಾಡ್ಬೇಕಾದ್ರು ಅವನ ಒಂದು  ಸಲಹೆ ಕೇಳಿರುತ್ತಿದ್ದೆ.

ಬೈಕ್ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದ್ದ ನಂಗೆ  ಈ ದೆವ್ವನಂತ ಬೆಂಗಳೂರಲ್ಲಿ ಹಿಂದೆ ಕೂತು ಅಪ್ಪನ ಹಾಗೆ ಬೈಕ್ ಹೊಡೆಯೋದು ಕಲಿಸಿದವನು  ಅವನೇ, ಮುಂದೆ ನಿಂತು ಹೊಸ ಬೈಕ್ ಕೊಡಿಸಿದವನೂಅವನೇ. ಮೊದಮೊದಲು ಇಲ್ಲಿನ ಟ್ರ್ಯಾಫಿಕ್, ಧೂಳು ಎಲ್ಲದರ ಸಲುವಾಗಿ ಬೆಂಗಳೂರನ್ನ ತುಂಬಾ ಧ್ವೇಷಿಸುತಿದ್ದ ನಾನು ಸಚಿನ್ ಜೊತೆ ಸೇರಿ ನನಗೆ ಗೊತ್ತಿಲ್ಲದೆ ಬೆಂಗಳೂರನ್ನ ಪ್ರೀತಿಸಲು ಕಲಿತುಬಿಟ್ಟೆ.  ಪ್ರತಿ ಶನಿವಾರ ರವಿವಾರಗಳ ನಮ್ಮ ಖುಷಿಗೆ ಬೆಂಗಳೂರಿನ ತುಂಬಾ ಸ್ಥಳಗಳು ಸಾಕ್ಷಿಯಾಗಿವೆ.

ಅದೇನೋ ನನಗೆ ಗೊತ್ತಿಲ್ಲದೇ ಅವನ ಜೊತೆ ಸೇರಿ ತುಂಬಾ ಒಳ್ಳೆ ಮಾಡಿಬಿಟ್ಟಿದೀನಿ.  ರೋಡಲ್ಲಿ ಯಾರದೋ ಆಕ್ಸಿಡೆಂಟ್ ಅದಾಗ ಅವರನ್ನ ಎತ್ತಿ ಹಾಸ್ಪಿಟಲ್’ಗೆ ಸೇರ್ಸಿದಿವಿ, ಅವರ ಬೈಕ್ ಎತ್ತಿರಿಪೇರ್ ಮಾಡಿಕೊಡ್ಸಿದಿವಿ,ನಾವು ಜೊತೆಗೆ ತುಂಬಾ ನಕ್ಕಿದಿವಿ, ನಮ್ಮ ಜೊತೆಗಾರರಿಗೆ ಮಾರಣಾಂತಿಕ ಆಕ್ಸಿಡೆಂಟ್ ಅದಾಗ ಜೊತೆಗೂಡಿ ಅತ್ತಿದಿವಿ, ಜೊತೆಗೂಡಿ ದೇವರಲ್ಲಿ ಪ್ರಾರ್ತಿಸಿದಿವಿ. ಅವತ್ತು ಆಆಕ್ಸಿಡೆಂಟ್  ಅದಾಗ ಸಚಿನ್ ತಗೊಂಡ ಒಂದೊಂದು ಡಿಸಿಷನ್’ಗಳನ್ನು  ನಾನು ಬೆರೆಗಾಗಿ ನೋಡಿದ್ದೇ, ಅವನ ಆ ನಿರ್ಧಾರಗಳೇ ಅವತ್ತು ನಮ್ಮ ಫ್ರೆಂಡ್’ನ ಪ್ರಾಣ ಉಳಿಸಿದ್ದವು.

ಸಚಿನ್ ಜೋತೆಗಿರುತ್ತಿದ್ದರೆ ನಂಗೆ ಪ್ರಾಬ್ಲಂ ಸಾಲ್ವ್ ಮಾಡೋದ್ ತುಂಬಾ ಸುಲಭ ಅನ್ನಿಸಿಬಿಡುತ್ತಿತ್ತು ಯಾಕಂದ್ರೆ ನನ್ನ ಸಮಸ್ಯೆಗಳಿಗೆ ನನ್ನ ಹೆಗಲು ಮಾತ್ರವಲ್ಲ ಇನ್ನೊಂದು ಹೆಗಲಾಗಿಅವನಿರುತ್ತಿದ್ದ.ಇವತ್ತು ಅವನು ಕೆಲಸದ ನಿಮಿತ್ತ ನಮ್ಮ ಮನೆ ತೊರೆದು ಬೇರೆ ಕಡೆ ಹೋಗುವ ಅನಿವಾರ್ಯತೆ ಬಂದೊದಗಿದೆ. ಅದೇ ಫೀಲಿಂಗ್ ಇಷ್ಟೆಲ್ಲಾ ಬರೆಯಲು ಪ್ರೇರಣೆ.

ಜನಗಳಿಂದ ತುಂಬಿ ತುಳುಕುತ್ತಿರುವ ಬೆಂಗಳೂರಲ್ಲಿ ಒಬ್ಬ ಒಳ್ಳೆ ಸ್ನೇಹಿತನನ್ನ ಪಡೆದ ನಾನೇ ಧನ್ಯ ಅನ್ನೋಕೆ ಹಿಂಜರಿಕೆ ಇಲ್ಲ. ಇನ್ನು ಬಹಳಷ್ಟು ಸಂಗತಿಗಳನ್ನು ಬರಿಯೋದಿದೆ ಇವತ್ತಿಗೆ ಇಷ್ಟು ಸಾಕು..

  • Malatesh

malateshmyageri11@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post