ರಕ್ಷಣೆಯ ವಿಚಾರದಲ್ಲಿ ಮೃದು ಮತ್ತು ಕಠಿಣ ಎರಡು ಸ್ವಾದಗಳು ಒಟ್ಟೊಟ್ಟಿಗೆ ಇರುವುದು ಎಂದರೆ ಕೊಂಚ ಗೊಂದಲಕ್ಕೆ ಒಳಗಾಗುವುದು ಸಹಜ… ಆದರೆ ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ಅದೇ .. ಮೃದು ಮತ್ತು ಕಠಿಣ…
ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾದ ಅರುಣ್ ಜೇಟ್ಲಿಯವರು ರಕ್ಷಣಾ ಸಚಿವರ ಸ್ಥಾನವನ್ನು ತುಂಬಿದ್ದರು… ಅವರಲ್ಲೂ ಯಾವುದೇ ಕೊರತೆ ಕಾಣಲಿಲ್ಲ… “ರವಿ ಕಾಣದ್ದನ್ನು ಕವಿ ಕಂಡ…” ಎನ್ನುವಂತೆ ನಮ್ಮ ಪ್ರಧಾನಿಗಳಿಗೆ ಏನು ಕೊರತೆ ಕಾಣಿಸಿತ್ತೋ ?? ಅವರೇ ಬಲ್ಲರು…
ಅದೇನಾಯಿತೋ ಇದ್ದಕ್ಕಿದ್ದಂತೆ ತನ್ನ ಸಚಿವ ಸಂಪುಟದ ಕೆಲವೊಂದು ಸಚಿವರ ಸ್ಥಾನಗಳನ್ನು ಬದಲಾಯಿಸಿದರು… ಮೋದಿಯೆನ್ನುವ ಪ್ರಪಂಚದಲ್ಲಿ ಏನೇನು ಹಾರಾಡುತ್ತದೋ, ಹರಿಯುತ್ತದೋ… ಅವರ ಚಿಂತನಾಶಕ್ತಿಯನ್ನು ಬಲ್ಲವರು ಯಾರು…??? ಒಂದಂತೂ ಸತ್ಯ ಭಾರತವನ್ನು ಉತ್ತುಂಗಕ್ಕೆ ಏರಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ…ಮೋದಿ ಸಂಪುಟದ ಪ್ರಮುಖ ಬದಲಾವಣೆಯಾಗಿ ದೇಶದ ರಕ್ಷಣೆಯ ಹೊಣೆ ಹೊತ್ತದ್ದು ‘ಮನೋಹರ್ ಪರಿಕ್ಕರ್’
ಇವರ ಅಗತ್ಯ ಏನಿತ್ತು ಎನ್ನುವ ಪ್ರಶ್ನೆ ಮಾಡಿದ ಜನರೇ ಹೆಚ್ಚು… ಪರಿಕ್ಕರ್ ರವರು ಆ ವೇಳೆಯಲ್ಲಿ ಗೋವಾದ ಮುಖ್ಯಮಂತ್ರಿಯಾಗಿದ್ದರು…. ಅವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಮಾಡಿ ದೇಶದ ರಕ್ಷಣಾ ಸಚಿವರನ್ನಾಗಿ ಮಾಡುವ ಅಗತ್ಯತೆ ಇತ್ತಾ ?? ಜೇಟ್ಲಿಯಲ್ಲಿದ್ದ ಕೊರತೆಯದರೂ ಏನು?? ಎನ್ನುವ ಪ್ರಶ್ನೆಗಳು ಏಳದೇ ಇರಲು ಸಾಧ್ಯವೇ ಇಲ್ಲ.. ಆದರೆ ಪರಿಕ್ಕರ್ ಬಗ್ಗೆ ಏನೊಂದು ತಿಳಿಯದವರು ಮಾತ್ರ ಹೀಗೆಲ್ಲಾ ಚಿಂತಿಸಬಹುದು..
ಪರಿಕ್ಕರ್ ಒಬ್ಬ ಸಾಮಾನ್ಯ ವ್ಯಕ್ತಿ ಎಂದರೆ ಅದು ತಪ್ಪು.. ಅವರು ಐಐಟಿಯ ಚಿನ್ನದ ಪದಕ ಪಡೆದ ಪದವೀಧರ.. ಉತ್ತಮ ನಡತೆಗೆ ಹೆಸರು ಪಡೆದ, ತುಂಬಾ ಸರಳ ಸ್ವಭಾವದ ಅತ್ಯಂತ ಪ್ರಾಮಾಣಿಕ ಪಾರದರ್ಶಕ ವ್ಯಕ್ತಿ… ಗೋವಾದ ಜನರು ಇಂದಿಗೂ ಅವರನ್ನು ಪಕ್ಷ ಜಾತಿ ಮತ ಪಂಥ ಭೇಧವನ್ನು ಮರೆತು ಹಾಡಿಹೊಗಳುತ್ತಾರೆ..
ಒಮ್ಮೆ ತನ್ನ ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದಾಗ ಇನ್ನೊಂದು ವಾಹನ ಸವಾರ ಡಿಕ್ಕಿ ಹೊಡೆದ. ತನ್ನದೇ ತಪ್ಪಿದ್ದರೂ ದ್ವಿಚಕ್ರ ಸವಾರರಿಗೆ ಮನಬಂದಂತೆ ನಿಂದಿಸಿದ. ಸುತ್ತಮುತ್ತ ತುಂಬಾ ಜನ ಸೇರಿದರು.. ದ್ವಿಚಕ್ರ ವಾಹನ ಸವಾರ ಮಾತ್ರ ತಟಸ್ಥರಾಗಿದ್ದರು… ಅನಂತರ ತಿಳಿಯಿತು ಇನ್ನೊಂದು ವಾಹನ ಸವಾರನಿಗೆ ಆ ದ್ವಿಚಕ್ರ ವಾಹನ ಸವಾರ ತನ್ನ ‘ರಾಜ್ಯದ ಮುಖ್ಯಮಂತ್ರಿ’ ಎಂದು….!!! ಅಂದರೆ ಗೋವಾ ರಾಜ್ಯದ ಅಂದಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್. ಅವರ ಬಳಿ ಕ್ಷಮೆ ಕೇಳಿ ಅಲ್ಲಿಂದ ತೆರಳಿದ ಪುಣ್ಯಾತ್ಮ….
ಇವರ ಸರಳ ಜೀವನ ಶೈಲಿ ಮತ್ತು ಕ್ಷಮಿಸುವ ಕರುಣಾಮಯ ಹೃದಯಕ್ಕೆ ಇದೇ ಘಟನೆ ನಿದರ್ಶನ…
ನಮ್ಮ ದೇಶದ ಒಬ್ಬ ಸೈನಿಕನ ಬಲಿದಾನವಾದಾಗ ಹಿಂಜರಿಯದೆ ತಾನೊಬ್ಬ ಮಂತ್ರಿ ಎನ್ನುವ ಅಹಂ ಭಾವ ಇಲ್ಲದೆ ತನ್ನೆಲ್ಲಾ ಕಾರ್ಯವನ್ನು ಬದಿಗಿಟ್ಟು ಆ ಮೃತ ಯೋಧನ ಮನೆಗೆ ನೇರವಾಗಿ ಹೋಗುವ ಅಭ್ಯಾಸವನ್ನು ಇಟ್ಟುಕೊಂಡು ಮಾಹಾನುಭಾವ’ ಹುಟ್ಟುಹಬ್ಬದ ಆಚರಣೆಗಾಗಿ ಮಾಡುವ ಖರ್ಚ್ಚನ್ನು ಉಳಿತಾಯ ಮಾಡಿ ಆ ಉಳಿತಾಯದ ಹಣವನ್ನು
ಚೆನ್ನೈನಲ್ಲಿ ಸಂಭವಿಸಿದ ಅತಿವೃಷ್ಟಿಯ ಪ್ರವಾಹ ಸಂತ್ರಸ್ತರಿಗಾಗಿ ವಿನಿಯೋಗಿಸಲು ಕರೆಕೊಟ್ಟ ಮಹನೀಯ ಈ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ …!’ಮಾತು ಬಂಗಾರ ಮೌನ ಬೆಳ್ಳಿ’ ಎನ್ನುವಂತಿರುವ ಇವರು ಸದಾ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ… ‘ಕಾಯಕವೆ ಕೈಲಾಸ’ ಎನ್ನುವ ಬಸವಣ್ಣನವರ ಕರೆಯ ಪ್ರತಿರೂಪವೇ ಇವರು…
ಇವರು ಅಧಿಕಾರ ವಹಿಸಿಕೊಂಡಾಗ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳ ಖಜಾನೆಯೇ ಖಾಲಿಯಾಗಿತ್ತು..ತಕ್ಷಣ ಶಸ್ತ್ರಾಸ್ತ್ರ ಖರೀದಿಗೆ ಹಸಿರು ನಿಶಾನೆ ಸಿಕ್ಕಿ ಎಲ್ಲಾ ಕೊರತೆಯನ್ನು ನೀಗಿಸಿದರು…ನಮ್ಮ ಸೇನೆ ಯಾರಿಗೂ ಏನೂ ಕಮ್ಮಿಯಿಲ್ಲವೆಂದು ತೋರಿಸಿಕೊಟ್ಟು ಇದೀಗ ನಾಲ್ಕನೇ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ನಮ್ಮ ರಕ್ಷಣಾ ಸಚಿವರದ್ದೇ ಸಿಂಹ ಪಾಲು… ಅದೂ ಸಾಲದೆಂಬಂತೆ ಶತ್ರುಗಳನ್ನು ವಿದೇಶಿ ನೆಲದೊಳಗೆ ನುಗ್ಗಿ ಅಲ್ಲೇ ಉಗ್ರರನ್ನೆಲ್ಲಾ ನೆಲಕ್ಕುರುಳಿಸಿದ ಕೀರ್ತಿ ಭಾರತೀಯ ಸೇನೆಗೆ ಸೇರಬೇಕು. ಪಂಜಾಬ್ ನ ಪಠನ್ ಕೋಟ್ ಭಾರತೀಯ ವಾಯುನೆಲೆಗೆ ಉಗ್ರರ ದಾಳಿ ನಡೆದಾಗ ಅದನ್ನು ಸಮರ್ಥವಾಗಿ ಎದುರಿಸಿದ ಕಾರ್ಯವನ್ನು ನಿಜಕ್ಕೂ ಶ್ಲಾಘನೀಯ …ಆ ಉಗ್ರರ ದಾಳಿಯನ್ನು ಸಮರ್ಥವಾಗಿ ಏದುರಿಸಿದರೂ ನಮ್ಮ 7 ಕೆಚ್ಚೆದೆಯ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು..
“ನಾವು ನಮ್ಮ ಸೈನಿಕರ ಬಲಿದಾನವನ್ನು ಗೌರವಿಸುತ್ತೇವೆ ಆದರೆ ಅವರ ಬಲಿದಾನದಿಂದ ಅತ್ಯಂತ ದುಃಖಕ್ಕೂ ಒಳಗಾಗಿದ್ದೇವೆ… ನಾವು ಶಾಂತಿಯನ್ನು ಬಯಸುತ್ತೇವೆ.. ಆದರೆ ನಮಗೆ ನೋವು ಕೊಟ್ಟವರಿಗೆ ನೋವಿನಿಂದಲೇ ಉತ್ತರ ಕೋಡುತ್ತೇವೆ… ನಮ್ಮ ತಾಳ್ಮೆಗೂ ಮಿತಿಯಿದೆ. ಇಡೀ ಜಗತ್ತು ಒಂದು ವರ್ಷದೊಳಗೆ ಫಲಿತಾಂಶ ಕಾಣಲಿದೆ “.. ಎನ್ನುವ ಕಠಿಣ ಸಂದೇಶವನ್ನು ಪಾಕಿಸ್ಥಾನಕ್ಕೆ ರವಾನಿಸಿದ್ದಾರೆ… ಒಂದು ಕಡೆ ಪರಿಕ್ಕರ್ ಸರಳ, ಮಿತಭಾಷಿಯಂತೆ ಕಂದರೂ ಮತ್ತೊಂದು ಕಡೆ ಅವರೆಂತಹಾ ಧೈರ್ಯವಂತ, ವಜ್ರದಂತಹ ಕಠಿಣ ಹೃದಯವನ್ನು ಹೊಂದಿದ್ದಾರೆ ಎಂಬುದನ್ನೂ ತೋರಿಸುತ್ತದೆ…”ಪಾಕ್ ಮತ್ತೊಮೆ ತನ್ನಬಾಲ ಬಿಚ್ಚಿದರೆ ಪ್ರಪಂಚದ ನಕ್ಷೆಯಲ್ಲಿ ಪಾಕಿಸ್ಥಾನವೇ ಇರದು ..” ಎಂದು ಅಂದಿನ ವಾಜಪೇಯಿ ಸರ್ಕಾರದ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಖಡಕ್ ಸಂದೇಶವನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.. ಜಾರ್ಜ್ ಫೆರ್ನಾಂಡಿಸ್ ನಂತರ ಮನೋಹರ್ ಪರಿಕ್ಕರ್ ಪಾಕಿಸ್ಥಾನಕ್ಕೆ ಕಠಿಣ ಸಂದೇಶ ರವಾನಿಸಿದ ರಕ್ಷಣಾ ಸಚಿವರು ಎನ್ನಬಹುದು…
ರಕ್ಷಣಾ ಸಚಿವ ಏ.ಕೆ ಆಂಟನಿಯವರು ಇದ್ದಾದ ಅದೆಷ್ಟು ಬಾರಿ ಉಗ್ರರು ದಾಳಿ ನಡೆಸಿದ್ದಾರೋ?? ಅವರೇ ಬಲ್ಲರು… ಮುಂಬೈಯ ದಾಳಿ ನಡೆದ ಮೇಲೂ ಒಂದು ಭಾರಿಯೂ ಕಠಿಣ ಸಂದೇಶವನ್ನು ರವಾನಿಸುವ ಧೈರ್ಯವನ್ನು ಮಾಡಿರಲಿಲ್ಲ… ಎಲ್ಲಾ ರಾಜಕೀಯದ ದುರುದ್ದೇಶ.. ದೇಶವೇ ಒಂದಾದಾಗಲು ಅಂದಿನ ಪ್ರಧಾನಿ ಮನಮೋಹನ ಸಿಂಗ್ ರಂತೆ ರಕ್ಷಣಾ ಸಚಿವರೂ ಮೌನವಾಗಿಯೇ ಇದ್ದರು… ಯುದ್ಧವೇ ನಡೆಸಬೇಕೆನ್ನುವುದು ನಮ್ಮ ಬೇಡಿಕೆಯಲ್ಲ.. ಕನಿಷ್ಟ ಪಕ್ಷ ಎಚ್ಚರಿಕೆಯನ್ನಾದರೂ ನೀಡಬಹುದಿತ್ತು…
ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರ ಮೇಲುಸ್ತುವಾರಿಯಲ್ಲಿ ನಮ್ಮ ಸೇನೆ ಬಲಗೊಳ್ಳತ್ತಿದೆ.. ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ…. ಗಡಿಯ ಆಯಕಟ್ಟಿನ ಪ್ರದೇಶಗಳಲ್ಲಿ ಲೇಸರ್ ಬೇಲಿಯ ಚಿಂತನೆಯನ್ನು ಮಾಡಿ ಅದನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬುಲೆಟ್ ಪ್ರೂಫ್ ಜಾಕೆಟನ್ನು ಖರೀದಿಸಲು ಅನುಮತಿ ದೊರೆತಿದೆ. ಸೇನೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದ್ದಾರೆ. ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ. ಬಹುಶಃ ಈಗ ನಮ್ಮ ದೇಶಕ್ಕೆ ಮನೋಹರ್ ರಂತಹಾ ರಕ್ಷಣಾ ಸಚಿವ ಅವಶ್ಯಕತೆ ಇತ್ತು.. ಎಂದು ಅನಿಸಿದ್ದಂತೂ ಸತ್ಯ..
-Jagat Bhat
jagath.bhat@yahoo.com
Facebook ಕಾಮೆಂಟ್ಸ್