ಪರಿಸರದ ನಾಡಿ ಬಾನಾಡಿ

ಎಲ್ಲ ಗಡಿಗಳ ಮೀರಿ ಹಕ್ಕಿಗಳು ತೋರಿ! – 2

ಇಲ್ಲಿಗೇ ಮುಗಿದಿಲ್ಲ, ವಲಸೆ ಹೋಗೋದು ಅಂದ್ರೆ ಸುಮ್ಮನೇ ಆಗತ್ತಾ? ನಾವು ಒಂದೆರಡು ದಿನದ ಟ್ರಿಪ್ ಹೋಗ್ಬೇಕು ಅಂದ್ರೆ ಎಷ್ಟೆಲ್ಲಾ ತಯಾರಿ ಮಾಡ್ಕೊಳ್ತೇವೆ, ಅದಕ್ಕಿಂತ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತವೆ ಹಕ್ಕಿಗಳ ಪ್ರಪಂಚ. ಅದೇನೆಂದು ಮುಂದಿನ ವಾರ ನೋಡಿ ಎನ್ನುವುದರೊಂದಿಗೆ ನಿಲ್ಲಿಸಿದ ಕಳೆದ ವಾರದ ಬರಹದ ಮುಂದುವರಿದ ಭಾಗ….

ಇದೂ ಓದಿ: ಎಲ್ಲ ಗಡಿಗಳ ಮೀರಿ ಹಕ್ಕಿಗಳು ತೋರಿ! – 1

ವಲಸೆಯ ಸಿದ್ಧತೆ

ದೂರ ಪ್ರಯಾಣ ಆರಂಭಿಸುವುದಕ್ಕೆ ಮುಂಚೆ, ವಲಸೆ ಹೋಗುವ ಪಕ್ಷಿಗಳು ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ವಲಸೆಗೆ ಸ್ವಲ್ಪ ದಿನಕ್ಕೆ ಮೊದಲಷ್ಟೇ ತನ್ನ ಸಂತಾನೋತ್ಪತ್ತಿ ಮುಗಿಸಿ, ತಮ್ಮ ಮಕ್ಕಳನ್ನು ದೊಡ್ಡದು ಮಾಡುತ್ತವೆ. ಕೇವಲ ತಿಂಗಳ ಮರಿಗಳೂ ವಲಸೆಗೆ ಸಿದ್ಧವಾಗಿರುತ್ತವೆ. ಪ್ರಯಾಣದ ಸಮಯದಲ್ಲಿ ಪೋಷಕವಾಗುವಂತೆ, ಹೆಚ್ಚು ಹೆಚ್ಚು ತಿಂದು ಒಂದು ಪದರ ಅಧಿಕ ಕೊಬ್ಬನ್ನು ದೇಹದಲ್ಲಿ ಶೇಖರಿಸಿಕೊಳ್ಳುವುವು. ಹೆಚ್ಚಿನ ಹಕ್ಕಿಗಳು ಗುಂಪಾಗಿ ಹಾರುತ್ತವೆ. ತಮ್ಮಲ್ಲಿನ ಒಗ್ಗಟ್ಟು ಪ್ರದರ್ಶಿಸುತ್ತವೆ. (ಕೆಲ ಹಕ್ಕಿಗಳು ಒಂಟಿಯಾಗಿ ಹಾರುವುದೂ ಉಂಟು.

ಉದಾ:- ನೀಲಿ ನೀಲಕಂಠ(European roller),   ಯುರೋಪ್ ಕೋಗಿಲೆ (European cuckoo) ಸಣ್ಣ ಪಕ್ಷಿಗಳು ಗಂಟೆಗೆ ಸುಮಾರು

30 ಕೀ.ಮೀ ಹಾರಿದರೆ, ದೊಡ್ಡ ಹಕ್ಕಿಗಳು 80 ಕೀ.ಮೀ ವೇಗದಲ್ಲಿ  ಹಾರಬಲ್ಲುವು. ಸಾಮಾನ್ಯವಾಗಿ ಎಲ್ಲಾ ಹಕ್ಕಿಗಳು ದಿನಕ್ಕೆ 8 ಗಂಟೆ ಪ್ರಯಾಣ ಮಾಡಬಲ್ಲುವು.

ಸಮುದ್ರ ಮಧ್ಯೆ ಹಾರುವಾಗ ಕೆಲ ಹಕ್ಕಿಗಳು 35 ರಿಂದ 38 ಗಂಟೆ ಹಾರುವ ಸಂದರ್ಭವೂ ಇದೆ. ಇಂಥ ಸಂಧರ್ಭದಲ್ಲಿ ಅನೇಕ ಸಲ ಈ ಪಕ್ಷಿಗಳು ಗಾಳಿಯ ರಭಸಕ್ಕೆ ಸಿಕ್ಕಿ ಸಮುದ್ರ ಜೀವಿಗಳಿಗೆ ಆಹಾರವಾಗುತ್ತವೆ. ಒಂದರ್ಥದಲ್ಲಿ ಹಕ್ಕಿಗಳ ವಲಸೆ ಸಮುದ್ರಜೀವಿಗಳಿಗೆ ಹಬ್ಬ.

ಹಗಲು ಹೊತ್ತು ವಲಸೆ ಹಾರುವ ಹಕ್ಕಿಗಳಿಗೆ ಸೂರ್ಯನೇ ದಿಕ್ಸೂಚಿ. ಸೂರ್ಯನ ದಿಕ್ಕನ್ನು ಗಮನಿಸಿ ತಮ್ಮ ಗಮನ ಜಗವನ್ನು ನಿರ್ಧರಿಸುವ ಹಕ್ಕಿಗಳ ತಜ್ಞತೆ ನಮಗಂತೂ ದೂರದ ಸಾಧ್ಯತೆ. ರಾತ್ರಿ ಪ್ರಯಾಣ ಹಕ್ಕಿಗಳಿಗೆ ಹೆಚ್ಚು ಸುರಕ್ಷಿತ, ಇತರೆ ಪಕ್ಷಿಗಳಿಂದ ಜೀವಕ್ಕೆ ಕುತ್ತಿಲ್ಲ. ರಾತ್ರಿ ವೇಳೆ ನಕ್ಷತ್ರಗಳು ಹಾಗು ನಕ್ಷತ್ರಪುಂಜಗಳೇ ಈ ಹಕ್ಕಿಗಳಿಗೆ ಮಾರ್ಗದಶಕ.

ಇಷ್ಟೊಂದು ಸಾಹಸದಿಂದ ವಲಸೆ ಬರುವ ಈ ಪುಟ್ಟ ಜೀವಿಗಳಲ್ಲಿ ಮತ್ತೊಂದು ವೈಶಿಷ್ಟ್ಯ ಉಂಟು. ನಮ್ಮಲ್ಲಿಗೆ ಬಂದ ಹಕ್ಕಿಗಳು ಪುನಃ ತವರಿಗೆ ಮರಳುವಾಗ ಶುರುವಿನಲ್ಲಿ ಗಂಡು ಹಕ್ಕಿಗಳು ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿ ಸಂತಾನಾಭಿವೃದ್ಧಿಗೆ ತಯಾರು ಮಾಡುತ್ತವೆ. ಕೆಲ ದಿನ ಬಿಟ್ಟು ಹೆಣ್ಣು ಹಕ್ಕಿಗಳು ಸ್ವಕ್ಷೇತ್ರ ಸೇರುತ್ತವೆ, ತದನಂತರದಲ್ಲಿ ಅಂದರೆ ಕೊನೆಯದಾಗಿ ಮರಿಗಳು ಅಪ್ಪ ಅಮ್ಮನನ್ನು ಸೇರಿಕೊಳ್ಳುತ್ತವೆ. ಆ ಹೊತ್ತಿಗಾಗಲೆ ಮರಿಗಳು ಪ್ರೌಢಾವಸ್ಥೆಗೆ ಬಂದುಬಿಟ್ಟಿರುತ್ತವೆ.

ಪುನರ್ವಲಸೆ ಎಷ್ಟು ನಿಖರವಾಗಿರುತ್ತದೆ ಗೊತ್ತಾ?

ಹೌದು… ಈ ಪಕ್ಷಿಗಳು ಎಲ್ಲಾ ಸರಿಯಿದ್ದಲಿ ಕಳೆದ ವರ್ಷ ಎಲ್ಲಿ ಗೂಡು ಕಟ್ಟಿತ್ತೋ ಅಲ್ಲೇ ಪುನಃ ಗೂಡು ನಿರ್ಮಿಸುವುದು. ಗೂಡಿಗೆ ಏನೂ ಹಾನಿಯಾಗದಿದ್ದಲ್ಲಿ ಹೆಣ್ಣು ಹಕ್ಕಿ ಅದೇ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಇವುಗಳ ನಿಖರತೆ ಮತ್ತು ನೆನಪಿನ ಶಕ್ತಿ ದಂಗು ಬಡಿಸುತ್ತದೆ.

ಸಂತಾನೋತ್ಪತ್ತಿ ಮುಗಿಸಿ ಮುಂದಿನ ಹಂಗಾಮಿಗೆ ಮತ್ತೆ ಭಾರತಕ್ಕೆ ವಲಸೆ ಬರುವಾಗ ಮೊದಲು ನಾಡು ತಲುಪುವುದು ಹೊಸ ಮರಿಹಕ್ಕಿಗಳು, ಅನಂತರ ಹೆಣ್ಣು, ಆಮೇಲೆ ಗಂಡು! ಈಗಷ್ಟೇ ಹಾರಲು ಕಲಿತ, ಹಿಂದಿನ ಯಾವ ಅನುಭವವೂ ಇಲ್ಲದ ಕೂಸು, ಅದು ಹೇಗೆ ಮತ್ತು ಏಕೆ? ವಲಸೆಯಲ್ಲಿ ನಾಯಕನಾಯಿತೆಂಬುದು ಮತ್ತೆ ಮತ್ತೆ ವಿಸ್ಮಯ.

ಆಧುನಿಕ ವಿಧಾನಗಳು

 ವೈಜ್ಞಾನಿಕ ತಂತ್ರಕೌಶಲಗಳು ಹೆಚ್ಚುತ್ತಾ ಹೋದ ಹಾಗೆ ಹಕ್ಕಿಗಳ ವಲಸಯ ಅಧ್ಯಯನ ಸುಲಭವಾಗುತ್ತಾ ಹೋಯಿತು. ಇಂದು ನಾವು ಕಂಡ ಪಕ್ಷಿ ವಿಸ್ಮಯವನ್ನು ಇಂದೇ ಇತರರೊಂದಿಗೆ ಹಂಚಿಕೊಳ್ಳುವ ಅವಕಾಶ ವಿದ್ಯುನ್ಮಾಧ್ಯಮದ ಸಹಾಯದಿಂದ ಸಾಧ್ಯವಾಯಿತು. ಹಾಗೆಂದು ಅಳೆದು ತೂಗಿದಾಗ ಹಕ್ಕಿಗಳಿಗಾಗಲೀ ಅಥವಾ ಮಾನವತೆಗಾಗಲೀ ಇದರಿಂದ ಎಷ್ಟು ಅನುಕೂಲವಾಯಿತೆಂದು ಹೇಳುವುದು ಕಷ್ಟ.

1909ರಲ್ಲಿ ಡೆನ್ಮಾರ್ಕ್ ದೇಶದಲ್ಲಿ  ರಿಂಗಿಂಗ್ (Ringing) ಎಂಬ ತಂತ್ರ ಶುರುವಾಯಿತು. ಪಕ್ಷಿಗಳು ವಲಸೆ ಹೋಗುವುದಕ್ಕೆ ಮೊದಲು ಅದನ್ನು ಹಾನಿಯಾಗದಂತೆ ಹಿಡಿದು ಅದರ ಕೊರಳಿಗೋ, ಕಾಲಿಗೋ ಬಣ್ಣದ ರಿಂಗ್ ಹಾಕುವರು . ಅದರಲ್ಲಿ ಸಂಖ್ಯಾಧಾರಿತ ಹೆಸರೊಂದನ್ನು ಬರಯುವರು. ನಂತರದ ಕೆಲಸ ಪಕ್ಷಿವೀಕ್ಷಕರದ್ದು. ಎಲ್ಲಿ ಈ ರಿಂಗ್ ಹಾಕಿದ ಹಕ್ಕಿ ಹೋಯಿತು ಎಂಬುದನ್ನು ಗಮನಿಸುವುದು. ಮಂಗೋಲಿಯಾದ Bar-headed goose ( ದೊಡ್ಡ ಬಾತುಕೋಳಿ) ಉತ್ತಮ ಉದಾಹರಣೆ. ಸಂತಾನೋತ್ಪತ್ತಿ ಸಮಯದಲ್ಲಿ ಅಲ್ಲಿ ರಿಂಗ್ ಹಾಕಿದ ಬಾತುಗಳು ಮೈಸೂರಿನ ಕೆರೆಗಳಲ್ಲಿ ದಶಂಬರದಲ್ಲಿ ಕಾಣಿಸುತ್ತವೆ. ಈ ರಿಂಗಿಂಗ್ ವಲಸೆಯ ದಿಕ್ಕನ್ನು ಖಚಿತ ಮಾಡಿವೆ ಮತ್ತು ಈ ಪಕ್ಷಿಗಳ ಜೀವಿತಾವಧಿಯ ಅಧ್ಯಯನದಲ್ಲೂ ಸಹಕಾರಿಯಾಗಿವೆ.

01 Bar headed Goose

Bar headed goose

ಭಾರತದಲ್ಲಿ ರಿಂಗಿಂಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಕ್ಕಿಗಳಿಗೆ ತೊಂದರೆಯಾಗಬಹುದೆಂಬ ಪರಿಸರ ಕಾಳಜಿ. ಇಡೀ ಪರಿಸರವನ್ನು ಅಭಿವೃದ್ಧಿಯ ಹೆಸರಿನಲ್ಲಿ ಹಾಳು ಮಾಡಿ ಕಾಂಕ್ರೀಟ್ ಕಾಡು ಮಾಡಿದ್ದರೂ ಕಾನೂನಿನಲ್ಲಿ ಪರಿಸರ ಕಾಳಜಿ ಇದೆ! ಯುರೋಪ್ನಲ್ಲಿ ರಿಂಗಿಂಗ್ ಅಧ್ಯಯನ ಚೆನ್ನಾಗಿ ನಡೆಯುತ್ತಿದೆ.

RADAR ತಂತ್ರವಿದ್ಯೆಯನ್ನು ಬಳಸಿದ್ದರಿಂದ ಹಕ್ಕಿಗಳು ರಾತ್ರಿ ಸಮಯದಲ್ಲಿ ಹೆಚ್ಚು ವಲಸೆ ಹೋಗುತ್ತವೆ ಎಂಬುದು ಖಾತ್ರಿಯಾಯಿತು. RADAR ಅದು ಯಾವ ಹಕ್ಕಿ ಎಂಬುದು ಗೊತ್ತಾಗುವುದಿಲ್ಲ. ಏನೇ ಆದರೂ ತಂತ್ರವಿದ್ಯೆಗಳು ಪೂರಕವಾಗಿ ಕೆಲಸ ಮಾಡುವುದಾದರೂ ಮನುಷ್ಯನಿಗೆ ಪರ್ಯಾಯವಲ್ಲ.

ಅತಿಥಿಗಳಿಗೆ ನಮ್ಮಲ್ಲಿ ವಾತಾವರಣ / ಸತ್ಕಾರ ಹೇಗಿದೆ?

ಭಾರತಕ್ಕೆ ಪ್ರತೀ ವರ್ಷ ಸುಮಾರು 300 ಪ್ರಭೇದದ ಹಕ್ಕಿಗಳು ವಲಸೆ ಬರುತ್ತವೆ. ಇದರಲ್ಲಿ 60-70 ಶೇಕಡ ನೀರಿನ ಹಕ್ಕಿಗಳು, ಹಾಗು ಈ ಪೈಕಿ ಕಡಲ ಹಕ್ಕಿಗಳೇ ಜಾಸ್ತಿ. ಯುರೋಪ್ನಲ್ಲಿ ಕಲ್ಮಶರಹಿತ ವಾತಾವರಣದಲ್ಲಿ ಬಾಣಂತನ ಮುಗಿಸಿದ ಈ ಹಕ್ಕಿಗಳಿಗೆ ನಮ್ಮಲ್ಲಿ ಕಲ್ಮಶದ ಸ್ವಾಗತ.

ವರ್ಷದಿಂದ ವರ್ಷಕ್ಕೆ ನಮ್ಮ ಕೆರೆಗಳು ಹೆಚ್ಚೆಚ್ಚು ಕೊಳಕಾಗುತ್ತಿದೆ. ಹಾಗಾಗಿ ಹಕ್ಕಿಗಳ ಬರುವಿಕೆಯ ಪ್ರಮಾಣವೂ ಕುಗ್ಗುತ್ತಿದೆ. Bar-headed goose ನಂಥಾ ಹಕ್ಕಿಗಳಿಗೆ ಶುದ್ಧ ನೀರು ಅತ್ಯವಶ್ಯ. ಹೀಗೇ ಮುಂದುವರಿದರೆ ಇವುಗಳು ವಲಸೆಯ ದಿಕ್ಕನ್ನೇ ಬದಲಿಸಿದರೂ ಅಚ್ಚರಿಯಿಲ್ಲ.

Caspian tern

Caspian tern

03 Whimbrell

Whimbrell

ಇನ್ನು ಬಯಲು ಹಕ್ಕಿಗಳದೂ ಇದೇ ಸ್ಥಿತಿ. ಕಳೆದ ವರ್ಷ ಬೇಟೆಯಾಡಿದ, ನಲಿದಾಡಿದ ಜಾಗ ಈ ವರ್ಷ ಬೋಳಾಗಿದೆ. ಅಲ್ಲಿ ಲೇ-ಔಟ್’ಗಳು ಬಂದಿವೆ. ಮುಂದಿನ ವರ್ಷ ಬಡಾವಣೆ. ನಮಗೆ ನಿವೇಶನ, ಹಕ್ಕಿಗಳಿಗೆ ನಿರಶನ ! ನಾವು ನಾಡೆಂದು ಕರೆಯುವ ಕಾಂಕ್ರೀಟ್ ಕಾಡಿನಲ್ಲಿ ಆ ಕಾಡುಹಕ್ಕಿಗಳಿಗೆ ಯಾವುದೇ ಆಸಕ್ತಿ ಅವಕಾಶಗಳು ಇಲ್ಲದಿರುವುದರಿಂದ ಮುಂದೊಂದು ದಿನ ನಮ್ಮ ಮಕ್ಕಳು ಕೇವಲ ಕಾರ್ಟೂನ್ ಹಕ್ಕಿಗಳನ್ನು ನೋಡುವಂತಾದರೆ ಆಶ್ಚರ್ಯವಿಲ್ಲ. ಆದರೆ ಹಕ್ಕಿಗಳ ವಲಸೆಯೆಂಬ ಆಶ್ಚರ್ಯಕ್ಕೆ ಕಾರ್ಟೂನ್ ಎಂಬ ಆಶ್ಚರ್ಯ ಪರ್ಯಾಯವಾದರೆ ಆಶ್ಚರ್ಯ ಪಡಲು ಕೂಡ ಇಲಿಯೂ ಜನರಿರುವುದಿಲ್ಲ.

“ಅತಿಥಿ ದೇವೂಭವ”,  “ಲೋಕಾ ಸಮಸ್ತಾ ಸುಖಿನೋಭವಂತು”, “ವಸುಧೈವಕುಟುಂಬಕಂ” ಮೊದಲಾದ ಉನ್ನತ ವಿಚಾರಗಳಲ್ಲಿ ಮಿಂದಿರುವ ನಮ್ಮ ದೇಶದಲ್ಲಿ ಹೀಗಾಗುತ್ತಿರುವುದು ದುರಂತ.

ನಾವು ವಲಸೆಯನ್ನು ಹೇಗೆ ಗಮನಿಸುವುದು?

ಅದು ಬಹಳ ಸುಲಭ. ಅರಳಿದ ಹೂವನ್ನು ನೋಡಿದ ಹಾಗೆ. ಮೊಗ್ಗಿರುವುದನ್ನು ನೋಡಿದಾಗ ಮಾತ್ರ ಅದು ಅರಳಿದ್ದು ಗೊತ್ತಾಗುವ ಹಾಗೆ ದಿನದಿನವೂ ನಮ್ಮ ಪರಿಸರದಲ್ಲಿಯ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ವಲಸೆ ಗೋಚರವಾಗುವುದು.

ಮೈಸೂರಿನಲ್ಲಿ ಶ್ರೀ ಶಿವಪ್ರಕಾಶ್ ನೇತೃತ್ವದಲ್ಲಿ ವಲಸೆ ಹಕ್ಕಿಗಳ ಆಗಮನವನ್ನು ಈ ವರ್ಷ ಎಲ್ಲಾ ಸೇರಿ ಪಟ್ಟಿ ಮಾಡಿದ್ದೇವೆ.

ಇದುವರೆಗೆ (ಈ ಲೇಖನ ಸಿದ್ಧಪಡಿಸಿರುವವರೆಗೆ) 56 ಅತಿಥಿಗಳು ಬಂದಿರುವರು. ಅವುಗಳೆಂದರೆ:

ಪಕ್ಷಿಯ ಹೆಸರು ಪಕ್ಷಿ ನೋಡಿದವರ ಹೆಸರು

(Initials)

ನೋಡಿದ ಸ್ಥಳ ನೋಡಿದ ದಿನಾಂಕ
Common Sandpiper AAPC/VLR/TM Yennehole/Nanjanagudu/ Rajeev nagar July
Wood Sandpiper AAPC/VLR Yennehole/Nanjanagudu August
Barn Swallow TM- Rajeev Nagar 21/8
Black-eared Kite TM Rajeev Nagar 8/9
Pale Sand-martin TM Rajeev Nagar 9/9
Greenish Warbler TG 11/9
Gray Wagtail ASP – Lingambudhi drain 11/9
Whiskered Tern VLR Nanjanagudu 13/9
Green Sandpiper VLR Nanjanagudu 13/9
Blue tailed Bee-eater – TG/MS HD Kote road

(previously a migrant but now a breeding resident)

18/8
Pintail Snipe AAPC Yennehole 14/9
Yellow Wagtail AAPC Yennehole 14/9
TM Rajeev Nagar
Garganey  2 nos – TG Lingambudhi 17/9
Indian Pitta – 1 no DHT, SR, CS Kukkarahalli 20/9
Blyth’s Reed Warbler  1 no ASP Lingambudhi – 20/9
16. Greater Spotted Eagle – 1no ASP KRS 25/9
Black-tailed Godwit – 5 nos ASP 25/9
Marsh Harrier – M-ASP KRS 25/9
Brown Shrike – 1 no VLR Muddahallli 25/9
Glossy Ibis – 2 nos DHT/NS/EG Kukkarahalli

(one flock around 120 nos has established itself to mysuru region)

6/9
Sykes’s warbler – 1 no- VLR Narasambudhi 26/9
Little Stint – 2 nos VLR Kalale 25/9
Forest Wagtail – 1 nos AAPC Yennehole 30/9
Northern Shoveler VLR Narasambudhi 2/10/2015
Common Greenshank 3nos AAPC Yennehole valley 3/10
Blue Rock-thrush -1 no RH Chamundi 4/10
Golden Oriole – call DHT Kukkarahalli 4/10
Black Drongo DHT Lingambudhi 5/10
Ashy Drongo AAPC Yennehole Valley 9/10
Asian Brown Flycatcher MS Mysuru outskirts 9/10
Pallid Harrier MS Mysuru outskirts 13/10
Booted Eagle MS Mysuru outskirts 13/10
Common Kestrel AAPC Yennehole Valley 13/10
Asian Paradise Flycatcher AAPC Yennehole Valley

(not strictly a migrant)

15/10
European Roller AAPC Yennehole Valley 16/10
Booted Warbler AAPC and PR Lingambudhi 18/10
Pintail APC & PR Lingambudhi kere 18/10
Eurasian Cuckoo AAPC Yennehole Valley 19/10
Rosy Starling AAPC Yennehole Valley 22/10/2015
Black-capped Redstart KB Muddahalli 24/10/2015
41. Marsh Sandpiper TG Gundattur 24/10/2015
Brown-breasted Flycatcher ASP Bheemanakolli 24/10/2015
White Wagtail TG Bheemanakolli 24/10/2015
Blue-capped Rockthrush ASP Chamundi hill 25/10/2015
Temminck’s stint VLR/AAPC/PR Nanjanagudu 25/10/2015
Common Snipe VLR/AAPC/PR Nanjanagudu 25/10/2015
Tiga flycatcher

(Red-throated)

AMB Kukkarahalli 2910/2015
Paddyfield Warbler TG Chamarajanagar 31/10/2015
White stork TG Chamarajanagar 31/10/2015
Ruff TG Chamarajanagar 31/10/2015
Eurasean Wigeon TG Chamarajanagar 31/10/2015
Verditer Flycatcher TG Chamarajanagar 31/10/2015
Black-naped Monarch AAPC Yennehole 01/10/2015
Blyth’s Pipit TG Mandya 1/11/2015
Lesser White-throat BRS, TG & 8 others – Hulimavu 08/11/2015

ನಿಮ್ಮೂರಿನಲ್ಲೂ ಹೀಗೆ ಪಟ್ಟಿ ಮಾಡಬಹುದು.  ವಲಸೆ ಬಂದ ದಿನಾಂಕ, ಪುನರ್ವಲಸೆ ದಿನಾಂಕ ಎರಡೂ ಸಿಕ್ಕರೆ ಅದೊಂದು ಉತ್ತಮ ದಾಖಲಾಗುವುದು.

ಪರಿಸರದ ನಾಡಿ ಬಾನಾಡಿಯ ಉಳಿವೆಮ್ಮ ಜವಾಬ್ದಾರಿ

ಅರಿವೆ ಗುರು, ಅರಿಯದೊಡಲಿಹನೆಮ್ಮ ಅರಿ

(ಹಕ್ಕಿಗಳ ವೈಯಕ್ತಿಕ ಪರಿಚಯ ಮುಂದಿನ ಸಲಕ್ಕೆ.)

ಚಿತ್ರ ಕೃಪೆ: ವಿಜಯಲಕ್ಷ್ಮಿ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!