ಈ ಜಗತ್ತೇ ಒಂದು ಮಾಯಾಲೋಕ. ಇಲ್ಲಿ ನಡೆಯುವುದೆಲ್ಲ ವಿಸ್ಮಯ. ಈ ಮಾಯಾಲೋಕದಲ್ಲಿ ನಡೆಯುವ ವಿಸ್ಮಯಗಳ ಕೇವಲ ಪಾತ್ರಧಾರಿಗಳು ನಾವು. ಇಲ್ಲಿ ಎಲ್ಲರೂ ಎಲ್ಲವೂ ಕ್ಷಣಿಕ ಎಂದುತಿಳಿದಿದ್ದರೂ ನಾವು ಅಮರರು ಎಂಬ ಬ್ರಹ್ಮೆ ಅಲ್ಲಿ ಬದುಕುತ್ತೇವೆ.
ಹುಟ್ಟಿದ ಊರು, ಹೆತ್ತ ಅಪ್ಪ – ಅಮ್ಮ , ಬಂಧು – ಬಳಗ ಇವರುಗಳನ್ನು ಎಷ್ಟೊಂದು ಹಚ್ಚಿಕೊಂಡಿರುತ್ತೇವೆ. ಇವರುಗಳನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲವೆಂದು ತಿಳಿದಿರುತ್ತೇವೆ.
ಚಿಕ್ಕವರಿದ್ದಾಗ ಅರೆಕ್ಷಣ ಅಮ್ಮನ ಕಣ್ಮರೆ ನಮಗೆ ತುಂಬಾ ದುಃಖ ತರುತ್ತದೆ. ಶಾಲೆಗೆ ಹೋಗುವಾಗ ಅಮ್ಮನ ಅಗಲಿಕೆಯ ನೋವಿನಿಂದ ಹೊಸದರಲ್ಲಿ ಶಾಲೆ ಶಿಕ್ಷೆ ಆಗುತ್ತದೆ. ಕಾಲಕ್ರಮೇಣ ನಮ್ಮದೇಆದ ವಯಸ್ಸಿನ ಮಕ್ಕಳೊಂದಿಗೆ ಸ್ನೇಹ ಬೆಳೆಸಿ ಅವರೊಂದಿಗೆ ಬೆರೆಯುತ್ತೇವೆ. ಈಗ ಅಮ್ಮನ ಸಾಮೀಪ್ಯ ಇಲ್ಲದೆ ಇರುವುದು ನಮ್ಮನ್ನು ಕಾಡುವುದಿಲ್ಲ .
ಬೆಳೆಯುತ್ತಾ ಬಂದ ಹಾಗೆ ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ಊರುಗಳಿಗೂ ಹೋಗುತ್ತೇವೆ. ಇಲ್ಲಿವರೆಗೂ ಇದ್ದ ಹುಟ್ಟಿದ ಊರಿನ ಮೇಲಿನ ವ್ಯಾಮೋಹವೂ ಕೂಡ ಕೊಂಚ ಕಡಿಮೆ ಆಗುತ್ತದೆ.
ಕಾಲನ ಲೀಲೆಯೇ ವಿಚಿತ್ರ. ಜೀವನದಲ್ಲಿ ತಿರುವುಗಳು ಬರುತ್ತಾ ಇರುತ್ತವೆ. ಬೆಳೆದು ದೊಡ್ಡವರಾಗಿ, ಓದು ಮುಗಿಸಿ ಕೆಲಸಕ್ಕೆ ಸೇರಿದಾಗ ಎಲ್ಲರನ್ನೂ ಬಿಟ್ಟು ಕಾಣದ ಊರಿಗೆ ಬಂದು ,ಪರಿಚಯವಿಲ್ಲದವರ ಮಧ್ಯೆ ನಮ್ಮ ವೃತ್ತಿ ಜೀವನ ಆರಂಭಿಸುತ್ತೇವೆ.
ಒಂದು ಕಾಲದಲ್ಲಿ ಜೀವದ ಗೆಳೆತಿಯರು. ಇವಳ ಪ್ರತಿಯೊಂದು ವಿಷಯವೂ ಅವಳಿಗೆ ಗೊತ್ತು, ಅವಳ ಜೀವನದ ಪ್ರತಿಯೊಂದು ಆಗು ಹೋಗುಗಳೂ ಇವಳಿಗೆ ಪರಿಚಿತ. ಕ್ಲಾಸ್ ಅಲ್ಲಿ ಪಕ್ಕ – ಪಕ್ಕ ಕುಳಿತು ಹರಟಿದ ವಿಷಯಗಳೆಷ್ಟೋ. ಕಾಲ್ ಹಿಸ್ಟರೀ ಅಲ್ಲಿ ಅವಳ ಹೆಸರೇ ಮೊದಲು. ಈಗ ಅವಳ ಹೆಸರು ಕಾಂಟ್ಯಾಕ್ಟ್ ಲಿಸ್ಟ್ ಅಲ್ಲಿನ ಕೇವಲ ಒಂದು ಹೆಸರು !!ಮೀಟ್ ಮಾಡುವುದು ದೂರದ ವಿಷಯ,ಎದುರಿಗೆ ಸಿಕ್ಕಾಗಲೂ ಅಪರಿಚಿತ ಭಾವ. ಎಲ್ಲವೂ ಕಾಲದೊಂದಿಗೆ ಬದಲಾಗುತ್ತದೆ. ಎಲ್ಲರೂ ‘ಕಾಲ’ದ ಕಾಲ್ತುಳಿತಕ್ಕೆ ಬಲಿಯಾಗುವವರೇ.
ವರ್ಷಗಳ ಹಳೆಯ ಗೆಳೆಯ ಜನ್ಮದ ಗೆಳೆಯನಾಗುತ್ತಾನೆ, ಯಾವುದೋ ಅಪರಿಚಿತ ವ್ಯಕ್ತಿ ತಮ್ಮನಾಗುತ್ತಾನೆ, ಫೇಸ್ಬುಕ್ ನ ಗೆಳೆಯ / ಗೆಳತಿ ತೀರ ಹತ್ತಿರದವರಾಗುತ್ತರ್. ಫ್ರೆಂಡ್ ನ ಫ್ರೆಂಡ್ಇನ್ನಿಲ್ಲದವರಷ್ಟು ಗೆಳೆಯರಾಗುತ್ತಾರೆ, ಕಷ್ಟ – ಸುಖದಲ್ಲಿ ಭಾಗಿಯಾಗುತ್ತಾರೆ. ಆಫೀಸ್ ನ ಸಹೋದ್ಯೋಗಿ ತುಂಬಾ ಆತ್ಮೀಯನಾಗುತ್ತಾನೆ. PGಯ ರೂಮ್ ಮೇಟ್ಸ್ ನಮ್ಮ ಸ್ವಂತದವರೇಅನ್ನುವಂತಾಗುತ್ತದೆ.
ಆದರೆ ಇವರುಗಳೂ ಶಾಶ್ವತವಲ್ಲ.
ಕೆಲವು ವರ್ಷಗಳ ನಂತರ ಬೇರೆ ಕೆಲಸ ಅರಸಿ ಹೋಗುತ್ತೇವೆ. ಮತ್ತೆ ಹೊಸ ಗೆಳೆಯರು. ನಂತರ ಮದುವೆ. ಗಂಡ / ಹೆಂಡತಿ ಮಕ್ಕಳ ಹೊಣೆ. ಈ ಅವಧಿಯಲ್ಲಿ ಒಡನಾಟದಲ್ಲಿರುವ ಹಳೆಯಗೆಳೆಯರೇಷ್ಟೋ ?
ನಂತರ ವೃದ್ದಾಪ್ಯದಲ್ಲಿ . ಇಷ್ಟು ದಿನ ಬಂದು ಹೋದ ಗೆಳೆಯರ್ಯಾರ ಸುಳಿವೂ ಇರುವುದಿಲ್ಲ. ಇದ್ದರೂ ತಿಂಗಳಿಗೋ, ವರ್ಷಕ್ಕೋ ಮಾಡುವ ಒಂದು ಫೋನ್ ಕಾಲ್ ಗೆ ಅಷ್ಟೇ ಸೀಮಿತ.
ಸತ್ತ ನಂತರ ನಾವು ನಮ್ಮೊಂದಿಗೆ ಏನನ್ನೂ ಕೊಂಡೊಯ್ಯುವುದಿಲ್ಲ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬನೂ ಸಾಯುತ್ತಾನೆ. ‘ಸಾವು ಖಚಿತ’. ಇಲ್ಲಿ ಇದ್ದಷ್ಟು ದಿನ ಎಲ್ಲರೊಂದಿಗೆ ಪ್ರೀತಿ – ಸ್ನೇಹದಿಂದ ,ಮೋಸ – ಕಪಟಗಳಿಲ್ಲದೆ ನಗು – ನಗುತಾ ಬಾಳೋಣ. ‘ಜೀವನ ನೀರ ಮೇಲಣ ಗುಳ್ಳೆ’ ಇದನರಿತು ಬೇರೆಯವರ ಭಾವನೆ- ಪ್ರೀತಿಗೂ ಬೆಲೆ ಕೊಡೋಣ.
Facebook ಕಾಮೆಂಟ್ಸ್