ಸೈನಿಕನು ನಾನು ದೇಶ ಕಾಯುವೆನು
ಬಂದೂಕು ಮಾತ್ರ ನನ್ನೊಡಲ ಜೀವ
ಹರಿಯಬಿಟ್ಟಿಹೆನಿಲ್ಲಿ ನಾಲ್ಕು ಸಾಲುಗಳಲಿ
ಸುಖದ ಬಾಳಿನ ನನ್ನ ಮನಸಿನ ಭಾವ
ಮಂಜಿನಾ ಗುಡ್ಡದಲಿ, ಕಲ್ಲು ಮುಳ್ಳುಗಳ ಮೇಲೆ
ಬೆನ್ನು-ಹೊಟ್ಟೆಯ ಮೇಲೆ ಗುಂಡು ಮದ್ದುಗಳು
ಶತ್ರುಗಳ ಮೇಲೆ ಮುಗಿಬೀಳುವವರಿಗಲ್ಲಿ
ತಿಳಿಯಬಹುದೇ? ದೇಹ ಹೊಕ್ಕಿರುವ ಗುಂಡುಗಳು.
ದೇಶಕಾಯುವುದೊಂದೆ ನನ್ನ ಗುರಿಯಹುದು
ಆಸೆ ಆಕಾಂಕ್ಷೆಗಳು ಗಗನ ಕುಸುಮ.
ಆದರೇನಂತೆ? ವೀರಮರಣ ಹೊಂದಿದರೂ
ತಾಯಿ ಭಾರತಿಯ ಪಾದಕ್ಕೆ ನಾನು ಸುರಸುಮ.
ಕೊನೆಯ ಆಸೆಯು ಎನಗೆ ಮತ್ತೆ ಹುಟ್ಟುವೆ
ಗಡಿಯ ಕಾಯುವ ವೀರ ಸೈನಿಕನಾಗಿ.
ಶತ್ರುಪಡೆಯನ್ನು ಚೆಂಡಾಡಿ ಜೈಕಾರ ಹಾಕುವೆ
ಭಾರತಾಂಬೆಯ ವೀರ ಸುಪುತ್ರನಾಗಿ.
Facebook ಕಾಮೆಂಟ್ಸ್