X

ಕಬ್ಬಿಗನೂರಿದು ಕಾಣದ ಕಾವ್ಯ..

ನೆನಪನ್ನೇ ನೆಪವಾಗಿಸಿಕೊಂಡು ಕುಳಿತ ಘಳಿಗೆ
ನೆನಪಾಗುತ್ತಿತ್ತು ಎಲ್ಲವೂ ಆ ಪುಟ್ಟ ಕೇರಿಯಲ್ಲಿ
ಹವಣಿಸದೆ ಬಿಡದು ಮತ್ತೆ ತಲುಪಲು ಆ ಬೀದಿ
ಹರಿವ ನೀರಿನಂತೆ ಪಯಣಿಸುತ್ತಿದೆ ಜೀವನ ಆಚರಣೆಯಲ್ಲಿ

ನೆನಪಾಗುತ್ತಿತ್ತು ನನ್ನಲ್ಲೆ ಅಚ್ಚೆಯಾಗುಳಿದ ಬಾಲ್ಯ
ನೆನಪಾಗುತ್ತಿತ್ತು ಗೆಳೆಯರೊಂದಿಗೆ ಬೆರೆತ ಕ್ಷಣ
ನೆನಪಾಗುತ್ತಿತ್ತು ಭಿತ್ತಿಯ ಮೇಲೆ ನಾ ಚಿತ್ರಿಸಿದ ಚಿತ್ರ
ವಾಸ್ತವಗಳ ನಡುವೆ ಕಳೆದು ಹೋಗಿದ್ದು ನೆನಪಿನಂಗಳದಲ್ಲಿ

ಬಾನಾಡಿಗಿಲ್ಲಿ ಹಸಿರು ತೋರಣದ ಸ್ವಾಗತ
ಎಲ್ಲಿದೆಯೆ! ಓ ಗುಬ್ಬಿ ನಿನ್ನ ಮನೆಯಿಲ್ಲಿ?
ಅವಳೆದೆಯ ಮಾತಿಗೆ ನನ್ನಲ್ಲಿ ಅರ್ಥವಿಲ್ಲ
ಆದರೆ, ಅವಳಿಂಚರ ಬಿಟ್ಟು ಮತ್ತೆಲ್ಲಾ ನಿಶ್ಶಬ್ಧ ಕಿವಿಯಲ್ಲಿ

ತುಂಗೆಯಲ್ಲಿ ದೀಪದ ಸಾಲಂತೆ ತೋರುತ್ತಿತ್ತು ಆ ತಾರಾ ಬಳಗ
ಕಾಣದ ದ್ವೀಪದ ಮರ್ಮ ನನ್ನೆದುರಲ್ಲಿ ಸತ್ತಿತ್ತು
ತಾಯ ಬೇರಿಹುದಿಲ್ಲಿ, ಅಸುನೀಗಿದವು ಪದಗಳು ಅದನ್ನು ವರ್ಣಿಸಲು
ಕಬ್ಬಿಗನೂರಿದು ಆದರೆ ಕಾಣದ ಕಾವ್ಯ..!

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post