X

ಕಂದಪದ್ಯ – 2

ಕನ್ನಡ ನಾಡು

ಕನ್ನಡ ನಾಡು ಕನ್ನಡ ನಾಡು ಕನ್ನಡ ನಾಡು

ಕರುನಾಡು ನಮ್ಮೀ ಹೆಮ್ಮೆಯ ಬೀಡು

ಕರು ನಾಡು ಸಂಸ್ಕೃತಿಯ ಗೂಡು

ಸರ್ವ ಧರ್ಮಗಳ ತವರೂರು

ಇಲ್ಲಿ ಹಬ್ಬಿದೆ ಬಾಂಧವ್ಯದ ಬೇರು

ಈ ಸುಂದರ ನಾಡಿಗೆ ಬೇಕಿದೆ ಪೋಷಣೆ

ಈ ಸುಂದರ ಭಾಷೆಗೆ ಬೇಕಿದೆ ರಕ್ಷಣೆ

ಕಾವೇರಿ ನೀರಿಗಾಗಿ ಎದ್ದಿದೆ ಹಾಹಾಕಾರ

ಕನ್ನಡ ಭಾಷೆಯ ಮೇಲೇಕಿಲ್ಲ ಕಿಂಚಿತ್ ಮಮಕಾರ

ಕೊಟ್ಟ ಎಲ್ಲವನು ಪಡೆಯುವ ನಾವು ಕನ್ನಡಕೇನು ಕೊಟ್ಟಿಲ್ಲ

ಅಂದರೆ ಪಡೆಯುವ ಹಕ್ಕು ನಮಗಿಲ್ಲ

ಕನ್ನಡ ಮಕ್ಕಳು ಮಾಡುತ್ತಿರುವರು ವಿಮಾನದಲ್ಲಿ ಹಾರಾಟ

ಕನ್ನಡಕ್ಕಾಗಿ ಏಕಿಲ್ಲ ನಯಾ ಪೈಸೆಯ ಹೋರಾಟ

ದಿನೇ ದಿನೇ ಹೆಚ್ಚುತ್ತಿರುವುದು ಬಡ ಜನರ ಚೀರಾಟ

ರಾಜಕಾರಣಿಗಳಾಡುತ್ತಿರುವರು ಕುರ್ಚಿಗಾಗಿ ಹೊಡೆದಾಟ

ಬಡವರ ಜೀವದ ಜೊತೆಗೆ ಚೆಲ್ಲಾಟ

ನಾವು ನೀವೆಲ್ಲರೂ ಒಂದಾಗಿ ನಿಲ್ಲಿಸೋಣ ಈ ಜಂಜಾಟ

ರಾಜಕೀಯದ ದೊಂಬರಾಟ

ಎತ್ತಿ ಹಿಡಿಯೋಣ ಕನ್ನಡಾಂಬೆಯ ಸಾರ್ವಭೌಮತೆಯ ಬಾವುಟ!!

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post