X

ಪ್ರಕೃತಿ

ಒಣಗಿ ಬಣಗುಡುತ್ತಿದ್ದ
ಇಳೆಯ ಮೇಲೆ..
ಜಿನುಗುತಿದೆ ಮಳೆಹನಿಯ
ಮುತ್ತಿನಾ ಮಾಲೆ.!

ಪ್ರಕೃತಿಯ ಮೈತುಂಬಾ
ಜಲಧಾರೆಯ ಜಳಕ..
ಸಸ್ಯಶ್ಯಾಮಲೆಯ ಮೈಮನಕೆ
ಹರುಷದಾ ಪುಳಕ.!

ಒಣಕೊಂಬೆಯ ಮೇಲೆಲ್ಲಾ
ಮೂಡುತಿದೆ ಚಿಗುರು..
ಬರಡು ಬಯಲಿನ ತುಂಬಾ
ಹಾಸುತಿದೆ ಹಸಿರು.!

ಜೀವಸಂಕುಲಕ್ಕೆಲ್ಲಾ
ಉಸಿರನುಣಿಸುವ ಮಾತೆ..
ಕಲ್ಪನಾತೀತವೀ
ವೃಕ್ಷಮಾತೆಯ ಮಮತೆ.!

ಕಾಣದಾ ಕೈಯೊಂದು
ಮಾಡುತಿದೆ ಪವಾಡ..
ದೇವರ ಲೀಲೆಯಿದು
ವಿಸ್ಮಯ ನಿಗೂಢ.!

ನಿಸ್ವಾರ್ಥ ಜೀವನವೇ
ನಿಸರ್ಗದ ಧ್ಯೇಯ..
ಪರರ ಹಿತಕಾಗಿಯೇ
ಬಾಳುವುದು ನ್ಯಾಯ..!

 

 

 

Feature Photo by Peggy2012CREATIVELENZ

Facebook ಕಾಮೆಂಟ್ಸ್

Udayabhaskar Sullia: ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.
Related Post