X

ಸುಂದರ ಕವನ: ಮಳೆ

ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ

ಬರಿದಾದ ಭುವಿಯಲಿ ಗಾಳಿಯಾ ಸಂಚಾರ!

ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು

ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!!

ಕೆಂಪಾದ ಭುವಿಯಿಂದು ತಂಪಾಯಿತೀಗ

ಭೋರ್ಗರೆದು ಬರುತಿರಲು ಮೊದಲ ವೃಷ್ಟಿ!

ಮನಸಾರೆ ಮಿಂದು ಮನಸೂರೆಗೊಂಡು

ಜೀವಕಳೆ ಪಡೆಯಿತು ಸಕಲ ಸೃಷ್ಟಿ!!

ನೊಂದಂತ ಮನಕೆ ಸಾಂತ್ವಾನದ ರೀತಿ

ಬೆಂದಂತ ಭುವಿಗೆ ಈ ಮಳೆಯ ಬರುವು!

ಸಂಗಾತಿಯಾಗಿ ಬೆರೆತೀಗ ಮಣ್ಣಲ್ಲಿ

ಅದೃಶ್ಯವಾಯ್ತು ಈ ಜೀವ ಜಲವು!!

 

ಶಾಂಭವಿ ಎಂ.ಪಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post