ನಿಶೆಯ ರಾತ್ರಿಗೆ ಬಳ್ಳಿ ನಲ್ಲೆಯನು ಬಳಿಕರೆದು
ನಿನಗೆಂದು ನಾಳೆ ಹೂ ಮುಡಿವೆನೆಂದು;
ಪಿಸುನುಡಿವ ದನಿಯನ್ನು ಆಲಿಸುವ ನನ್ನಿಂದ
ಮಲ್ಲೆ ಹೋದಳು ದೂರ ಮುನಿಸಿಕೊಂಡು.
ಮುನಿಸಿಕೊಂಡರೆ ಅವಳು, ನನಗೆ ಮಾತುಗಳಿಲ್ಲ
ನನ್ನ ಮೌನಕ್ಕವಳು ಸುಮ್ಮನಿರಳು;
ಹೇಗೆಯೋ ಸಂತೈಸಿ ಮತ್ತೆ ನಗುವನು ಹರಸಿ
ಮಲ್ಲೆ ಮಾತನು ತುಂಬಿ ಹರಸುವವಳು.
ಇಂಥ ಒಲವನು ನೋಡಿ, ಮಲ್ಲಿಗೆಯ ಬಳ್ಳಿಯಲಿ
ಜೋಡಿ ಹೂಗಳು ನಾಳೆ ಅರಳದಿಹುದೇ?
ಅರಳಿರುವ ಮಲ್ಲಿಗೆಯು ನಗುವ ಚಂದವೆ ಸಾಕು
ನನ್ನ ಮಲ್ಲಿಗೆ ಮತ್ತು ನನ್ನ ಮುಗುದೆ!
Facebook ಕಾಮೆಂಟ್ಸ್