X

ಅವಳೊಂದು ಸುಂದರ ಸುಳ್ಳು ಮತ್ತು ಮಳೆಯಲಿ ನಾನು ನೆನೆಯುತ್ತಿರುವೆ: ಎರಡು ಕವನಗಳು

ಅವಳೊಂದು ಸುಂದರ ಸುಳ್ಳು…

ಅವಳೊಂದು ಸುಂದರ ಸುಳ್ಳು

ನನ್ನೆದೆಯ ಚುಚ್ಚುವ ಮುಳ್ಳು

ನಾನು ಸೋತಾಗ ನಕ್ಕು

ಗೆದ್ದಾಗ ನನ್ನ ಬಿಟ್ಟು ಹೋದವಳು..

 

ನನ್ನ ಏಕಾಂತಕ್ಕೆ

ವೈರಾಗ್ಯ ಕೊಡಿಸಿ

ನನ್ನ ಏಕಾಂಗಿ ಮಾಡಿ

ಮೊತ್ತೊಬ್ಬರ ಪ್ರೇಮಾಂಗಿಯಾದವಳು

 

ಬಾಳದಾರಿಯಲಿ ಅಕಸ್ಮಾತ್ ಸಿಕ್ಕು

ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ

ದಾರಿ ತಪ್ಪಿಸಿ ಮರೆಯಾದವಳು..

 

ಕತ್ತಲೆಯ ಬಾಳಿನಲಿ

ಹಣತೆ ಹಿಡಿದು ಬಂದು

ಬೆಳಕಿನ ಆಸೆ ಹುಟ್ಟಿಸಿ

ಹಣತೆಯನ್ನು ಅವಳೇ ಆರಿಸಿ

ನನ್ನ ಬದುಕಿಗೆ ಕತ್ತಲಾದವಳು..

 

ಅವಳನ್ನು ಮತ್ತೆ ಪ್ರೀತಿಸಿವುದು

ಅಮಾವಾಸ್ಯೆ ರಾತ್ರಿಯಲಿ

ಚಂದಿರ ಕಾಣಲು ನಿಂತಂತೆ

ನೀರಿರದ ಬಾವಿಯಲ್ಲಿ

ಪ್ರತಿಬಿಂಬ ನೋಡಲು ಕೂತಂತೆ

ಸಮುದ್ರದ ಮಧ್ಯದೊಳಗೆ

ತೀರವ ಹುಡುಕಿದಂತೆ

ಶಾಯಿಯಿರದ ಲೇಖನಿಯಲ್ಲಿ

ಕವನ ಬರೆದಂತೆ.!

 

 

ಮಳೆಯಲಿ ನಾನು ನೆನೆಯುತ್ತಿರುವೆ

 

ಮಳೆಯಲಿ ನಾನು ನೆನೆಯುತ್ತಿರುವೆ

ನೀ ಕೊಡೆ ಹಿಡಿಯಬಾರದೆ

ಮನದಲಿ ನಿನ್ನ ನೆನೆಯುತ್ತಿರುವೆ

ನೀನೊಮ್ಮೆ ಈ ಕಡೆ ಬರಬಾರದೆ…

 

ಮಳೆಯಲಿ ನಾನು ನೆನೆಯುತ್ತಿರುವೆ…..

 

ಸುರಿದ ಮಳೆಹನಿಗೆ ದನಿಯಾಗೋಣ

ಬೀಸಿದ ತಂಗಾಳಿಯ ತಬ್ಬಿಕೊಳ್ಳೋಣ

ನಡೆದಷ್ಟು ದೂರ ನೀ ನನಗೆ ಹತ್ತಿರ

ಮನದ ಎಲ್ಲ ಪ್ರಶ್ನೆಗೆ ನೀನಾಗು ಉತ್ತರ.

 

ಮಳೆಯಲಿ ನಾನು ನೆನೆಯುತ್ತಿರುವೆ ..

 

ಕಾಮನಬಿಲ್ಲನೆ ಮುಡಿಸುವೆ ನಿನಗೆ

ಹೂಗಳ ರಾಶಿಯ ಹೊದಿಸುವೆ ನಿನಗೆ

ನೆನೆದಷ್ಟು ನವಿರಾಗಲಿ ತನುವು

ನಡೆದಷ್ಟು ಹಗುರಾಗಲಿ ಮನವು..

Facebook ಕಾಮೆಂಟ್ಸ್

Vinaykumar Sajjanar: Engineer by profession and Author of two poem collection books named " Enna Todalu Nudigalu " and " Bhaavasharadhi" .
Related Post