Author - Adarsh B Vasista

ಕಥೆ

ತೀರ

ನೇಹಾ ತನ್ನ ಕಾಲೇಜು ಮುಗಿಸಿ ಎಫ್. ಸಿ ರೋಡಿನ ಬಸ್ಟಾಪಿಗೆ ಬಂದು ನಿಂತುಕೊಂಡಾಗ ಸುಮಾರು ಹನ್ನೊಂದುವರೆ ಆಗಿದ್ದಿರಬೇಕು.ಸೂರ್ಯ ಆಗತಾನೆ ತನ್ನ ಕಿರಣದ ಪಂಪನ್ನು ಒತ್ತುತ್ತಾ ಬಿಗಿಯಾಗುತ್ತಾ ಸಾಗಿದ್ದ. ನಿನ್ನೆ ಸುರಿದಿದ್ದ ಸಂಜೆಯ ವರ್ಷಧಾರೆಗೆ ತನ್ನನ್ನು ಒಡ್ಡಿಕೊಂಡಿದ್ದ ರಸ್ತೆಯ ತುಂಬೆಲ್ಲಾ ಮರದ ಎಲೆಗಳು ಒತ್ತೊತ್ತಾಗಿ ಸರಿದು ನೀರು ಓಡಿದ ದಾರಿಯನ್ನು ತೋರಿಸುತ್ತಿತ್ತು...

ಕಥೆ

ಆಕ್ರಮಣ

ಸಂಜೆ ೪ ಘಂಟೆ ಆಗುತ್ತಿದೆ. ಮೇಜಿನ ಮೇಲಿನ mug’ನಲ್ಲಿ ಹಬೆಯಾಡುತ್ತಾ ಹೊರಗಿನ ತೇವಕ್ಕೆ ತನ್ನನ್ನು ಒಡ್ಡಿಕೊಂಡು ಬೆಚ್ಚಗೆ ಕೂತಿರುವ ಕಾಫಿಯಿದೆ. ನನ್ನ ಕುರ್ಚಿಯ ಎಡ ಮಗ್ಗುಲಲ್ಲೇ ರೂಮಿನ ಕಿಟಕಿ. ಸಣ್ಣಗೆ ಜಿನುಗುವ ಜಡಿಮಳೆಯಲ್ಲಿ ನಾಲ್ಕಾರು ಕೊಡೆಗಳು ಮಂದವಾಗಿ ಚಲಿಸುತ್ತಿವೆ. ರೂಮಿನಲ್ಲಿ ಕುಳಿತು , ನೊರೆ-ನೊರೆ ಕಾಫಿ ಹೀರುತ್ತಾ ಹೊರಗಿನ ಮಳೆಯನ್ನು ನೋಡುವುದು ಎಷ್ಟು...

ಕವಿತೆ

ನಿನ್ನೆ ಮಳೆ ಬಂದಿತ್ತೇ?

ನಿನ್ನೆ ಮಳೆ ಬಂದಿತ್ತೇನೇ, ಗೆಳತಿ ನಿನ್ನೆ ಮಳೆ ಬಂದಿತ್ತೇ? ಅಂಗಳದ ಗುಲಾಬಿ ನಿನ್ನಂತೆ ಕಂಗೊಳಿಸುತ್ತಿದೆ, ಹೂವಿನ ಎಸಳಿನ ಮೃದುಲತೆಯೂ ನಿನ್ನನೇ ಹೋಲುತಿವೆ, ಸಣ್ಣನೆ ಬೀಸುವ ತಣ್ಣನೆ ಗಾಳಿಗೆ ತೇಲುವ ರೇಶಿಮೆ ಕೂದಲ ಚೆಲುವೆ , ನಿನ್ನೆ ಮಳೆ ಬಂದಿತ್ತೇನೇ, ಗೆಳತಿ ನಿನ್ನೆ ಮಳೆ ಬಂದಿತ್ತೇ? ಎಲೆಗಳ ಮೇಗಡೆ ಕುಳಿತಿಹ ಹಕ್ಕಿಯ ಚಿಲಿಪಿಲಿ ದನಿಯನು ಕೇಳಿದೆಯಾ ? ನೀನೇ ಬಿಡಿಸಿದ...

ಅಂಕಣ

ನಮ್ಮ ಕಾಲದ ಸಮಸ್ಯೆಗಳು ಇವಲ್ಲ… 

“Misplaced priorities can, sometimes, be more dangerous than having no priorities”, ಆತ್ಮೀಯಳಾದ ಗೆಳತಿಯೊಬ್ಬಳ ಜತೆ ಕಾಫಿ ಹೀರುತ್ತಾ ಹರಟೆ ಕೊಚ್ಚುತ್ತಿದ್ದಾಗ ಅವಳು ಹೇಳಿದ ಈ ಮಾತು ಇನ್ನೂ ಮನದ ಕೋಣೆಯೊಳಗೆ ಮಾರ್ದನಿಸುತ್ತಲೇ ಇದೆ. ಪ್ರತಿಯೊಂದು ಬಾರಿ ಈ ಮಾತನ್ನು ನೆನೆದಾಗಲೂ ಇದು ಹೊಸ ಹೊಸ ಅರ್ಥಗಳನ್ನು ನೀಡುತ್ತಿದೆ. ಕಳೆದ ಕೆಲವು...

ಅಂಕಣ

ಕನ್ನಡಕ್ಕೆ ಭವಿಷ್ಯವಿದೆಯೇ ? 

ಮತ್ತೆ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಹರಡಿಕೊಂಡಿದೆ. ನವೆಂಬರ್ ತಿಂಗಳು ಬಂದೊಡನೆಯೇ ನಮ್ಮೆಲ್ಲರ ಕನ್ನಡ ಪ್ರೇಮ ನೊರೆಹಾಲಾಗಿ ಉಕ್ಕಿ ಉಕ್ಕಿ ಹರಿಯಲಾರಂಭಿಸುತ್ತದೆ. ಎಲ್ಲರೂ, ಹಲವರು ಎಂದಿಟ್ಟುಕೊಳ್ಳೋಣ, ಕನ್ನಡ-ಕರ್ನಾಟಕದ ಹಿರಿಮೆ-ಗರಿಮೆಯ ದ್ಯೋತಕದ ಗರಿಗರಿ ಟೀ-ಶರ್ಟ್ ಗಳು, ಜೆರ್ಸಿ ಗಳನ್ನು ಮೈ ಮೇಲೆ ಹಾಕಿಕೊಂಡು ಅರೆಬರೆ ಕನ್ನಡ ಮಾತನಾಡುತ್ತಾ ತಿರುಗಾಡುತ್ತಾರೆ...

ಕವಿತೆ

ಏನೇ ಆಗಲಿ ನೀ ನಮ್ಮವನು

ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ  ಆಗಲಿ  ನೀ ನಮ್ಮವನು…   ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಭಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ ಕಾಣಲು ಅನುಮತಿಬೇಕು, ಜೇಬಿನ ತುಂಬಾ ನೋಟಿರಬೇಕು   ಆದರೂ ಬರುವೆವು … ಏಕೆ.. ಏನೇ  ಆಗಲಿ  ನೀ ನಮ್ಮವನು…   ನೀನಾರೆಂದೇ ತಿಳಿದಿಲ್ಲ, ನಿನ್ನ...

ಕಥೆ

ಅವಶೇಷ

ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು ಮೇಜು. ಚಾ ಕಾಯಿಸುವ ಪಾತ್ರೆ ಇತ್ಯಾದಿ…  ಹತ್ತಾರು ಜನ...

ಕಥೆ

ತೆರೆ

“ಮತ್ತೆ ಮುಂದೇನು ಅಂತ … “ಕಾಫಿ ಹೀರುತ್ತಾ ಎದುರು ಕುಳಿತಿದ್ದ ಕ್ಷಮಾಳ ಮುಖ ನೋಡಿದೆ. ಸುತ್ತಲಿನ ಪರಿಸರದಲ್ಲಿ ಕರಗಿ ಹೋದಂತೆ, ಎಲ್ಲೋ ದೂರದ ಪರ್ವತಗಳಿಂದ ಕೂಗಿ ಕರೆದ ಅನುಭವವಾಗುವಂತೆ ಅವಳು ಮಾತನಾಡತೊಡಗಿದಳು. “ನೋಡೋಣ … ಹೊರಗೆ ಹೋಗ್ಬೇಕು ಅಂತ ಹೇಳಿದ್ನಲ್ಲಾ … Europe ಗೆ ಅಪ್ಲೈ ಮಾಡ್ತಾ ಇದ್ದೀನಿ … “...

ಕಥೆ

ಯುಗಾದಿ

“ಮೂದೇವಿ … ಈಗ ಅಳುವಂತದ್ದು ಏನ್ ಆಗೈತೆ ಅಂತ … ಯಾಕ್ ಹಿಂಗ್ ಸಾಯ್ತಿ ನೀನು…” ಬುಡ್ಡಿ ದೀಪದಬೆಳಕಲ್ಲಿ ಕಾಕಿ ಅಳುದ್ ಕಂಡ ಮಾದ ಅವಳ ಮೇಲೆ ಉರಿದು ಬಿದ್ದ.. . ಆದರೆ ಕಾಕಿ ಗೆ ಇದೇನುಹೊಸತಲ್ಲವಲ್ಲ … ಪ್ರತಿದಿನದ ಗೋಳು … ಕಾಕಿ ಗುಡಿಸಿಲಿನ ಮೂಲೇಲಿ ಕುಳಿತು ಒಲೆಗೆ ಸೌದೆ ಹಾಕಿ “ಉಫ್” ಅಂತ ಊದ್ತಾ … ಕಣ್ಣು...

ಕಥೆ

ಕಥೆ: ಭಾವ

” ಹೊರಟಿರುವುದು ಎಲ್ಲಿಗೆ …. ? “, ಜೀನ್ಸ್ ಏರಿಸಿಕೊಳ್ಳುತಿದ್ದ  ಭಟ್ಟನನ್ನು ಕೇಳಿದೆ. ” ಗೊತ್ತಿಲ್ಲ ಕಣೋ … ನೇಹಾ ಏನೋ ಹೇಳ್ತಾ ಇದ್ಲು … ನಂಗ್ ಮರ್ತೋಯ್ತು ” ಅಂದ.  ಅಂದು ಶನಿವಾರ. ಸುಮಾರು ಏಳು ಘಂಟೆಯ ಸಮಯ. ಆಗ ತಾನೇ ಪಡುವಣದ ಕೆಂಪು ಕರಗಿ ಎಲ್ಲೆಡೆ ನಿಷೆ ಆವರಿಸುತ್ತಿದ್ದಳು. ಹೊರಗೆ ಕೊರೆಯುವ ಚಳಿ. ಬೆಚ್ಚಗಿನ...